ಕಾರ್ಕಳ; ಸೆ. ತೆನೆ ಹಬ್ಬದ ಪ್ರಯುಕ್ತ ಸಂತ ಲೋರೆನ್ಸ್ ಬಸಿಲಿಕಾದಲ್ಲಿ 7.30 ಘಂಟೆಗೆ ಬಲಿಪೂಜೆಯು ನಡೆಯಿತು. ಬಲಿಪೂಜೆಯನ್ನು ವಂದನೀಯ ಧರ್ಮಗುರುಗಳಾದ ರೋಬಿನ್ ಸಾಂತುಮಾಯೆರ್ ನೆರವೇರಿಸಿದರು. ಬಸಿಲಿಕಾದ ಡೈರೆಕ್ಟರ್ ವಂದನೀಯ ಧರ್ಮಗುರುಗಳಾದ ಫಾ. ಆಲ್ಬನ್ ಡಿಸೋಜ, ಫಾ. ರೋಮನ್ ಮಸ್ಕರೇನಸ್ , ಫಾ. ಆಂಟನಿ, ಫಾ. ಆನಂದ್ ಇವರು ಉಪಸ್ಥಿತರಿದ್ದರು. ಮೇರಿ ಮಾತೆಯ ಮೆರವಣಿಗೆಯನ್ನು ನೆರವೇರಿಸಲಾಯಿತು.

Read More

ಬೈಂದೂರು ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಜ್ಞಾನದಾ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ ಬೈಂದೂರು : ಬೈಂದೂರಿನ ಗಾಂಧಿ ಮೈದಾನದಲ್ಲಿ ನಡೆದ ಬೈಂದೂರು ಹೋಬಳಿ  ಮಟ್ಟದ U- 14 ಕ್ರೀಡಾಕೂಟದಲ್ಲಿ ಜ್ಞಾನದಾ ಶಿಕ್ಷಣ ಸಂಸ್ಥೆ ಶಿರೂರು ಇಲ್ಲಿನ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಪ್ರದರ್ಶನದೊಂದಿಗೆ  ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕ ಮಂಜುನಾಥ್,  ತರಬೇತಿ ನೀಡಿರುತ್ತಾರೆ ಫಲಿತಾಂಶದ ಯಾದಿ ಡಿಸ್ಕಸ್ ಥ್ರೋ ವೈಷ್ಣವಿ ಕೆ, ಪ್ರಥಮ ಪ್ರಥಮೇಶ್,ಪ್ರಥಮ ಅನುಶ್,ದ್ವಿತೀಯ  ಗುಂಡು ಎಸೆತ ವೈಷ್ಣವಿ […]

Read More

ಉಡುಪಿ : ಶ್ರೀ ನಾರಾಯಣ ಗುರುಗಳ ಆಶಯದಂತೆ ಶ್ರೀ ನಾರಾಯಣ ಗುರು ಉದ್ಯಾನವನ ನಿರ್ಮಾಣ ಒಂದು ಐತಿಹಾಸಿಕ ನಿರ್ಧಾರವಾಗಿದೆ. ಶ್ರೀ ನಾರಾಯಣ ಗುರು ಯುವ ವೇದಿಕೆಯ ಇಂತಹ ಸಮಾಜಮುಖಿ ಕೆಲಸಗಳು ಸಮಾಜಕ್ಕೂ ಕೂಡ ಉತ್ತಮ ಸಂದೇಶವಾಗಿದೆ. ಜಾತಿಪೀಡಿತ ಸಮಾಜದಲ್ಲಿ ಸಾಮಾಜಿಕ ಸಮಾನತೆಯ ಅಭಿವೃದ್ಧಿಗಳು ಸಮಾಜದ ಒಗ್ಗಟ್ಟನ್ನು ಇನ್ನಷ್ಟು ಹೆಚ್ಚಿಸುತ್ತದೆ. ಇಂತಹ ಕೆಲಸಗಳ ಮೂಲಕ ಸಮಾಜದಲ್ಲಿನ ತಾರತಮ್ಯಗಳು ಕೂಡ ದೂರವಾಗಲಿ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ತಿಳಿಸಿದರು. ಶ್ರೀ ನಾರಾಯಣ ಗುರುಗಳ ಸಮಾನತೆಯ ಸಂದೇಶ ಸಾರುವ […]

Read More

ಡಾ| ಸರ್ವಪಲ್ಲಿ ರಾಧಾಕೃಷ್ಣನ್ ಅವರಿಗೆ ಗೌರವ ಸಲ್ಲಿಸಲು ಮತ್ತು ಬೆಳ್ಮಣ್ ಪ್ರದೇಶದ ಸುತ್ತಮುತ್ತಲಿನ ಶಿಕ್ಷಕರ ಸಮರ್ಪಣೆ ಮತ್ತು ಸೇವೆಯನ್ನು ಗೌರವಿಸಲು ಎಂಸಿಸಿ ಬ್ಯಾಂಕಿನ ಬೆಳ್ಮಣ್ ಶಾಖೆಯಲ್ಲಿ ದಿನಾಂಕ 09.09.2025ರಂದು ಶಿಕ್ಷಕರ ದಿನಾಚರಣೆಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ವಹಿಸಿದ್ದರು. ಮುಲ್ಲಡ್ಕ ಡಾನ್ ಬಾಸ್ಕೋ ಶಾಲೆಯ ಪ್ರಾಂಶುಪಾಲ ಫಾದರ್ ಮಿಲ್ಟನ್ ಫೆರ್ನಾಂಡಿಸ್, ನಿವೃತ್ತ ಶಿಕ್ಷಕಿ ಮತ್ತು ಸೈಂಟ್ ಜೋಸೆಫ್ ಇಂಗ್ಲಿಷ್ ಮಾಧ್ಯಮ ಶಾಲೆಯ ಮಾಜಿ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲಿಡ್ವಿನ್ […]

Read More

ಕೋಟೇಶ್ವರ: ಶಿಕ್ಷಕ ದಿನಾಚರಣೆ ಪ್ರಯುಕ್ತ ಕೋಟೇಶ್ವರ ಲಯನ್ಸ್ ಕ್ಲಬ್ ವತಿಯಿಂದ ಸಂಭ್ರಮದಿಂದ ಶಿಕ್ಷಕ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಿಕ್ಷಕ, ಪತ್ರಕರ್ತ ಚಂದ್ರಶೇಖರ ಬೀಜಾಡಿ ಅವರನ್ನು ಫಲಪುಷ್ಪ, ಸ್ಮರಣಿಕೆಯೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು. ಕೋಟೇಶ್ವರ ಲಯನ್ಸ್ ಕ್ಲಬ್‍ನ ಪ್ರಮುಖ ದಿನಕರ ಶೆಟ್ಟಿ ಅಭಿನಂದನಾ ಮಾತುಗಳನ್ನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಕೋಟೇಶ್ವರದ ಅಧ್ಯಕ್ಷ ನಿತ್ಯಾನಂದ ಕೋಟೇಶ್ವರ ವಹಿಸಿದ್ದರು. ಕೋಟೇಶ್ವರ ಲಯನ್ಸ್‍ನ ಪ್ರಮುಖರಾದ ಏಕನಾಥ ಬೋಳಾರ್, ರಾಮಚಂದ್ರ ಆಚಾರ್ಯ, ಭೋಜರಾಜ ಶೆಟ್ಟಿ, ಕೃಷ್ಣಯ್ಯ ಆಚಾರ್ಯ, ರೇಖಾರಾಮಚಂದ್ರ ಆಚಾರ್ಯ,ಪ್ರೇಮಲತಾ ದಿನಕರ ಶೆಟ್ಟಿ, […]

Read More

ಮಂಗಳೂರು: ಕೂಳೂರು ಬಳಿ ರಸ್ತೆ ಗುಂಡಿಯಿಂದಾಗಿ ನಿನ್ನೆ ಆದ ರಸ್ತೆ ಅಪಘಾತದಲ್ಲಿ ಮಹಿಳೆ ಮೃತ್ಯು ಆಗಿರುವುದಕ್ಕೆ ನ್ಯಾಶನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ ಕಾರಣ ಎಂದು ಹೇಳಿರುವ ಆಮ್ ಆದ್ಮಿ ಪಕ್ಷ ದಕ್ಷಿಣ ಕನ್ನಡ ಇದರ ಪರವಾಗಿ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಾಲಿನ್ಸ್  ನೇತೃತ್ವದಲ್ಲಿ ಮಂಗಳೂರಿನ ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿರುತ್ತಾರೆ. ಈ ವೇಳೆಯಲ್ಲಿ ಸೀಮಾ ಮಡಿವಾಳ, ಜೇಮ್ಸ್ ಡಿಸೋಜಾ, ಕಬೀರ್ ಕಾಟಿಪಳ್ಳ ಹಾಗೂ ವಾಸುದೇವ ಅವರು ಉಪಸ್ತಿತರಿದ್ದರು.

Read More

ಬೈಂದೂರು: ಸಿಐಟಿಯು ಸಂಯೋಜಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಸಹಯೋಗದಲ್ಲಿ ಸೆಪ್ಟೆಂಬರ್ 7 ರಂದು ಅಂಬೇಡ್ಕರ್ ಭವನದ ಸಭಾಂಗಣದಲ್ಲಿ ಸಾರಿಗೆ ಕ್ಷೇತ್ರದಲ್ಲಿ ದುಡಿಯುತ್ತಿರುವ ಚಾಲಕರಿಗೆ ಮಂಡಳಿಯ ಮೂಲಕ ಕರ್ನಾಟಕ ರಾಜ್ಯ ಮೋಟಾರು ಸಾರಿಗೆ ಹಾಗೂ ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಯೋಜನೆಯ ಮಾಹಿತಿಯನ್ನು ನೀಡುವ ಮೂಲಕ ನೋಂದಣಿ ಮತ್ತು ಅರ್ಹತೆಗಳು ಹಾಗೂ ಯೋಜನೆಯಡಿಯಲ್ಲಿ ದೊರಕುವ ಸೌಲಭ್ಯಗಳ ಕುರಿತು ವಿವರಣೆ ನೀಡಲಾಯಿತು.ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷರಾದ ರಾಜೀವ್ […]

Read More

Nativity of Mother Mary and Girl Child Day were celebrated at St. Francis Assisi Church, Tallur. ತಲ್ಲೂರು; 2025ರ ಸೆಪ್ಟೆಂಬರ್ 8ರಂದು ತಲ್ಲೂರಿನ ಸಂತ ಫ್ರಾನ್ಸಿಸ್ ಅಸ್ಸಿಸಿ ದೇವಾಲಯದಲ್ಲಿ ಮಾತೆ ಮೇರಿಯ ಜನ್ಮ ದಿನ ಹಾಗೂ ಹೆಣ್ಣು ಮಕ್ಕಳ ದಿನವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಪ್ರಧಾನ ಯಾಜಕರಾಗಿ ಆಗಮಿಸಿದ ವಂದನೀಯ ಡಾ. ಜೆನ್ಸಿಲ್ ಆಳ್ವ (ಪ್ರಾಧ್ಯಾಪಕರು, ಜೆಪ್ಪು ಸೆಮಿನರಿ) ಹಾಗೂ ಚರ್ಚಿನ ಧರ್ಮಗುರು ವಂದನೀಯ ಫಾ. ಎಡ್ವಿನ್ ಡಿಸೋಜಾರವರು ಸಹಬಲಿದಾನವನ್ನು ಅರ್ಪಿಸಿದರು. […]

Read More

ಗಂಗೊಳ್ಳಿ; ಗಂಗೊಳ್ಳಿಯ ಕೊಸೆಸಾಂವ್ ಮಾತಾ ಚರ್ಚಿನಲ್ಲಿ ಸಂಭ್ರಮದಿಂದ ಮೇರಿ ಮಾತೆಯ ಹುಟ್ಟು ಹಬ್ಬವಾದ ಮೊಂತಿ ಹಬ್ಬ ಆಚರಿಸಲಾಯಿತು. ಹೊಸತೆನೆಗಳನ್ನು ಗಂಗೊಳ್ಳಿ ಕೊಸೆಸಾಂವ್ ಮಾತೆ ಚರ್ಚಿನ ಧರ್ಮ ಗುರುಗಳಾದ ವಂದನೀಯ ತೋಮಸ್ ರೋಶನ್ ಡಿಸೋಜರವರ ನೇತೃತ್ವದಲ್ಲಿ ಹಾಗೂ ಮೂಲತ ಗಂಗೊಳ್ಳಿಯವರಾಗಿ ಪ್ರಸ್ತುತ ಕೆನಡಾದ ಬರ್ಲಿಂಗ್‌ಟನ್ ನಲ್ಲಿ ಸೇವೆ ಸಲ್ಲಿಸುತ್ತಿರುವ ವಂದನೀಯ ಅರುಣ್ ಗೊಡ್ವಿನ್ ಪಿಂಟೊ ರವರ ಸಹಭಾಗಿತ್ವದೊಂದಿಗೆ ಆಶಿರ್ವಾದಿಸಲಾಯಿತು. ಬಳಿಕ ಭಕ್ತಿಪೂರ್ವಕ ಭವ್ಯಾ ಮೆರವಣಿಗೆಯನ್ನು ನಡೆಸಿ ಹೊಸತೆನೆಗಳನ್ನು ಚರ್ಚಿಗೆ ತರಲಾಯಿತು. ಎಲ್ಲಾ ಮಕ್ಕಳು ಬಾಲ ಮೇರಿ ಮಾತೆಗೆ ಹೂಗಳನ್ನು […]

Read More
1 93 94 95 96 97 555