

ಹೈದರಾಬಾದ್: ಗಣೇಶ ಮೂರ್ತಿ ವಿಸರ್ಜನೆ ವೇಳೆ ಕೆರೆಯಲ್ಲಿ ಮುಳುಗಿ ಆರು ಅನಾಥ ಬಾಲಕರು ಸಾವನ್ನಪ್ಪಿದ ಘಟನೆ ತೆಲಂಗಾಣದಲ್ಲಿ ನಡೆದಿದೆ. ಹೈದರಾಬಾದ್ ಸಮೀಪದ ಪಟಾ೦ಚೆರು ಪೊಲೀಸ್ ಠಾಣೆ ವ್ಯಾಪ್ತಿಯ ಪೆದ್ದ್ಧಕ೦ಜರ್ಲಾದಲ್ಲಿ ಈ ದುರ್ಫಟನೆ ನಡೆದಿದೆ. ಸೇವಾ ಸಂಸ್ಥೆಯೊಂದು ಸುತ್ತಿರುವ ಹಾಸೈಲ್ನಲ್ಲಿ ಈ ಬಾಲಕರು ವಾಸವಾಗಿದ್ದರು. ಗಣೇಶ ವಿಸರ್ಜನೆ
ವೇಳೆ8 ಬಾಲಕರು ಕರೆಗೆ ಬಿದ್ದಿದ್ದು, ಅವರಲ್ಲಿ ಇಬ್ಬರು ಕೆರೆಯಿ೦ದ ಮೇಲೆ ಎದ್ದು ಬಂದಿದ್ದಾರೆ. ಇನ್ನುಳಿದ 6 ಮಂದಿ ಬಾಲಕರು ಸಾವನ್ನಪ್ಪಿದ್ದಾರೆ.
ಈ ವೇಳೆ ಪೊಲೀಸ್ ಕಾನ್ಸೈಬಲ್ ಒಬ್ಬರು ಬಾಲಕನಿಗೆ ಸಿಪಿಆರ್ (ತುರ್ತು ಪ್ರಥಮ ಚಿಕಿತ್ಸಾ ವಿಧಾನ) ನೀಡಲು ಪ್ರಯತ್ನಿಸಿದರು. ಆದರೆ ಆತನನ್ನು ಬದುಕಿಸಲು ಸಾಧ್ಯವಾಗಲಿಲ್ಲ. ಆ ಕೆರೆಯು ಜನಸ೦ಚಾರವಿಲ್ಲದ ಏಕಾ೦ತ ಪ್ರದೇಶದಲ್ಲಿತ್ತು. ಬಾಲಕರನ್ನು ರಕ್ಷಿಸಲು ಪ್ರಯತ್ನಿಸಬಹುದಾದ ಯಾವುದೇ ವಯಸ್ಕರು ಅಲ್ಲಿ ಇರಲಿಲ್ಲ ಎ೦ದು ಅಧಿಕಾರಿಗಳು ತಿಳಿಸಿದ್ದಾರೆ. ಕೆರೆಯಲ್ಲಿದ್ದ ಕೆಸರು ಈ ದುರ೦ತಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.
ಘಟನೆಗೆ ಸ೦ಬ೦ಧಿಸಿದ೦ತೆ ‘ಸಿರೀಷಾ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ವಾರ್ಡನ್ನನ್ನು ಬುಧವಾರ ಪೊಲೀಸರು ಬ೦ಧಿಸಿದ್ದಾರೆ. ಗಣೇಶ ಮೂರ್ತಿ ವಿಸರ್ಜನೆಗೆ ಸಿರೀಷಾ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಆಡಳಿತ ಮಂಡಳಿಯು ಪೂರ್ವಾನುಮತಿ ಪಡೆದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ವಿಗ್ರಹ ಬಿಸರ್ಜನೆಗಾಗಿ ಎ೦ಟು ವಿದ್ಯಾರ್ಥಿಗಳು ನೇರೆಡುಕು೦ಟ ಕೆರೆಗೆ ಇಳಿದಿದ್ದು, ಆಳವಾದ ನೀರಿಗೆ ಸಿಲುಕಿದ್ದರು. ಟ್ರಸ್ಟ್ ಆವರಣದ ಬಳಿ ಇರುವ ಕೆರೆಗೆ ವಿದ್ಯಾರ್ಥಿಗಳ ತಂಡ ಮೂರನೇ ದಿನದ ವಿಗ್ರಹ ವಿಸರ್ಜನೆಗಾಗಿ ಸ೦ಜೆ 530ರ ಸುಮಾರಿಗೆ ತೆರಳಿದ್ದಾಗ ಈ ದುರ೦ತ ಸ೦ಭವಿಸಿದೆ. ವಿಗ್ರಹವನ್ನು ಹೊತ್ತು ಎ೦ಟು ವಿದ್ಯಾರ್ಥಿಗಳು ಕೆರೆಗೆ ಇಳಿದಿದ್ದಾರೆ. ಈ ವೇಳೆ ಕೆರೆಯ ತಳಭಾಗದಲ್ಲಿದ್ದ ಆಳವಾದಗುಂಡಿಗಳಿಗೆ ಕಾಲಿಟ್ಟು ಅವರು ಮುಳುಗಲು ಪ್ರಾರಂಭಿಸಿದ್ದಾರೆ. ತಕ್ಷಣವೇ ಅಲ್ಲಿದ್ದ ಇತರ ವಿದ್ಯಾರ್ಥಿಗಳು ಹಾಗೂ ಸಮೀಪದ ನಿರ್ಮಾಣ ಹಂತದ ಕಟ್ಟಡದ ಕಾರ್ಮಿಕರು ರಕ್ಷಣೆಗೆ ಧಾವಿಸಿ ಇಬ್ಬರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಉಳಿದ ಆರು ವಿದಾಾರ್ದಿಗಳುನೀರಿನಲಿ ಮುಳುಗಿ ಜೀವ ಕಳೆದುಕೂಂಡಿದ್ದಾರೆ.
ಈ ದುರಂತದಲ್ಲಿ ಮೃತಪಟ್ಟ ಆರೂ ಬಾಲಕರ ವಿವರ
- ಸಿದ್ಧಾರ್ಥ್ (ಹತ್ತನೇ ತರಗತಿ ವಿದ್ಯಾರ್ಥಿ)
- ಶ್ಯಾಮ್ ಕುಮಾರ್ (ಪಾಲಿಟೆಕ್ನಿಕ್ ಪ್ರಥಮ ವರ್ಷದ ವಿದ್ಯಾರ್ಥಿ)
- ಸುಮಂತ್ ರೆಡ್ಡಿ (ಪಾಲಿಟೆಕ್ನಿಕ್ ದ್ವಿತೀಯ ವರ್ಷದ ವಿದ್ಯಾರ್ಥಿ)
- ಗಣೇಶ್ (ಪಾಲಿಟೆಕ್ನಿಕ್ ದ್ವಿತೀಯ ವರ್ಷದ ವಿದ್ಯಾರ್ಥಿ)
- ಉದಯ್ ಕಿರಣ್ (ಪಾಲಿಟೆಕ್ನಿಕ್ ತೃತೀಯ ವರ್ಷದ ವಿದ್ಯಾರ್ಥಿ)
- ನರಸಿಂಹ ರಾಜು (ಬಿ.ಟೆಕ್ ದ್ವಿತೀಯ ವರ್ಷದ ವಿದ್ಯಾರ್ಥಿ

