ಮಂಗಳೂರು: ವಿಶ್ವದಾದ್ಯಂತ ಹರಡಿರುವ ಕೊಂಕಣಿ ಮಾತನಾಡುವ ಸಮುದಾಯಗಳನ್ನು ಒಂದೇ ವೇದಿಕೆಯಡಿ ಒಗ್ಗೂಡಿಸುವ ಉದ್ದೇಶದಿಂದ ‘ಕೊಂಕನಿಜ್’ (KONKANIZ) ಎಂಬ ಸಮುದಾಯ ಆಧಾರಿತ ವೇದಿಕೆಯನ್ನು ಮಂಗಳೂರಿನಲ್ಲಿ ಆರಂಭಿಸಲಾಯಿತು. ಕೊಂಕಣಿ ಸಮುದಾಯಗಳ ನಡುವೆ ಭಾಷೆಯ ಉಪಭಾಷೆಗಳು, ಲಿಪಿಗಳು ಹಾಗೂ ಭೌಗೋಳಿಕ ಗಡಿಗಳಿಂದ ಉಂಟಾಗಿರುವ ಅಂತರವನ್ನು ಕಡಿಮೆ ಮಾಡಿ, ಸಾಮಾನ್ಯವಾದ ಸಾಂಸ್ಕೃತಿಕ ಬಂಧಗಳನ್ನು ಬಲಪಡಿಸುವುದು ವೇದಿಕೆಯ ಉದ್ದೇಶವಾಗಿದೆ. ಕೊಂಕಣಿ ಭಾಷೆ, ಆಹಾರ, ಸಂಗೀತ, ನೃತ್ಯ, ಚಲನಚಿತ್ರ, ಕ್ರೀಡೆ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಉತ್ತೇಜಿಸುವ ಮೂಲಕ ಸಮುದಾಯಗಳ ನಡುವೆ ಸೇತುವೆ ನಿರ್ಮಿಸಲು ವೇದಿಕೆ ಕಾರ್ಯನಿರ್ವಹಿಸಲಿದೆ. […]

Read More

Career Counselling Seminar Guides Students and Parents Towards a Brighter Tomorrow… Report & Photographs: Praveen Cutinho ಉಡುಪಿ, 14 ಸೆಪ್ಟೆಂಬರ್ 2026: ಯುವಜನರು ಸೂಕ್ತ ವೃತ್ತಿ ಆಯ್ಕೆಗಳನ್ನು ಮಾಡಿಕೊಳ್ಳಲು ಸಹಾಯ ಮಾಡುವ ಹಾಗೂ ಪೋಷಕರು ಮತ್ತು ಹದಿಹರೆಯದವರ ನಡುವಿನ ಸಂವಹನವನ್ನು ಬಲಪಡಿಸುವ ಉದ್ದೇಶದಿಂದ, ಸೋಮವಾರ, 14 ಸೆಪ್ಟೆಂಬರ್ 2026 ರಂದು ಉಡುಪಿಯ ಮೌಂಟ್ ರೋಸರಿ ಚರ್ಚ್‌ನ ಮಿಲೇನಿಯಮ್ ಸಭಾಂಗಣದಲ್ಲಿ ಅರ್ಥಪೂರ್ಣ ವೃತ್ತಿ ಮಾರ್ಗದರ್ಶನ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ‘ಉಜ್ವಲ ಭವಿಷ್ಯಕ್ಕಾಗಿ ಇಂದಿನ ಮಾರ್ಗದರ್ಶನ’ […]

Read More

ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ) ಕೊಸೆಸಾಂವ್ ಮಾತೆಯ ಚರ್ಚ್ ಘಟಕ, ಗಂಗೊಳ್ಳಿ ಇದರ ಸದಸ್ಯರು ದಿನಾಂಕ 14 -8-2026ರಂದು ಪಾಂಬೂರಿನ “ಮಾನಸ ವಿಶೇಷ ಮಕ್ಕಳ ಶಾಲೆಗೆ” ಭೇಟಿ ನೀಡಿ ಒಂದು ದಿನವನ್ನು ಆ ಶಾಲೆಯ ವಿದ್ಯಾರ್ಥಿಗಳೊಂದಿಗೆ ವ್ಯಹಿಸಿದರು. ಕಥೊಲಿಕ್ ಸಭೆಯಿಂದ ಆರಂಭಗೊಂಡು , ಕಥೊಲಿಕ್ ಸಭೆಯ ನೇತೃತ್ವದಲ್ಲಿ ನಡೆಸಲ್ಪಡುವ “ಮಾನಸ ಪಾಂಬೂರು” ಶಾಲೆಯ ವಿಶೇಷ ಮಕ್ಕಳೊಂದಿಗೆ ಬೆರೆತು ಅವರನ್ನು ಖುಷಿ ಪಡಿಸುವ ಉದ್ದೇಶದೊಂದಿಗೆ ಭೇಟಿಯನ್ನು ಆಯೋಜಿಸಲಾಗಿತ್ತು. ಮಾನಸ, ಪಾಂಬೂರು ಸಂಸ್ಥೆಯ ಪ್ರಾಜೆಕ್ಟ್ ಕೊಆರ್ಡಿನೇಟರ್ ಶ್ರಿಯುತ ಅನಿಲ್ […]

Read More

ಕುಂದಾಪುರ: ದಸರಾ ಕ್ರೀಡಾಕೂಟ–ಸಿಎಂ ಕಪ್ 2026ರ ತಾಲೂಕು ಮಟ್ಟದ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಕುಂದಾಪುರದ ಗುರುಕುಲ ಪಬ್ಲಿಕ್ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಸಾನಿಧ್ಯ ಎಸ್. ನಾಯ್ಕ್ ಅವರು ಗಮನಾರ್ಹ ಸಾಧನೆ ಮಾಡಿದ್ದಾರೆ. 200 ಮೀಟರ್ ಓಟದಲ್ಲಿ ಬೆಳ್ಳಿ ಪದಕ ಹಾಗೂ ರಿಲೇ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿ ಕ್ರೀಡಾ ಕ್ಷೇತ್ರದಲ್ಲಿ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ಸಾನಿಧ್ಯ ಅವರು ಸ್ಟೇಡಿಯಂ ರನ್ನರ್ಸ್, ಕುಂದಾಪುರದ ಸದಸ್ಯೆಯಾಗಿದ್ದು, ಶ್ರೀ ಸುಬ್ರಮಣ್ಯ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಅಥ್ಲೆಟಿಕ್ಸ್ ತರಬೇತಿ ಪಡೆಯುತ್ತಿದ್ದಾರೆ. ನಿರಂತರ ಅಭ್ಯಾಸ, […]

Read More

ಸೆಪ್ಟೆಂಬರ್ ೧೩ ಭಾನುವಾರದಂದು ಕೋಟ ಸಂತ ಜೋಸೆಫರ ಇಗರ್ಜಿಯಲ್ಲಿ ಆರೋಗ್ಯ ಜಾಗ್ರತಿ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ನಡೆಸಲಾಯಿತು. ಕೋಟ ಪ್ರಾರ್ಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಡಾ. ಮಾಧವ್ ಪೈ ಅವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಆರೋಗ್ಯ ಕಾಪಾಡುವ ಬಗ್ಗೆ ಅಗತ್ಯದ ಮಾಹಿತಿಗಳನ್ನು ನೀಡಿದರು. ಕಾರ್ಯಕ್ರಮದ ಅಂತ್ಯದಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ವಿವಿಧ ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ಬಹು ಸಂಖ್ಯೆಯಲಿ ಜನರು ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಂಡರು. ಪ್ರಾರಂಭದಲ್ಲಿ ಚರ್ಚಿನ ಧರ್ಮಗುರುಗಳಾದ ವಂದನೀಯ ಸ್ಟ್ಯಾನಿ ತಾವ್ರೊ ಅವರು ಎಲ್ಲರನ್ನು ಸ್ವಾಗತಿಸಿದರು. […]

Read More

ಸೆಪ್ಟೆಂಬರ್ 14: ಕಥೋಲಿಕ್ ಸಭಾ ಪ್ರಕಟಿಸುವ ಕೊಂಕಣಿ ಮಾಸಿಕ ಪತ್ರಿಕೆ ’ಆಮ್ಚೊ ಸಂದೇಶ್’ ಇದರ ಪ್ರತಿನಿಧಿಗಳ ಸಹಮಿಲನ ಮಂಗಳೂರು ಮಿಲಾಗ್ರಿಸ್ ಚರ್ಚ್‌ನ ಸೆನೆಕಲ್ ಸಭಾಂಗಣದಲ್ಲಿ ನಡೆಯಿತು. ಕಥೋಲಿಕ್ ಸಭಾ ಮಂಗಳೂರು ಪ್ರದೇಶ್ ರಿ. ಇದರ ಆಧ್ಯಾತ್ಮಿಕ ನಿರ್ದೇಶಕರಾದ ವಂದನೀಯ ಫಾ. ಮೈಕಲ್ ಐವನ್ ರೊಡ್ರಿಗಸ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ವಂದನೀಯ ಡಾ. ಆಲ್ವಿನ್ ಸೆರಾವೊ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಕಥೋಲಿಕ್ ಸಭಾ ಮಂಗಳೂರು ಪ್ರದೇಶ್ ರಿ. ಕೇಂದ್ರಿಯ ಅಧ್ಯಕ್ಷರಾದ ಶ್ರೀ ಸಂತೋಷ್ ಡಿಸೋಜಾ […]

Read More

ಉಡುಪಿ: ನಾವು ಕಣ್ಣಿನಿಂದ ದೇವರನ್ನು ನೋಡದೇ ಇದ್ದರೂ, ಕಷ್ಟಕಾಲದಲ್ಲಿ ನಮಗೆ ಸಹಾಯ ಹಸ್ತ ಚಾಚುವ ಮನುಷ್ಯರ ರೂಪದಲ್ಲಿಯೇ ದೇವರು ಬರುತ್ತಾನೆ. ಇತರರಿಗೆ ಒಳಿತನ್ನು ಬಯಸುವ ಮತ್ತು ಸಹಾಯ ಮಾಡುವ ಪ್ರತಿಯೊಬ್ಬ ವ್ಯಕ್ತಿಯಲ್ಲೂ ನಾವು ದೇವರನ್ನು ಕಾಣಬಹುದು ಎಂದು ಉಡುಪಿ ಕಥೊಲಿಕ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಹೇಳಿದರು. ಅವರು ಸೋಮವಾರ ಉಡುಪಿ ಶೋಕಮಾತಾ ಚರ್ಚಿನ ಆವೆಮರಿಯಾ ಸಭಾಂಗಣದಲ್ಲಿ ಎಮ್ ಡಿ ಎಸ್ ಚಾರೀಟಿಸ್ ವತಿಯಿಂದ ಸಮುದಾಯದ ಆಸಕ್ತ, ಅಗತ್ಯವಿರುವ ಹಾಗೂ ಅರ್ಹ ಯುವಜನರು ವೃತ್ತಿಪರ […]

Read More

Milagres College of Nursing Organizes PALLINEXUS 2026 on Palliative Care ವಿಷಯ: “ಆರೈಕೆಯಲ್ಲಿ ಕರುಣೆ, ಅಭ್ಯಾಸದಲ್ಲಿ ಶ್ರೇಷ್ಠತೆ – ಪ್ಯಾಲಿಯೇಟಿವ್ ಕೇರ್‌ನಲ್ಲಿ (ಉಪಶಾಮಕ ಆರೈಕೆ) ಭವಿಷ್ಯದ ನರ್ಸ್‌ಗಳನ್ನು ಸಬಲೀಕರಿಸುವುದು” ಮಿಲಾಗ್ರಿಸ್ ಕಾಲೇಜ್ ಆಫ್ ನರ್ಸಿಂಗ್, ಹೆಕ್ಸಾಟ್ರಾನ್ ಹೆಲ್ತ್‌ಕೇರ್‌ನ ಬ್ರ್ಯಾಂಡ್ ಆಗಿರುವ FAME ಅಕಾಡೆಮಿಯ ಸಹಯೋಗದೊಂದಿಗೆ, 14 ಮತ್ತು 15 ಸೆಪ್ಟೆಂಬರ್ 2026ರಂದು ಪ್ಯಾಲಿಯೇಟಿವ್ ಕೇರ್ ಕುರಿತು PALLINEXUS 2026 ಎಂಬ ಎರಡು ದಿನಗಳ ಶೈಕ್ಷಣಿಕ ಹಾಗೂ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮವನ್ನು ಆಯೋಜಿಸಿತು. ಈ ಕಾರ್ಯಕ್ರಮವು ನರ್ಸಿಂಗ್ […]

Read More

ಕುಂದಾಪುರ: ಮಾಜಿ ಕೇಂದ್ರ ಸಚಿವರು ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಆಸ್ಕರ್ ಫೆರ್ನಾಂಡಿಸ್ ಅವರ ಪುಣ್ಯಸ್ಮರಣೆಯನ್ನು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸೆಪ್ಟೆಂಬರ್ 13ರಂದು ಆಚರಿಸಲಾಯಿತು. ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆದೂರು ಸದಾನಂದ ಶೆಟ್ಟಿಯವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು, ಪದಾಧಿಕಾರಿಗಳು, ವಿವಿಧ ಘಟಕಗಳ ಅಧ್ಯಕ್ಷರು, ಜನಪ್ರತಿನಿಧಿಗಳು, ಕಾರ್ಯಕರ್ತರು ಹಾಗೂ ಎನ್‌ಎಸ್‌ಯುಐ ಸದಸ್ಯರು ಭಾಗವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆದೂರು ಸದಾನಂದ ಶೆಟ್ಟಿಯವರು ಮಾತನಾಡಿ, ಆಸ್ಕರ್ ಫೆರ್ನಾಂಡಿಸ್ ಅವರು ಉಡುಪಿ ಲೋಕಸಭಾ ಕ್ಷೇತ್ರದ […]

Read More
1 2 3 586