


ಕೋಲಾರ : ಜುಲೈ 9 ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಭರದಿಂದ ಸಾಗಿದ್ದು, ಜುಲೈ 09ರ ಗುರುವಾರ ಸಂಜೆ ವೇಳೆಗೆ ಜಿಲ್ಲೆಯಾದ್ಯಂತ ಶೇ. 95.87 ರಷ್ಟು ಮತದಾರರ ನಮೂನೆಗಳನ್ನು (EFs) ವಿತರಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಜೂನ್ 16ರ ಅಂಕಿಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 12,95,265 ಮತದಾರರಿದ್ದಾರೆ. ಪರಿಷ್ಕರಣೆಗಾಗಿ ಮತದಾರರ ನಮೂನೆಗಳನ್ನು ಮುದ್ರಿಸಿ ಈಗಾಗಲೇ ಬೂತ್ ಮಟ್ಟದ ಅಧಿಕಾರಿಗಳಿಗೆ (BLOs) ತಲುಪಿಸಲಾಗಿದೆ. ಜುಲೈ 09ರ ಸಂಜೆ 4 ಗಂಟೆಯವರೆಗಿನ ವರದಿಯಂತೆ, ಜಿಲ್ಲೆಯ ಒಟ್ಟು ಮತದಾರರ ಪೈಕಿ 12,41,771 ಜನರಿಗೆ ನಮೂನೆಗಳನ್ನು ವಿತರಣೆ ಮಾಡಲಾಗಿದೆ.
ವಿತರಿಸಲಾದ ನಮೂನೆಗಳ ಡಿಜಿಟಲೀಕರಣ ಕಾರ್ಯವೂ ಚುರುಕಾಗಿದ್ದು, ಇದುವರೆಗೆ 1,87,202 (ಶೇ. 14.45ರಷ್ಟು) ನಮೂನೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಆನ್ಲೈನ್ ಮೂಲಕವೂ 2,098 (ಶೇ. 0.16ರಷ್ಟು) ಮತದಾರರು ತಮ್ಮ ನಮೂನೆಗಳನ್ನು ಸಲ್ಲಿಸಿದ್ದಾರೆ.
ಪರಿಷ್ಕರಣೆ ಸಂದರ್ಭದಲ್ಲಿ ಒಟ್ಟು 3,278 ಜನರನ್ನು ಮೃತಪಟ್ಟವರು, ಸ್ಥಳಾಂತರಗೊಂಡವರು ಹಾಗೂ ಗೈರುಹಾಜರಾದವರು (ASDDO) ಎಂದು ಪಟ್ಟಿಯಿಂದ ಗುರುತಿಸಲಾಗಿದೆ. ಈ ಪೈಕಿ 1,593 ಮೃತಪಟ್ಟವರು, 1,242 ಖಾಯಂ ಆಗಿ ಸ್ಥಳಾಂತರಗೊಂಡವರು, 382 ಈಗಾಗಲೇ ನೋಂದಾಯಿತರಾದವರು , 35 ಗೈರುಹಾಜರಾದ/ಸಂಪರ್ಕಕ್ಕೆ ಸಿಗದವರು ಹಾಗೂ 26 ಇತರೆ ಪ್ರಕರಣಗಳು ಸೇರಿವೆ ಎಂದು ವರದಿ ಸ್ಪಷ್ಟಪಡಿಸಿದೆ.
ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಕೋಲಾರ ಕ್ಷೇತ್ರದಲ್ಲಿ ಅತಿ ಹೆಚ್ಚು, ಅಂದರೆ 2,42,034 ಮತದಾರರಿದ್ದಾರೆ. ಮುಳಬಾಗಿಲು ಕ್ಷೇತ್ರದಲ್ಲಿ ಅತಿ ಹೆಚ್ಚು (49,696) ನಮೂನೆಗಳು ಡಿಜಿಟಲೀಕರಣಗೊಂಡಿವೆ.
ಶ್ರೀನಿವಾಸಪುರ (25,709), ಕೆ.ಜಿ.ಎಫ್ (21,226), ಬಂಗಾರಪೇಟೆ (34,077), ಕೋಲಾರ (33,763) ಹಾಗೂ ಮಾಲೂರು ಕ್ಷೇತ್ರದಲ್ಲಿ 22,731 ನಮೂನೆಗಳ ಡಿಜಿಟಲೀಕರಣ ಕಾರ್ಯ ಪೂರ್ಣಗೊಂಡಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಪತ್ರಿಕಾ ಪ್ರಕಟಣೆ ತಿಳಿಸಿದೆ.

