ಕುಂದಾಪುರ; “ಮುಗ್ಧತೆಯಿಂದ ಪ್ರೌಢತೆಯತ್ತ ಸಾಗುವ ಸ್ಥಿತ್ಯಂತರದ ಅವಧಿಯಲ್ಲಿರುವ ವಿದ್ಯಾರ್ಥಿಗಳು ಸರಿ-ತಪ್ಪುಗಳ ಬಗ್ಗೆ ನಿಖರವಾದ ತಿಳುವಳಿಕೆಯನ್ನು ಪಡೆಯುತ್ತಿರಬೇಕು. ಅಲ್ಲದಿದ್ದರೆ, ಒಂದು ಕೆಟ್ಟ ಸಹವಾಸ, ಒಂದು ತಪ್ಪು ನಡವಳಿಕೆ, ಒಂದು ವ್ಯಸನ ಬದುಕಿಗೇ ಅಪಾಯಕಾರಿಯಾಗಬಹುದು. ಆದ್ದರಿಂದ ಪ್ರತಿಯೊಬ್ಬರಲ್ಲಿ ವಿದ್ಯೆಯ ಜೊತೆಗೆ ವಿವೇಕವೂ ಇರಬೇಕು” ಎಂದು ಕುಂದಾಪುರದ ಆರ್.ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ- ಸ್ವಸಹಾಯ ಸಂಘ ಗಳ ಆಶ್ರಯದಲ್ಲಿ ಆಯೋಜಿಸಲಾದ ‘ ಸ್ವಾಸ್ಥ್ಯ ಸಂಕಲ್ಪ’ ಕಾರ್ಯಕ್ರಮದಲ್ಲಿ ಕುಂದಾಪುರ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀ ಸುಬ್ರಹ್ಮಣ್ಯ […]
ಕುಂದಾಪುರ: ಜು.25; ಸ್ಥಳೀಯ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಸೌದಿ ಅರೇಬಿಯಾದ ರಿಯಾದ್ ಅಲ್ಲಿನ ಗುಡ್ನೇಸ್ ಸಂಘಟನೇಯಿಂದ ೮ ನೇ ತರಗತಿಯ ಎಲ್ಲಾ ಮಕ್ಕಳ ವರ್ಷದ ಶಾಲಾ ಶುಲ್ಕವಾಗಿ 35 ಸಾವಿರ ರೂಪಾಯಿಗಳನ್ನು ನೀಡಿದ ಪ್ರಯುಕ್ತ ವಿದ್ಯಾರ್ಥಿಗಳಿಗೆ ರಶೀದಿ ಮತ್ತು ಶಾಲಾ ಕಲಿಕಾ ವಸ್ತುಗಳು ಬ್ಯಾಗ್, ಕ್ಯಾಲೆಕ್ಲುಲೇಟರ್ ಇನ್ನಿತರ ವಸ್ತುಗಳನ್ನು ಜು.24 ರಂದು ಶಾಲಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯಿಂದ ಉಚಿತವಾಗಿ ವಿದ್ಯಾರ್ಥಿಗಳಿಗೆ ಕೊಡಮಾಡಿದ ಸಮವಸ್ತ್ರಗಳನ್ನು ವಿತರಣೆ […]
World Yoga Day celebrated at UBMC English Medium School, Kundapur ಕುಂದಾಪುರ ; ದಿನಾಂಕ 21.06.2026 ರಂದು ಯುಬಿಎಂಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಯೋಗ ಶಿಕ್ಷಕಿ ವೀಣಾ ಮತ್ತು ಸಹ ಶಿಕ್ಷಕಿ ಲತಾ ಮಕ್ಕಳಿಗೆಲ್ಲ ಯೋಗಾಸನದ ಹಲವಾರು ಆಸನಗಳನ್ನು ಕಲಿಸಿಕೊಟ್ಟರು. ವಿದ್ಯಾರ್ಥಿಗಳೆಲ್ಲರೂ ಅತ್ಯಂತ ಉತ್ಸುಕರಾಗಿ ವಿವಿಧ ಭಂಗಿಗಳ ಆಸನಗಳನ್ನು ಮಾಡುತ್ತಾ ಹರ್ಷಿಸಿದರು. ಶಾಲಾ ಪ್ರಾಂಶುಪಾಲೆ ಅನಿತಾ ಆಲಿಸ್ ಡಿಸೋಜರವರು ಸದೃಢ ದೇಹ ಮತ್ತು ಸದೃಢ ಮನಸ್ಸಿಗೆ ಯೋಗಾಭ್ಯಾಸ ಮಾಡುವುದನ್ನು […]
ಮಂಗಳೂರು/ಉಡುಪಿ: ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ನೂತನ ಕೆಪಿಸಿಸಿ ಅಧ್ಯಕ್ಷರಾದ ಬಿ ಕೆ ಹರಿಪ್ರಸಾದ್ ಅವರಿಗೆ ಮಂಗಳೂರಿನಲ್ಲಿ ಕಥೊಲಿಕ್ ಸಭಾ ಮಂಗಳೂರು, ಹಾಗೂ ಉಡುಪಿ ಪ್ರದೇಶ ವತಿಯಿಂದ ಮಂಗಳವಾರ ಮನವಿ ನೀಡಲಾಯಿತು. ಕರಾವಳಿಯಲ್ಲಿ ಕ್ರೈಸ್ತ ಸಮುದಾಯವನ್ನು ಪ್ರತಿನಿಧಿಸುತ್ತಿರುವ ಐವನ್ ಡಿಸೋಜಾ ಅವರು ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ, ಪರಿಷತ್ ಮುಖ್ಯ ಸಚೇತಕಾರಾಗಿ ಕ್ರೈಸ್ತ ಅಭಿವೃದ್ದಿ ನಿಗಮದಲ್ಲಿ ವಿವಿಧ ರೀತಿಯ ಜವಾಬ್ದಾರಿಯನ್ನು ವಹಿಸಿಕೊಂಡಿರುತ್ತಾರೆ. ಕಾಂಗ್ರೆಸ್ ಪಕ್ಷದ ಗೆಲುವಿಗೆ ಕ್ರೈಸ್ತ ಸಮುದಾಯದ […]
ಕುಂದಾಪುರ; ಸೈoಟ್ ಮೇರಿಸ್ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಜೂನ್ 23 ರಂದು ವಿದ್ಯಾರ್ಥಿ ಸಂಸತ್ತು ಉದ್ಘಾಟನಾ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರೋಜರಿ ಚರ್ಚಿನ ಪ್ರಧಾನ ಧರ್ಮಗುರುಗಳು ಹಾಗೂ ವಿದ್ಯಾಸಂಸ್ಥೆಗಳ ಜಂಟಿ ಕಾರ್ಯದರ್ಶಿ ಅ। ವಂ। ಫಾ. ಪಾವ್ಲ್ ರೇಗೊ ಮಾತನಾಡಿ ಕಾಲೇಜು ಸಂಸತ್ತಿನ ಅಧ್ಯಕ್ಷರು ಹಾಗೂ ಎಲ್ಲಾ ಪದಾಧಿಕಾರಿಗಳಿಗೆ ಶುಭ ಹಾರೈಸಿ, “ನಾಯಕತ್ವ ಗುಣಗಳು ನಿಮ್ಮಲ್ಲಿ ಬೆಳೆಯಬೇಕು.ಇಂದು ನೀವು ಸ್ವೀಕರಿಸಿರುವ ಈ ಹುದ್ದೆ ಸಮಾಜ ಸೇವೆಯಲ್ಲಿ ತೊಡಗುವಂತಾಗಬೇಕು.ನೀವು ವಿದ್ಯಾ ಸಂಸ್ಥೆಯಲ್ಲಿ ಮೀನುಗಬೇಕು, ನಿಮ್ಮ ಗುರಿ ಸಾಕಾರಗೊಳ್ಳಬೇಕು, […]
ಮಂಗಳೂರು ನಂತೂರ್ ಪೊಲೀಸ್ ಚೌಕಿ ಮತ್ತು ಮಂಗಳೂರು ಕಡೆ ಹೋಗುವ ಬಸ್ಸು ತಂಗುದಾಣ ಸಮೀಪ ಕಳೆದ ಮೂರು ವರ್ಷಕ್ಕೂ ಮೇಲು ಗೈಲ್ ಕಂಪನಿ ಯವರು ರಸ್ತೆ ಪಕ್ಕಾ ಚರಂಡಿ ಯಲ್ಲಿ ಪೈಪ್ ರಾಶಿ ಹಾಕಿದ್ದು ಇಲ್ಲೇ ಕಸದ ರಾಶಿ ಬಿದ್ದು ಬಿದ್ದು ಚರಂಡಿ ಬ್ಲಾಕ್ ಆಗಿದ್ದು ಇದರಿಂದ ನೀರು ರಸ್ತೆ ಯಲ್ಲೇ ಹರಿದು ಹೋಗಿ ವಾಹನ ಸವರಾರರಿಗೆ ಮತ್ತು ಪಾದಚಾರಿ ಗಳಿಗೆ ತುಂಬಾ ತೊಂದರೆ ಯಾಗುತ್ತದೆ ಈ ಬಗ್ಗೆ ಇಲ್ಲಿನ ಸ್ಥಳೀಯರು ಸಂಬಂಧ ಪಟ್ಟ ಇಲಾಖೆ ಗಮನಕ್ಕೆ […]
ಮಂಗಳೂರು; 2009 ರಲ್ಲಿ ಆರಂಭವಾದಾಗಿನಿಂದ, ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್, ಮಂಗಳೂರಿನಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳಿರುವ ವ್ಯಕ್ತಿಗಳನ್ನು ರಕ್ಷಿಸಿ , ಆರೈಕೆ ಮಾಡಿ, ಗುಣಪಡಿಸಿ, ಪುನರ್ವಸತಿ ಕಲ್ಪಿಸುವ ಮೂಲಕ ಅವರಿಗೆ ಹೊಸ ಜೀವನವನ್ನು ನೀಡುವ ಕಾಯಕಕ್ಕೆ ಸಮರ್ಪಿತವಾಗಿದೆ. ಕಳೆದ 17 ವರ್ಷಗಳಲ್ಲಿ, ಸಂಸ್ಥೆಯು 1,800 ಕ್ಕೂ ಹೆಚ್ಚು ರೋಗಿಗಳನ್ನು ಗುಣಪಡಿಸಿ ಮತ್ತು ಅವರ ಕುಟುಂಬಗಳಿಗೆ ಮರಳಿ ಮತ್ತೆ ಒಗ್ಗೂಡಿಸುವಲ್ಲಿ ಯಶಸ್ವಿಯಾಗಿದೆ.ಮಾನಸಿಕ ಅಸ್ವಸ್ಥೆಯ ಆರೋಗ್ಯ ಉಪಕ್ರಮಗಳ ಜೊತೆಗೆ, ಸ್ನೇಹಾಲಯವು ಕಳೆದ ಎರಡು ವರ್ಷಗಳಲ್ಲಿ ಸಮುದಾಯದಲ್ಲಿ ವ್ಯಸನ ಮುಕ್ತ ಕೇಂದ್ರವನ್ನು ಸ್ಥಾಪಿಸಿ […]
ಕುಂದಾಪುರ; ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕುಂದಾಪುರ ಇಲ್ಲಿನ ಎಂಬಿಎ ವಿಭಾಗದ ವತಿಯಿಂದ ಒಂದು ದಿನದ ಇಂಡಸ್ಟ್ರಿಯಲ್ ವಿಸಿಟ್ ಕೈಗೊಳ್ಳಲಾಯಿತು. ಈ ಪ್ರಯುಕ್ತ ಸ್ಥಳೀಯ ACEBOND ಕೈಗಾರಿಕೆಗೆ ಭೇಟಿ ನೀಡಿದರು. ಈ ಭೇಟಿಯ ವಿದ್ಯಾರ್ಥಿಗಳಿಗೆ ಕೈಗಾರಿಕಾ ಕಾರ್ಯ ವೈಖರಿ ಹಾಗೂ ನಿರ್ವಹಣಾ ಪದ್ಧತಿಗಳ ಬಗ್ಗೆ ಪ್ರಾಯೋಗಿಕ ಜ್ಞಾನ ಪಡೆದುಕೊಂಡರು . ಭೇಟಿಯ ವೇಳೆ ವಿದ್ಯಾರ್ಥಿಗಳು ಉತ್ಪಾದನಾ ಪ್ರಕ್ರಿಯೆ, ಗುಣಮಟ್ಟ ನಿಯಂತ್ರಣ, ಮಾನವ ಸಂಪನ್ಮೂಲ ನಿರ್ವಹಣೆ, ಮಾರುಕಟ್ಟೆ ತಂತ್ರಗಳು ಹಾಗೂ ಹಣಕಾಸು ನಿರ್ವಹಣೆಯ ಕುರಿತು ಕಂಪನಿಯ ಅಧಿಕಾರಿಗಳಿಂದ ಮಾಹಿತಿ […]
ಕುಂದಾಪುರ ; “ಮನಸ್ಸನ್ನು ಪ್ರಶಾಂತವಾಗಿರಿಸಲಿಕ್ಕೆ ಒಂದೇ ಮಾರ್ಗವೆಂದರೆ ಪ್ರಾಣಶಕ್ತಿಯ ನಾಲ್ಕು ಮೂಲಗಳನ್ನು ನಮ್ಮದಾಗಿಸಿಕೊಳ್ಳುವುದು- ಸಮತೋಲಿತ ಆಹಾರ, ಹಿತ-ಮಿತದ ನಿದ್ದೆ, ಉಸಿರಿನ ಹಿಡಿತ, ಮತ್ತು ಧ್ಯಾನಸ್ಥ ಮನಸ್ಸು-ಈ ಸರಳ ಅಂಶಗಳನ್ನು ಅರಿತು ವಿದ್ಯಾರ್ಥಿಗಳು ಅವುಗಳನ್ನು ಹಂತಹಂತವಾಗಿ ಪಾಲಿಸಬೇಕು” ಎಂದು ಆರ್. ಎನ್..ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ ಯೋಗ-ಪ್ರಾಣಾಯಾಮ ತರಬೇತಿ ಕಾರ್ಯಕ್ರಮದಲ್ಲಿ ಬೆಂಗಳೂರಿನ ಪ್ರಖ್ಯಾತ “ಆರ್ಟ್ ಅಫ್ ಲಿವಿಂಗ್” ನ ಉಡುಪಿ ಶಾಖೆಯ ಯೋಗ ಶಿಕ್ಷಕಿ ಶೈಲಜಾ ಕೃಷ್ಣಾನಂದ ರವರು ವಿದ್ಯಾರ್ಥಿಗಳಿಗೆ ತಿಳಿಸಿದರು.ಕಾಲೇಜಿನ […]

