

ಮಂಗಳೂರು: ಸಮುದ್ರದ ಪ್ರಬಲ ಅಲೆಗಳ ಅಬ್ಬರಕ್ಕೆ ಮೀನುಗಾರಿಕಾ ದೋಣಿಯೊಂದು ಪಲ್ಟಿ ಹೊಡೆದು ದೋಣಿಯಲ್ಲಿದ್ದ ಆರು ಮಂದಿ ಮೀನುಗಾರರನ್ನು ರಕ್ಷಿಸಿದ ಘಟನೆ ಮಂಗಳೂರು ಹೊರವಲಯದ ಸುರತ್ಕಲ್ ಸಮುದ್ರ ತೀರದಲ್ಲಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ.
ಚಣ್ಕು ನಾಗರಾಜ ಖಾರ್ವಿಯವರಿಗೆ ಸೇರಿದ ದೋಣಿ ಸುರತ್ಕಲ್ ಕೊಕ್ಲಾರ್ ಸಮೀಪ ಪಲ್ಟಿಯಾಗಿದೆ. ಉಡುಪಿ ಜಿಲ್ಲೆಯ ಮಲ್ಪೆ ಬಂದರಿನಿಂದ ಮೀನುಗಾರಿಕೆ ತೆರೆಳಿದ್ದ ಈ ಮೀನುಗಾರಿಕಾ ದೋಣಿಯಲ್ಲಿ ಅಂದ್ರಪ್ರದೇಶ ಮೂಲದ ಆರು ಮಂದಿ ಮೀನುಗಾರರಿದ್ದರು. ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಸಂದರ್ಭ ಏಕಾಏಕಿ ಸಮುದ್ರದ ಬಾರೀ ಅಲೆಗಳು ದೋಣಿಗೆ ಅಪ್ಪಳಿಸಿದ ಪರಿಣಾಮ ದೋಣಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ದೋಣಿ ಪಲ್ಟಿಯಾದ ರಭಸಕ್ಕೆ ಎಲ್ಲಾ ಮೀನುಗಾರರು ಸಮುದ್ರದಕ್ಕೆ ಬಿದ್ದಿದ್ದರು.
ತಕ್ಷಣ ಸಮೀಪದಲ್ಲೇ ಇದ್ದ ಸ್ಥಳೀಯ ಮೀನುಗಾರರು ಮುಳುಗಿದ ದೋಣಿ ಮೇಲೆ ನಿಂತು ರಕ್ಷಣೆಗೆ ಕಾದಿದ್ದವರನ್ನು ಸಾಹಸಮಯವಾಗಿ ಆರು ಮಂದಿ ಮೀನುಗಾರರನ್ನು ರಕ್ಷಿಸಿ ಸುರಕ್ಷಿತವಾಗಿ ದಡಕ್ಕೆ ಕರೆತಂದಿದ್ದಾರೆ.ಸ್ಥಳೀಯ ಮೀನುಗಾರ ಸಾಹಸದಿಂದ ಆಗುವ ಘೋರ ದುರಂತವೊಂದು ತಪ್ಪಿದೆ.








