

ಪಡುಕೋಣೆ; ಫೆ.5; ಪಡುಕೋಣೆ ಪವಾಡ ಪುರುಷ ಸಂತ ಅಂತೋನಿ ಚರ್ಚಿನಲ್ಲಿ ದೇವರ ವಾಕ್ಯದ (ವೆಸ್ಪರ್ಸ್) ಸಂಭ್ರಮ ಮತ್ತು ವಾರ್ಷಿಕ ಮಹಾಹಬ್ಬದ ಸಂಭ್ರಮ ನಡೆಯಿತು
3/2/2026ರಂದು ಸಂಜೆ ಸಮಯಕ್ಕೆ ತುಂಬಾ ವೖಭವದಿಂದ ತೆರಾಲಿ ಹಬ್ಬದ ಮೊದಲನೇ ದಿನ ನಡೆಯುವ ವೆಸ್ಪರ್ಸ್ ದೇವರ ವಾಕ್ಯದ ಸಂಭ್ರಮಕ್ಕೆ ಪವಾಡ ಪುರುಷ ಭಕ್ತ ಸಂತ ಅಂತೋನಿಯವರ ಪಲ್ಲಕ್ಕಿ ಮೇಲೆ ಇರಿಸಲ್ಪಟ್ಟ ಪ್ರತಿಮೆಯನ್ನು ಆಶೀರ್ವಾದಿಸಿ, ಮೆರವಣಿಗೆಯ ಮೂಲಕ ಪ್ರತಿ ಭಕ್ತರ ಕೈಯಲ್ಲಿ ಬೆಳಗಿಸಿದ ಮೇಣದ ಬತ್ತಿಗಳನ್ನು ಹಿಡಿದು ಪ್ರಾರ್ಥನೆ, ಭಕ್ತಿಗೀತೆಗಳನ್ನು ಹಾಡುತ್ತಾ ದೇವಪೀಠದ ಮಕ್ಕಳು ಭಕ್ತರೊಡಗೂಡಿ ಭವ್ಯ ಮೆರವಣಿಗೆ ಮಾಡಲಾಯಿತು. ನಂತರ “ಕ್ರಿಸ್ತರ ನುಡಿ ನಿಮ್ಮ ಹೃದಯದಲ್ಲಿ ತುಂಬಿ ತುಳುಕಲಿ” ಸಂದೇಶದೊಂದಿಗೆ ನಡೆಸಿಕೊಟ್ಟ ಪ್ರಧಾನ ಧರ್ಮ ಗುರುಗಳಾದ ವಂದನೀಯ ಶರೊನ್ ರೊಯ್ ಡಿ’ಸೋಜಾ (ಜೆಜ್ವಿತ್) ಬಸ್ರೂರು,ಅವರು ಪವಿತ್ರ ಪುಸ್ತಕದಲ್ಲಿ ಬರೆದ ದೇವರ ವಾಕ್ಯಗಳನ್ನು ನಾವು ಯಾವ ರೀತಿ ಪಾಲಿಸುತ್ತೇವೆ. ಕ್ರಿಸ್ತನ ಮಾತುಗಳು ನಿಮ್ಮ ಹೃದಯದಲ್ಲಿ ತುಂಬಿರಲಿ, ಎಂದು ತಿಳಿಸಿದರು. ಈ ಪ್ರಾರ್ಥನ ವಿಧಿಯಲ್ಲಿ 15 ಮಂದಿ ಧರ್ಮ ಗುರುಗಳು ಪಾಲ್ಗೊಂಡರು. ಚರ್ಚಿನ ಧರ್ಮಗುರುಗಳಾದ ವಂ। ಪ್ರಾನ್ಸಿಸ್ ಕರ್ನೆಲಿಯೊರವರು ವಂದಿಸಿದರು.









ವಾರ್ಷಿಕ ಮಹೋತ್ಸವ

ಮಾರನೇ ದಿನ 4.2.2026 ರಂದು ವಾರ್ಷಿಕ ಮಹೋತ್ಸವದ ಸ಼ಂದೇಶ “ಬಡವರು ನಿಮ್ಮ ಮಧ್ಯೆ ದಿನಾಲು ಇರುವರು” ಎಂಬ ಸಂದೇಶದೊಂದಿಗೆ ಪ್ರಧಾನ ಯಾಜಕರಾಗಿ ವಂ। ಫಾ। ಡ್ಯಾನ್ಸಿ ಸುನಿಲ್ ಮಾರ್ಟಿಸ್, ಫಿಲಿಪ್ ನೇರಿ ಶಾಲೆಯ ಪ್ರಾಂಶುಪಾಲರು ದಿವ್ಯ ಬಲಿಪೂಜೆಯನ್ನು ಅರ್ಪಿಸಿದರು. “ಪ್ರಪಂಚದಲ್ಲಿ ಬಡತನ ಒಂದು ವಯಕ್ತಿಕ ಕಷ್ಟ, ಎಂದು ಜನರು ಹೇಳುವರು. ಆದರೆ, ದೇವರು ಹೀಗೆ ಯೋಚಿಸುವುದಿಲ್ಲ. ಮನುಷ್ಯರು ನೋಡಿದ ಹಾಗೇ ದೇವರು ನೋಡುವುದಿಲ್ಲ. ದೇವರು ಬಡವರಾದರೆ ಅದೊಂದು ವರ, ಶ್ರೀಮಂತರಿಗೆ ಸ್ವರ್ಗಕ್ಕೆ ಹೋಗುವುದಕ್ಕೆ ಬಹಳ ಕಷ್ಟವಿದೆ, ದೇವರು ಗುಣ, ನಡತೆ, ದಯೆ, ಕರುಣೆಗಳ ಆದಾರದ ಮೇಲೆ ಶ್ರೀಮಂತಿಕೆ ಅಳೆಯುವರು. ಯೇಸು ಕ್ರಿಸ್ತರು ಹೇಳಿದ್ದಾರೆ “ನೀವು ಬಡವರಿಗೆ ಏನಾದರು ಉಪಕಾರ ಮಾಡಿದರೆ, ಅದು ನನಗೇ ಮಾಡಿದಂತೆ, ಅದರ ಪ್ರತಿಫಲ ನಿಮಗೆ ಸ್ವರ್ಗರಾಜ್ಯದಲ್ಲಿ ಸಿಗುವುದೆಂದು, ಇದನ್ನು ನಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕು” ಎಂದು ಸಂದೇಶ ನೀಡಿದರು.
ಚರ್ಚಿನ ಧರ್ಮಗುರು ವಂ। ಫಾ। ಪ್ರಾನ್ಸಿಸ್ ಕರ್ನೆಲಿಯೊರವರು ಹಬ್ಬದ ಶುಭಾಶಯಗಳನ್ನು ಸಲ್ಲಿಸಿ ಧನ್ಯವಾದ ಅರ್ಪಿಸಿದರು. ಕುಂದಾಪುರ ಸಂತ ಜೋಸೆಫ್ ವಾಜ್ ವಲಯದ ಪ್ರಧಾನರಾದ ಅ।ವಂ।ಪೌಲ್ ರೇಗೊ ಹಬ್ಬದ ಪೋಷಕತ್ವ ವಹಿಸಿದ ಡೇರಿ ರೆಬೆಲ್ಲೊ ಮತ್ತು ಅವರ ಪುತ್ರ ಫ್ಲಾಯ್ಡ್ ಎಂಟನಿ ರೆಬೆಲ್ಲೊ ಮತ್ತು ಕುಟುಂಬಸ್ಥರನ್ನುಗೌರವದ ಮೇಣದ ಬತ್ತಿ ನೀಡಿ ಅಭಿನಂದಿಸಿ, ಎಲ್ಲ ಧರ್ಮಗುರುಗಳ ಪರವಾಗಿ ಚರ್ಚಿನ ಧರ್ಮಗುರುಗಳಿಗೆ ಶುಭಾಶಯಗಳನ್ನು ಸಲ್ಲಿಸಿದರು. ವಲಯದ ಧರ್ಮಗುರುಗಳು, ಹಾಗೂ ಅತಿಥಿ ಧರ್ಮಗುರುಗಳು ಹಬ್ಬದ ಬಲಿದಾನದಲ್ಲಿ ಭಾಗವಹಿಸಿದ್ದರು.



















