ಉತ್ತಮ ಶಿಕ್ಷಣಕ್ಕೆ ಹೆಸರುವಾಸಿಯಾದ ಹೋಲಿ ರೋಜರಿ ಇಂಗ್ಲೀಷ್ ಮೀಡಿಯಮ್ ಶಾಲೆ, ಕುಂದಾಪುರ
Truth and Excellence ಈ ಧೈಯದೊಂದಿಗೆ ನಡೆಸಿಕೊಂಡು ಬರುತ್ತೀರುವ ನಮ್ಮ ಹೋಲಿ ರೋಜರಿ ಇಂಗ್ಲೀಷ್ ಮೀಡಿಯಮ್ ಶಾಲೆ 28 ವರ್ಷಗಳನ್ನು ಪೂರೈಸಿ ಬಹಳ ಪ್ರಸಿದ್ದಿ ಪಡೆದಿದೆ.
ಶೈಕ್ಷಣಿಕ ಫಲಿತಾಂಶ 2024-25
ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಕಳೆದ 8 ವರ್ಷದಿಂದ ನಮ್ಮ ಹೋಲಿ ರೋಜರಿ ಇಂಗ್ಲೀಷ್ ಮಾದ್ಯಮ ಶಾಲೆಯು 100% ಫಲಿತಾಂಶ ಪಡೆಯುತ್ತಾ ಬಂದಿದೆ. ಈ ವರ್ಷ ಅಂಜಲಿನ್ ಎಂಬ ವಿದ್ಯಾರ್ಥಿನಿ 625 ರಲ್ಲಿ 613 ಅಂಕ ಪಡೆದು ಶಾಲೆಗೆ ಕೀರ್ತಿ ತಂದಿದ್ದಾಳೆ.
12 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 24 ವಿದ್ಯಾರ್ಥಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶಾಲೆಯ ಕೀರ್ತಿಯನ್ನು ಉತುಂಗಂಕ್ಕೆ ಏರಿಸಿದ್ದಾರೆ.
ಮೇ ತಿಂಗಳ 27 ರಂದು ಶಿಕ್ಷಕರಿಗಾಗಿ ಒಂದು ದಿನದ ತರಬೇರಿ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದು, ಇದಕ್ಕೆ ಖ್ಯಾತ ಸಂಪನ್ಮೂಲ ವ್ಯಕ್ತಿಯಾಗಿ ಡಾ. ರಾಯನ್ ಮಥಾಯಸ್ ಹಾಜರಿದ್ದು, ನೂತನ ಕೌಶಲ್ಯದೊಂದಿಗೆ, ವಿದ್ಯಾರ್ಥಿಗಳ ಪಾಠಗಳನ್ನು ಕಲಿಸಲು ಪ್ರೋತ್ಸಾಹಿಸಿದರು ಮತ್ತು ವಿದ್ಯಾರ್ಥಿ ಮತ್ತು ಶಿಕ್ಷಕರ – ಮುಖ್ಯ ಶಿಕ್ಷಕರ ನಡುವಿನ ಸಂಬಂಧ ಚೆನ್ನಾಗಿ ಇರಲು ಮಾಹಿತಿ ನೀಡಿದರು.
















‘ಶೈಕ್ಷಣಿಕ ಆರಂಭೋತ್ಸವ’
ಶಾಲೆಯ ಜಂಟಿ ಕಾರ್ಯದರ್ಶಿ ವಂ।ಧರ್ಮಗುರು ಪಾವ್ಲ್ ರೇಗೊ ಆಗಮಿಸಿ ಆಶೀರ್ವಚನವನ್ನು ಮಾಡಿ, ಹೊಸ ಶೈಕ್ಷಣಿಕ ವರ್ಷಕ್ಕೆ ಶುಭ ಕೋರಿದರು. ಶೈಕ್ಷಣಿಕ ವರ್ಷ 2025-26 Rosarian Voice ಪುಸ್ತಕವನ್ನು ಉದ್ಘಾಟನೆಯನ್ನು ಮಾಡಿ, ಕಳೆದ 8 ವರ್ಷದಿಂದ ಥಾವ್ನ್ 100% ಫಲಿತಾಂಶ ದೊರಕಲು ಕಾರಣರಾದ ಸರ್ವ ಶಿಕ್ಷಕರಿಗೆ ಸನ್ಮಾನಿಸಿ, ಶಾಲೆಗೆ ಹೊಸದಾಗಿ ಆಗಮಿಸಿದ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು. ಜೂನ್ 5 ರಂದು ಪರಿಸರ ದಿನಾಚರಣೆಯನ್ನು ಮಾಡಲಾಯಿತು. ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೆರೆಜ್ ಶಾಂತಿ ಅವರು ಪರಿಸರ ಸಂರಕ್ಷಣ ಮಾಹಿತಿ ನೀಡಿದರು. ಜೂನ್ 6 ರಂದು ವಂ। ಪಾವ್ಲ್ ರೇಗೊರವರ ಜನ್ಮ ದಿನಾಚರಣೆಯನ್ನು ಮಾಡಿ ಅವರಿಗೆ ಶುಭಾಶಯ ಕೋರಿ, ಕೇಕ್ ಕತ್ತರಿಸಿ, ಹೂ ಗುಛ್ಛ ನೀಡಿಲಾಯಿತು.
ಜೂನ್ 18 ರಂದು ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ ಹಾಗೇ 26 ರಂದು ಹೈಸ್ಕೂಲ್ ಶಿಕ್ಷಕರಿಗೆ, ಅನುಗ್ರಹದಲ್ಲಿ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಜಾವ್ನ್ ಡಾI. ಪ್ರೋಫೆಸರ್ ಹೆರ್ರಿ ಪ್ರಶಾಂತ್ ಮಿರಾಂದಾ ಹಾಜರಿದ್ದು National Education Policy(NEP) ಈ ವಿಷಯದಲ್ಲಿ ವಿಸ್ತಾರವಾಗಿ ಮಾಹಿತಿ ನೀಡಿದರು.
ಜೂನ್ 21 ರಂದು ಅಂತರಾಷ್ಟ್ರೀಯ ಯೋಗ ದಿವಸವನ್ನು ಆಚರಿಸಲಾಯಿತು. ಮಕ್ಕಳು ವಿವಿಧ ಆಸನಗಳ ಯೋಗ ಪ್ರದರ್ಶನ ಮಾಡಿದರು. ಜೂನ್ 23 ರಂದು ವಿದ್ಯಾರ್ಥಿ ಸಂಸತ್ ಉದ್ಘಾಟಿಸಲಾಯಿತು. ಶ್ರೀ ಅಭಿಲಾಷ್ ಬಿ.ಎ. JCI ಅಧ್ಯಕ್ಷ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಪರ್ಲ್ ಬರೆಟ್ಟೊ ವಿದ್ಯಾರ್ಥಿ ನಾಯಕಿಯಾಗಿ (SPL) ಆಯ್ಕೆಯಾದಳು, ಮಂತ್ರಿ ಮಂಡಲದಲ್ಲಿ ಆರಿಸಿ ಬಂದವರು, ವಿವಿಧ ಕ್ಲಬ್ಬಗಳ ಅಧ್ಯಕ್ಷರು ಪ್ರತಿಜ್ಞಾ ವಿಧಿ ಕೈಗೊಂಡರು. ಜಂಟಿ ಕಾರ್ಯದರ್ಶಿಗಳು ಶುಭ ಕೋರಿ, ಆಶಿರ್ವದಿಸಿದರು.
ಶಿಕ್ಷಕ-ರಕ್ಷಕ ಸಭೆ : ಜೂನ್ 23 ರಂದು ಶಿಕ್ಷಕ-ರಕ್ಷಕ ಸಭೆ ನಡೆಯಿತು.. ಶ್ರೀಮತಿ ಪ್ರತಿಭಾ ಲೀಡಿಯಾ ಬ್ರಾಗ್ಸ್ ಉಪನ್ಯಾಸಕಿ (Department of Psychiatric Nursing Manipal) ಇವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಪ್ರಸ್ತೂತ ಮಕ್ಕಳ ಆರೈಕೆ ಹೆಗೆ ಮಾಡಬೇಕು, ಹೇಗೆ ಬೆಳೆಸಬೇಕು, ಅವರಿ ಯಾವ ಥರಹದ ತಿಂಡಿ ತಿನಿಸು ನೀಡಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು. .
ರಾಷ್ಟ್ರೀಯ ಹಬ್ಬಗಳ ಆಚರಣೆಃ ಜುಲಾಯ್ 25 ರಂದು ವನಮಹೋತ್ಸವ ಆಚರಿಸಲಾಯಿತು. . ಸಂಪನ್ಮೂಲ ವ್ಯಕ್ತಿಯಾಗಿ ಅರಣ್ಯ ಇಲಾಖೆಯ ಕುಮಾರಿ ಸ್ನೇಹಾ ಆಗಮಿಸಿದ್ದರು. ಗೀಡ ನೆಟ್ಟು ಪರಿಸರ ರಕ್ಷಣೆ ಮಾಡುವುದು ವಿದ್ಯಾರ್ಥಿಗಳ ಕರ್ತವ್ಯ ಎಂದು ತಿಳಿ ಹೇಳಿದರು. ಸ್ವಾತಂತ್ರ್ಯ ದಿನದಂದು ಸ್ವಾತಂತ್ರ್ಯ ದಿನಾಚರಣೆಯನ್ನು ಭರ್ಜರಿಯಾಗಿ ಆಚರಿಸಲಾಯಿತು, ಸೈನಿಕರ ವೇಷ ತೊಟ್ಟು ವಿವಿಧ ನೃತ್ಯ ಮತ್ತು ದೇಶ ಭಕ್ತಿ ಗೀತೆಗಳನ್ನು ಹಾಡಿ ತೋರಿಸಲಾಯಿತು. ಅತಿಥಿಯಾಗಿ ಶ್ರೀ. ದಿನೇಶ್ ಆಚಾರ್ಯ (ಇಂಡೋ-ಟಿಬೇಟಿಯನ್ ಬೋರ್ಡರ್ ಪೋಲೀಸ್ ಪೋರ್ಸ್) ಮತ್ತು ಅಧ್ಯಕ್ಷರಾಗಿ ಮಾI ಬಾI ಪಾವ್ಲ್ ರೇಗೊ ಹಾಜರಿದ್ದರು. ಸೆಪ್ಟೆಂಬರ್ 2 ರಂದು ಜೂನಿಯರ್ ರೆಡ್ ಕ್ರಾಸ್ ಕ್ಲಬ್ ಉದ್ಘಾಟಿಸಿ ಅತಿಥಿಗಳಾಗಿ ಶ್ರೀ ಜೈಕರ್ ಶೆಟ್ಟಿ, ಡಾI. ಸೋನಿ ಡಿ’ಕೋಸ್ತಾ,ಆನಿ ಶ್ರೀ. ಶಿವರಾಮ ಶೆಟ್ಟಿ ಇವರು ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.
ಸೆಪ್ಟೆಂಬರ್ 4 ರಂದು ಮುಖ್ಯ ಶಿಕ್ಷಕಿ, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ, ಮತ್ತು ವಿದ್ಯಾರ್ಥಿಗಳು ಸೇರಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಅದೇ ದಿವಸ ಈದ್-ಮಿಲಾದ್ ಹಬ್ಬವನ್ನು ಆಚರಿಸಿ ಮುಸ್ಲಿಂ ವಿದ್ಯಾರ್ಥಿಗಳಿಗೆ ಶುಭ ಕೋರಲಾಯಿತು. ಸೆಪ್ಟೆಂಬರಾಚ್ಯಾ 9 ರಂದು ಮಾದಕ ದ್ರವ್ಯಗಳ ದುಷ್ಪಾರಿಣಾಮದ ಬಗ್ಗೆ ಶ್ರೀಮತಿ ನಳಿನಾಕ್ಷಿ ಇವರು ಮಾಹಿತಿ ನೀಡಿದರು. ಕಿಶೋರ್ವಾಸ್ಥೆಯಲ್ಲಿ , ಬೆಳೆದು ಬರುವ ಮಕ್ಕಳಲ್ಲಿ,ದೈಹಿಕ ಮತ್ತು ಮಾನಸಿಕ ಸ್ಥಿತಿಯಲ್ಲಿ ಬೇಕಾದ ಜಾಗ್ರತೆ, ಮಾದಕ ದ್ರವ್ಯ ಸೇವನೆ ಮಾಡುವುದರಿಂದ ಆಗುವ ಆನಾಹುತಗಳನ್ನು ಅವರು ವಿವರಿಸಿದರು.
ಇಂದಿನ ಸ್ಪರ್ಧಾತ್ಮಕ ಕಾಲದಲ್ಲಿ ಮಕ್ಕಳಿಗೋಸ್ಕರ ನಮ್ಮ ಶಾಲೆಯಲ್ಲಿ ಚಿತ್ರಕಲಾ, ಭಾಷಣ, ಜಾನಪದ ಗೀತೆ, ಪ್ರಬಂಧ, ಕಥೆ ಹೇಳುವುದು, ಕರಕುಶಲ ವಸ್ತು ತಯಾರಿಸುವುವ ಸ್ಪರ್ಧೆಗಳನ್ನು ಹಮ್ಮಿಕೊಳ್ಳುತ್ತೇವೆ. ನವೆಂಬರ್ 6 ರಂದು Award Ceremony ಕಾರ್ಯಕ್ರಮ ಆಚರಿಸಿ ಬಹುಮಾನ ನೀಡಿ ಶುಭ ಕೋರಲಾಯಿತು.ಕಾರ್ಯಕ್ರಮಕ್ಕೆ ಅಧ್ಯಕ್ಷರಾಗಿ ವಂ। ಪಾವ್ಲ್ ರೇಗೊ, ಮುಖ್ಯ ಅತಿಥಿಯಾಗಿ ನಮ್ಮ ಹಳೆ ವಿದ್ಯಾರ್ಥಿ ಕುಮಾರಿ ಇನಿ ಶೆಟ್ಟಿ ಮತ್ತು ಯುಸೂಫ್ ಫಾಹಿಮ್ (Engineers) ಹಾಜರಿದ್ದು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಆಟ ಪಂದ್ಯಾಟ
ನಮ್ಮ ಶಾಲೆಯ ವಿದ್ಯಾರ್ಥಿಗಳು ಹಲವು ಕಡೆ ಆಡೋಟಗಳಲ್ಲಿ ಭಾಗವಹಿಸಿ ಹಲವಾರು ಪದಕ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. ಹತ್ತನೇ ತರಗತಿಯ ವಿದ್ಯಾರ್ಥಿ ಪ್ರೀತಮ್ ಪಿ.ಎಂ . ಕರಾಟೆಯಲ್ಲಿ ತಾಲೂಕು ಮಟ್ಟದಲ್ಲಿ ಎರಡನೇ ಸ್ಥಾನ ಪಡೆದಿದ್ದಾನೆ. 9 ನೇ ತರಗತಿಯ ಶಿವಧಾ ತಾಲೂಕು ಮಟ್ಟದಲ್ಲಿ ಎರಡನೇ ಸ್ಥಾನ ಪಡೆದಿದ್ದಾಳೆ. 9 ನೇ ತರಗತಿಯ ಸಂಚಿತಾ ಮೈತಿ IT Quiz ಸ್ಫರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು, ತಾಲೂಕು ಮಟ್ಟದಕ್ಕೆ ತೇರ್ಗಡೆ ಆಗಿ, ಜಿಲ್ಲಾ ಮಟ್ಟದಲ್ಲಿ TOP 15 ರಲ್ಲಿ ಸ್ಥಾನ ಪಡೆದು, ಮೈಸೂರು ಡಿವಿಜನಲ್ಲಿ ಆರಿಸಿ ಬಂದಿದ್ದಾಳೆ. Under 14 ರ ಹುಡುಗರ ವಿಭಾಗಾದಲ್ಲಿ ಅತೀಶ್, ಪ್ರಿನ್ಸ್ಟನ್, ಪ್ರಿನ್ಸಸ್ಟೊನ್, ಡಿಲನ್ ಮತ್ತು ಸನ್ವಿತ್ ಇವರು ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅತೀಶ್ ಪ್ರಿನ್ಸಸನ್ ಜಿಲ್ಲಾ ಮಟ್ಟದಲ್ಲಿ ಎರಡನೇ ಸ್ಥಾನ ಪಡೆದು, ರಾಜ್ಯ ಮಟ್ಟದಲ್ಲಿ ಆರಿಸಿ ಬಂದಿದ್ದಾರೆ.
Under 14 ಹುಡುಗಿಯರ ಟೇಬಲ್ ಟೆನ್ನಿಸ್ ಆಟದಲ್ಲಿ ಸಾವಿಯಾ, ಅನಿಕಾ, ಅವಿಕಾ, ದಿವ್ಯಾ, ಪ್ರಣಮ್ಯಾನ್ ತಾಲೂಕು ಹಂತದಲ್ಲಿ ಎರಡೆನೇ ಸ್ಥಾನ ಪಡೆದಿದ್ದಾರೆ. Under 17 ಹುಡುಗಿಯ ಟೇಬಲ್ ಟೆನ್ನಿಸ್ನಲ್ಲಿ ಅನುಶ್ರೀ, ವೃದ್ಧಿ ಮತ್ತು ಸೋನಾಲಿ ತಾಲೂಕು ಮಟ್ಟದಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. Under 17 ಶಟಲ್ ಬ್ಯಾಡ್ಮಿಂಟನ್ ಆಟದಲ್ಲಿ ವಿಲ್ಶಾ ಮತ್ತು ಜುಲೈಕಾ ತಾಲೂಕು ಮಟ್ಟದಲ್ಲಿ ಎರಡನೇ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಎಂಟನೇ ತರಗತಿಯ ಮನ್ವಿತಾ (Discuss Throw) ಇದರಲ್ಲಿ ಪ್ರಥಮ ಸ್ಥಾನ, ನಿಹಾರಿಕಾ Shot put ಇದರಲ್ಲಿ ಎರಡನೇ ಸ್ಥಾನ, ಹೈಸ್ಕೂಲು ವಿದ್ಯಾರ್ಥಿ ಮಾರ್ಚ್ ಪಾಸ್ಟನಲ್ಲಿ (March Past) ಎರಡನೇ ಸ್ಥಾನ ಪಡೆದಿದ್ದಾಳೆ.
ನವೆಂಬರ್ 21 ರಂದು ಶಾಲಾ ವಾರ್ಷಿಕೊತ್ಸವವು ಬಹು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷರಾಗಿ ವಂ। ಪಾವ್ಲ್ ರೇಗೊ, ಮುಖ್ಯ ಅತಿಥಿಯಾಗಿ ಶ್ರೀ.ಅಲ್ವಿನ್ ಕ್ರಾಡ್ವಸ್ (Managing Director, Durotop Construction Chemicals Pvt. Ltd Udupi) ಕುಮಾರಿ ನಿಖಿತಾ ನಾರಾಯಣ ಖಾರ್ವಿ (Alumna ( Mechanical Engineer, Sri Krishna Engineering Works, Kundapura) ಮತ್ತು ಸೈಂಟ್ ಜೋಸೆಫ್ ಕಾನ್ವೆಂಟಿನ ಸಿI. ಸುಪ್ರೀಯಾ ಎ.ಸಿ. ಹಾಜರಿದ್ದು, 2024-25 ನೇ ಸಾಲಿನ ವರ್ಷದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿ ಮತ್ತು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ, ಹಾಗೇ ಏಳು ಮತ್ತು ಹತ್ತನೇ ತರಗತಿಯ ಮೌಲ್ಯ ಶಿಕ್ಷಣ ಮತ್ತು ಕ್ರೈಸ್ತ ಶಿಕ್ಷಣದಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ, ಹಾಗೇ ಆಡೋಟ, ಪಂದ್ಯಾಟಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ, ದಾನಿಗಳಿಗೆ ಸನ್ಮಾನ ಮಾಡಲಾಯಿತು. ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ಹಂಚಲಾಯಿತು. ವಿದ್ಯಾರ್ಥಿಗಳು ವಿವಿಧ ರೀತಿಯ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಸಾದರ್ ಪಡಿಸಿದರು.
ನಮ್ಮಲ್ಲಿ ವಿವಿಧ ಧರ್ಮದ ಮಕ್ಕಳು ಶಿಕ್ಷಣ ಕಲಿಯಲು ಬರುತಿದ್ದಾರೆ, ಅವರವರ ಧರ್ಮಕ್ಕೆ ಅನುಗುಣವಾಗಿ ಈದ್-ಮಿಲಾದ್, ದೀಪಾವಳಿ, ಕ್ರಿಸ್ಮಸ್ ಎಲ್ಲರು ಸೇರಿ ಆಚರಿಸುತ್ತೇವೆ.
ಧರ್ಮಪ್ರಾಂತ್ಯ ಮಟ್ಟದ ಕ್ರೈಸ್ತ ಶಿಕ್ಷಣ ಮತ್ತು ಮೌಲ್ಯ ಶಿಕ್ಷಣ ಪರೀಕ್ಷೆಯಲ್ಲಿ ಹತ್ತನೇ ತರಗತಿಯ ಫ್ರೀಢಾ ಡಿಸೋಜಾ ಇವಳಿಗೆ ಪ್ರಥಮ ಸ್ಥಾನ ಲಭಿಸಿದ್ದು, ಶಿಕ್ಷಣದಲ್ಲಿ ಅವಳು ಪ್ರತಿ ವರ್ಷ ಪ್ರಥಮ ಸ್ಥಾನ ಪಡೆದಿದ್ದಾಳೆ. ಏಳನೇ ತರಗತಿಯ ಕ್ರೈಸ್ತ ಶಿಕ್ಷಣ ಪರೀಕ್ಷೆಯಲ್ಲಿ ಆನ್ಸಿಯಾ ಜ್ಯೂವೆಲ್ ಕ್ರಾಸ್ತಾ, ಮೌಲ್ಯ ಶಿಕ್ಷಣದಲ್ಲಿ ತನ್ವಿ ಶಾಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಮಾರ್ಚ್ ತಿಂಗಳಲ್ಲಿ 7 ಮತ್ತು 10 ತರಗತಿಯ ವಿದ್ಯಾರ್ಥಿಗಳಿಗೆ Send Off ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನಮ್ಮ ವಿದ್ಯಾಸಂಸ್ಥೆಯ ಎಲ್ಲಾ ಕಾರ್ಯಕ್ರಮ ಚಟುವಟಿಕೆಗಳಲ್ಲಿ ನಮಗೆ ಉತ್ತಮ ಮಾರ್ಗದರ್ಶನ ಸಹಕಾರ ನೀಡುತೀರುವ ಸಂಚಾಲಕರಾದ ಅ। ವಂ। ಧರ್ಮಗುರು ಪಾವ್ಲ್ ರೇಗೊ, ಶಾಲೆಯ ಉದ್ದಾತಿಕರಣಕ್ಕೆ ಸೇವೆ ನೀಡುತ್ತೀರುವ ಆಡಳಿತ ಮಂಡಳಿಗೆ, ನಮ್ಮ ವಿದ್ಯಾರ್ಥಿಗಳ ಪೋಷಕರಿಗೆ, ದಾನಿಗಳಿಗೆ, ವಿದ್ಯಾರ್ಥಿಗಳಿಗೆ ಧನ್ಯವಾದಗಳು. ನಮ್ಮ ಶಾಲೆಯ ಪೋಷಕಿ ಪಾವಿತ್ರೆ ರೋಜರಿ ಮಾತೆಯ ಆಶಿರ್ವಾದಗಳನ್ನು ನಿಮ್ಮ ಮೇಲೆ ಬೇಡುತ್ತೆವೆ.

