

ಬೆ೦ಗಳೂರು: ಅಣ್ಣನ ಪ್ರೀತಿಯನ್ನು ನಿರಾಕರಿಸಿದ ಯುವತಿಯನ್ನು ತಮ್ಮ ಬರ್ಬರವಾಗಿ ಹತ್ಯೆ
ಮಾಡಿದ ಫಟನೆ ಕೋಡಿಹಳ್ಳಿಯ ಹೆಚ್ಎಎಲ್ ರಸ್ತೆಯಲ್ಲಿ ನಡೆದಿದೆ. ಕಾನೂನು ವಿದ್ಯಾರ್ಥಿನಿ ಅಮೃತಾ (21) ಕೊಲೆಯಾದ ಯುವತಿ.ಪ್ರಕರಣಕ್ಕೆ ಆರೋಪಿಗಳಾದ ಸೂರ್ಯ ಹಾಗೂ ಆತನ ಅಣ್ಣ ಧನುಷ್ನನ್ನು ಜೀವನ್ ಭೀಮಾನಗರ ಪೊಲೀಸರು ಬಂಧಿಸಿದ್ದಾರೆ. ಧಾರ್ಮಿಕ ಸಮಾರಂಭದಲ್ಲಿ ಅಮೃತಾ ಮತ್ತು ಧನುಷ್ ಕುಟುಂಬಗಳ ನಡುವೆ ಸ್ನೇಹ ಏರ್ಪಟ್ಟು, ಆ ಸ್ನೇಹ ಇಬ್ಬರ ನಡುವೆ ಪ್ರೇಮಾಂಕುರವಾಗಲು ಕಾರಣವಾಗಿತ್ತು. ಆದರೆ ಧನುಷ್ ತನಗೆ ಮೊದಲೇ ಮದುವೆಯಾಗಿ ಡಿವೋರ್ಸ್ ಆಗಿರುವ ಕಹಿ ಸತ್ಯವನ್ನು ಹಾಗೂ ತನಗೊಂದು ಮಗು ಇರುವ ವಿಷಯವನ್ನು ಅಮ್ಮೃತಾಳಿಂದ ಗುಟ್ಮಾಗಿಟ್ಟಿದ್ದ. ಇತ್ತೀಚೆಗೆ ಈ ಧನುಷ್ನ ಮೋಸದ ಜಾಲ ಬಯಲಾಗುತ್ತಿದೆಯೇ, ನೊಂದ ಅಮೃತಾ ಆತನ ಒಡನಾಟವನ್ನು ಪೂರ್ಣವಾಗಿ ಕಡಿದುಕೊಂಡು
ಮದುವೆ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿರಲಿಲ್ಲ.
ಕೊಲೆಗೆ ಸಂಚು ಹಾಕಿದ ತಮ್ಮ: ತನ್ನ ಅಣ್ಣನ ಪ್ರೀತಿಯನ್ನು ತಿರಸ್ಕರಿಸಿದ ಯುವತಿಯನ್ನು ಜೀವಂತವಾಗಿ ಬಿಡಬಾರದು ಎಂದು ಧನುಷ್ನ ಸಹೋದರ ಸೂರ್ಯ ಕ್ರೂರ ಸ೦ಚು ರೂಪಿಸಿದ್ದ. ಅದರಂತೆ ಜುಲೈ 13 ರಂದು ಕೋಡಿಹಳ್ಳಿಯಲ್ಲಿ ಯುವತಿಯ ನಿವಾಸದ ಬಳಿ ಹೊ೦ಚು ಹಾಕಿ ಬ೦ದಿದ್ದ ಸೂರ್ಯ, ಆಕೆಯೊಂದಿಗೆ ಗಲಾಟಿ ತೆಗೆದಿದ್ದಾನೆ. ಜಗಳ ವಿಕೋಪಕ್ಕೆ ತಿರುಗುತ್ತಿರುವಾಗ ತಾನು ಮುಚ್ಚಿಟ್ಟು ತ೦ದಿದ್ದ ಚಾಕುವನ್ನು ತೆಗೆದು ಅಮೃತಾಳ ಎದೆ ಹಾಗೂ ಬೆನ್ನಿನ ಭಾಗಕ್ಕೆ ಮನಬ೦ದ೦ತೆ ಇರಿದು ಸ್ಥಳದಿಂದ ಓಡಿಹೋಗಿದ್ದ.
ಕಾನೂನು ವಿದ್ಯಾರ್ಥಿನಿಯ ಜೀವನ ಮಣ್ಣುಪಾಲು: ರಕ್ತದ ಮಡುವಿನಲ್ಲಿ ತೀವ್ರವಾಗಿ ಒದ್ದಾಡುತಿದ್ದ ಯುವತಿಯನ್ನು ನೆರೆಹೊರೆಯವರು ತಕ್ಷಣ ಆಸ್ಪತ್ರೆಗೆ ಸಾಗಿಸಿದರಾದರೂ, ಗಾಯದ ತೀವ್ರತೆಯಿಂದಾಗಿ ಆಕೆಗೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾಳೆ. ಮೃತ ದುರ್ದೈವಿ ಅಮೃತಾ ಕಾನೂನು ಪದವಿ ವ್ಯಾಸ೦ಗ ಮಾಡುತ್ತಾ, ಬಿಡುವಿನ ವೇಳೆಯಲ್ಲಿ ಪಿಜ್ಜಾ ಕೇಂದ್ರವೊ೦ದರಲ್ಲಿ ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದರು ಎ೦ದು ತಿಳಿದು ಬಂದಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವನ್ ಭೀಮಾನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಕ೦ಬಿ ಎಣಿಸುವಂತೆ ಮಾಡಿದ್ದಾರೆ.ಆದರೂ ಕೂಡ ಕಾನೂನು ವಿದ್ಯಾರ್ಥಿನಿ ಅಮೃತಾ ಮರಳಿ ಬರುವುದಿಲ್ಲ ಅವಳ ಜೀವನವನ್ನುಮಣ್ಣುಪಾಲು ಮಾಡಿ ಬಿಟ್ಟರು ರಾಕ್ಷಸಸರು.


