

ಪಡುಕೋಣೆ :- ದಿನಾಂಕ: 1.2.2026 ರಂದು, ಸಂತ ಅಂತೋನಿ ಚರ್ಚ್ ಪಡುಕೋಣೆಯಲ್ಲಿ ಕ್ರಿಸ್ತನ ಪವಿತ್ರ ಬಲಿದಾನ ಮತ್ತು ಪರಮ ಪ್ರಸಾದದ ಆರಾಧನೆ, ತೆರಾಲಿ ಹಬ್ಬದ ಆಚರಣೆಯ ಪ್ರಯುಕ್ತ ಪೂರ್ವ ಭಾವಿಯಾಗಿ ನಡೆಯುವ ಭ್ರಾತೃತ್ವ ಭಾಂದವ್ಯ (ಕೊಂಪ್ರಿ ಆಯ್ತಾರ್) ದಿನ ಫೆಬ್ರವರಿ 1ರಂದು ಬಹಳ ಅದ್ಧೂರಿಯಿಂದ ಆಚರಿಸಲಾಯಿತು. “ತಮ್ಮ ಪ್ರಾಣವನ್ನೇ ಬಲಿದಾನ ನೀಡಿ, ಶಿಲುಬೆಗೆ ಅರ್ಪಿಸಿದ ಪ್ರಭು ಏಸು ಕ್ರಿಸ್ತರ ಮುಖವನ್ನು ಬಡವ ಬಲ್ಲದರಲ್ಲಿ ನೋಡೋಣ” ಮಹತ್ವದ ಸಂದೇಶ ಸಾರಲಾಯಿತು.
ಯಾಜಕರಾದ ವಂದನೀಯ ಫಾ। ಪ್ರವೀಣ್ ಪಿಂಟೋ, OCD ಸುಪೀರಿಯರ್, ಕಾರ್ಮೆಲ್, ಆಶ್ರಮ್ ಕಟ್ಕೇರೆ, ವಂದನೀಯ ಫಾ। ಆಸಿಸಿ ರೆಬೆಲ್ಲೊ ಸಂತ ಜೋಸೆಫ್ ವಾಜ್ ಚರ್ಚ್ ಮುಡಿಪು. ವಂದನೀಯ ಫಾ। ವಿಲಿಯಂ ಮಿನೇಜಸ್ ವಾಮಂಜೂರ್ ಚರ್ಚ್ ಮಂಗಳೂರು. ವಂದನೀಯ ಫಾ।ನೊರ್ಬಟ್ ಲುವಿಸ್ ಸಂತ ಭಾರ್ತೊಲೋಮಿಯಸ್ ಚರ್ಚ್ ಜೆಸ್ನಾ, ಡೆಲ್ಲಿ, ವಂದನೀಯ ಫಾ। ಪೀಟರ್ ಡಿ’ಸೋಜಾ ಮಂಗಳೂರು, ಪಡುಕೋಣೆ ಚರ್ಚಿನ ಧರ್ಮ ಗುರು ವಂದನೀಯ ಫಾ। ಪ್ರಾನ್ಸಿಸ್ ಕರ್ನೆಲಿಯೊ, ದೇವಪೀಠದ ಮಕ್ಕಳು ಹಾಗೂ ದೇವಾಲಯಕ್ಕೆ ಆಗಮಿಸಿದ ಭಕ್ತಾಧಿಗಳ ಜೊತೆಗೂಡಿ ದಿವ್ಯ ಬಲಿಪೂಜೆಯನ್ನು ಅರ್ಪಿಸಿದರು.ಪ್ರಧಾನ ಯಾಜಕರಾಗಿ ಧರ್ಮಗುರುಗಳಾದ ವಂದನೀಯ ಫಾದರ್ ಆಸಿಸಿ ರೆಬೆಲ್ಲೊ ವಹಿಸಿದ್ದರು.
ದಿವ್ಯ ಬಲಿಪೂಜೆಯನ್ನು ಅರ್ಪಿಸಿದರು, ಬಲಿ ಪೂಜೆಯಲ್ಲಿ ವಂದನೀಯ ಫಾ! ಪ್ರವೀಣ್ ಪಿಂಟೋ ರವರು ತಮ್ಮ ಪ್ರಸಂಗ ದಲ್ಲಿ ನಮ್ಮ ಮಕ್ಕಳಿಗೆ ನಾವು ಬಡವ ಬಲ್ಲದರನ್ನು ಪ್ರೀತಿಸಲು ಕಲಿಸಬೇಕು. ಬಡವರಿಗೆ ಯಾವಾಗಲೂ ಸಹಾಯ ಹಸ್ತ ನೀಡಬೇಕು ಎಂದರು. ಬಲಿಪೂಜೆಯ ನಂತರ “ಪವಿತ್ರ ಪರಮ ಪ್ರಸಾದದ” ಆರಾಧನೆಗೆ ಭಕ್ತಾಧಿಗಳು ಸಾಲಾಗಿ ಬ್ಯಾಂಡ್ ಮತ್ತು ದೇವರ ಕೀರ್ತನೆ ಭಜನೆ ಹಾಡುಗಳನ್ನು ಹಾಡುತ್ತಾ ಧರ್ಮ ಗುರುಗಳ ಜೊತೆಗೂಡಿ ಕ್ರಿಸ್ತನ ಪವಿತ್ರ ಬಲಿದಾನದ ಪರಮ ಪ್ರಸಾದದ ಮೆರವಣಿಗೆಯಲ್ಲಿ ತುಂಬಾ ಭಕ್ತಿ ಪೂರ್ವಕವಾಗಿ ಕ್ರಿಸ್ತನ ಮಹಿಮೆಯನ್ನು ಕೊಂಡಾಡಿದರು.
ಯಾಜಕರಾದ ವಂದನೀಯ ಫಾ। ಪ್ರವೀಣ ಪಿಂಟೋರವರು ಪವಿತ್ರ ಪರಮ ಪ್ರಸಾದದ ಆರಾಧನೆಯನ್ನು ನಡೆಸಿಕೊಟ್ಟರು. ಈ ವರ್ಷ ತೆರಾಲಿ ಹಬ್ಬದ ಪೋಷಕತ್ವ ವಹಿಸಿ ದ (ಫಿರ್ಜೆಂತ್) ಶ್ರೀಮತಿ ಡೇರಿ ರೆಬೆಲ್ಲೊ, ಪುತ್ರ ಶ್ರೀ ಫ್ಲೈಡ್ ಎಂಟನಿ ರೆಬೆಲ್ಲೊ ಮತ್ತು ಕುಟುಂಬದವರಿಗೆ ಆಶಿರ್ವದಿಸಿದ ಗೌರವದ ಕೋಲು ನೀಡಲಾಯಿತು. ಇದೇ ದಿವ್ಯಾ ಬಲಿ ಪೂಜೆಯಲ್ಲಿಯೇ ಭ್ರಾತೃತ್ವ ಬಾಂಧವ್ಯ ದಿನ, ತೆರಾಲಿ ಮತ್ತು ವಾರ್ಷಿಕ ಹಬ್ಬದ ಪೋಷಕರ ಮಗಳಾದ ಪಿಡೆಲ್ಮಾ ರೆಬೆಲ್ಲೊ ಇವಳಿಗೆ ಪ್ರಥಮ “ಪರಮ ಪ್ರಸಾದ”ವನ್ನು ನೀಡಲಾಯಿತು. ಸುಮಾರು 650 ಮಂದಿ ಭಕ್ತಾದಿಗಳು, ಪವಿತ್ರ ಪರಮಪ್ರಸಾದದ ಆರಾಧನೆ, ಮೆರವಣಿಗೆ ಹಾಗೂ ದಿವ್ಯ ಬಲಿಪೂಜೆಯಲ್ಲಿ ಪಾಲ್ಗೊಂಡು ವಿಜೃಂಭಣೆಯಿಂದ ಪರಮಪ್ರಸಾದದ ಹಾಗೂ ಭ್ರಾತೃತ್ವ ದಿನವನ್ನು ಆಚರಿಸಲಾಯಿತು.



















