

ಬಾರ್ಕೂರು; ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬ್ರಹ್ಮಾವರ ತಾಲೂಕು ಘಟಕ, ನ್ಯಾಷನಲ್ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ, ಹನೇಹಳ್ಳಿ, ಬಾರ್ಕೂರು ಹಾಗೂ ಅಲಯನ್ಸ ಕ್ಲಬ್ ಬಾರ್ಕೂರು ಇವರ ಜಂಟಿ ಸಹಯೋಗದಲ್ಲಿ “ಸಾಹಿತ್ಯ ಪ್ರೇರಣೆ “ಸಾಹಿತ್ಯ ಸಂಚಾರ 21ಕಾರ್ಯಕ್ರಮ ಶಾಲೆಯಲ್ಲಿ ಜರುಗಿತು. ಶಾಲಾ ಆಡಳಿತ ಮಂಡಳಿಯ ಸಂಯೋಜಕರಾಗಿರುವ ಶ್ರೀ ಆರ್ಚಿ ಬಾಲ್ಡ್ ಫುರ್ಟಾಡೊ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದು, ಕಾರ್ಯಕಾರಿ ಸಮಿತಿ ಸದಸ್ಯರು, ಹಿರಿಯರು ಆಗಿರುವ ಶ್ರೀ ರತ್ನಾಕರ್ ಶೆಟ್ಟಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಕ.ಸಾ.ಪ ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ರಾಮಚಂದ್ರ ಐತಾಳ್ ಗುಂಡ್ಮಿ, ಶ್ರೀ ಅಚ್ಚುತ ಪೂಜಾರಿ ಕಾರ್ಕಡ, ಕ.ಸಾ.ಪ.ಕೋಟ ಹೋಬಳಿ ಅಧ್ಯಕ್ಷರಾದ ಶ್ರೀ ವಿಶ್ವನಾಥ ಖಾರ್ವಿ, ಕಾರ್ಯದರ್ಶಿಯವರಾದ ಶ್ರೀ ನರಸಿಂಹಮೂರ್ತಿ, ಯಕ್ಷಗಾನ ಶಿಕ್ಷಕರಾದ ಶ್ರೀ ನರಸಿಂಹ ತುಂಗ ಕೋಟ ಹಾಗೂ ಕ.ಜಾ.ಪ.ಪ.ಕುಂದಾಪುರ ತಾ.ಘ.ಅಧ್ಯಕ್ಷೆ ಶ್ರೀಮತಿ ಸುಪ್ರೀತಾ ಪುರಾಣಿಕ, ಹೈಸ್ಕೂಲು ಕನ್ನಡ ಶಿಕ್ಷಕರಾದ ಮಾರುತಿ ಕೆ.ಪಿ ಉಪಸ್ಥಿತರಿದ್ದರು.
ಕನ್ನಡ ಕತೆ, ಕವನ, ಪ್ರಾಸ ಪದ್ಯಗಳು, ಅಭಿನಯ ಗೀತೆಗಳು, ಮನೋರಂಜನಾ ಆಟಗಳು, ಹಾಸ್ಯ ಯಕ್ಷಗಾನ ಮೊದಲಾದ ಚಟುವಟಿಕೆಗಳನ್ನು ನಡೆಸಿ ಕನ್ನಡ ಭಾಷೆಯ ಶ್ರೇಷ್ಟತೆ, ಸಿರಿವಂತಿಕೆ, ಬೆಳವಣಿಗೆ ಮತ್ತು ವೈಭವದ ಬಗ್ಗೆ ಮಕ್ಕಳಿಗೆ ಪರಿಚಯಿಸಿದರು.
ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಉದಯ ಎಸ್ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿ, ಪುಷ್ಪ ನೀಡಿ ಸ್ವಾಗತಿಸಿದರು. ಶಿಕ್ಷಕಿ ಶೈಲಜ ಕಾರ್ಯಕ್ರಮ ನಿರೂಪಿಸಿದರು. ನವ್ಯಲತಾ ವಂದಿಸಿದರು. ಶಿಕ್ಷಕಿ ಸುಮ ಹಾಗೂ ಮತ್ತಿತರ ಶಿಕ್ಷಕರು, ಪೋಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

