


ಕುಂದಾಪುರ, ಮೇ. 30; ವಕೀಲರಾಗಿ, ಧಾರ್ಮಿಕ, ಶೈಕ್ಷಣಿಕ, ಸಹಕಾರ, ಸಾಮಾಜಿಕ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸಕ್ರಿಯರಾಗಿದ್ದ ದಿ| ಗಿಳಿಯಾರು ಕುಶಲ ಹೆಗ್ಡೆ ಅವರ ಜನ್ಮಶತಮಾನೋತ್ಸವ ಜಿ. ಕುಶಲ ಹೆಗ್ಡೆ 100 ಕಾರ್ಯಕ್ರಮ ಮೇ 31ರಂದು ಅಪರಾಹ್ನ 3ರಿಂದ ಕೋಟೇಶ್ವರ ಅಂಕದಕಟ್ಟೆಯ ಸಹನಾ ಸಭಾಂಗಣದಲ್ಲಿ ಗಿಳಿಯಾರು ಕುಶಲ ಹೆಗ್ಡೆ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್ ಆಶ್ರಯದಲ್ಲಿ ನಡೆಯಲಿದೆ ಎಂದು ಗಿಳಿಯಾರು ಕುಶಲ ಹೆಗ್ಡೆ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್ ಜನ್ಮ ಶತಮಾನೋತ್ಸವ ಸಮಿತಿ ಸಂಯೋಜಕ ಬಿ. ಉದಯ ಕುಮಾರ್ ಮೇ 28 ರಂದು ಹೋಟೆಲ್ ಶೆರೋನ್ ನಲ್ಲಿ ನಡೆದ ಹೆಗ್ಡೆಪತ್ರಿಕಾಗೋಷ್ಠಿಯಲ್ಲಿತಿಳಿಸಿದರು.
ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪಮೊಲಿ ಉದ್ಭಾಟಿಸುವರು. ಮಾಜಿ ಸಚಿವ ಬಿ.ರಮಾನಾಥರೈ ಅಧ್ಯಕ್ಷತೆ ವಹಿಸುವರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾ ಕಿರಣ್ ಕುಮಾರ್ ಕೊಡ್ಲಿ ಗುರುರಾಜ ಗಂಟಿಹೊಳೆ, ಮಾಜಿ ಸಂಸದ ಕೆ ಜಯಪ್ರಕಾಶ ಹೆಗ್ಡೆ, ಬೆಂಗಳೂರಿನ ಕಾನ್ಫಿಡೆಂಟ್ ಡೆಂಟಲ್ ಇಕ್ಟಿಪ್ಮೆಂಟ್ ಆಡಳಿತ ನಿರ್ದೇಶಕ ಡಾ| ಸುಭಾಶ್ಚಂದ್ರ ಶೆಟ್ಟಿ, ಕೋಟ ಗೀತಾನಂದ ಘೌಂಡೇಶನ್ ಪ್ರವರ್ತಕ ಆನಂದಸಿ. ಕುಂದರ್ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ. ಹಿರಿಯ ವಕೀಲ ಎಎಸ್.ಎನ್.. ಹೆಬ್ಬಾರ್ ಕುಶಲೋಪರಿ ನಡೆಸಲಿದ್ದಾರೆ ಎಂದರು.
2002ರಲ್ಲಿ ಆರಂಭಗೊಂಡ ಗಿಳಿಯಾರು ಕುಶಲ ಹೆಗ್ಡೆ-ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್ಕಳೆದ25 ವರ್ಷಗಳಿಂದ 5 ಸಾವಿರಕ್ಕೂಹೆಚ್ಚುವಿದ್ಯಾರ್ಥಿಗಳಿಗೆ ನೆರವಾಗಿದ್ದು 75 ವಿದ್ಯಾರ್ಥಿಗಳ ದತ್ತು ಪಡೆಯಲಾಗಿದೆ. 350ಕ್ಕೂಹೆಚ್ಚುಮಂದಿಗೆ ವೈದ್ಯಕೀಯನೆರವು. 150ಕ್ಕೂ ಹೆಚ್ಚುಕುಟುಂಬಗಳ ಮನೆನಿರ್ಮಾಣಕ್ಕೆಸಹಕರಿಸಿದೆ. ಸಮಾಜದ ಉಪಯುಕ್ತ “ಯೋಜನೆಗಳಿಗೆ ಸಹಕಾರ ನೀಡುವುದರೊಂದಿಗೆ ಮಾನವೀಯತೆಯ ಸೇವೆಗೆ ಹೆಚ್ಚಿನ ಆದ್ಯತೆ ನೀಡಿದ ಟ್ರಸ್ಟ್ ಆಗಿದೆ
ಹಲವರಿಗೆ ಸಮ್ಮಾನ
ವಕೀಲ ವೃತ್ತಿಯಲ್ಲಿ 50 ವರ್ಷ ಪೂರೈಸಿದ ಮಟ್ಟಿ ಮಾಧವ ರಾವ್, ಸಾಲಿಗ್ರಾಮ ಮಕ್ಕಳ ಮೇಳ ಸ್ವಾಪಿಸಿದ ಎಚ್. ಶ್ರೀಧರ ಹಂದೆ, ರಾಜ್ಯ ಮಟ್ಟದ ಕ್ರೀಡಾಪಟು ಎನ್. ವಸಂತ ರಾವ್, ರಂಗ ಕಲಾವಿದ ಸತೀಶ ಪೈ (ಕುಳ್ಳಪ್ಪು ಪುತ್ರ) ಭರತನಾಟ್ಯ ಕಲಾವಿದೆ ವಿ। ಭಾಗೀರಥಿ ಎಂ.ರಾವ್, ಕುಂದಾಪ್ರ ಕನ್ನಡ ಕಲಾವಿದ ಚೇತನ್ ನೈಲಾಡಿ, ಸುವರ್ಣ ಸಂಭ್ರಮದಲ್ಲಿರುವಲಾವಣ್ಯಜೈಂದೂರು, ಸಂಗೀತ ಭಾರತಿ ಟ್ರಸ್ಟ್ ಕುಂದಾಪುರ, ಕುಂದಾಪುರದ ಪ್ರಥಮ ಸಮುದಾಯ ಬಾನುಲಿ ಕೇಂದ್ರ ಭಂಡಾರ್ಕಾರ್ಸ್ ಕಾಲೇಜಿನ ರೇಡಿಯೋ ಕುಂದಾಪ್ರ 89.6 ಎಫ್. ಎಂ, ಶ್ರೀ ಗುರುಮಾರುತಿ ಹೌಂದೇರಾಯನ ಜನಪದ ತಂಡಪಾರಂಪಳ್ಳಿ-ಸಾಲಿಗ್ರಮ ಅವರಿಗೆ ಸಮ್ಯಾನ, ರ್ಯಾಂಕ್ ವಿಜೇತರಿಗೆ ಗೌರವ,
400ಕ್ಕೊ ಮಿಕ್ಕಿ ಅರ್ಹ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ, ಶಾಲೆಗೆ ನೆರವು, ವೈದ್ಯಕೀಯ ನರವು ಹಸ್ತಾಂತರ ನಡೆಯಲಿದೆ.
ಸಾಂಸ್ಕ್ರತಿಕ ಕಾರ್ಯಕ್ರಮ
ಸಂಜೆ 6ರಿಂದ “ಕಾಳಿಂಗ-ಕಾಳಿಂಗ” ಕಾರ್ಯಕ್ರಮಡಿ ಸುಗಮ ಸಂಗೀತದ ಪಿತಾಮಹ ಪಿ.ಕಾಳಿಂಗರಾವ್ ಸ್ವರ ಸಂಯೋಜನೆಯ ಭಾವಗೀತೆಗಳು ಮತ್ತು ಯಕ್ಷಗಾನ ಯುಗ ಜಿ.ಆರ್. ಕಾಳಿಂಗ ನಾವಡ ಇವರ ಯಕ್ಷಗಾನ ಪದ್ಯಗಳ ಅಪೂರ್ವ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನವಾಗಲಿವೆ.ನಡೆಯಲಿದೆ. ಎಂದು. ಸಮಿತಿಯ ರಾಘವೇಂದ್ರ ಕಾಂಚನ್ ತಿಳಿಸಿದರು.
ಕಾರ್ಯಕ್ರಮ ಕುರಿತು ಟ್ರಸ್ಟಿನ ಕಾರ್ಯದರ್ಶಿ ಯು.ಎಸ್. ಶೆಣೈ ಪ್ರಸ್ತಾವಿಕ ಮಾತುಗಳನ್ನಾಡಿ ವಿವರಣೆ ನೀಡಿದರು. ಪತ್ರಿಕಾ ಗೋಷ್ಟಿಯಲ್ಲಿ, ವಿಶ್ವಸ್ಥರಾದ ಸ್ನೇಹ ಪಿ. ರೈ. ಜಿ ಸಂತೋಷ ಕುಮಾರ್ ಶೆಟ್ಟಿ. ಕೆ.ಕೆ. ರಾಮನ್, ನಾರಾಯಣ ಕೆ. ಬಿ. ಕಿಶೋರ್ ಹೆಗ್ಡೆ ಸಬ್ಬಾಡಿ. ಮಂಜಯ್ಯ ಶೆಟ್ಟಿ ಗೋವಿಂದರಾಜ ಹೆಗ್ಡೆ ಬಹ್ಮಾವರ, ಉದಯ ಶೆಟ್ಟ ಪಡುಕೆರೆ, ಕೆ.ಎಸ್. ಮಂಜುನಾಥ್ ಪತ್ರಿಕಾಗೋಷ್ಟಿಯಲ್ಲಿದ್ದರು.









