

ಶಿವಮೊಗ್ಗ ಜಿಲ್ಲೆಯಲ್ಲಿ ನಿರಂತರ ಮಳೆಗೆ ಭಾರೀ ಅವಘಡ ಸಂಭವಿಸಿದೆ. ತೀರ್ಥಹಳ್ಳಿಯ ಇ೦ದಿರಾ ನಗರದಲ್ಲಿ ಗುಡ್ಡ ಕುಸಿದು ಒ೦ದೇ ಕುಟು೦ಬದ ಮೂವರು ಸಾವನ್ನಪ್ಪಿದ್ದಾರೆ. ತಡರಾತ್ರಿ 2:30 ವೇಳೆಯಲ್ಲಿ ಮಳೆಯ ಅಬ್ಬರ ಹೆಚ್ಚಾಗಿ ಗುಡ್ಡ ಕುಸಿದಿದೆ. ಕೊಕ್ಕರೆಗಾರು ಗ್ರಾಮ ಗ೦ಗಾವತಿ ತಾಲೂಕು ಕೊಪ್ಪಳ ಜಿಲ್ಲೆಯವರಾಗಿದ್ದು, ಮಲ್ಲಿಕಾರ್ಜುನ (35) ನಾಗವೇಣಿ (28), ಹಾಗೂ ಮೂರು ವರ್ಷದ ಸ೦ತೋಷ ಎಂ೦ದುಗುರುತಿಸಲಾಗಿದೆ.
ಇವರೆಲ್ಲ ಮಲಗಿದ್ದಾಗ ರಾತ್ರಿ ಮನೆ ಮೇಲೆ ಗುಡ್ಡ ಕುಸಿದಿದೆ. ಮಣ್ಣಿನಡಿ ಮೃತದೇಹಗಳು ಸಿಲುಕಿವೆ. ಜಿಸಿಬಿ ಬಳಸಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಆದರೆ ತೆರವು ಕಾರ್ಯಕ್ಕೆ ಮಳೆಯಿ೦ದ ಕಷ್ಟವಾಗುತ್ತಿದೆ ಎಂದು ಹೇಳಲಾಗುತ್ತದೆ.
ಸ್ಥಳಕ್ಕೆ ಪೊಲೀಸ್ ಹಾಗೂ ಕ೦ದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

