ನಾಡಾ; ಗ೦ಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ನಾಡಾ ಗ್ರಾಮದ ಕೊಳ್ಳೆಯ ನಂದ್ರೋಳಿಎ೦ಬಲ್ಲಿನ ಸಾರ್ವಜನಿಕ ಪ್ರದೇಶದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಅ೦ಕ ಜೂಜಾಟದ ಸುಳಿವು ಸಿಕ್ಕಿ, ಅಲ್ಲಿ ತೆರಳಿ ಪೊಲೀಸರು ದಾಳಿ ನಡೆಸಿದ್ದು, ಇಬ್ಬರು ಆರೋಪಿಗಳನ್ನು ಬ೦ಧಿಸಿ, 10 ಕೋಳಿ ಹು೦ಜಗಳು ಹಾಗೂ 8 ಮೋಟಾರು ಸೈಕಲ್ಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಾವನ್ನು ದಾಖಲಿಸಿಕೊಂಡಿದ್ದಾರೆ.
ಬಸ್ರೂರು ಸೈಂಟ್ ಫಿಲಿಪ್ ನೇರಿ ಚರ್ಚಿನಲ್ಲಿ ಯಾಜಕರ ಪಾಲಕರಾದ ಜಾನ್ ಮಾರಿ ವಿಯಾನಿ ಹಬ್ಬದ ಪ್ರಯುಕ್ತ ಹಿಂದೆ ಸೇವೆ ಸಲ್ಲಿಸಿದ ಯಾಜಕರ ಸೇವೆ ನೆನಪಿಸಿ ಹಾಗೂ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಯಾಜಕರ ಸೇವೆ ಗುರುತಿಸಿಕೊಂಡು ಚರ್ಚಿನ ಪ್ರಧಾನ ಗುರುಗಳಾದ ಫಾದರ್ ರೋಯ್ ಲೋಬೊ ಹಾಗೂ ದಿಯಾಕೊನ್ ಕೆನಾನ್ ಫೆರ್ನಾಂಡಿಸ್ ಇವರಿಗೆ ಅಭಿನಂದಿಸಿ ಗೌರವಿಸಲಾಯಿತು ಪಾಲನ ಮಂಡಳಿಯ ಉಪಾಧ್ಯಕ್ಷ ರೂಪಸ್ ಬರೆಟ್ಟೊ ಕಾರ್ಯದರ್ಶಿ ಪಿಯುಸ್ ಡಿಸೋಜಾ, ಆಯೋಗಗಳ ಸಂಚಾಲಕ ಲಾರೆನ್ಸ್ ಬರೆಟ್ಟೊ, ಕಾನ್ವೆಂಟ್ ನ ಮುಖ್ಯಸ್ಥೆ ಸಿಸ್ಟರ್ ರೀನಾ […]
ಮಂಗಳೂರು, ಆ. 2: ಶಿಕ್ಷಣ ಮತ್ತು ಸಾಮಾಜಿಕ ಸಬಲೀಕರಣದತ್ತ ತನ್ನ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿದ ಬಿಕರ್ನಕಟ್ಟೆಯ ಬಾಲ ಯೇಸು ದೇವಾಲಯವು ತನ್ನ ಪ್ರಮುಖ ಶೈಕ್ಷಣಿಕ ಯೋಜನೆಯಾದ ‘ಕಾರ್ಮೆಲ್ ಇಗ್ನೈಟ್’ ಅಡಿಯಲ್ಲಿ ಭಾನುವಾರ (ಆ. 2) ಅರ್ಹ ವಿದ್ಯಾರ್ಥಿಗಳಿಗೆ ಒಟ್ಟು ₹25 ಲಕ್ಷ ಮೊತ್ತದ ವಿದ್ಯಾರ್ಥಿವೇತನವನ್ನು ವಿತರಿಸಿತು. ಈ ವರ್ಷ ಒಟ್ಟು 275 ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನದ ಪ್ರಯೋಜನ ಪಡೆದರು. ಸಾಂಕೇತಿಕವಾಗಿ 50 ವಿದ್ಯಾರ್ಥಿಗಳನ್ನು ವಿದ್ಯಾರ್ಥಿವೇತನ ವಿತರಣಾ ಸಮಾರಂಭಕ್ಕೆ ಆಹ್ವಾನಿಸಲಾಗಿದ್ದು, ಉಳಿದ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ವಿದ್ಯಾರ್ಥಿವೇತನ ವಿತರಿಸಲಾಯಿತು. ಕಾರ್ಯಕ್ರಮದ […]
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜು ಕೊಡಮಾಡುವ ಈ ವರ್ಷದ ಡಾ . ಶಾಂತಾರಾಮ ಸಾಹಿತ್ಯ ಪ್ರಶಸ್ತಿ ಶ್ರೀಧರ ಬಳಗಾರ ಅವರ ‘ ಮಾರ ಮಿಂದನು’ ಕಥಾ ಸಂಕಲಕ್ಕೆ ಬಂದಿದೆ.ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಬಳಗಾರಿನಲ್ಲಿ ಜನಿಸಿದ ಶ್ರೀಧರ ಬಳಗಾರ ಕಳೆದ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಟೀಚರ್ ಎಜುಕೇಟೆರ್ ಆಗಿ ಪಾಠ ಮಾಡುತ್ತ ಸದ್ಯ ಕುಮಟಾದಲ್ಲಿ ನೆಲೆಸಿದ್ದಾರೆ. ‘ಅಧೋಮುಖ'(1995), ‘ಮುಖಾಂತರ'(1998), ‘ಇಳೆ ಎಂಬ ಕನಸು’ (2003), ಒಂದು ಫೋಟೋದ ನೆಗೆಟಿವ್”(2008), ‘ಈಸಾಡತಾವ ಜೀವ'(2015), ‘ಮಾಲತಿ ಮಾತಾಡಿದಳು'(2023), ‘ಮಾರ ಮಿಂದನು'(2025), […]
ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದಲ್ಲಿ ಅರ್ಥಪೂರ್ಣ ಗುರು ಪೂರ್ಣಿಮೆ ಆಚರಣೆ ಕುಂದಾಪುರ, ಜುಲೈ 29, 2026: “ಗುರು ಪೂರ್ಣಿಮೆ ಬರುವುದು ಆಷಾಢ ಮಾಸದ ಹುಣ್ಣಿಮೆಯಂದು. ಆಯುರ್ವೇದದ ಪ್ರಕಾರ ಈ ಅವಧಿಯಲ್ಲಿ ವಾತಾವರಣದ ಬದಲಾವಣೆಯಿಂದ ಜಠರಾಗ್ನಿ (ಜೀರ್ಣಶಕ್ತಿ) ಮಂದವಾಗುತ್ತದೆ ಮತ್ತು ದೇಹದಲ್ಲಿ ವಾತ-ಪಿತ್ತ ದೋಷಗಳು ಏರುಪೇರಾಗುತ್ತವೆ. ಇದರಿಂದ ಮೈಕೈ ನೋವು, ಅಜೀರ್ಣ ಹಾಗೂ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತವೆ. ಇದನ್ನು ಶಮನಗೊಳಿಸಲು ಆಷಾಢದಲ್ಲಿ ಹಗುರವಾದ ಬಿಸಿ ಆಹಾರ, ಕಷಾಯ ಮತ್ತು ಸಾತ್ವಿಕ ಉಪವಾಸದ ಅಗತ್ಯವಿದೆ” ಎಂದು ತಜ್ಞ ಆಯುರ್ವೇದ ವೈದ್ಯರಾದ ಡಾ. […]
ಮಂಗಳೂರು: ಲಯನ್ಸ್ ಕ್ಲಬ್ ಮಂಗಳೂರು ಸೆಂಟೆನಿಯಲ್ನ 2026–27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ನಗರದ ಕದ್ರಿ ಪಾರ್ಕ್ ಸಮೀಪದ ಲಯನ್ಸ್ ಅಶೋಕ ಭವನದಲ್ಲಿ ನಡೆಯಿತು. ಸಮಾರಂಭದಲ್ಲಿ ಲಯನ್ ಅಮಲ್ ಮರಿಯಾ ಇಸಬೆಲ್ಲಾ ಕ್ವಾಡ್ರೋಸ್ (PMJF) ಅವರು ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಲಯನ್ ಸ್ವರೂಪ್ ಎನ್. ಶೆಟ್ಟಿ (PMJF) ಅವರು ನೂತನ ಪದಾಧಿಕಾರಿಗಳಿಗೆ ಅಧಿಕಾರದ ಪ್ರಮಾಣವಚನ ಬೋಧಿಸಿ, ಐವರು ನೂತನ ಸದಸ್ಯರನ್ನು ಲಯನ್ಸ್ ಕುಟುಂಬಕ್ಕೆ ಸೇರ್ಪಡೆಗೊಳಿಸಿದರು. ಕ್ಲಬ್ ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ಶ್ಲಾಘಿಸಿದ ಅವರು, ಮುಂದೆಯೂ […]
ಕುಂದಾಪುರ, ಆ. 1: “ಸೇವೆ ಎಂಬುದು ವೃತ್ತಿಯಲ್ಲ; ಅದು ಬದುಕಿನ ತಪಸ್ಸು.” ಈ ಮಾತಿಗೆ ಜೀವಂತ ಸಾಕ್ಷಿಯಾಗಿರುವ ಕುಂದಾಪುರದ ಹಿರಿಯ ವೈದ್ಯ ಡಾ. ಎಚ್. ರಾಮಮೋಹನ್ ಅವರು ವೈದ್ಯಕೀಯ ಸೇವೆ ಆರಂಭಿಸಿ ಐವತ್ತು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಸುವರ್ಣ ಕ್ಷಣವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ, ಅಂತಾರಾಷ್ಟ್ರೀಯ ವೈದ್ಯರ ದಿನಾಚರಣೆಯ ಅಂಗವಾಗಿ ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ ವತಿಯಿಂದ ಅವರ ನಿವಾಸ ಹಾಗೂ ಸೇವಾ ಕೇಂದ್ರದಲ್ಲಿಯೇ ವಿಶೇಷ ಗೌರವ ಸನ್ಮಾನ ಕಾರ್ಯಕ್ರಮ ನಡೆಯಿತು. 1976ರಲ್ಲಿ ಆರಂಭವಾದ ಅವರ ವೈದ್ಯಕೀಯ […]
ಕುಂದಾಪುರ : ಕುಂದಾಪುರ ತಾಲೂಕಿನ ಚರ್ಚ್ ರಸ್ತೆಯಲ್ಲಿ ಜು.31 ಶುಕ್ರವಾರ ನಸುಕಿನ ವೇಳೆ ನಡೆದ ಗುಂಡಿಕ್ಕಿ ಐವನ್ ರಿಚರ್ಡ್ ಮಸ್ಕರೇನಸ್ ಯಾನೆ ಮುನ್ನಾ ಹತ್ಯೆ ಮಾಡಿದ ಪ್ರಕರಣದಲ್ಲಿ ಆರೋಪಿಯನ್ನು ಬಂದಿಸಲಾಗಿದೆ. ತಲೆಮರೆಸಿಕೊಂಡಿದ್ದ ಆರೋಪಿಯನ್ನು12 ಗಂಟೆಯ ಒಳಗೆ ಉಡುಪಿ ಜಿಲ್ಲಾಎಸ್ಪಿ ನೇತೃತ್ವದಲ್ಲಿ ರಚಿಸಿದ ಪೊಲೀಸರ ವಿಶೇಷ ತಂಡ ಬಂಧಿಸಿದೆ. ಹೆಮ್ಮಾಡಿ ಸಮೀಪದ ಕನ್ನಡಕುದ್ರು ಮೂಲದ ಪ್ರಸ್ತುತ ಕುಂದಾಪುರದ ಫ್ಲಾಟ್ವೊಂದರಲ್ಲಿ ವಾಸವಿರುವ ಡೆರಿಕ್ ಕ್ರಾಸ್ತಾ (55) ಬಂಧಿತ ಆರೋಪಿ. ಅಜೆಕಾರು ಮೂಲದ, ನಂತರ ಹೆಬ್ರಿ ವಾಸಿಸಲು ತೊಡಗಿದ್ದ, ಪ್ರಸ್ತುತ ಬಾರ್ಕೂರು […]
ಕೆ.ಜಿ ಜಗನ್ನಾಥ್ ರಾವ್ ಸರಕಾರಿ ಪ್ರೌಢಶಾಲೆ ಕೋಣೆಯಲ್ಲಿ ದಿನಾಂಕ 29 /7/ 2026ರಂದು ಕುಂದಾಪುರ ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಬಾಲಕಿಯ ಯೋಗಾಸನ ಸ್ಪರ್ಧಿಯು ಯಶಸ್ವಿಯಾಗಿ ನಡೆಯಿತು. ಈ ಸ್ಪರ್ಧೆಯಲ್ಲಿ ತುಳಸಿ ವಿದ್ಯಾಮಂದಿರದ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ಶಾಲೆಗೆ ಕೀರ್ತಿ ತಂದರು.ವಿದ್ಯಾರ್ಥಿ ಸಾಕ್ಷರ ಆರ್ ಶೆಟ್ಟಿ 9ನೇ ತರಗತಿ ಇವರು ಟ್ರೆಡಿಷನಲ್ ಯೋಗಾಸನದಲ್ಲಿ ಪ್ರಥಮ ಸ್ಥಾನ ಹಾಗೂ ಆರ್ಟಿಸ್ಟಿಕ್ ಸಿಂಗಲ್ ವಿಭಾಗದಲ್ಲಿ ಸಾಕ್ಷರ ಆರ್ ಶೆಟ್ಟಿ( 9ನೇ) ಸೃಷ್ಟಿ ಶೆಟ್ಟಿ ( 8ನೇ […]

