Mangalore Milagres Church welcomes new head pries ಮಂಗಳೂರು; ಮಂಗಳೂರಿನ ಮಿಲಾಗ್ರಿಸ್ ಚರ್ಚ್, ಸೋಮವಾರ, ಮೇ 19, 2026 ರಂದು ಸಂಜೆ 4.00 ಗಂಟೆಗೆ ತನ್ನ ನೂತನ ಪ್ರಧಾನ ಧರ್ಮಗುರು ವಂ. ಇವಾನ್ ಮೈಕೆಲ್ ರೊಡ್ರಿಗಸ್ ಅವರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿತು. ಧರ್ಮಕೇಂದ್ರದ ಅಧಿಕಾರ ವಹಿಸಿಕೊಳ್ಳಲು ಫಾದರ್ ಇವಾನ್ ಮೈಕೆಲ್ ರೊಡ್ರಿಗಸ್ ವಿಟ್ಟಲ ದಿಂದ ಆಗಮಿಸಿದರು. ಸ್ವಾಗತ ಕಾರ್ಯಕ್ರಮದಲ್ಲಿ ಬಿಷಪ್ ಅವರನ್ನು ಪ್ರತಿನಿಧಿಸಿದ ರೆವರೆಂಡ್ ಫಾದರ್ ವಲೇರಿಯನ್ ಡಿ’ಸೋಜಾ, 14 ಧರ್ಮಗುರುಗಳು, ಎಲ್ಲಾ ಪ್ಯಾರಿಷ್ ಕಾನ್ವೆಂಟ್‌ಗಳ ಸಹೋದರಿಯರು […]
ಯುವಕ-ಯುವತಿಯರಿಗೆ ಹಲವು ರೀತಿಯ ಉದ್ಯೋಗಾವಕಾಶಗಳ ಟ್ರೈನಿಂಗ್ ಕೋರ್ಸ್ ಗಳಿವೆ. ಕುಂದಾಪುರ:ಗ್ರಾಮೀಣ ಪ್ರದೇಶದ ಯುವಕ-ಯುವತಿಯರಿಗೆ ತಾಂತ್ರಿಕ ಕೌಶಲ್ಯಗಳನ್ನು ಕಲಿಸಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಉದ್ದೇಶದಿಂದ. ಗುಡ್ಡೆಂಗಡಿಯಲ್ಲಿ SKF ಇಂಡಸ್ಟ್ರೀಯಲ್ ಟ್ರೈನಿಂಗ್ ಸೆಂಟರ್ ಮೇ. 25ರಂದು ಶುಭಾರಂಭಗೊಳ್ಳಲಿದೆ. ಈ SKF ಸೆಂಟರ್ ನಲ್ಲಿ ಯುವಕ-ಯುವತಿಯರಿಗೆ ಹಲವು ರೀತಿಯ ಉದ್ಯೋಗಾವಕಾಶಗಳ ಟ್ರೈನಿಂಗ್ ಕೋರ್ಸ್ ಗಳಿವೆ. ಹೆಚ್ಚಿನ ವಿವರಗಳನ್ನು ಕೆಳಗಡೆ ನೀಡಲಾಗಿದೆ.
ಕುಂದಾಪುರ,17; ಕುಂದಾಪುರ ಭಾಗದ ಸರ್ವ ಧರ್ಮಿಯ ಬಡರೋಗಿಗಳಿಗೆ ರಿಯಾಯಿತಿ ದರದಲ್ಲಿ ಕಿಡ್ನಿ ಡಯಾಲಿಸಿಸ್ ಸೇವೆಯನ್ನು ನೀಡುವ ಕಥೋಲಿಕ್ ಸಭಾ ಸೇವಾ ಯೋಜನೆ ಕುಂದಾಪುರದ ಆಸುಪಾಸಿನ ಜನರಿಗೆ ಕೈಗೆಟಗುವಂತಾಗಲು, ಸ್ಥಳೀಯ ವಿನಯ ಆಸ್ಪತ್ರೆಯ ಮಾಲಕರಾದ ಡಾ. ವಿಶ್ವನಾಥ್ ಶೆಟ್ಟಿ ಅವರ ಸಮ್ಮತಿಯೊಂದಿಗೆ ಮೇ 16 ರಂದು ಕುಂದಾಪುರದ ವಿನಯ ಆಸ್ಪತ್ರೆಯಲ್ಲಿ ಚಾಲನೆ ನೀಡಲಾಯಿತು. ಕೆಥೋಲಿಕ್ ಸಭಾ ಕೇಂದ್ರೀಯ ಡಯಾಲಿಸಿಸ್ ಸೇವಾ ಸಮಿತಿಯ ಸಂಚಾಲಕರಾದ ವಾಲ್ಟರ್ ಸಿರಿಲ್ ಪಿಂಟೊ, ಈ ಸಂದರ್ಭದಲ್ಲಿ ಮಾತನಾಡಿ ಜಿಲ್ಲಾಧ್ಯಂತ ಬಡರೋಗಿಗಳಿಗೆ, ಲಭ್ಯ ಅನುದಾದಿಂದ, ರಿಯಾಯಿತಿ […]
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ “ದರ್ಶನ 2024-25” ವಾರ್ಷಿಕ ಸಂಚಿಕೆಯು ಮಂಗಳೂರು ವಿಶ್ವವಿದ್ಯಾನಿಲಯ ಕೊಡಮಾಡುವ ಅತ್ಯುತ್ತಮ ಕಾಲೇಜು ವಾರ್ಷಿಕ ಸಂಚಿಕೆ ಪ್ರಶಸ್ತಿಯನ್ನು ದ್ವಿತೀಯ ಬಹುಮಾನದೊಂದಿಗೆ ಪಡೆದುಕೊಂಡಿದೆ ಎಂದು ಕಾಲೇಜಿನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕಾಲೇಜಿನ ವಿಶ್ವಸ್ಥ ಮಂಡಳಿ, ಆಡಳಿತ ಮಂಡಳಿ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕುಂದಾಪುರ: ಸತ್ಯ, ಪ್ರಾಮಾಣಿಕ ಮತ್ತು ನೀತಿವಂತರಾಗಿರುವವರು ನಿಜವಾದ ಬುದ್ಧಿವಂತ ವಿದ್ಯಾರ್ಥಿಗಳು ಎಂದು ಮಲ್ನಾಡ್ ಕೋಚಿಂಗ್ ಸೆಂಟರ್, ಬೆಂಗಳೂರು ಆದ, ನಿರ್ದೇಶಕ ತೀರ್ಥಹಳ್ಳಿ ಕೇಶವಮೂರ್ತಿ ಹೇಳಿದರು.ಅವರು ಏಪ್ರಿಲ್ 16ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ರಕ್ಷಕ ಶಿಕ್ಷಕ ಸಂಘದ ಸಭೆಯಲ್ಲಿ ಪೋಷಕರನ್ನು ಉದ್ದೇಶಿಸಿ ಮಾತನಾಡಿದರು.ಪೋಷಕರು ಅವರು ಮಕ್ಕಳ ಜೊತೆ ಮುಕ್ತವಾಗಿ ಚರ್ಚಿಸಿ ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಅದರ ಮಹತ್ವ ತಿಳಿಸಬೇಕು. ಸರ್ಕಾರಿ ಕೆಲಸಗಳನ್ನು ಪಡೆಯುವುದಕ್ಕೆ ಪೋಷಕರು ಪ್ರೇರೆಪಿಸಬೇಕು ಎಂದು ಹೇಳಿದರು.ಭಂಡಾರ್ಕಾರ್ಸ್ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಯು.ಎಸ್.ಶೆಣೈ, ಮತ್ತು ರಕ್ಷಕ […]
ಕುಂದಾಪುರ: ಗುರುವಾರ ಸಂಜೆ ಸಿಡಿಲು ಸಹಿತ ಮಳೆಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ತ್ರಾಸಿ ಸಮೀಪದ ಮುಳ್ಳಿಕಟ್ಟೆಯ ಅರಾಟೆ ಸೇತುವೆಯ ಮೇಲೆ ನಡೆದಿದೆ. ಮೃತ ಕಾರ್ಮಿಕ ಪಂಜಾಬ್ ಮೂಲದ ಐ.ಆರ್.ಬಿ ಕಂಪನಿಯ ಕಾರ್ಮಿಕ ಅಶಿತೋಷ್ ಸಿಂಗ್ (35) ಎಂದು ತಿಳಿದು ಬಂದಿದೆ.ಇವರೊಂದಿಗೆ ಇದ್ದ ಮತ್ತೊಬ್ಬ ಕಾರ್ಮಿಕ ನವಜ್ಯೋತ್ ಸಿಂಗ್ (37) ಅವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಗುರುವಾರ ಸಂಜೆ ಏಕಾಏಕಿ ಗಾಳಿ, ಭೀಕರ ಸಿಡಿಲು ಹಾಗೂ ಮಿಂಚಿನ ಆರ್ಭಟದೊಂದಿಗೆ […]
ಕಲ್ಲ್ಯಾಣಪುರದ ಮಿಲಾಗ್ರಿಸ್ ಪದವಿಪೂರ್ವ ಕಾಲೇಜಿನಲ್ಲಿ ಮೇ 14, 2026ರಂದು ಶಿಕ್ಷಕರಿಗಾಗಿ “ಹ್ಯಾಪಿ ಟೀಚರ್ ಮತ್ತು ಹ್ಯಾಪಿ ಕ್ಲಾಸ್ ರೂಮ್” ಎಂಬ ವಿಷಯದಡಿ ಶಿಕ್ಷಕರ ಸಮೃದ್ಧಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಕಳದ ಎಂ.ಪಿ.ಎಂ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಸಹ ಪ್ರಾಧ್ಯಾಪಕರಾದ ಪ್ರೊ. ಲೂಯಿಸ್ ಮನೋಜ್ ಅಂಬ್ರೋಸ್ ಭಾಗವಹಿಸಿದರು. ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಫಾ. ಮೆಲ್ವಿನ್ ಮೆಂಡೊನ್ಸಾ ಅವರು ಅತಿಥಿಗಳನ್ನು ಸ್ವಾಗತಿಸಿ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ತಮ್ಮ ಪ್ರೇರಣಾದಾಯಕ […]
“ನಾನು ಕೊಂಕಣಿಯಲ್ಲಿ ಬರೆಯಲು ಆರಂಭಿಸುವಾಗಲೂ ವಲ್ಲಿ ವಗ್ಗ ಬರೆಯುತ್ತಿದ್ದರು, ಈಗಲೂ ಸಾತತ್ಯದಿಂದ ಬರೆಯುತ್ತಿದ್ದಾರೆ. ಕಿರಿಯರಾದ ನಮಗೆ ವಲ್ಲಿ ವಗ್ಗ ದೊಡ್ಡಣ್ಣನಂತೆ ಮಾತ್ರವಲ್ಲ, ಅಭಿಪ್ರಾಯ ಭೇದಗಳಿರುವ ಕೊಂಕಣಿ ಲೇಖಕರನ್ನು ಒಗ್ಗೂಡಿಸಿ, ಸಂಬಂದಗಳನ್ನು ದಾರದಲ್ಲಿ ಪೋಣಿಸುವ ದರ್ಜಿಯಂತೆ. ಕೊಂಕಣಿ ಸಾಹಿತ್ಯ ಮತ್ತು ಸಂಘಟನೆಗೆ ಅವರ ಸೇವೆ ಸ್ತುತರ್ಹ್ಯ. ಆರು ದಶಕಗಳಿಂದ ಸತತವಾಗಿ ಸಾಹಿತ್ಯ ರಚನೆಯಲ್ಲಿ ತೊಡಗಿರುವ ಅವರ ಸಾಹಿತ್ಯವನ್ನು ಸಂಭ್ರಮಿಸುವುದೇ ಅವರಿಗೆ ನಾವು ಸಲ್ಲಿಸಬಹುದಾದ ಶ್ರೇಷ್ಠ ಗೌರವ” ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ, ಹೊಸ ದೆಹಲಿಯ ಕಾರ್ಯಕಾರಿ ಸಮಿತಿಯ ಸದಸ್ಯರೂ, […]
Four Discalced Carmelites Ordained Priests at Infant Jesus Shrine, Bikarnakatte ಮಂಗಳೂರಿನ ಬಿಕರ್ನಕಟ್ಟೆಯ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ 2026ರ ಮೇ 14ರಂದು ನಡೆದ ಭವ್ಯ ಸಮಾರಂಭದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅತೀ ವಂದನೀಯ ಡಾ. ಪೀಟರ್ ಪೌಲ್ ಸಲ್ಡಾನ್ಹಾ ಅವರು ನಾಲ್ವರು ಡಿಸ್ಕಾಲ್ಡ್ ಕಾರ್ಮೆಲೈಟ್ ಡೀಕನ್‌ಗಳಾದ ವಂ. ಆಲ್ವಿನ್ ಡಿಸೋಜಾ, ವಂ. ಲೋಯ್ ಜಾಕ್ಸನ್ ಕ್ರಾಸ್ತಾ, ವಂ. ಎಲ್ಸ್ಟನ್ ಮೊಂತೇರೊ ಮತ್ತು ವಂ.ಹಿಲರಿ ರೊಡ್ರಿಗಸ್ ಅವರಿಗೆ ಪವಿತ್ರ ಗುರುದೀಕ್ಷೆ ನೀಡಿದರು. ಈ ಸಂದರ್ಭದಲ್ಲಿ ಪ್ರವಚನ […]

