


ಪ್ರತಿಷ್ಠಿತ ‘ಮ್ಯಾವೆರಿಕ್ಸ್ ಸಮರ್ ನ್ಯಾಷನಲ್ಸ್ 2026’ (Mavericks Summer Nationals 2026) ಬ್ರಿಡ್ಜ್ ಪಂದ್ಯಾವಳಿಯು 2026ರ ಜೂನ್ 4 ರಿಂದ ಜೂನ್ 13 ರವರೆಗೆ ಮಂಗಳೂರಿನ ಸೆಂಟ್ ಸೆಬಾಸ್ಟಿಯನ್ ಸೆಂಟಿನರಿ ಸಭಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಾವಳಿಯನ್ನು ಭಾರತೀಯ ಬ್ರಿಡ್ಜ್ ಫೆಡರೇಷನ್ (Bridge Federation of India) ಮತ್ತು ಕರ್ನಾಟಕ ರಾಜ್ಯ ಬ್ರಿಡ್ಜ್ ಅಸೋಸಿಯೇಷನ್ ತತ್ವಾವಧಾನದಲ್ಲಿ, ಮಂಗಳೂರಿನ ಕರಾವಳಿ ಬ್ರಿಡ್ಜ್ ಅಸೋಸಿಯೇಷನ್ ಆಯೋಜಿಸಿದೆ.
ಈ ಪ್ರತಿಷ್ಠಿತ ವಾರ್ಷಿಕ ರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲಿ ಭಾರತದಾದ್ಯಂತ ಹಾಗೂ ಪೋಲೆಂಡ್ನಿಂದ ವಿಶ್ವ ಚಾಂಪಿಯನ್ ಆಗಿರುವ ಶ್ರೀ ಬುರಾಸ್ ಕ್ರಿಸ್ತೋಫ್ ಜೆರ್ಜಿ, ಶ್ರೀ ಡೊಮಿನಿಕ್ ಫಿಲೋಪೋವಿಚ್, ಶ್ರೀ ಜಾಕೋಬ್ ಪಾತ್ರೆಹುವಾ ಮತ್ತು ಶ್ರೀ ಪ್ಯಾಟ್ರಿಕ್ ಪಾತ್ರೆಹುವಾ ಸೇರಿದಂತೆ ಸುಮಾರು 450ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಈ ಕ್ರೀಡಾಕೂಟವು ಮಂಗಳೂರನ್ನು ಭಾರತದ ಮತ್ತು ವಿಶ್ವದ ಬ್ರಿಡ್ಜ್ ನಕಾಶೆಯಲ್ಲಿ ಗುರುತಿಸುವಂತೆ ಮಾಡಿದೆ. ಮಂಗಳೂರಿನ ಉತ್ತಮ ವಿಮಾನ ಹಾಗೂ ರೈಲು ಪ್ರಯಾಣದ ಸಂಪರ್ಕ ವ್ಯವಸ್ಥೆ, ಅತ್ಯುತ್ತಮ ಆತಿಥ್ಯ ಮತ್ತು ಇಲ್ಲಿನ ವೈವಿಧ್ಯಮಯ ರುಚಿಕರವಾದ ಆಹಾರ ಪದ್ಧತಿಯು, ಭಾರತೀಯ ಬ್ರಿಡ್ಜ್ ಫೆಡರೇಷನ್ ಈ ರಾಷ್ಟ್ರೀಯ ಪಂದ್ಯಾವಳಿಯನ್ನು ಇಲ್ಲಿಯೇ ನಡೆಸಲು ಸೂಕ್ತ ಆಯ್ಕೆಯಾಗಿದೆ.
ಪಂದ್ಯಾವಳಿಯ ಯಶಸ್ಸಿಗಾಗಿ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಡೆರೆಕ್ ರೇಗೊ ಅವರು ಎಲ್ಲಾ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಕರಾವಳಿ ಬ್ರಿಡ್ಜ್ ಅಸೋಸಿಯೇಷನ್ನ ಅಧ್ಯಕ್ಷರಾದ ಶ್ರೀಮತಿ ಮಾರ್ಜೋರಿ ಟೆಕ್ಸೇರಾ ಅವರು ಮಾತನಾಡಿ, “ಮನಸ್ಸಿನ ಆಟವಾಗಿರುವ (ಮೈಂಡ್ ಸ್ಪೋರ್ಟ್) ‘ಬ್ರಿಡ್ಜ್’ ಕ್ರೀಡೆಯನ್ನು ಮಂಗಳೂರಿನಲ್ಲಿ ಕಳೆದ 60 ವರ್ಷಗಳಿಂದ ಆಡಲಾಗುತ್ತಿದೆ. ಆದರೆ ಪ್ರಸ್ತುತ ತಲೆಮಾರಿನ ಯುವಕರು ಈ ಕ್ರೀಡೆಯನ್ನು ಕಲಿಯಲು ಹೆಚ್ಚಿನ ಆಸಕ್ತಿ ತೋರಿಸದ ಕಾರಣ, ಮಂಗಳೂರಿನಲ್ಲಿ ಇದರ ಆಟಗಾರರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಈ ಆಟವು ಏಷ್ಯನ್ ಮತ್ತು ಕಾಮನ್ವೆಲ್ತ್ ಗೇಮ್ಸ್ನ ಭಾಗವಾಗಿರುವುದರಿಂದ, ನಗರದ ಯುವಜನತೆ ಇದನ್ನು ಕಲಿಯಲು ಮತ್ತು ಆಡಲು ಆಸಕ್ತಿ ವಹಿಸುತ್ತಾರೆ ಎಂದು ನಂಬಿದ್ದೇನೆ,” ಎಂದು ಆಶಯ ವ್ಯಕ್ತಪಡಿಸಿದರು.
ಮಾರ್ಜೋರಿ ಟೆಕ್ಸೇರಾ, ಅಧ್ಯಕ್ಷರು, ಕರಾವಳಿ ಬ್ರಿಡ್ಜ್ ಅಸೋಸಿಯೇಷನ್, ಮಂಗಳೂರು
The prestigious ‘Mavericks Summer Nationals 2026’ bridge tournament begins on June 4, 2026

The prestigious Mavericks Summer Nationals 2026 will be held from 4th June 2026 to 13 th June 2026 at St. Sebastian Centenary Auditorium, Mangaluru. The tournament is organised by the Karavali Bridge Association, Mangaluru under the aegis of The Bridge Federation of India and Karnataka State Bridge Association.
This prestigious Annual National Championship is expected to witness 450 participants from across India and from Poland, Mr Buras Krzysztof Jerzy, a world champion along with Mr Dominic Filopowicz, Mr Jakob Pathrehua and Mr Patrik Pathrehua. This event has put Mangaluru on the Bridge Map of India and the World too. Mangaluru’s connectivity to airport and rail travel and also the excellent hospitality it offers with delectable cuisine was the perfect choice for the Bridge Federation of India to have the National Tournament here.
The organising Secretary Mr Derek Rego has left no stone unturned to make all the arrangements . Mrs Marjorie Texeira, the President of Karavali Bridge Association, Mangaluru mentioned that the game of Bridge which is a mind sport is being played in Mangaluru for over 60 years. Presently the number of players in Mangaluru has reduced considerably as the present generation is not keen to learn this sport. She hopes that the youth of this city takes interest to learn and play this game as it is part of Asian and Common Wealth Games.
Marjorie Texeira, President, Karavali Bridge Association

