ಮಂಗಳೂರು, ಏಪ್ರಿಲ್ 22, 2026: ಭಾರತದ ಅಂತರರಾಷ್ಟ್ರೀಯ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಬರೋಡಾ, ಹಿರಿಯ ನಾಗರಿಕರಿಗೆ ಆರೋಗ್ಯ ಸೇವೆಗಳ ಲಾಭಗಳು ಹಾಗೂ ಉಚಿತ ಮನೆ ಬಾಗಿಲಿನ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವ ‘bob Senior Citizen Vishesh Samman’ ಎಂಬ ಪ್ರೀಮಿಯಂ ಸೇವಿಂಗ್ಸ್ ಖಾತೆಯನ್ನು ಪರಿಚಯಿಸಿದೆ. ಈ ಖಾತೆಯನ್ನು 60 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನ ಗ್ರಾಹಕರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದು, ಅವರ ಆರೋಗ್ಯ ಮತ್ತು ಆರ್ಥಿಕ ಸುಖಸಮೃದ್ಧಿಯನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ.ಈ ಖಾತೆಯ ಮೂಲಕ ಗರಿಷ್ಠ […]
ಮದರ್ ತೆರೆಸಾ ಪಿಯು ಕಾಲೇಜು, ಶಂಕರನಾರಾಯಣದಲ್ಲಿ ವಿಜ್ಞಾನಾಧಾರಿತ ಶಿಕ್ಷಣವನ್ನು ಸ್ಪರ್ಧಾತ್ಮಕ ಯುಗದ ಅಗತ್ಯಗಳಿಗೆ ತಕ್ಕಂತೆ ರೂಪಿಸುತ್ತಾ ಬರಲಾಗುತ್ತಿದ್ದು, ವಿದ್ಯಾರ್ಥಿಗಳ ವಿಶ್ಲೇಷಣಾತ್ಮಕ ಚಿಂತನೆ ಹಾಗೂ ಲಕ್ಷ್ಯಾಧಾರಿತ ಅಭ್ಯಾಸಕ್ಕೆ ಒತ್ತು ನೀಡಲಾಗುತ್ತಿದೆ. PCMB ಹಾಗೂ PCMCs ಸಂಯೋಜನೆಗಳ ಮೂಲಕ ಪಿಯು ಬೋರ್ಡ್ ಪಠ್ಯಕ್ರಮದ ಜೊತೆಗೆ JEE Mains, NEET ಹಾಗೂ KCET ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಮನ್ವಯಿತ ತರಬೇತಿ ನೀಡಲಾಗುತ್ತಿದೆ. ಅಧ್ಯಾಯವಾರು ಅಭ್ಯಾಸ, ನಿಯಮಿತ Mock Testಗಳು ಹಾಗೂ ತೀವ್ರ ತರಬೇತಿ ಮೂಲಕ ವಿದ್ಯಾರ್ಥಿಗಳ ಸಿದ್ಧತೆಯನ್ನು ಬಲಪಡಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಯಾವುದೇ ಒತ್ತಡ […]
ಮೂಡ್ಲಕಟ್ಟೆ: ಎಂ.ಐ.ಟಿ ಕಾಲೇಜಿನಲ್ಲಿ ‘ಸಾವಿಷ್ಕರ್-2026’: ಮೈಸೂರು ಎಕ್ಸ್‌ಪ್ರೆಸ್ ಮತ್ತು ಬ್ಯಾಂಡ್ ಸ್ಟ್ರಿಂಗ್ಸ್ ತಂಡದಿಂದ ಸಂಗೀತ ರಸದೌತಣಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಏಪ್ರಿಲ್ 23 ಮತ್ತು 24 ರಂದು ರಾಷ್ಟ್ರೀಯ ಮಟ್ಟದ ಅಂತರ ಕಾಲೇಜು ತಾಂತ್ರಿಕ ಹಾಗೂ ಸಾಂಸ್ಕೃತಿಕ ಹಾಗೂ ಕ್ರೀಡಾ ಹಬ್ಬ ‘ಸಾವಿಷ್ಕರ್-2026’ ಅದ್ಧೂರಿಯಾಗಿ ಜರುಗಲಿದೆ. ಉದ್ಫ಼ಾಟಕರಾಗಿ ಪ್ರಸಿದ್ದ ಯಕ್ಷಗಾನ ಕಲಾವಿದರಾದ ಡಾ.ಶಿವಾನಂದ ಹೆಗ್ಡೆ ಕೆರೆಮನೆ ಆಗಮಿಸಲಿದ್ದಾರೆ. ಈ ಸಾಂಸ್ಕೃತಿಕ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಲು ದೇಶದ ಖ್ಯಾತ ಸಂಗೀತ ತಂಡಗಳಿಂದ ವಿಶೇಷ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.ಏಪ್ರಿಲ್ […]
ಮದರ್ ತೆರೆಸಾ ಪಿಯು ಕಾಲೇಜು, ಶಂಕರನಾರಾಯಣವು ಮೌಲ್ಯಾಧಾರಿತ ಶಿಕ್ಷಣಕ್ಕೆ ಹೆಸರುವಾಸಿಯಾಗಿದ್ದು, ಅಂಕಗಳ ಜೊತೆಗೆ ವ್ಯಕ್ತಿತ್ವ ವಿಕಸನಕ್ಕೂ ಸಮಾನ ಆದ್ಯತೆ ನೀಡುತ್ತಾ ವಿದ್ಯಾರ್ಥಿಗಳನ್ನು ಜವಾಬ್ದಾರಿಯುತ ನಾಗರಿಕರಾಗಿ ರೂಪಿಸುತ್ತಾ ಬರುತ್ತಿದೆ. ಹೊರಗಿನ ಹೋಲಿಕೆಗಳಿಗಿಂತ, ತನ್ನದೇ ಹಿಂದಿನ ಸಾಧನೆಗಳನ್ನು ಮೀರಿಸುವುದೇ ಸಂಸ್ಥೆಯ ಪ್ರಮುಖ ಧ್ಯೇಯವಾಗಿದೆ ಹಾಗೂ ಪ್ರವೇಶಾತಿ ಸಮಯದಲ್ಲಿ ಅಂಕಗಳ ಮಿತಿ ಇಲ್ಲದೆ ಎಲ್ಲಾ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುತ್ತಿದ್ದು, ಕಡಿಮೆ ಅಂಕ ಗಳಿಸಿ ಬಂದವರೂ ಕೂಡ ಇಲ್ಲಿ ಉನ್ನತ ಸಾಧನೆ ಮಾಡುವಂತಹ ವಾತಾವರಣವನ್ನು ಕಲ್ಪಿಸಲಾಗುತ್ತದೆ. ಇಲ್ಲಿನ ವಾಣಿಜ್ಯ ವಿಭಾಗದಲ್ಲಿ EBACs ಹಾಗೂ […]
ಉಡುಪಿ; ಉಡುಪಿ ಧರ್ಮಪ್ರಾಂತ್ಯದ ಧರ್ಮಧ್ಯಕ್ಸರಾಗಿ ಆಯ್ಕೆ ಯಾದ ಅತೀ ವಂದನೀಯ ಡಾ ಲೆಸ್ಲಿ ಡಿಸೋಜ ರವರನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಜೋಕಿಂ ಸ್ಟೇನಿ ಆಳ್ವಾರೀಸ್ ಮತ್ತು ಸದಸ್ಯರಾದ ನವೀನ್ ಲೋಬೊ ರವರು ಹೂ ಗುಚ್ಛ ನೀಡಿ ಶುಭ ಹಾರೈಸಿದರು.
ಕೋಲಾರ: ಛಿದ್ರಛಿದ್ರವಾಗಿರುವ ದಲಿತ ಸಂಘಟನೆಗಳನ್ನು ಮತ್ತೆ ಒಗ್ಗೂಡಿಸಿ ಮಾಯವಾಗಿರುವ ಪ್ರೀತಿ,ನಂಬಿಕೆ,ವಿಶ್ವಾಸವನ್ನು ಮರುಸ್ಥಾಪಿಸುವ ಪ್ರಯತ್ನ ಮಾಡುವುದಾಗಿ ಬಾಬಾಸಾಹೇಬ್ ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಡಾ.ಸಿ.ಎಂ.ಮುನಿಯಪ್ಪ ಭಾವುಕರಾಗಿ ನುಡಿದರು.ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಅಂಬೇಡ್ಕರ್ ಪುರಸ್ಕೃತರಾದ ಅವರಿಗೆ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.ಜಿಲ್ಲೆಯ ಐದಾರು ಮಂದಿ ರಾಜ್ಯದ ಸುಮಾರು ನೂರು ಮಂದಿ ನಾವೆಲ್ಲರೂ ಸೇರಿ ಒಗ್ಗಟ್ಟಿನಿಂದ ಹಗಲು ರಾತ್ರಿ ದುಡಿದು ಕಟ್ಟಿದ ದಲಿತ ಸಂಘಟನೆ ಇಂದು ಛಿದ್ರವಾಗಿದೆ, ಒಳಮೀಸಲಾತಿ ನೆಪದಲ್ಲಿ ಭೋವಿ,ಹೊಲೆಯ,ಮಾದಿಗ ಈಗ […]
ಮಂಗಳೂರು; ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಇನ್ಫೆಂಟ್ ಮೇರಿ ಚರ್ಚ್ ಬಜ್ಜೋಡಿ ಇವರ ಸಹಯೋಗದೊಂದಿಗೆ ಮಾಂಡ್ ಸೊಭಾಣ್ ಸಂಸ್ಥೆಯ ಸಹಕಾರದೊಂದಿಗೆ ನಡೆಸುವ ಮಾಣ್ಕಾಂ ಮೊತಿಯಾಂ-2 ಮಕ್ಕಳ ರಜಾ ಶಿಬಿರದ ಉದ್ಘಾಟನಾ ಸಮಾರಂಭವು ದಿನಾಂಕ 20-4-2026 ರಂದು ಇನ್ಫೆಂಟ್ ಮೇರಿ ಸಭಾಭವನ ಬಜ್ಜೋಡಿ ಇಲ್ಲಿ ನೆರವೇರಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ರವರು ವಹಿಸಿದ್ದರು.ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಕೊಂಕಣಿ ಮಕ್ಕಳು ಕೊಂಕಣಿ ಭಾಷೆಯನ್ನು ಕಲಿಯುವ ಅವಶ್ಯಕತೆ ಇದೆ. ಅಕಾಡೆಮಿಯು ಇಂತಹ ಶಿಬಿರಗಳಿಗೆ […]
ಮದರ್ ತೆರೆಸಾ ಪದವಿಪೂರ್ವ ಕಾಲೇಜು ಶಂಕರನಾರಾಯಣದಲ್ಲಿ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹೊಸ ದಿಕ್ಕು ನೀಡುವ ಮಹತ್ವದ ಹೆಜ್ಜೆಯಾಗಿ, ಭಾರತದ ಪ್ರಮುಖ ಶಿಕ್ಷಣ ಸಂಸ್ಥೆಯಾದ Vedantu ಜೊತೆಗಿನ ಸಹಯೋಗ ಯೋಜನೆಯನ್ನು ಏಪ್ರಿಲ್ 16ರಂದು ಅಧಿಕೃತವಾಗಿ ಉದ್ಘಾಟಿಸಲಾಯಿತು. ಈ ಕಾರ್ಯಕ್ರಮವನ್ನು ಜೆಇಇ, ಸಿಇಟಿ ತರಬೇತುದಾರರಾದ ಶ್ರೀ ನಾಗರಾಜು ಕೆ.ಜಿ. ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪಪ್ರಾಂಶುಪಾಲರು ಉಪಸ್ಥಿತರಿದ್ದರು. ಈ ಹೊಸ ಯೋಜನೆಯ ಮೂಲಕ ವಿದ್ಯಾರ್ಥಿಗಳಿಗೆ ಕಾಲೇಜಿನ ದೈನಂದಿನ ಪಠ್ಯಕ್ರಮ, ಸ್ಪರ್ಧಾತ್ಮಕ ತರಗತಿಗಳ ಜೊತೆಗೆ […]
ಮಂಗಳೂರು, ಏಪ್ರಿಲ್ 19, 2026: ಆಲ್ ಬ್ಯಾಂಕ್ಸ್ ಕ್ರಿಶ್ಚಿಯನ್ ಎಂಪ್ಲಾಯೀಸ್ ಅಸೋಸಿಯೇಷನ್ (ABCEA) ಭಾನುವಾರ ಸಂಜೆ ಬಿಜೈ ಚರ್ಚ್ ಹಾಲ್‌ನಲ್ಲಿ ತನ್ನ ವಾರ್ಷಿಕ ಸಭೆ 2026 ಅನ್ನು ಯಶಸ್ವಿಯಾಗಿ ಆಯೋಜಿಸಿತು, ಅರ್ಥಪೂರ್ಣ ಮತ್ತು ರೋಮಾಂಚಕ ಸಭೆಗಾಗಿ ಸದಸ್ಯರನ್ನು ಒಟ್ಟುಗೂಡಿಸಿತು. ಸಂಜೆ 6:00 ಗಂಟೆಗೆ ರೋನಿ ಕ್ರಾಸ್ಟಾ ಮತ್ತು ಮೆಲ್ಬಾ ಜೋಡಿಯ ಫೆಲೋಶಿಪ್ ಮತ್ತು ಗೀತರಚನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು, ಸಂಜೆಗೆ ಬೆಚ್ಚಗಿನ ಮತ್ತು ಆಕರ್ಷಕವಾದ ಸ್ವರವನ್ನು ಹೊಂದಿಸಿತು. ಸ್ವಾಗತ ಗೀತೆಯನ್ನು ಅನುಸರಿಸಿ, ಅಧ್ಯಕ್ಷರಾದ ಶ್ರೀ ಮಾರ್ಸೆಲ್ ಎಂ. ಡಿ’ಸೋಜಾ […]

