


ಬಸ್ರೂರು: ಪ್ರತಿ ವರ್ಷ ಮೇ 26 ರ ದಿನಾಂಕದಂದು ಬಸ್ರೂರು ಚರ್ಚನ್ನು ಸಂತ ಫಿಲಿಪ್ ನೇರಿ ಇವರಿಗೆ ಸಮರ್ಪಿಸಲ್ಪಟ್ಟಿದೆ, ಪೋಷಕ ಸಂತ ಫಿಲಿಪ್ ನೇರಿಯವರ ಹಬ್ಬದಂದು ಭಕ್ತಿಪೂರ್ವಕ ಸಂಭ್ರಮ ನಡೆಯುತ್ತದೆ. ಅದರ ಪ್ರಯುಕ್ತ ಕಲ್ಯಾಣಪುರ ಮೌಂಟ್ ರೋಜರಿ ಚರ್ಚ್ ಸಹಾಯಕ ಧರ್ಮ ಗುರುಗಳಾದ ಫಾದರ್ ರೋಶನ್ ಮಸ್ಕರೆನಸ್ ಇವರ ಮುಂದಾಳ್ತನದಲ್ಲಿ ಬಲಿ ಪೂಜೆ ನಡೆಯಿತು. ಸಂತ ಫಿಲಿಪ್ ನೇರಿಯವರು ಆದರ್ಶ ಹಾಗೂ ಭಕ್ತಿ ಅಪಾರ,ಫಿಲಿಪ್ ನೇರಿ ಅವರು 1515 ರಲ್ಲಿ ಇಟಲಿಯ ಫ್ಲಾರೆನ್ಸ್ ನಗರದಲ್ಲಿ ಜನಿಸಿದರು. ಚಿಕ್ಕ ವಯಸ್ಸಿನಲ್ಲೇ ಧಾರ್ಮಿಕ ಮತ್ತು ಪ್ರಾರ್ಥನಾ ಬಲಾಯದ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿದ್ದರು.ಯುವಕರಾಗಿದ್ದಾಗ ತಮ್ಮ ವ್ಯಾಪಾರವನ್ನು ತೊರೆದು ರೋಮ್ಗೆ ತೆರಳಿದರು. ಅಲ್ಲಿ ಅವರು ಬಡವರ ಸೇವೆ ಮಾಡುತ್ತಾ, ಧರ್ಮಪ್ರಚಾರ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು ಎಂದು ನುಡಿದರು ಚರ್ಚಿನ ಪ್ರಧಾನ ಧರ್ಮ ಗುರುಗಳಾದ ಫಾದರ್ ರೋಯ್ ಲೋಬೊ, ಪ್ರಾಂಶುಪಾಲರಾದ ಫಾದರ್ ಡೆನ್ಸಿ ಸುನೀಲ್ ಮಾರ್ಟಿಸ್ ಬಲಿ ಪೂಜೆಯಲ್ಲಿ ಪಾಲ್ಗೊಂಡರು ಸೇವಾ ಕರ್ತರಿಗೆ ಹಾಗೂ ದಾನಿಗಳಿಗೆ ಗೌರವಿಸಲಾಯಿತು ಅಪಾರ ಸಂಖ್ಯೆಯ ಕ್ರೈಸ್ತ ಧರ್ಮ ಬಾಂಧವರು ಉಪಸ್ಥಿತರಿದ್ದು ಮೊಂಬತ್ತಿ ಹಚ್ಚಿದರು.
























