ಮೂಡ್ಲಕಟ್ಟೆ ಐಎಂಜೆ ಸಮೂಹ ವಿದ್ಯಾಸಂಸ್ಥೆಗಳ ಅಡಿಯಲ್ಲಿ ಬರುವ ವಿದ್ಯಾ ಅಕಾಡೆಮಿ ಶಾಲೆಯಲ್ಲಿ ಪೋಷಕರಿಗಾಗಿ ಓರಿಯಂಟೇಷನ್ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವು ಪೋಷಕರಿಗೆ ಮಕ್ಕಳ ಬೆಳೆವಣಿಗೆ, ಭಾವನಾತ್ಮಕ ಚಟುವಟಿಕೆಗಳು ಹಾಗೂ ಶೈಕ್ಷಣಿಕ ಪ್ರಗತಿಯ ಬಗ್ಗೆ ಸ್ಪಷ್ಟ ಅರಿವನ್ನು ನೀಡುವ ಗುರಿಯನ್ನು ಹೊಂದಿತ್ತು. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಮಾನಸಿಕ ಆರೋಗ್ಯ ಸಲಹೆಗಾರರಾಗಿ ಸೇವೆ ನೀಡುತ್ತಿರುವ ಶ್ರೀ ಗಿರೀಶ್ ಎಂ ಎನ್ ಅವರು ಭಾಗವಹಿಸಿದ್ದರು. ಅವರು ಮಕ್ಕಳಲ್ಲಿ ಕಂಡುಬರುವ ಆತ್ಮವಿಶ್ವಾಸದ ಕೊರತೆ, ಒತ್ತಡ, ತಂತ್ರಜ್ಞಾನದ ಇತಿಮಿತಿಯ ಬಳಕೆ ಮುಂತಾದ ಸಮಸ್ಯೆಗಳ […]
ಕುಂದಾಪುರ; “ಜೀವನದ ಆಧಾರಸ್ತಂಭ ಕಟ್ಟಲು ಮುಖ್ಯವಾಗುವ ಪಿ.ಯು.ಸಿ ಹಂತ ವಿದ್ಯಾರ್ಥಿಗಳೆದರು ಹಲವು ಕ್ಷೇತ್ರಗಳನ್ನು ತೆರೆದಿಡುತ್ತದೆ. ಸಾಂಸ್ಕ್ರತಿಕ ಮತ್ತು ಆಟೋಟಗಳಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದರೂ, ಭವಿಷ್ಯದಲ್ಲಿ ಯಾವುದೇ ಉದ್ಯೋಗಕ್ಕೆ ಹೋದ ಮೇಲೆ ಶಿಕ್ಷಣದ ಹಿನ್ನೆಲೆ ಇದ್ದರೆ ಮಾತ್ರ ಯಶ: ಪಡೆಯಬಹುದು ” ಎಂದು ಕಿರುತೆರೆ ನಟಿ, ರಿಯಾಲಿಟಿ ಶೋ ಮಜಾಭಾರತ, ರಾಜಾ ರಾಣಿ ಖ್ಯಾತಿಯ ಪ್ರಿಯಾಂಕಾ ಕಾಮತ್ ರವರು ಕುಂದಾಪುರದ ಆರ್. ಎನ್. ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ನವಸಂಕೇತ್- ಫ್ರೆಷರ್ಸ್ ಫಿಯೆಸ್ಟಾ ವನ್ನು ಉದ್ಘಾಟಿಸಿ ಮಾತನಾಡಿದರು.ಮುಖ್ಯ ಅತಿಥಿಯಾಗಿ […]
ಕುಂದಾಪುರ: ಜಾಗತಿಕ ಮಟ್ಟದಲ್ಲಿ ಮೊತ್ತ ಮೊದಲಬಾರಿಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಿದ್ದು, ಫಲಾನುಭವಿಗಳ ಸಂಖ್ಯೆ 500 ಕೋಟಿ ದಾಟಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕುಂದಾಪುರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಸಂಭ್ರಮಾಚರಣೆ ಮಾಡಿದರು .ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ, ಜಿಲ್ಲಾ ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ಮೊಳಹಳ್ಳಿ ದಿನೇಶ್ ಹೆಗ್ಡೆ ಮಾತನಾಡಿ, ರಾಜ್ಯ ಸರ್ಕಾರವು ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ನೀಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ಮುನ್ನುಡಿ ಬರೆದಿದೆ. ದೇಶದ ಇತಿಹಾಸದಲ್ಲಿ […]
ತಲ್ಲೂರು ಸಂತ ಫ್ರಾನ್ಸಿಸ್ ದೇವಾಲಯದಲ್ಲಿ ದಿನಾಂಕ 13/7/2025 ರಂದು “ದಂಪತಿಗಳ ದಿನಾಚರಣೆ ” ಯನ್ನು ಕುಟುಂಬ ಆಯೋಗದ ನೇತೃತ್ವದಲ್ಲಿ ಬಹಳ ಸಂಭ್ರಮದಿಂದ ಆಚರಿಸಲಾಯಿತು. ಅಂದು ಬೆಳಿಗ್ಗೆ ದಂಪತಿಗಳಿಗಾಗಿ ದಿವ್ಯ ಬಲಿಪೂಜೆಯನ್ನು ,ಉಡುಪಿ ಡಯಾಸಿಸಿನ ಜುಡಿಷಿಯಲ್ ವಿಕಾರ್ ಹಾಗೂ ಪ್ಯಾರಿಷ್ ಆಡಳಿತಾಧಿಕಾರಿ (ಪಾಂಬೂರ್) ಅತೀ ವಂದನೀಯ ಫಾ.ಡಾI ರೋಶನ್ ಡಿಸೋಜ ನೆರವೇರಿಸಿ,ದಂಪತಿಗಳಿಗಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು ಹಾಗೂ ಅವರಿಗಾಗಿ ಹೊಸದಾಗಿ ಪ್ರತಿಜ್ಞಾ ವಿಧಿಯನ್ನು ನೆರವೇರಿಸಿದರು. ತದನಂತರ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಸಂಪನ್ಮೂಲ ವ್ಯಕ್ತಿಗಳಾಗಿ, ಉಡುಪಿ ಡಯಾಸಿಸ್ ನ ಕುಟುಂಬ […]
ಮಂಗಳೂರು; ಕಾದಂಬರಿ ಚರಿತ್ರೆ ಅಲ್ಲ, ಆದರೆ ಕಾದಂಬರಿಯಲ್ಲಿ ಚರಿತ್ರೆ ಇರಬಹುದು. ಕಾದಂಬರಿ ಸವಿಸ್ತಾರವಾಗಿ ಜೀವನವನ್ನು ವಿಶ್ಲೇಷಣೆ ಮಾಡಬಲ್ಲುದು. ಆಂಜೆಲ್ 75 ವರ್ಷಗಳ ಹಿಂದಿನ ಜನಜೀವನವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದೆ. ಕೊಂಕಣಿ ಅಕಾಡೆಮಿ ಒಂದು ಔಚಿತ್ಯಪೂರ್ಣ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರಿಂದ ಮುಂದೆ ಸಾಹಿತ್ಯ ರಚಿಸುವವರಿಗೆ ಪ್ರೇರಣೆ ದೊರೆಯಲಿದೆ. ಅಕಾಡೆಮಿ ಸಾಹಿತ್ಯಾಸಕ್ತ ಯುವಜನತೆ ಹಾಗೂ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಕ್ರಮ ವಹಿಸಿದರೆ ಈ ಪರಂಪರೆ ಮುಂದುವರಿಯಲಿದೆ ಎಂದು ಡಾ ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ್ ಡಾ ಗಣನಾಥ ಶೆಟ್ಟಿ ಎಕ್ಕಾರು ಅಭಿಪ್ರಾಯ […]
ಕುಂದಾಪುರ: ಕರಾವಳಿಯಲ್ಲಿ ಕೋಮು ಸೌಹಾರ್ದತೆ ಶಾಂತಿಗಾಗಿ ಸುನ್ನೀ ಯುವಜನ ಸಂಘದಿಂದ ಕುಂದಾಪುರದಲ್ಲಿ ಸೌಹಾರ್ದ ಸಂಚಾರ ಆರಂಭವಾಯಿತು. ಇದಕ್ಕೆ ಕುಂದಾಪುರ ಜಾಮೀಯ ಮಜೀದಿಯ ಆವರಣದಲ್ಲಿ ಶ್ವೇತ ವರ್ಣದ ಕೊಡೆಗಳನ್ನು ನೀಡುವ ಮುಖಾಂತರ ಚಾಲನೆ ನೀಡಲಾಯಿತು. ಅಲ್ಲಿಂದ ಸೌಹಾರ್ದ ಸಂಚಾರ ಆರಂಭವಾಗಿ ಕಾಲ್ನಡೆಗೆಯಲ್ಲಿ ಕುಂದಾಪುರ ನಗರ ಮುಖಾಂತರ ಶಾಸ್ತ್ರಿ ಸರ್ಕಲ್ನಲ್ಲಿ ಸಭಾ ಕಾರ್ಯಕ್ರಮ ನಡೆಯಿತು.ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷ ಮೌಲಾನಾ ಶಾಫಿ ಸಹಾಧಿ ಮಾತನಾಡಿ “ಪವಿತ್ರ ಕುರಾನ್ ಹಿಂಸೆಯನ್ನು ಆರಾಧಿಸುವುದಿಲ್ಲ. ಪೈಗಂಬರ್ ಜೀವನ ಚರಿತ್ರೆಯನ್ನು ಸರಿಯಾಗಿ ಅಧ್ಯಯನ ಮಾಡಿದ […]
ಹಳ್ನಾಡಿನ ತುಳಸಿ ವಿದ್ಯಾ ಮಂದಿರ ಆಂಗ್ಲಮಾಧ್ಯಮ ಶಾಲೆಯಲ್ಲಿ ವಿದ್ಯೆ ಕಲಿಸಿದ ಗುರುಗಳಿಗೆ ವಿದ್ಯಾರ್ಥಿಗಳು ಕೃತಜ್ಞತೆಯನ್ನು ಸಲ್ಲಿಸುವ ಅರ್ಥಪೂರ್ಣವಾದ “ವ್ಯಾಸಪೂರ್ಣಿಮೆ” (ಗುರುಪೂರ್ಣಿಮೆ) ಕಾರ್ಯಕ್ರಮವನ್ನು ಆಚರಿಸಲಾಯಿತು.ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶಂಕರನಾರಾಯಣ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ವೆಂಕಟರಾಮ್ ಭಟ್ ರವರು ವೇದವ್ಯಾಸರ ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸಿ ಮಾತನಾಡುತ್ತಾ, ಮಕ್ಕಳು ಸರಿಯಾದ ವ್ಯಕ್ತಿಗಳ ಜೊತೆ ಇರಬೇಕು. ಅವರು ಬೇರೆ ಯಾರೂ ಅಲ್ಲಾ ನಮ್ಮ ಗುರುಗಳು, ಹಾಗೂ ತಂದೆತಾಯಿಗಳು. ಮಕ್ಕಳಲ್ಲಿ ಸಂಸ್ಕತಿ ಬಹಳ ಮುಖ್ಯ. ಈಗ ನಾವು ಸಂಸ್ಕೃತಿಯನ್ನು ಮೊಬೈಲ್ ನಿಂದ […]
ಕಥೊಲಿಕ್ ಸಭಾ ಮಂಗಳೂರು ಪ್ರದೇಶ (ರಿ) ಅಲ್ಪಸಂಖ್ಯಾತರಿಗೆ ಲಭ್ಯವಿರುವ ಸರ್ಕಾರಿ ಸೌಲಭ್ಯಗಳ ಕುರಿತು ಕಾರ್ಯಾಗಾರವನ್ನು ಆಯೋಜಿಸಿತು. ಉದ್ಘಾಟನಾ ಸಮಾರಂಭದಲ್ಲಿ, ಎಂಎಲ್‌ಸಿ, ಐವನ್ ಡಿಸೋಜಾ, ಕ್ರೈಸ್ತ ಸಮುದಾಯದ ಫಲಾನುಭವಿಗಳು ಅವರಿಗೆ ಸರ್ಕಾರ ಕೊಡುವ ಸೌಲಭ್ಯಗಳ ಮಾಹಿತಿಯನ್ನು ಪಡೆದು ಅದನ್ನು ಪಡೆಯಲು ಪ್ರಯತ್ನಿಸಬೇಕು ಎಂದರು ವಿಧಾನಪರಿಷತ್ ಸದಸ್ಯ ಶ್ರೀ ಐವನ್ ಡಿಸೋಜಾ. ಅಲ್ಪಸಂಖ್ಯಾತರಿಗೆ ಸರ್ಕಾರದ ವತಿಯಿಂದ ಲಭಿಸುವ ಸೌಲಭ್ಯಗಳ ಮಾಹಿತಿ ಕಾರ್ಯಾಗಾರವನ್ನು ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ ರಿ,ಇದರ ಸಹಯೋಗದೊಂದಿಗೆ ಆಯೋಜಿಸಲಾಗಿದ್ದು ಅದನ್ನು ಉದ್ಘಾಟಿಸಿ ತಮ್ಮ ಸಂದೇಶವನ್ನು ನೀಡಿದರು. ಕಥೊಲಿಕ್ ಸಭೆಯ […]
ಉಡುಪಿ ಡಯಾಸಿಸ್ 2025 ರ ವೈದ್ಯರ ದಿನವನ್ನು ಅತ್ಯಂತ ಗೌರವ, ಪ್ರೀತಿಪೂರ್ವಕ ಮತ್ತು ಕೃತಜ್ಞತೆಯಿಂದ ಆಚರಿಸಿತು, “ಮುಖವಾಡದ ಹಿಂದೆ: ವೈದ್ಯರನ್ನು ಯಾರು ಗುಣಪಡಿಸುತ್ತಾರೆ?” ಎಂಬ ಸ್ಪೂರ್ತಿದಾಯಕ ವಿಷಯದ ಅಡಿಯಲ್ಲಿ, “ಮೌನ ನೋವುಗಳು: ವೈದ್ಯರಲ್ಲಿ ಮಾನಸಿಕ ಆರೋಗ್ಯ ಸವಾಲುಗಳು” ಎಂಬ ವಿಷಯದ ಮೇಲೆ ವಿಶೇಷ ಗಮನ ಹರಿಸಲಾಯಿತು. ಈ ಕಾರ್ಯಕ್ರಮವು ಜುಲೈ 6, 2025 ರಂದು ನಡೆಯಿತು, ವೈದ್ಯರು, ಪಾದ್ರಿಗಳು ಮತ್ತು ಸಮುದಾಯ ನಾಯಕರನ್ನು ಒಟ್ಟುಗೂಡಿಸಿ ವೈದ್ಯಕೀಯ ಭ್ರಾತೃತ್ವವನ್ನು ಅವರ ನಿಸ್ವಾರ್ಥ ಸೇವೆಗಾಗಿ ಗೌರವಿಸಿತು. ದಿನವು ಬೆಳಿಗ್ಗೆ 9:00 […]

