

ಸೌಹಾರ್ದ ಸೇವಾ ಸಮಿತಿ ಉಳ್ಳಾಲ ವತಿಯಿಂದ ಉಚಿತ ಹಿಜಾಮಾ, ಕಣ್ಣಿನ ತಪಾಸಣೆ ಹಾಗೂ ಜನರಲ್ ಆರೋಗ್ಯ ಉಚಿತ ತಪಾಸಣೆ ಶಿಬಿರ
ಉಳ್ಳಾಲದ ಹಜ್ರತ್ ಶಾಲೆಯಲ್ಲಿ ಅಕ್ಟೋಬರ್ 12ರಂದು ನಡೆದ ಆರೋಗ್ಯ ಶಿಬಿರದಲ್ಲಿ ಅತಿಥಿಯಾಗಿ ದುಬೈನಿಂದ ಆಗಮಿಸಿದ KCF UAE ರಾಷ್ಟ್ರೀಯ ಸನ್ನದ ಸಮಿತಿಯ ಅಧ್ಯಕ್ಷರಾದ ಜನಾಬ್ ಝೈನುದ್ದೀನ್ ಹಾಜಿ ಬೆಳ್ಳಾರೆ ರವರಿಗೆ ಸೌಹಾರ್ದ ಸೇವಾ ಸಮಿತಿಯ ಉಳ್ಳಾಲದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು ತದನಂತರ ಅವರು ಸಚಿವ ಡಾ. ಯು.ಟಿ ಖಾದರ್ ರವರ ಅಭಿವೃದ್ಧಿ ಬಗ್ಗೆ ಕೊಂಡಾಡಿದರು ಹಾಗೂ ಸೌಹಾರ್ದ ಸೇವಾ ಸಮಿತಿಯ ಕಾರ್ಯಗಳನ್ನು ಶ್ಲಾಘಿಸಿ ಸಮಿತಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರಿಗೆ ಶುಭ ಹಾರೈಸಿದರು.



