

ಕುಂದಾಪುರ, ಜು.19: ಕೊಟೇಶ್ವರ ಕಟ್ಕರೆ ಕಾರ್ಮೆಲ್ ಮೇಳದ ಧರ್ಮಗುರುಗಳ ಬಾಲ ಯೇಸುವಿನ ಆಶ್ರಮದಲ್ಲಿ ತಮ್ಮ ಮೇಳದ ಪಾಲಕಿಯಾದ ಕಾರ್ಮೆಲ್ ಮಾತೆಯ ಹಬ್ಬವನ್ನು ಜು. 18 (2025) ರಂದು ಭಕ್ತಿಪೂರ್ವಕವಾದ ದಿವ್ಯ ಬಲಿದಾನ ಅರ್ಪಿಸುವ ಮೂಲಕ ಆಚರಿಸಲಾಯಿತು.
ಹಬ್ಬದ ಈ ಬಲಿದಾನವನ್ನು ಕಾರ್ಮೆಲ್ ಮೇಳದ ಗೋವಾ ಮಂಗಳೂರು ವಿಭಾಗದ ಕೌನ್ಸಿಲರ್, ೠಷಿ ವನದ ಮುಖ್ಯಸ್ಥರಾದ ವಂ।ಆರ್ಚಿಬಾಲ್ಡ್ ಗೊನ್ಸಾಲ್ವಿಸ್ ಇವರ ನೇತ್ರತ್ವದಲ್ಲಿ ನಡೆಯಿತು. ಅವರು ಕಾರ್ಮೆಲ್ ಮಾತೆಯ ವಿಶೇಷತೆಯನ್ನು ತಿಳಿಸಿ “ಮೇರಿ ಮಾತೆ ಎಲ್ಲೆಲ್ಲಿ ಪ್ರತ್ಯಕ್ಷಗೊಂಡೊಳೊ ಅಲ್ಲಿಯ ಹೆಸರಿನಲ್ಲಿ ಮೇರಿ ಮಾತೆಯನ್ನು ಕರೆಯುತ್ತೇವೆ, ಹಾಗೆ ಮೇರಿ ಮತ್ತು ಕಾರ್ಮೆಲ್ ಗುಡ್ಡಕ್ಕೆ ಬಹಳ ಪುರಾತನ ಸಂಬಂಧ ಇದೆ, ಸಂತ ಜೋಸೆಫ್ ರವರು ಯೇಸು ಮತ್ತು ಮೇರಿ ಮಾತೆಯನ್ನು ಸಂರಕ್ಷಿಸಿ ವಾಪಾಸು ಇಸ್ರೇಲ್ ಮರಳುವಾಗ ಈ ಪವಿತ್ರ ಕಾರ್ಮೆಲ್ ಗುಡ್ಡವನ್ನು ಹತ್ತಿ ನಜರೆತ್ ಊರಿಗೆ ಬಂದರು, ಎಲಿಯಾ ಪ್ರವಾದಿಯ ಕಾಲದಿಂದಲೂ ಈ ಗುಡ್ಡಕ್ಕೆ ಬಹಳ ಸಂಬಂಧ ಇದೆ, ಎಲಿಯಾ ದೇವರನ್ನು ಕಾಣಲು, ಮಾತನಾಡಲು ಈ ಗುಡ್ಡದ ತುದಿಗೆ ತಲುಪುತಿದ್ದರು, ಹಾಗೇ ಇಸ್ರೇಲ್ ನಲ್ಲಿ ಮಳೆ ಬರದಾಗ ಮಳೆಗಾಗಿ ಪ್ರಾರ್ಥಿಸಿದಾಗ ಬೇಕಾದಷ್ಟು ಮಳೆ ಬಂದಿತ್ತು, ಕಾರ್ಮೆಲ್ ಮೇಳದ ಸ್ಥಾಪಕ ಸೈಮನ್ ಸ್ಟಾಕ್ ಕಾರ್ಮೆಲ್ ಮೇಳದ ಧರ್ಮಗುರುಗಳಿಗೆ ಸಂಕಷ್ಟ ಎದುರಾದಾಗ, ಕಾರ್ಮೆಲ್ ಮಾತೆಯಲ್ಲಿ ಪ್ರಾಥಿಸುತ್ತಾನೆ, ಆವಾಗ ಕಾರ್ಮೆಲ್ ಮಾತೆ ಪ್ರತ್ಯಕ್ಷವಾಗಿ, ಬೆಂತಿಣ್ ಎಂಬ ಪವಿತ್ರ ಪೊಷಾಕು ನೀಡುತ್ತಾರೆ, ಅದನ್ನು ಧರಿಸಿದಾಗ ಅವರ ಎಲ್ಲಾ ಸಂಕಷ್ಟಗಳು ನಿವಾರಣೆ ಆಗುತ್ತವೆ, ಆದರೆ ನಾವು ಬೆಂತಿಣ್ ಗಳನ್ನು ಧರಿಸಿದ ಕೂಡಲೇ ನಮಗೆ ರಕ್ಷಣೆ ದೊರಕುವುದಿಲ್ಲ, ಮೇರಿ ಮಾತೆಯ ನಡತೆಯಂತೆ, ಅವಳ ಗುಣಗಳನ್ನು ಅಳವಡಿಸಿಕೊಂಡು ಜೀವನ ನಡೆಸಬೇಕಾಗುತ್ತದೆ. ಎಲಿಯಾ ಪ್ರವಾದಿಗೆ ಕಾರ್ಮೆಲ್ ಗುಡ್ಡ ಹತ್ತಿ ಪ್ರಾಥಿಸಿದಾಗ ದೇವರು ಪ್ರತ್ಯಕ್ಷನಾದ, ಹಾಗೆ ನಾವು ಕಾರ್ಮೆಲ್ ಮಾತೆಯ ಸಹಾಯದಿಂದ ಅಧ್ಯಾತ್ಮಿಕ ಗುಡ್ಡವನ್ನು ಹತ್ತಿ ನಮ್ಮ ಜೀವನ ಪಾವನ ಪಡಿಸೋಣ –ಎಂದು ಸಂದೇಶ ನೀಡಿದರು. ಅವರನ್ನು ಸನ್ಮಾನಿಸಲಾಯಿತು.
ಕುಂದಾಪುರ ವಲಯ ಪ್ರಧಾನರಾದ ಅ|ವಂ|ಪಾವ್ಲ್ ರೇಗೊ ಹಬ್ಬದ ಶುಭಾಶಯಗಳನ್ನು ನೀಡಿದರು. ಉಡುಪಿ ಧರ್ಮಪ್ರಾಂತ್ಯದ ಎಪಿಸ್ಕೊಲ್ ವಿಕಾರ್ ಅ।ವಂ।ಜೋ ತಾವ್ರೊ ದಾನಿಗಳನ್ನು ಗೌರವಿಸಿದರು, ಕುಂದಾಪುರ ವಲಯದ ಎಲ್ಲಾ ಇಗರ್ಜಿಗಳ ಎಲ್ಲಾ ಧರ್ಮಗುರುಗಳು, ಕಟ್ಕೆರೆ ಕಾರ್ಮೆಲ್ ಮೇಳದ ಧರ್ಮಗುರುಗಳು, ಇತರ ಕಡೆಗಳಿಂದ ಬಂದತಹ ಕಾರ್ಮೆಲ್ ಮೇಳದ ಧರ್ಮಗುರುಗಳು, ಅತಿಥಿ ಧರ್ಮಗುರುಗಳು ದಿವ್ಯ ಬಲಿ ಪೂಜೆಯನ್ನು ಅರ್ಪಿಸಿದರು. ಕಟ್ಕೆರೆ ಆಶ್ರಮದ ಧರ್ಮಗುರುಗಳಾದ ವಂ।ಜೋನ್ ಲೋಬೊ, ವಂ। ಹಿಲೆರಿ ಸಹಕರಿಸಿದರು.
ಕಾರ್ಮೆಲ್ ಮಾತೆಯ ಪೋಷಾಕು (ಬೆಂತಿಣ್) ಇವಗಳನ್ನು ಆಶಿರ್ವದಿಸಿ ಭಕ್ತರಿಗೆ ನೀಡಲಾಯಿತು. ಕೊಟೇಶ್ವರ ಇಗರ್ಜಿ ಮತ್ತು ಕಟ್ಕರೆ ಬಾಲಯೇಸುವಿನ ಆಶ್ರಮದ ಮುಖ್ಯಸ್ಥರಾದ ವಂ|ಧರ್ಮಗುರು ಪ್ರವೀಣ್ ಪಿಂಟೊ ಸ್ವಾಗತಿಸಿ ಕೊನೆಗೆ ವಂದಿಸಿದರು. ಕಟ್ಕೆರೆ ಬಾಲ ಯೇಸುವಿನ ಗಾಯನ ಪಂಗಡ ದಿವ್ಯ ಬಲಿಪೂಜೆಗೆ ಭಕ್ತಿ ಗೀತೆ ಹಾಡಿ ಸಹಕರಿಸಿತು. ಈ ಕಾರ್ಮೆಲ್ ಮಾತೆಯ ಹಬ್ಬಕ್ಕೆ ಅನೇಕ ಧರ್ಮಭಗಿನಿಯಯರು, ಧರ್ಮಗುರುಳಾಗಲು ತರಬೇತಿ ಪಡೆಯುವ ಕಾರ್ಮೆಲ್ ಸಹೋದರರು ಹಾಗೂ ಕುಂದಾಪುರ ವಲಯ ಹಾಗೂ ಇತರ ಕಡೆಗಳಿಂದ ಭಕ್ತಾಧಿಗಳು ಈ ಹಬ್ಬದಲ್ಲಿ ಪಾಲ್ಗೊಂಡರು.






























































































