

ಕುಂದಾಪುರ : ಕುಂದಾಪುರ ತಾಲೂಕಿನ ಚರ್ಚ್ ರಸ್ತೆಯಲ್ಲಿ ಜು.31 ಶುಕ್ರವಾರ ನಸುಕಿನ ವೇಳೆ ನಡೆದ ಗುಂಡಿಕ್ಕಿ ಐವನ್ ರಿಚರ್ಡ್ ಮಸ್ಕರೇನಸ್ ಯಾನೆ ಮುನ್ನಾ ಹತ್ಯೆ ಮಾಡಿದ ಪ್ರಕರಣದಲ್ಲಿ ಆರೋಪಿಯನ್ನು ಬಂದಿಸಲಾಗಿದೆ. ತಲೆಮರೆಸಿಕೊಂಡಿದ್ದ ಆರೋಪಿಯನ್ನು12 ಗಂಟೆಯ ಒಳಗೆ ಉಡುಪಿ ಜಿಲ್ಲಾಎಸ್ಪಿ ನೇತೃತ್ವದಲ್ಲಿ ರಚಿಸಿದ ಪೊಲೀಸರ ವಿಶೇಷ ತಂಡ ಬಂಧಿಸಿದೆ.
ಹೆಮ್ಮಾಡಿ ಸಮೀಪದ ಕನ್ನಡಕುದ್ರು ಮೂಲದ ಪ್ರಸ್ತುತ ಕುಂದಾಪುರದ ಫ್ಲಾಟ್ವೊಂದರಲ್ಲಿ ವಾಸವಿರುವ ಡೆರಿಕ್ ಕ್ರಾಸ್ತಾ (55) ಬಂಧಿತ ಆರೋಪಿ. ಅಜೆಕಾರು ಮೂಲದ, ನಂತರ ಹೆಬ್ರಿ ವಾಸಿಸಲು ತೊಡಗಿದ್ದ, ಪ್ರಸ್ತುತ ಬಾರ್ಕೂರು ಕಚ್ಚೂರು ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಐವನ್ ರಿಚರ್ಡ್ ಮಸ್ಕರೇನಸ್ ಯಾನೆ ಮುನ್ನಾ (45) ಎನ್ನುವರನ್ನು ಗುಂಡಿಕ್ಕಿ ಹತ್ಯೆ ನಡೆಸಿದ ಆರೋಪಿ ಡೆರಿಕ್ ತಲೆಮರೆಸಿಕೊಂಡಿದ್ದ. ಡೆರಿಕ್ ಕ್ರಾಸ್ತಾನು ಕ್ರಿಮಿನಲ್ ಹಿನ್ನೆಲೆಯುಳ್ಳವನಾಗಿದ್ದು, ಹಲವು ಪ್ರಕ್ರರಣದಲ್ಲಿ ಕೇಸ್ ದಾಖಲಾಗಿವೆ. ಐವನ್ ರಿಚರ್ಡ್ ಮಸ್ಕರೇನಸ್ ಯಾನೆ ಮುನ್ನಾ ಕೂಡ ಹಲವು ಕ್ರಿಮಿನಲ್ ಕೇಸ್ ಗಳಲ್ಲಿ ಸಿಕ್ಕಿ ಹಾಕಿಕೊಂಡಿದ್ದು, ಹತ್ಯೆ ಕೇಸನಲ್ಲಿ ಖುಲಾಸೆ ಕೊಂಡಿದ್ದ ವ್ಯಕ್ತಿಯಾಗಿದ್ದು, ಡೆರಿಕ್ ಕ್ರಾಸ್ತನ ಛೆಲೆಂಜಿಗೆ ಜವಾಬು ಕೊಡಲು ಬರುವಾಗ ಕಾರಿನಲ್ಲಿ ಒಂದು ಬಂದೂಕು ಮತ್ತೊಂದು ತಲ್ವಾರ್ ಕೂಡ ತಂದಿದ್ದಎಂದು ತಿಳಿದು ಬಂದಿದೆ. ಐವನ್ ರಿಚರ್ಡ್ ಮಸ್ಕರೇನಸ್ ಯಾನೆ ಮುನ್ನಾನು ಹಲ್ಲೆ ಮಾಡುವ ಮೊದಲು ಡೆರಿಕ್ ಕ್ರಾಸ್ತಾ ತನ್ನ ಕೋವಿಯಿಂದ ಸೂಕ್ಷ್ಮ ಜಾಗಕ್ಕೆ ಗುರಿಯಿಟ್ಟು ಬದುಕಲು ಆಸ್ಪದ ಇಲ್ಲದೆ ಹತ್ಯೆ ಮಾಡಿದ್ದಾನೆ.
ಡೆರಿಕ್ ಕ್ರಾಸ್ತಾ ಮತ್ತು ಐವನ್ ಮುನ್ನಾನ ಮಧ್ಯೆ ಹಲವಾರು ವಿಷಯಗಳ ಹಣದ ವ್ಯವಹಾರದ ಸಮಸ್ಯೆ ಇತ್ತು. ಐವನ್ ಮುನ್ನಾ ಹಣ ನೀಡಲು ಒತಾಯ ಮಾಡುತಿದ್ದ, ಇದನ್ನು ನಿವಾರಿಸಲು ಡೆರಿಕ್ ಕ್ರಾಸ್ತಾ ಸ್ಕೆಚ್ ಹಾಕಿದ್ದ, ಐವನ್ ಮುನ್ನಾನನ್ನು ಡೆರಿಕ್ ಕ್ರಾಸ್ತಾ ಒಬ್ಬನನ್ನೆ ಬರಲು ತಿಳಿಸಿದ್ದ, ಆದರೆ ಐವನ್ ಮುನ್ನಾನ ಜೊತೆ ಲಲಿತಾ ಇದ್ದು, ಅವಳು ಕಾರಿನೊಳಗೆ ಕುಳಿತುಕೊಂಡಿದ್ದಳು. ಶೂಟೌಟ್ ಮಾಡಿದಾಗ ಲಲಿತಾ ಕಣ್ಣಾರೆ ಕಂಡು ಪೊಲೀಸರಿಗೆ ತಿಳಿಸಿದಳು
ಇದೀಗ ಭಟ್ಕಳದ ಬೆಳಕೆ ಹೇರಬುಡಿಕೆ ಎಂಬಲ್ಲಿ ಶನಿವಾರ ಬಂಧಿಸಿದ್ದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. ಎಂದು ಎಸ್ಟಿ ತಿಳಿಸಿದ್ದಾರೆ.


