

ಕುಂದಾಪುರ, ಜು.16: ಕುಂದಾಪುರ ಸಂತ ಜೋಸೆಫ್ ಕಾನ್ವೆಂಟ್ ಪ್ರಾರ್ಥನ ಮಂದಿರದಲ್ಲಿ ಸಂತ ಜೋಸೆಫ್ ಕಾನ್ವೆಂಟಿನ ಆಪೊಸ್ತಲಿಕ್ ಕಾರ್ಮೆಲ್ ಸಂಸ್ಥೆಯ ಧರ್ಮ ಭಗಿನಿಯರು, ತಮ್ಮ ಪಾಲಕಿ ಕಾರ್ಮೆಲ್ ಮಾತೆಯ ಹಬ್ಬವನ್ನು ಜುಲಾಯ್ 16 ರಂದು ಭಕ್ತಿಯಿಂದ ಆಚರಿಸಿದರು.
ಹಬ್ಬದ ಬಲಿದಾನವನ್ನು ಕುಂದಾಪುರ ಸಂತ ಮೇರಿಸ್ ಪಿ.ಯು. ಕಾಲೇಜ್ ಹಾಗೂ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ವಂ| ಫಾ| ರೊಲ್ವಿನ್ ಫೆರ್ನಾಂಡಿಸ್ ದಿವ್ಯ ಬಲಿ ಪೂಜೆಯನ್ನು ಅರ್ಪಿಸಿ, ಅವರು “ಕಾರ್ಮೆಲ್ ಮಾತೆ ಅಥವ ಮೇರಿ ಮಾತೆ ನಮಗೆ ಎರಡು ಕೊಡುಗೆಗಳನ್ನು ಒಂದು ನಮ್ಮ ರಕ್ಷಕ ಯೇಸು ಕ್ರಿಸ್ತನನ್ನು ಪುತ್ರನಾಗಿ ನಮಗೆ ನೀಡಿದ್ದು,ಇದು ಮಹಾ ಕೊಡುಗೆಯಾಗಿದೆ. ನಾವು ಇದೇ ಯೇಸು ಕ್ರಿಸ್ತರ ಮೂಲಕ ನಾವು ಪಾಪದಿಂದ ವಿಮುಕ್ತಿಯಾಗಿ ಮುಕ್ತಿ ಪಡೆಯುವ ಅವಕಾಶ ಸಿಕ್ಕಿತು. ಎರಡನೇಯದು ಅವರ ತಾಯ್ತತನ, ಯೇಸು ಕ್ರಿಸ್ತರು ಶಿಲುಬೆಯ ಮೇಲೆ ಪ್ರಾಣ ಅರ್ಪಿಸುವಾಗ ಅವರ ಶಿಷ್ಯನಿಗೆ ಇದೋ ಇನ್ನು ಮುಂದೆ ಇವಳು ನಿನ್ನ ತಾಯಿ ಎಂದು ಹೇಳಿದರು, ಇದಾದ ನಂತರ ಪ್ರಪಂಚಾದ್ಯಂತ ಮೇರಿ ಮಾತೆಯನ್ನು ಮಾಹಾಮಾತೆ ಎಂದು ಭಕ್ತಿಯಿಂದ ಗೌರವಿಸುತ್ತಾರೆ, ಕಾರ್ಮೆಲ್ ಮೇಳದ ಸಂಸ್ಥಾಪಕ ಸೈಮನ್ ಸ್ಟಾಕ್ ಸಂಕಷ್ಟದಲ್ಲಿ ಸಿಲುಕಿದಾಗ ಅವರು ಕಾರ್ಮೆಲ್ ಮಾತೆಯ ಹತ್ತಿರ ಪ್ರಾರ್ಥಿಸುತ್ತಾರೆ, ಆವಾಗ ಕಾರ್ಮೆಲ್ ಮಾತೆಯ ರೂಪದಲ್ಲಿ ಮೇರಿ ಮಾತೆ ಪ್ರತ್ಯಕ್ಷವಾಗಿ ಬೆಂತಿಣ್ ಎಂಬ ಪೋಷಾಕನ್ನು ನೀಡಿ ನಮಗೆ ಕಶ್ಟ ಸಂಕಷ್ಟದಿಂದ, ಕೆಟ್ಟದರಿಂದ, ಕೆಡುಕುಗಳಿಂದ ರಕ್ಷಣೆ ನೀಡುತ್ತೇನೆ ಎಂದು ಅಭಯ ನೀಡುತ್ತಾಳೆ. ಬೆಂತಿಣ್ (ಪೋಷಾಕು) ನಾವು ಧರಿಸಿದರೆ ಮೇರಿ ಮಾತೆ ನಮಗೆ ರಕ್ಷಣೆ ನೀಡುತ್ತಾಳೆ, ಬೆಂತಿಣ್ ನಮಗೆ ಪವಿತ್ರ ರಕ್ಷಾ ಕವಚವಾಗಿದೆ. ಕಾರ್ಮೆಲ್ ಮಾತೆ ಮಳೆಯ ಸಾಂಕೇತಿಕವಾದ ಮಾತೆಯಾಗಿದ್ದಾಳೆ, ಕಾರ್ಮೆಲ್ ಪ್ರದೇಶದಲ್ಲಿ ಮೂರು ವರ್ಷ ಮಳೆ ಆಗದಿದ್ದಾಗ ಎಲಿಯಾ ಪ್ರವಾದಿಯು ಕಾರ್ಮೆಲ್ ಮಾತೆಯ ಹತ್ತಿರ ಪ್ರಾರ್ಥಿಸಿದಾಗ ಕಾರ್ಮೆಲ್ ಮಾತೆಯ ತನ್ನ ರೂಪದಂತೆಯೇ ಇರುವ ಮೋಡವಾಗಿ ಬಂದು ದಾರಕಾರಾ ಮಳೆ ಬಂದು ಜನರನ್ನು ರಕ್ಷಿಸಿದ ಮಹಾಮಾತೆ, ಅವರು ನಮ್ಮ ಜೀವನ ಪರ್ಯಾಂತ ನಮ್ಮ ಜೊತೆಗಿದ್ದು, ನಮಗೆ ಸ್ವರ್ಗದ ಸೇರಿಸಲಿ ಎಂದು ನಾವು ಪ್ರಾರ್ಥಿಸುವ’ ಎಂದು ಸಂದೇಶ ನೀಡಿ, ಕಾರ್ಮೆಲ್ ಧರ್ಮಭಗಿನಿಯರಿಗೆ ಮತ್ತು ಆಪೊಸ್ತಲಿಕ್ ಕಾರ್ಮೆಲ್ ಸಹ ಸೇವಕರಿಗೆ ಹಬ್ಬದ ಶುಭಾಷಯಗಳನ್ನು ಆರ್ಪಿಸಿದರು.
ಕಾರ್ಮೆಲ್ ಮೇಳದ ಧರ್ಮಭಗಿನಿನಯರಿಗೆ ಸಹಾಯ ಹಸ್ತ ನೀಡುವ ಆಪೊಸ್ತಲಿಕ್ ಕಾರ್ಮೆಲ್ ಸಹ ಸೇವಕರಿಗೆ ಪುನರ್ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.
ಕಾನ್ವೆಂಟ್ ಮುಖ್ಯಸ್ಥೆ ಭಗಿನಿ ಸುಗುಣ ವಂದಿಸಿ ಎಲ್ಲರಿಗೂ ಹಬ್ಬದ ಶುಭಾಷಯಗಳನ್ನು ಕೋರಿದರು. ಈ ಸಂದರ್ಭದಲ್ಲಿ ಸಂತ ಜೋಸೆಫ್ ಕಾನ್ವೆಂಟಿನ ಕಾರ್ಮೆಲ್ ಮಾತೆಯ ಭಗಿನಿಯರು ಉಪಸಸ್ಥಿತರಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮೆಲ್ ಮಾತೆಯ ಭಕ್ತರು ಹಾಜರಿದ್ದರು. ನೀಡುವ ಆಪೊಸ್ತಲಿಕ್ ಕಾರ್ಮೆಲ್ ಸಹ ಸೇವಕರೊಂದಿಗೆ ಪ್ರಶ್ಣೋತ್ತರ ಸ್ಫರ್ಧೆ ನಡೆಸಿ ಬಹುಮಾನಗಳನ್ನು ವಿತರಿಸಲಾಯಿತು.















































