
ಶಾರ್ಜಾ: ಯು.ಎ.ಇ. ಯ ಶಾರ್ಜಾದಲ್ಲಿ ಯುವ ಮಲಯಾಳಿಯುವ ಮಹಿಳಾ ದಂತ ವೈದ್ಯೆ ಅಫೀನಾ ರಹೀಮ್ (32) ವೈದ್ಯೆಯೊಬ್ಬರು ದಿಢೀರ್ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ನಡೆದಿದ್ದು, ಮೃತರ ಮೃತರನ್ನು ಕೇರಳದ ಮಲಪ್ಪುರಂ ಜಿಲ್ಲೆಯ ವಂಡೂರ್ ನಿವಾಸಿ ಅಫೀನಾ ರಹೀಮ್ ಎಂದು ಗುರುತಿಸಲಾಗಿದೆ. ಇವರು ಪೂಕುಲಂ ನಿವಾಸಿ ಅಬ್ದುರಹಮಾನ್ ಮತ್ತು ಸುಲೈಖಾ ದಂಪತಿಯ ಪುತ್ರಿಯಾಗಿದ್ದು, ಅಲನೆಲ್ಲೂರ್ ಮೂಲದ ಯಾಸಿರ್ ಎಂಬುವವರ ಪತ್ನಿಯಾಗಿದ್ದಾರೆ. ಇವರು ಶಾರ್ಜಾದಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದರು.
ದಿಢೀರ್ ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಯುವ ವೈದ್ಯೆಯ ಅಕಾಲಿಕ ನಿಧನದ ಸುದ್ದಿ ಕುಟುಂಬಸ್ಥರು, ಸ್ನೇಹಿತರು ಹಾಗೂ ಪರಿಚಿತರಲ್ಲಿ ಆಘಾತ ಮೂಡಿಸಿದೆ. ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ, ಅವರ ಮೃತದೇಹವನ್ನು ಕೇರಳದಲ್ಲಿರುವ ಅವರ ಸ್ವಗ್ರಾಮಕ್ಕೆ ತರಲು ವ್ಯವಸ್ಥೆ ಮಾಡಲಾಗಿದೆ.


