

ಕೆ.ಜಿ ಜಗನ್ನಾಥ್ ರಾವ್ ಸರಕಾರಿ ಪ್ರೌಢಶಾಲೆ ಕೋಣೆಯಲ್ಲಿ ದಿನಾಂಕ 29 /7/ 2026ರಂದು ಕುಂದಾಪುರ ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಬಾಲಕಿಯ ಯೋಗಾಸನ ಸ್ಪರ್ಧಿಯು ಯಶಸ್ವಿಯಾಗಿ ನಡೆಯಿತು.
ಈ ಸ್ಪರ್ಧೆಯಲ್ಲಿ ತುಳಸಿ ವಿದ್ಯಾಮಂದಿರದ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ಶಾಲೆಗೆ ಕೀರ್ತಿ ತಂದರು.
ವಿದ್ಯಾರ್ಥಿ ಸಾಕ್ಷರ ಆರ್ ಶೆಟ್ಟಿ 9ನೇ ತರಗತಿ ಇವರು ಟ್ರೆಡಿಷನಲ್ ಯೋಗಾಸನದಲ್ಲಿ ಪ್ರಥಮ ಸ್ಥಾನ ಹಾಗೂ ಆರ್ಟಿಸ್ಟಿಕ್ ಸಿಂಗಲ್ ವಿಭಾಗದಲ್ಲಿ ಸಾಕ್ಷರ ಆರ್ ಶೆಟ್ಟಿ( 9ನೇ) ಸೃಷ್ಟಿ ಶೆಟ್ಟಿ ( 8ನೇ ) ಆಶಿಕ್(6) ನೇ ತರಗತಿ ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು , ಶಶಾಂಕ್ (8ನೇ) ಸುಶಾನ್( 9ನೇ)ತರಗತಿ ವಿದ್ಯಾರ್ಥಿಗಳು ರಿಥಮಿಕ್ ಪೇರ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಒಟ್ಟು 5 ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರಣತಿ. ಯು ( 7ನೇ ) ಹಾಗೂ ಮನಸ್ವಿ ( 6ನೇ ) ರಿಥೆಮಿಕ್ ಫೇರ್ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಆಶಿಕ್ ( 6ನೇ ) ತರಗತಿ ವಿದ್ಯಾರ್ಥಿ ಟ್ರೆಡಿಷನಲ್ ಯೋಗಾಸನ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆಯುವ ಮೂಲಕ ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ. ವಿಜೇತರಾದ ವಿದ್ಯಾರ್ಥಿಗಳಿಗೆ ಶಾಲೆಯ ಯೋಗ ಶಿಕ್ಷಕರಾದ ದಿಲೀಪ್ ಶೆಟ್ಟಿ ಇವರು ಮಾರ್ಗದರ್ಶನ ನೀಡಿರುತ್ತಾರೆ. ಸಾಧನೆಗೈದ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿಯವರು, ಮುಖ್ಯೋಪಾಧ್ಯಾಯರು , ಶಿಕ್ಷಕ ವೃಂದದವರು ಹಾಗೂ ಪೋಷಕರು ಅಭಿನಂದಿಸಿ ಸ್ಪರ್ಧೆಯಲ್ಲಿ ಇನ್ನಷ್ಟು ಸಾಧನೆ ಮಾಡುವಂತೆ ಶುಭ ಹಾರೈಸಿದರು.

