ಕುಂದಾಪುರದ ಸೈಂಟ್ ಮೇರಿಸ್ ಸಂಯುಕ್ತ ಪದವಿ ಪೂರ್ವ ಕಾಲೇಜು
ಶಿಸ್ತು, ಜ್ಞಾನ, ಮೌಲ್ಯಾದರಿತ ಶಿಕ್ಷಣಕ್ಕೆ ಖ್ಯಾತವಾದ ಕಾಲೇಜು
ಶಿಸ್ತು, ಜ್ಞಾನ, ಮೌಲ್ಯಾದರಿತ ಶಿಕ್ಷಣಕ್ಕೆ ಹೆಸರಾದ ಕುಂದಾಪುರದ ಸೈಂಟ್ ಮೇರಿಸ್ ಪದವಿ ಪೂರ್ವ ಕಾಲೇಜು : ಇದೀಗ ದಾಖಲಾತಿ ಆರಂಭಗೊಂಡಿದೆ.

ದಾಖಲಾತಿಗೆ, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ.
ಸೈಂಟ್ ಮೇರಿಸ್ ಸಂಯುಕ್ತ ಪದವಿ ಪೂರ್ವ ಕಾಲೇಜು
ಸೈಂಟ್ ಮೇರಿಸ್ ಸಮೂಹ ವಿದ್ಯಾ ಸಂಸ್ಥೆಗಳು
ಚರ್ಚ್ ರಸ್ತೆ ಕುಂದಾಪುರ – 576201
ಸಂಪರ್ಕಕ್ಕೆ ದೂರವಾಣಿ ಸಂಖ್ಯೆ: 6362676193 / 8217879605


ವಿದ್ಯಾಭಿಮಾನಿಗಳೇ ……….
ಹಲವಾರು ದಶಕಗಳ ಹಿಂದೆ ಮಂಗಳೂರಿನಲ್ಲಿ ಕಥೋಲಿಕ್ ವಿದ್ಯಾ ಮಂಡಳಿ ಸ್ಥಾಪನೆಯಾಗಿ ಕರಾವಳಿ ತೀರದ ಅನೇಕ ಕಡೆ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸುವುದರೊಂದಿಗೆ ತಮ್ಮ ಛಾಪನ್ನು ಮೂಡಿಸಿ ತದನಂತರ ಕುಂದಾಪುರದ ಕುಂದಗನ್ನಡದ ಹಸಿರು ಮಣ್ಣಿನ ಪವಿತ್ರ ನೆಲದಲ್ಲಿ 135 ವರ್ಷಗಳ ಹಿಂದೆ ಸೈಂಟ್ ಮೇರಿಸ್ ವಿದ್ಯಾ ಸಂಸ್ಥೆಯು ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯನ್ನು ಆರಂಭಿಸಿ ಅಕ್ಷರ ಜಾತ್ರೆಗೆ ಬುನಾದಿ ಹಾಕಿದರು. ಮುಂದಿನ ದಿನಗಳಲ್ಲಿ ಪ್ರೌಢಶಾಲೆ, ಹೋಲಿ ರೋಜರಿ ಆಂಗ್ಲಮಾಧ್ಯಮ, ಕಿಂಡರ್ ಗಾರ್ಟನ್, ಪ್ರಾಥಮಿಕ ಮತ್ತು ಪ್ರೌಢಶಾಲೆ, ಮುಂದುವರಿದು 2002ರಲ್ಲಿ ಸೈಂಟ್ ಮೇರಿಸ್ ಪ.ಪೂ. ಕಾಲೇಜು ಹೀಗೆ ಸಮೂಹ ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಯನ್ನು ನೀಡಿದ ಶೇಕಡ 100 ಫಲಿತಾಂಶ ದಾಖಲಿಸಿದ ಪುಣ್ಯ ದೇಗುಲವಿದು.
“ಸೂರ್ಯ ಜಗತ್ತಿಗೆ ಬೆಳಕನ್ನು ನೀಡಿದರೆ
ಶಿಕ್ಷಣ ಬದುಕಿಗೆ ಬೆಳಕನ್ನು ನೀಡುತ್ತದೆ”
ನಗರದ ಹೃದಯ ಭಾಗದಲ್ಲಿ ಕಳೆದ 24 ವರ್ಷಗಳ ಹಿಂದೆ ಆಸುಪಾಸಿನ ಮಕ್ಕಳ ಉಜ್ವಲ ಭವಿಷ್ಯವನ್ನು ಮನದಲ್ಲಿಟ್ಟುಕೊಂಡು ನಿರ್ಮಾಣಗೊಂಡ ಕಾಲೇಜು ಸೈಂಟ್ ಮೇರಿಸ್ ಪದವಿ ಪೂರ್ವ ಕಾಲೇಜು. ಪ್ರಸ್ತುತ, ಉಡುಪಿ ಧರ್ಮಪ್ರಾಂತ್ಯದ ಕಥೋಲಿಕ್ ಶಿಕ್ಷಣ ಮಂಡಲಿ (CESU) ಅಧೀನದಲ್ಲಿ ಅತ್ಯುತ್ತಮ ಶಿಕ್ಷಣ ನೀಡುವುದರೊಂದಿಗೆ ಅನೇಕ ಶೈಕ್ಷಣಿಕ ಸಾಧನೆಗಳನ್ನು ಮಾಡಿದ ಹಿರಿಮೆ ಸೈಂಟ್ ಮೇರಿಸ್ ಪ. ಪೂ. ಕಾಲೇಜಿಗೆ ಸಲ್ಲುತ್ತದೆ.
ಮನದೊಳಗೆ ಕನಸುಗಳೆಂಬ ಬೀಜಗಳನ್ನು ಬಿತ್ತಿ ಅದು ಸಸಿಯಾಗಿ, ಮರವಾಗಿ ಫಲ ನೀಡಲು ನೆರವಾಗುವಂತೆ, ಭರವಸೆಯ ಬೆಳಕನ್ನು ನೀಡುತ್ತಾ, ಶ್ರಮವೆಂಬ ಜೀವನದ ಪ್ರತಿಯೊಂದು ವಿಷಯಗಳಲ್ಲೂ ಶ್ರೇಷ್ಠತೆ ಅಥವಾ ಉತ್ಕ್ರಷ್ಠತೆಯನ್ನು ಗಳಿಸಿಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಜೀವನದ ಗುರಿ. ಈ ಗುರಿಯ ಸಾಕಾರಕ್ಕೆ ಪದವಿ ಪೂರ್ವ ಶಿಕ್ಷಣ ಬಹುಮುಖ್ಯ. ಈ ಹಂತದಲ್ಲಿ ಸಮರ್ಥ ಮಾರ್ಗದರ್ಶನ ಹಾಗೂ ಕಠಿಣ ಕಲಿಕಾ ಪೂರಕ ವಾತಾವರಣದಲ್ಲಿ ವಿದ್ಯಾರ್ಥಿಗಳ, ಪೋಷಕರ ನೆಚ್ಚಿನ ವಿದ್ಯಾಸಂಸ್ಥೆಯಾಗಿ ಶಿಸ್ತುಬದ್ಧ ಶಿಕ್ಷಣಕ್ಕೆ ಹೆಸರಾಗಿರುವುದು ಸೈಂಟ್ ಮೇರಿಸ್ ಪದವಿ ಪೂರ್ವ ಕಾಲೇಜು.
ಶಿಸ್ತಿನ ಶೈಕ್ಷಣಿಕ ವಾತಾವರಣ, ತಮ್ಮ ಮುಂದಿನ ಉಜ್ವಲ ಭವಿಷ್ಯದ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಗಳ ಪಾಲಿಗೆ ಆಶಾಕಿರಣವಾದ ಈ ವಿದ್ಯಾಸಂಸ್ಥೆಯು ಉತ್ತಮ ಗುಣಮಟ್ಟದ ಹಾಗೂ ಮೌಲ್ಯಾಧಾರಿತ ಶಿಕ್ಷಣವನ್ನು ಆಸುಪಾಸಿನ ಪಟ್ಟಣ, ಹಳ್ಳಿಗಳಿಂದ ಹಾಗೂ ದೂರದ ಊರುಗಳಿಂದ ಬರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ನುರಿತ, ಅನುಭವಿ ಉಪನ್ಯಾಸಕರಿಂದ ನೀಡುತ್ತಿದೆ.
ಶಿಕ್ಷಣ:
ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳೊಂದಿಗೆ ಒಳಗೊಂಡು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ವೃತ್ತಿಪರ ಕೋರ್ಸುಗಳಿಗೆ ಹಾಗೂ ಸ್ಪರ್ಧಾತ್ಪಕ ಪರೀಕ್ಷೆಗಳಿಗೆ ಅನುಕೂಲವಾಗುವಂತೆ ಕ್ರಮವಾಗಿ CET, NEET, JEE, CA/CS ಹೀಗೆ ಹತ್ತು ಹಲವು ಪರೀಕ್ಷೆಗಳಿಗೆ ಅನುಭವಿ ತರಬೇತುದಾರರಿಂದ ತರಬೇತಿ ನೀಡಿ, ಸಂಸ್ಥೆಯು ಮೌಲ್ಯಧಾರಿತ ಹಾಗೂ ಉತ್ತಮ ಗುಣಮಟ್ಟದ, ಬಡವ ಬಲ್ಲಿದರೆನ್ನದೆ ಎಲ್ಲಾ ಜಾತಿ ಮತದ ವಿದ್ಯಾರ್ಥಿಗಳಿಗೆ ಏಕರೂಪದ ಶಿಕ್ಷಣ ನೀಡುತ್ತಾ ಬಂದಿದೆ. ದಾಖಲಾತಿಯಲ್ಲಿ ಅತ್ಯುನ್ನತ ಶ್ರೇಣಿಯ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶಾತಿ, ಬಡತನದಲ್ಲಿರುವ ವಿದ್ಯಾರ್ಥಿಗಳಿಗೆ ರಿಯಾಯತಿ, ಕಂತಿನ ರೂಪದಲ್ಲಿ ಶುಲ್ಕ ಕಟ್ಟುವಲ್ಲಿ ಅನೂಕೂಲತೆ ಸರಕಾರ ಹಾಗೂ ಇತರೆ ಸಂಘ ಸಂಸ್ಥೆಗಳಿಂದ ನೀಡುವ ವಿದ್ಯಾರ್ಥಿವೇತನ ಪಡೆದುಕೊಳ್ಳಲು, ಮಾರ್ಗದರ್ಶನ ಹಾಗೂ ಸಹಾಯ ಹೀಗೆ ಹತ್ತು ಹಲವು ಸೌಲಭ್ಯಗಳನ್ನು ನೀಡಿ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ದಾರಿ ಮಾಡಿಕೊಟ್ಟಿದೆ.
ಶೈಕ್ಷಣಿಕ ಪ್ರಗತಿ:
ಕಳೆದ 24 ವರ್ಷಗಳಿಂದ ಸಂಸ್ಥೆಯಿಂದ ಸಾವಿರಾರು ವಿದ್ಯಾರ್ಥಿಗಳು ಭವಿಷ್ಯ ನಿರ್ಮಾಣಕ್ಕೆ ಪಿ.ಯು. ಶಿಕ್ಷಣವನ್ನು ಈ ವಿದ್ಯಾ ದೇಗುಲದಲ್ಲಿ ಪಡೆದು ಇಂದು ಶೇಷ್ಠ ಉದ್ಯೋಗದಲ್ಲಿ ಜಗತ್ತಿನ ಉದ್ದಗಲಕ್ಕೂ ಬೆಳೆದು ನಿಂತಿದ್ದಾರೆ. ಪ್ರತಿ ವರ್ಷವೂ ಅತ್ಯುತ್ತಮ ಫಲಿತಾಂಶವನ್ನು ವಿದ್ಯಾರ್ಥಿಗಳು ನೀಡುತ್ತಾ ಹೋಗಿರುವುದು ಸಂಸ್ಥೆಯು ಗರಿಬಿಚ್ಚಿ ನಿಲ್ಲಲು ಸಾಧ್ಯವಾಗಿದೆ. ಸಂಸ್ಥೆಯ ಸುದೀರ್ಘ ಫಲಿತಾಂಶವನ್ನು ಗಮನಿಸುತ್ತ ಬಂದರೆ ಅತ್ಯುನ್ನತ ಶ್ರೇಣಿಯಲ್ಲಿ ರಾಜ್ಯಮಟ್ಟದಲ್ಲಿ ಗುರುತಿಸುಕೊಂಡಿದ್ದು ಸಾಧನೆಗೆ ಪ್ರತಿಕವಾಗಿದೆ. ವಿದ್ಯಾರ್ಥಿಗಳ ಕಲಿಕಾ ಆಸಕ್ತಿಗೆ ಪೂರಕ ವಾತಾವರಣ, ಅಧ್ಯಾಪಕರ ಶಕ್ತಿ ಮೀರಿ ಪರಿಶ್ರಮ ದುಡಿಯುವಿಕೆ ಪ್ರತಿ ವಿದ್ಯಾರ್ಥಿಗೂ ವೈಯಕ್ತಿಕ ಗಮನ ಇವೆಲ್ಲವೂ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ, ಉತ್ತಮ ಫಲಿತಾಂಶಕ್ಕೆ ಕಾರಣೀಭೂತವಾಗಿದೆ.
ಕ್ರೀಡೆ:
ಪಠ್ಯವಷ್ಟೇ ಕಲಿಕೆಗೆ ಪೂರಕವಲ್ಲ, ಪಠ್ಯೇತರ ಚಟುವಟಿಕೆಗಳೂ ಕೂಡ ಶಿಕ್ಷಣಕ್ಕೆ ಅಷ್ಟೇ ಪ್ರಾಮುಖ್ಯತೆ ಕೊಡುತ್ತಿದೆ. ಕ್ರೀಡೆ ನಮ್ಮ ಜೀವನದ ಅವಿಭ್ಯಾಜ ಅಂಗವೆಂಬಂತೆ, ಸಂಸ್ಥೆಯಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ವಿವಿಧ ರೀತಿಯ ಆಟೋಟಗಳಲ್ಲಿ ನಿರಂತರ ತರಬೇತಿಯೊಂದಿಗೆ ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟಗಳಲ್ಲಿ ಸ್ಪರ್ಧಿಸಿ ಗೆಲುವು ಪಡೆದು ಸಂಸ್ಥೆಯ ಕೀರ್ತಿ ಹಾಗೂ ಹೆಗ್ಗಳಿಕೆಗೆ ಪಾತ್ರಾರಾಗಿದ್ದಾರೆ.
ಸಾಂಸ್ಕ್ರತಿಕ:
ಶಿಕ್ಷಣದಲ್ಲಿ ಕ್ರೀಡೆ, ಸಾಂಸ್ಕ್ರತಿಕ ಚಟುವಟಿಕೆ ಇವೆಲ್ಲವಿದ್ದರೆ ಮಾತ್ರ ಪರಿಪೂರ್ಣ ಶಿಕ್ಷಣವಾಗಲು ಸಾಧ್ಯ. ಸಂಸ್ಥೆಯಲ್ಲಿ ವಿದ್ಯಾರ್ಥಿಗಳು ಸಾಂಸ್ಕ್ರತಿಕ ಸ್ಪರ್ಧೆ, ಅಂತರ ಕಾಲೇಜು ಮಟ್ಟದಲ್ಲಿ ವಿವಿಧ ಸ್ಪರ್ಧೆಗಳು, ಇಲಾಖಾ ವತಿಯಿಂದ ನಡೆಯುವ ಅನೇಕ ಸ್ಪರ್ಧೆಗಳಲ್ಲಿ ವಿಜಯಿಯಾಗಿರುವುದು ಹಾಗೂ ರಾಜ್ಯಮಟ್ಟದಲ್ಲಿ ಬಹುಮಾನ ಪಡೆದಿರುವುದು ಸಂಸ್ಥೆಯ ಉತ್ತರೋತ್ತರ ಏಳ್ಗೆಗೆ ಹಿಡಿದ ಕೈಗನ್ನಡಿಯಾಗಿದೆ. ರಾಷ್ಟ್ರೀಯ ಹಬ್ಬಗಳು, ಸಾರ್ವಭೌಮತೆ ಸಾರುವ ವಿವಿಧ ಧರ್ಮಗಳ ಏಕತೆಗೆ ಒಂದೇ ಹಂದರದಲ್ಲಿ ಆಚರಿಸುವ ಅನೇಕ ಧಾರ್ಮಿಕ ಹಬ್ಬಗಳ ಆಚರಣೆಗಳು ವಿದ್ಯಾರ್ಥಿಗಳ ಸಹಬಾಳ್ವೆಗೆ ಅನುಕೂಲವಾಗಿದೆ ಈ ವಿದ್ಯಾ ದೇಗುಲದಲ್ಲಿ.
ಸರ್ವಾಂಗೀಣ ಪ್ರಗತಿಗೆ ಗಮನ:
“ನೀರಿನ ಹನಿ ಸರೋವರದಲ್ಲಿ ಇದ್ದರೆ ಯಾರೂ ಗುರುತಿಸುವುದಿಲ್ಲ. ಅದೇ ಹನಿಯು ಎಲೆಯ ಮೇಲಿದ್ದರೆ ವಜ್ರದ ಹರಳಿನಂತೆ ಹೊಳೆಯುತ್ತದೆ” ಎನ್ನುವ ಹಾಗೆ ಈ ವಿದ್ಯಾ ದೇಗುಲದಲ್ಲಿ ದಾಖಲಾತಿ ಪಡೆದ ವಿದ್ಯಾರ್ಥಿಗಳು ತಮ್ಮನ್ನು ವೈಯಕ್ತಿಕವಾಗಿ ಗುರುತಿಸಿಕೊಂಡು ತಮ್ಮ ವ್ಯಕ್ತಿತ್ವವನ್ನು ವಿಕಸನಗೊಳಿಸಿಕೊಳ್ಳುತ್ತಾರೆ. ವಿದ್ಯಾರ್ಥಿಗಳ ವೈಯಕ್ತಿಕ ಗಮನ, ಪೋಷಕರ ಸಭೆಗಳು, ಅನೇಕ ಸಂಪನ್ಮೂಲ ವ್ಯಕ್ತಿಗಳ ಜೊತೆ ಚರ್ಚೆ, ವೃತ್ತಿ ಮಾರ್ಗದರ್ಶನ ಶಿಬಿರಗಳು, ಅಂತರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿಗಳೊಂದಿಗೆ ವೈಯಕ್ತಿಕ ಸಂವಾದ, ಶಿಕ್ಷಣದಲ್ಲಿ ಹೆಚ್ಚಿನ ಅನುಭವಕ್ಕಾಗಿ ಕೈಗಾರಿಕಾ ಬೇಟಿ, ಪಿಯುಸಿ ನಂತರ ಲಭ್ಯವಿರುವ ವಿವಿಧ ಉನ್ನತ ಶಿಕ್ಷಣ ಸಂಸ್ಥೆಗಳ ಬೇಟಿ, ಶೈಕ್ಷಣಿಕ ಪ್ರವಾಸ ಇವೆಲ್ಲವನ್ನು ಆಯೋಜಿಸಿ ಶೈಕ್ಷಣಿಕ ಬಲವರ್ಧನೆಗೆ ಸಹಕಾರಿಯಾಗಿದೆ.
ಒಟ್ಟಿನಲ್ಲಿ “ಅಂತರಂಗವೆಂಬ ಪ್ರಣತಿಯಲ್ಲಿ ಪ್ರೀತಿಯೆಂಬ ತುಪ್ಪವನ್ನು ತುಂಬಿಸಿ ಸುಜ್ಞಾನವೆಂಬ ಬೆಳಕನ್ನು ಕೊಡುವ ಸಂಸ್ಥೆ” ಸೈಂಟ್ ಮೇರಿಸ್ ಪದವಿ ಪೂರ್ವ ಕಾಲೇಜು.
ದಾಖಲಾತಿಗೆ, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ.
ಸೈಂಟ್ ಮೇರಿಸ್ ಸಂಯುಕ್ತ ಪದವಿ ಪೂರ್ವ ಕಾಲೇಜು
ಸೈಂಟ್ ಮೇರಿಸ್ ಸಮೂಹ ವಿದ್ಯಾ ಸಂಸ್ಥೆಗಳು
ಚರ್ಚ್ ರಸ್ತೆ ಕುಂದಾಪುರ – 576201
ಸಂಪರ್ಕಕ್ಕೆ ದೂರವಾಣಿ ಸಂಖ್ಯೆ: 6362676193 / 8217879605

