

ಕುಂದಾಪುರ; ಕಳೆದ 11 ತಿಂಗಳಿಂದ , ಕುಂದಾಪುರ ನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿ , ಪದೋನ್ನತಿ ವರ್ಗಾವಣೆಗೊಂಡು , ಹೊಸಕೋಟೆಯ ಯೋಜನಾ ಪ್ರಾಧಿಕಾರದ ಉಪನಿರ್ದೇಶಕರಾಗಿ ನೇಮಕಗೊಂಡ ಶ್ರೀನಿವಾಸರವರ ಬೀಳ್ಕೊಡುಗೆ ಕಾರ್ಯಕ್ರಮ ಪ್ರಾಧಿಕಾರ ಕಚೇರಿಯಲ್ಲಿ ನಡೆಯಿತು.
ಕುಂದಾಪುರ ಮತ್ತು ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ನಗರ ಯೋಜನಾ ಪ್ರಾಧಿಕಾರದ ಕಚೇರಿಯಲ್ಲಿ , ಕಳೆದ ಒಂದು ವರ್ಷದ ಸೇವೆಯಲ್ಲಿ , ಸದಸ್ಯ ಕಾರ್ಯದರ್ಶಿಯಾಗಿ ಶ್ರೀನಿವಾಸ್ ರವರ ಕಾರ್ಯ ವೈಕರಿ , ಜನಮಾನಸದಲ್ಲಿ ಉಳಿಯುವಂತಾಯ್ತು . ಇವರ ದಕ್ಷ , ಸೇವಾ ಮನೋಭಾವನೆಯಿಂದ ಜನರ ಹಕ್ಕು ರಕ್ಷಣೆ ಮಾತ್ರವಲ್ಲದೆ, ಸಮಸ್ಯೆಗಳಿಗೆ ಕಾನೂನಿನ ಚೌಕಟ್ಟಿನಲ್ಲಿ ಪರಿಹಾರ ದೊರಕಲು ಸಹಕಾರಿಯಾಯಿತು. ಜಿಲ್ಲೆಯಲ್ಲಿ ಅತಿ ಕಡಿಮೆ ಬಾಕಿ ಇರುವ ಕಡೆತಗಳ ಕಚೇರಿಯ ಶ್ರೇಯಸ್ಸು ಕುಂದಾಪುರದ್ದಾಗಿದೆ ಎಂದು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ಟೊ ತಿಳಿಸಿದರು.
ಶ್ರೀನಿವಾಸರವರನ್ನು ಶುಭ ಹಾರೈಸಿ , ಪುರಸಭೆ ಮುಖ್ಯ ಅಧಿಕಾರಿ ಆನಂದ್ ಜಿ , ಸ್ಥಳಿಯ ನಾಯಕರುಗಳಾದ ಯಾಸಿನ್ ಹೆಮ್ಮಾಡಿ ,ರೋಷನ್ ಬರೆಟ್ಟೊ , ನಾಗೇಶ್ ಕೆ ಶೇರಿಗಾರ್ , ಹರ್ಷವರ್ಧನ ಇನ್ನಿತರರು ಮಾತನಾಡಿದರು.
ಈ ಸಂದರ್ಭದಲ್ಲಿ ನಗರ ಯೋಜಕರಾದ ಶರತ್ ಕುಮಾರ್ ಪಿ , ಯೋಜನಾ ಪ್ರಾಧಿಕಾರ ಸದಸ್ಯರಾದ ಚಂದ್ರಶೇಖರ್ ಶೆಟ್ಟಿ , ಅಲ್ಫಾಜ್ , ಪುರಸಭೆ ನಾಮನಿರ್ದೇಶಿತ ಸದಸ್ಯರಾದ ಅಶೋಕ್ ಸುವರ್ಣ , ಸದಾನಂದ ಖಾರ್ವಿ ಇನ್ನಿತರರು ಉಪಸ್ಥಿತರಿದ್ದರು.
ಇಂಜಿನಿಯರ್ಸ್ ಅಸೋಸಿಯೇಷನ್ ನ ಕಾರ್ಯದರ್ಶಿಯಾದ ರವೀಂದ್ರ ಕೆ ರವರು ಸ್ವಾಗತಿಸಿ , ಕಾರ್ಯಕ್ರಮವನ್ನು ನಿರ್ವಹಿಸಿ ,ಯೋಜನಾ ಪ್ರಾಧಿಕಾರ ಸದಸ್ಯರಾದ ಚಂದ್ರ ಅಮೀನ್ ವಂದಿಸಿದರು.









