

ಕುಂದಾಪುರ, ಜೂನ್ 13: ಕೆರೆಕಟ್ಟೆಯಲ್ಲಿ ಜೂನ್ 13, 2026 ರಂದು ಸಂತ ಅಂತೋನಿಯ ವಾರ್ಷಿಕ ಮಹತ್ಸೋವ ಹಾಗೂ ಬಹು ಅಕಾಂಕ್ಷೆಯ ಅನಾಥಶ್ರಮ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಜಿಲ್ಲೆ ಮತ್ತು ರಾಜ್ಯಾದ್ಯಂತ ಆಗಮಿಸಿದ ಭಕ್ತರ ದೊಡ್ಡ ಸಭೆಯ ನಡುವೆ ಪದುವ ಸಂತ ಅಂತೋನಿಯ ನಾಮಾಂಕಿತ ಹಬ್ಬವನ್ನು ಅತ್ಯಂತ ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಅ।ವಂ। ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಲೆಸ್ಲಿ ಕ್ಲಿಫರ್ಡ್ ಡಿಸೋಜಾ “ದೇವರನ್ನು ನಾವು ಮೊದಲು ಪ್ರೀತಿಸಿದ್ದಲ್ಲ, ದೇವರೆ ನಮ್ಮನ್ನು ಪ್ರೀತಿಸಿದ್ದು, ಅವರ ಪ್ರೀತಿಗೆ ಎಲ್ಲೆ ಇಲ್ಲ, ಅವರು ನಮ್ಮನ್ನು ಎಷ್ಟು ಪ್ರೀತಿಸುತ್ತಾರೆಂದರೆ, ಅವರ ಒಬ್ಬರೆ ಒಬ್ಬ ಪುತ್ರನನ್ನು ನಮ್ಮ ಕಳುಹಿಸಿಕೊಟ್ಟು, ಬಲಿದಾನ ಅರ್ಪಿಸಿ ನಮ್ಮನ್ನು ಮುಕ್ತಿ ಮಾರ್ಗ ತೋರಿಸಿದ, ದೇವರು ನಮ್ಮನ್ನು ಪ್ರೀತಿಸಿದ ಹಾಗೆ, ನಾವು ಕಡು ಬಡವರನ್ನು, ಅನಾಥರನ್ನು, ರೋಗಿಗಳನ್ನು ಪ್ರೀತಿಸಿರಿ, ಯಾರು ಹಸಿದವರಿದ್ದಾರೆ ಅವರಿಗೆ ಉಣ್ಣಲು ಕೊಡಿ, ಯಾರಿಗೆ ಬಟ್ಟೆ ಇಲ್ಲವೋ ಅವರಿಗೆ ಬಟ್ಟೆ ನೀಡಿ, ಯಾರು ಬಾಯಾರಿದರು ಕುಡಿಯಲು ನೀರು ಕೊಡಿ, ಅದನ್ನೆ ನಮ್ಮ ಸಂತ ಅಂತೋನಿಯರು ಮಾಡಿದ್ದು. ಇಂದು ಅದೇ ಅಕಾಂಕ್ಷೆ ಇಟ್ಟು ಹಲವಾರು ದಾನಿಗಳಿಂದ ಅನಾಥಶ್ರಮ ಸಿದ್ದವಾಗಿದೆ. ಸಂತ ಅಂತೋನಿಯರು ದೇವರನ್ನು ತುಂಬ ಪ್ರೀತಿಸಿದರು, ದೇವರನ್ನು ಪ್ರೀತಿಸಿದರೆ, ದೇವರು ನಮ್ಮನ್ನು ಎಂದು ನಮಗೆ ಕಡೆಕಣಿಸುವುದಿಲ್ಲ’ ಎಂದು ಪವಿತ್ರ ಬಲಿದಾನದ ನೇತ್ರತ್ವನ್ನು ವಹಿಸಿ ಸಂದೇಶ ನೀಡಿದರು.
ಅನಾಥಶ್ರಮದ ಮಹಾಪೋಷಕರಾದ ಫಿಲಿಪ್ ಡಿಕೋಸ್ತಾ ಬಸ್ರೂರು, ನೂತನ ಆಶ್ರಮವನ್ನು ರಿಬ್ಬನ್ ಕತ್ತರಿಸುವುದರ ಮೂಲಕ ಉದ್ಘಾಟಿಸಿದರು. ಆಶ್ರಮದ ನಿರ್ಮಾಣಕ್ಕೆ ಧನಸಹಾಯ ನೀಡಿದ ದಾನಿಗಳನ್ನು ಮತ್ತು ಮಹೋತ್ಸವಕ್ಕೆ ಸಹಕರಿಸಿದ ದಾನಿಗಳನ್ನು ಗೌರವಿಸಲಾಯಿತು.
ಪುಣ್ಯಕ್ಷೇತ್ರಕ್ಕೆ ಪ್ರಥಮ ಬಾರಿಗೆ ಆಗಮಿಸಿದ ನೂತನ ಧರ್ಮಾಧ್ಯಕ್ಷರನ್ನು, ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠಗುರು ಮೊನ್ಸಿಂಜ್ಞೊರ್ ಫ್ರಾನ್ಸಿಸ್ ಝೇವಿಯರ್ ಹಾಗೂ ಕ್ಷೇತ್ರದ ರೆಕ್ಟರ್, ವಂ।ಸುನೀಲ್ ವೇಗಸ್ ಆಶ್ರಮದ ಮೇಲ್ವಿಚಾರಣೆಯನ್ನು ನೋಡಿಕೊಳ್ಳುವ ಫ್ರಾನ್ಸಿಸ್ಕನ್ ಸಿಸ್ಟರ್ಸ್ ಆಫ್ ದಿ ಇಮ್ಯಾಕುಲೆಟ್ ಸಂಸ್ಥೆಯ ಧರ್ಮ ಭಗಿನಿಯರ ಮುಖ್ಯಸ್ಥೆ ಮುಖ್ಯಸ್ಥೆ ಸಿ|ಎಲ್ಸಿ ಇವರನ್ನು ಗೌರವಿಸಲಾಯಿತು.
ಉಡುಪಿ ಹಾಗೂ ಮಂಗಳೂರು ಧರ್ಮಪ್ರಾಂತ್ಯದಿಂದ ಆಗಮಿಸಿದ ನೂರಾರು ಧರ್ಮಗುರುಗಳು, ಧರ್ಮಭಗಿನಿಯರು ಸಹಿತ 6000ಕ್ಕೂ ಅಧಿಕ ಭಕ್ತಾದಿಗಳು ಉಪಸ್ಥಿತರಿದ್ದರು.
ಪುಣ್ಯಕ್ಷೇತ್ರದ ರೆಕ್ಟರ್ ವಂ|ಸುನಿಲ್ ವೇಗಸ್ ಸರ್ವರನ್ನು ವಂದಿಸಿದರು. ವಂ|ರೋಯ್ ಲೋಬೊ ಹಾಗೂ ವಂ|ವಿಲ್ಸನ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.
ಧರ್ಮಪ್ರಾಂತ್ಯದಲ್ಲಿ ಜನರ ಆಧ್ಯಾತ್ಮಿಕ ಬೆಳವಣಿಗೆಗೆ ಮೊದಲ ಆದ್ಯತೆಯಾಗಿ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಲು ಪ್ರಯತ್ನಿಸುವುದರೊಂದಿಗೆ ಧರ್ಮಪ್ರಾಂತ್ಯದಲ್ಲಿ ಆರೋಗ್ಯ ಕ್ಷೇತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ ಉತ್ತಮ ಸುಸಜ್ಜಿತ ಆಸ್ಪತ್ರೆ ನಿರ್ಮಾಣದ ಕುರಿತು ಚಿಂತನೆ ನಡೆಸಲಾಗಿದೆ. ಭಕ್ತರ ಹಾಗೂ ಉದಾರ ಮನಸ್ಸಿನ ದಾನಿಗಳು ಇಂತಹ ಉತ್ತಮ ಕಾರ್ಯಕ್ಕೆ ಕೈ ಜೋಡಿಸಿದರೆ ಕನಸು ನನಸಾಗಲು ಹೆಚ್ಚಿನ ಸಮಯ ಬೇಕಾಗಿಲ್ಲ ಎಂದು ಉಡುಪಿ ಧರ್ಮ ಪ್ರಾಂತ್ಯದ ಧರ್ಮಾದ್ಯಕ್ಷರಾದ ಅತಿ ವಂ|ಡಾ|ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಇದೇ ಸಂದರ್ಭದಲ್ಲಿ ತಿಳಿಸಿದರು.





























































































































