ಶ್ರೀನಿವಾಸಪುರ, ಜು.29: ವೃತ್ತಿಪರತೆ, ನಿಷ್ಪಕ್ಷಪಾತತೆ ಹಾಗೂ ಸಾಮಾಜಿಕ ಕಾಳಜಿಯನ್ನು ಮೈಗೂಡಿಸಿಕೊಂಡು ಕಾರ್ಯನಿರ್ವಹಿಸಿದಾಗ ಮಾತ್ರ ಪತ್ರಿಕೋದ್ಯಮಕ್ಕೆ ಸಮಾಜದಲ್ಲಿ ಹೆಚ್ಚಿನ ಗೌರವ ದೊರೆಯುತ್ತದೆ ಎಂದು ಹಿರಿಯ ಪತ್ರಕರ್ತ ಹಾಗೂ ಮನ್ವಂತರ ಪ್ರಕಾಶನದ ಸಂಸ್ಥಾಪಕ ಪಾ.ಶ್ರೀ. ಅನಂತರಾಮಯ್ಯ ಹೇಳಿದರು. ಪಟ್ಟಣದ ಕನಕ ಸಮುದಾಯ ಭವನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಬುಧವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂಘಟನೆಯಲ್ಲಿ ಭಿನ್ನಾಭಿಪ್ರಾಯಗಳಿಗೆ ಅವಕಾಶ ನೀಡದೆ ಪರಸ್ಪರ ಸಹಕಾರ ಮತ್ತು ವಿಶ್ವಾಸದಿಂದ ಕಾರ್ಯನಿರ್ವಹಿಸಬೇಕು. ಪತ್ರಕರ್ತರು ತಮ್ಮ […]
ಶ್ರೀನಿವಾಸಪುರದ ವಾಸವಿ ಕಲ್ಯಾಣ ಮಂಟಪದಲ್ಲಿ ಭಾನುವಾರ ವಾಸವಿ ಮಹಿಳಾ ಮಂಡಳಿ ವತಿಯಿಂದ ಏರ್ಪಡಿಸಿದ್ದ ಆಷಾಡಂ ಧಮಾಕಾ ಸೇಲ್ ಕಾರ್ಯಕ್ರಮವನ್ನು ಮಂಡಳಿಯ ಅಧ್ಯಕ್ಷೆ ವೈ.ಆರ್ಮಂಜುಳ ಶಿವಪ್ರಕಾಶ್ ಉದ್ಘಾಟಿಸಿದರು. ಗಮನ ಸೆಳೆದ ಆಷಾಡಂ ಧಮಾಕಾ ಸೇಲ್ ಶ್ರೀನಿವಾಸಪುರ: ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಭಾನುವಾರ ವಾಸವಿ ಮಹಿಳಾ ಮಂಡಳಿ ವತಿಯಿಂದ ಆಷಾಡಂ ಧಮಾಕಾ ಸೇಲ್ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಆರ್ಯ ವೈಶ್ಯ ಮಂಡಳಿ ಟ್ರಸ್ಟ್ ಅಧ್ಯಕ್ಷ ವೈ.ಆರ್.ಶಿವಪ್ರಕಾಶ್ ಮಾತನಾಡಿ, ಸಮುದಾಯದ ಮಹಿಳೆಯರಲ್ಲಿ ಆರ್ಥಿಕ ವ್ಯವಹಾರ ಜ್ಞಾನ ಬೆಳೆಸುವ ಉದ್ದೇಶದಿಂದ […]
ಕೋಲಾರ ಜು.28: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಅಧೀನದಲ್ಲಿರುವ ಎಲ್ಲ ಮಂಡಳಿ, ನಿಗಮ, ಕಾರ್ಪೊರೇಷನ್ಗಳು, ಪ್ರಾಧಿಕಾರಗಳು, ಸಹಕಾರಿ ಸಂಸ್ಥೆಗಳು, ಸ್ವಾಯತ್ತ ಸಂಸ್ಥೆಗಳು, ವಿವಿಧ ಇಲಾಖೆಗಳ ಸಲಹಾ ಸಮಿತಿಗಳು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಆಡಳಿತಾತ್ಮಕ ಸಮಿತಿಗಳು ಸೇರಿದಂತೆ ಸರ್ಕಾರದ ಸಹಯೋಗದಲ್ಲಿ ಕಾರ್ಯನಿರ್ವಹಿಸುವ ವಿವಿಧ ಸಾರ್ವಜನಿಕ ಸಂಸ್ಥೆಗಳಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸಮರ್ಪಕ ಮೀಸಲಾತಿ ಹಾಗೂ ನ್ಯಾಯಯುತ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದ ಜಿಲ್ಲಾ ಸಮಿತಿ ಸದಸ್ಯ ಶಬ್ಬೀರ್ ಅಹ್ಮದ್ ರಾಜ್ಯ ಮತ್ತು […]
ಶ್ರೀನಿವಾಸಪುರ, ಜು.18: ಮಾವಿನಕಾಯಿ ಬೆಂಬಲ ಬೆಲೆ (ಎಂಎಸ್ಪಿ) ಯೋಜನೆಯಡಿ ನೋಂದಣಿ (ರಿಜಿಸ್ಟ್ರೇಷನ್) ಅವಧಿಯನ್ನು ತಕ್ಷಣ ವಿಸ್ತರಿಸಿ, ಹೆಚ್ಚುವರಿ ಪ್ರಮಾಣದ ಮಾವಿನಕಾಯಿಯನ್ನು ಖರೀದಿಸಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿ ಕೋಲಾರ ಜಿಲ್ಲಾ ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ರೈತರು ಶ್ರೀನಿವಾಸಪುರ ಎಪಿಎಂಸಿ ಕಚೇರಿ ಮುಂಭಾಗದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. ಬಳಿಕ ತಹಶೀಲ್ದಾರ್ ಜಿ.ಎನ್. ಸುಧೀಂದ್ರ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕೋಲಾರ ಜಿಲ್ಲಾ ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಚಿನ್ನಪ್ಪರೆಡ್ಡಿ, ಜಿಲ್ಲಾಧಿಕಾರಿಗಳು, ತಾಲೂಕು […]
ಶ್ರೀನಿವಾಸಪುರ : ಅರಣ್ಯ ಒತ್ತುವರಿ ತೆರವು ಕಾರ್ಯಕ್ರಮದಿಂದ ಭಾದಿತರಾದ ಸಣ್ಣ , ಅತಿ ಸಣ್ಣ ಮತ್ತು ಮಧ್ಯಮ ವರ್ಗದ ರೈತರು ಅವರ ಭಾಗದಲ್ಲಿ ಸರ್ಕಾರಿ ಜಮೀನು, ಲಭ್ಯ ಇದ್ದಲ್ಲಿ ಅರ್ಜಿ ಹಾಕಿಕೊಂಡರೆ ಅಂತಹವರಿಗೆ ಆದ್ಯತೆ ಮತ್ತು ಅರ್ಹತೆ ಮೇರೆಗೆ ಜಮೀನು ಮಂಜೂರು ಮಾಡಿಕೊಡಲಾಗುತ್ತದೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ತಿಳಿಸಿದರು.ಪಟ್ಟಣದ ಪುರಸಭೆ ಕಚೇರಿಯಲ್ಲಿ ಶುಕ್ರವಾರ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಗೆ ಚಾಲನೆ ನೀಡಿ ಮಾತನಾಡಿದರು. 1999 ರಿಂದ 2004ರವರೆಗೂ ನಾನು ಶಾಸಕನಾಗಿದ್ದಾಗ ತಾಲೂಕಿನ ಎಲ್ಲಾ ಪಂಚಾಯ್ತಿಗಳಲ್ಲಿಯೂ […]
ಮಾವು ಬೆಂಬಲ ಬೆಲೆ ರೈತರಿಗೆ ಮಾತ್ರವೇ ? ಮಾವಿನ ಫಸಲು ಖರೀದಿ ವ್ಯಾಪಾರಸ್ಥರಿಗೂ ನೆರವಿಗೆ ಆಗ್ರಹ – ಬಂಗಾರದ ಒಡವೆ ಅಡಮಾನ, ಕೈಸಾಲ ಪಡೆದು ಹೂಡಿಕೆ ಮಾಡಿದ ಮಾವಿನ ಫಸಲು ಖರೀದಿ ವ್ಯಾಪಾರಸ್ಥರ ಸಂಕಷ್ಟ ; ಕಟಾವು–ಸಾಗಣೆ ವೆಚ್ಚವೂ ವಾಪಸ್ ಬಾರದ ಸ್ಥಿತಿ ಶ್ರೀನಿವಾಸಪುರ, ಜು. 12: ಸರ್ಕಾರ ತೋತಾಪುರಿ ಮಾವಿಗೆ ಬೆಂಬಲ ಬೆಲೆ ಘೋಷಿಸಿರುವುದು ರೈತರಿಗೆ ಆಶಾದಾಯಕ ಬೆಳವಣಿಗೆಯಾಗಿದ್ದರೂ, ಮುಂಗಡ ಒಪ್ಪಂದದ ಮೂಲಕ ಮಾವಿನ ಫಸಲನ್ನು ಖರೀದಿಸಿರುವ ವ್ಯಾಪಾರಸ್ಥರು ಯೋಜನೆಯಿಂದ ಹೊರಗುಳಿದಿರುವುದು ಶ್ರೀನಿವಾಸಪುರದಲ್ಲಿ ಹೊಸ ಚರ್ಚೆಗೆ […]
ಚಿಂತನಕುಂಟೆಯಲ್ಲಿ ವನಮಹೋತ್ಸವ ; ಪರಿಸರ ಸಂರಕ್ಷಣೆಗೆ ಜನಜಾಗೃತಿ ಅಗತ್ಯ ಎಂದು ಕರೆ ಶ್ರೀನಿವಾಸಪುರ, ಜುಲೈ 11: ಎಷ್ಟು ದಿನ ಗಿಡಗಳು ಉಸಿರಾಡುತ್ತವೆಯೋ ಅಷ್ಟು ದಿನ ಮಾತ್ರ ಮಾನವ ಬದುಕಲು ಸಾಧ್ಯ. ಗಿಡಗಳ ಉಸಿರಾಟ ನಿಂತರೆ ಮಾನವನ ಬದುಕೂ ಅಪಾಯಕ್ಕೆ ಸಿಲುಕುತ್ತದೆ. ಆದ್ದರಿಂದ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಕರ್ನಾಟಕ ಉಪಲೋಕಾಯುಕ್ತ ಕೆ.ಎನ್. ಫಣೀಂದ್ರ ಹೇಳಿದರು. ತಾಲ್ಲೂಕಿನ ಚಿಂತನಕುಂಟೆ ಅರಣ್ಯ ಪ್ರದೇಶದಲ್ಲಿ ಶನಿವಾರ ಕರ್ನಾಟಕ ಲೋಕಾಯುಕ್ತ, ಜಿಲ್ಲಾಡಳಿತ, ಜಿಲ್ಲಾ ಹಾಗೂ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ಮತ್ತು […]
ಕೋಲಾರ : ಜುಲೈ 9 ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಭರದಿಂದ ಸಾಗಿದ್ದು, ಜುಲೈ 09ರ ಗುರುವಾರ ಸಂಜೆ ವೇಳೆಗೆ ಜಿಲ್ಲೆಯಾದ್ಯಂತ ಶೇ. 95.87 ರಷ್ಟು ಮತದಾರರ ನಮೂನೆಗಳನ್ನು (EFs) ವಿತರಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ. ಜೂನ್ 16ರ ಅಂಕಿಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 12,95,265 ಮತದಾರರಿದ್ದಾರೆ. ಪರಿಷ್ಕರಣೆಗಾಗಿ ಮತದಾರರ ನಮೂನೆಗಳನ್ನು ಮುದ್ರಿಸಿ ಈಗಾಗಲೇ ಬೂತ್ ಮಟ್ಟದ ಅಧಿಕಾರಿಗಳಿಗೆ (BLOs) ತಲುಪಿಸಲಾಗಿದೆ. ಜುಲೈ 09ರ ಸಂಜೆ 4 ಗಂಟೆಯವರೆಗಿನ ವರದಿಯಂತೆ, ಜಿಲ್ಲೆಯ […]
ಕೋಲಾರ, ಜುಲೈ 9: ಮತದಾರರ ಪಟ್ಟಿ ಪ್ರಜಾಪ್ರಭುತ್ವದ ಭದ್ರ ಬುನಾದಿಯಾಗಿದ್ದು, ‘ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ–2026’ (ಎಸ್ಐಆರ್) ಕಾರ್ಯವನ್ನು ಸಂಪೂರ್ಣ ದೋಷರಹಿತವಾಗಿ ಹಾಗೂ ಪಾರದರ್ಶಕವಾಗಿ ಪೂರ್ಣಗೊಳಿಸಲು ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ರೋಲ್ ವೀಕ್ಷಕರಾದ ತುಲಸಿ ಮದ್ದಿನೇನಿ ಸೂಚಿಸಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ನಡೆದ ‘ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ–2026’ರ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ […]

