

ನಾಡಾ; ಗ೦ಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ನಾಡಾ ಗ್ರಾಮದ ಕೊಳ್ಳೆಯ ನಂದ್ರೋಳಿ
ಎ೦ಬಲ್ಲಿನ ಸಾರ್ವಜನಿಕ ಪ್ರದೇಶದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಅ೦ಕ ಜೂಜಾಟದ ಸುಳಿವು ಸಿಕ್ಕಿ, ಅಲ್ಲಿ ತೆರಳಿ ಪೊಲೀಸರು ದಾಳಿ ನಡೆಸಿದ್ದು, ಇಬ್ಬರು ಆರೋಪಿಗಳನ್ನು ಬ೦ಧಿಸಿ, 10 ಕೋಳಿ ಹು೦ಜಗಳು ಹಾಗೂ 8 ಮೋಟಾರು ಸೈಕಲ್ಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಾವನ್ನು ದಾಖಲಿಸಿಕೊಂಡಿದ್ದಾರೆ.

