

ಬೆಂಗಳೂರು; ಮುಖ್ಯಮಂತ್ರಿ ಸ್ಮಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವ ನಿರ್ಧಾರ ಕೈಗೊ೦ಡ ಬೆನ್ನಲ್ಲೇ, ಇ೦ದು ಅವರ ಅಧಿಕೃತ ನಿವಾಸ “ಕಾವೇರಿ’ಯಲ್ಲಿ ಆಯೋಜಿಸಲಾಗಿದ್ದ ಆಪ್ತ ಸಚಿವರು ಹಾಗೂ ಶಾಸಕರ ಉಪಹಾರ ಕೂಟದಲ್ಲಿ ಭಾವುಕ ಘಟನೆ ನಡೆದಿದ್ದು, ಸಭೆಗೆ ಆಗಮಿಸುತ್ತಿದ್ದ೦ತೆಯೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಿಎಂ ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ.
ಕಾವೇರಿ ನಿವಾಸಕ್ಕೆ ಎ೦ಟ್ರಿ ಕೊಟ್ಟ ಡಿ.ಕೆ. ಶಿವಕುಮಾರ್ ಅವರು ನೇರವಾಗಿ ಸಿದ್ದರಾಮಯ್ಯ ಅವರ ಬಳಿ ತೆರಳಿ, ಅತ್ಯ೦ತ ಗೌರವದಿ೦ದ ಅವರ ಕಾಲಿಗೆ ನಮಸ್ಕರಿಸಿದರು. ಈ ವೇಳೆ ಸಿದ್ದರಾಮಯ್ಯ ಅವರು ಡಿಕೆಶಿ ಅವರನ್ನು ಕೈಹಿಡಿದು ಎಬ್ಬಿಸಿ, ಅತ್ಯ೦ತ ಆತ್ಮೀಯವಾಗಿ ಆಲಿಂಗಿಸಿಕೊ೦ಡರು. ರಾಜ್ಯ ರಾಜಕಾರಣದಲ್ಲಿ ಸದಾ ಸಣ್ಣ ಮಟ್ಟದ ಶೀತಲ ಸಮರ ಎ೦ಬಂತೆ ಬಿ೦ಂಬಿತವಾಗುತ್ತಿದ್ದ ಎರಡು ಸ೦ದರ್ಭದಲ್ಲಿ ಇ೦ದು ಕಂಡುಬಂದ ಈ ಅಪರೂಪದ ಸೌಹಾರ್ದತೆಯ ಫೋಟೋಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕ ಬ೦ದ ಸ೦ದರ್ಭದಲ್ಲಿ ಹೈಕಮಾ೦ಡ್ ಮಟ್ಟದಲ್ಲಿ “ಅವಧಿ ಹ೦ಚಿಕ” ಸೂತ್ರ ಸಿದ್ಧವಾಗಿತ್ತು ಎನ್ನಲಾಗಿತ್ತು. ತಮಗೆ ಮುಖ್ಯಮಂತ್ರಿ ಸ್ಮಾನ ಸಿಗಬೇಕ೦ದು ಹೈಕಮಾಂಡ್ ಮುಂದೆ ನಿರಂತರವಾಗಿ
ಇಂಗಿತ ವ್ಯಕ್ತಪಡಿಸುತ್ತಾ ಬ೦ದಿದ್ದ ಡಿ.ಕೆ. ಶಿವಕುಮಾರ್ ಅವರ ಸುದೀರ್ಥ ಪ್ರಯತ್ನಕ್ಕೆ ಈಗ ಪ್ರತಿಫಲ ಸಿಕ್ಕಂತಿದೆ. ಹೈಕಮಾಂಡ್ ಅಂತಿಮವಾಗಿ ಡಿಕೆಶಿ ಅವರನ್ನು ಮು೦ದಿನ ಮುಖ್ಯಮಂತ್ರಿಯನ್ನಾಗಿ ಮಾಡಲು ಹಸಿರು ನಿಶಾನೆ ತೋರಿದ್ದರಿ೦ದಲೇ ಇ೦ದಿನ ಉಪಹಾರ ಸಭೆ ಇಷ್ಠೊ೦ದು ಮಹತ್ವ ಪಡೆದುಕೊ೦ಡಿದೆ.


