ಮೂಡಲಕಟ್ಟೆಯ ಐ ಎಂ ಜೆ ಇನ್ಸ್ಟಿಟ್ಯೂಷನ್ಸ್ ನಲ್ಲಿ ನೂತನ ವ್ಯಾಯಾಮ ಶಾಲೆ ಯನ್ನು ಚೇರ್ಮನ್ ರಾದ ಶ್ರೀ ಸಿದ್ಧಾರ್ಥ್ ಜೆ ಶೆಟ್ಟಿ ಅವರು ವಿದ್ಯಾರ್ಥಿಗಳೊಂದಿಗೆ ಉದ್ಘಾಟಿಸಿದರು. ಕೇಬಲ್ ಕ್ರಾಸ್ಓವರ್, ಪೆಕ್ ಡೆಕ್ ಫ್ಲೈ ಮೆಷಿನ್,ಲೆಗ್ ಪ್ರೆಸ್ ಮೆಷಿನ್, ಲ್ಯಾಟ್ ಪುಲ್ಡೌನ್ ಮೆಷಿನ್ ಮುಂತಾದ ಹಲವಾರು ಉಪಕಾರಣಗಳನ್ನು ಈ ವ್ಯಾಯಮ ಶಾಲೆಯು ಒಳಗೊಂಡಿದೆ ಮತ್ತು ವಿದ್ಯಾರ್ಥಿಗಳ ಇತ್ತೀಚೆಗಿನ ಅವಶ್ಯಕತೆಗೆ ತಕ್ಕಂತೆ ಈ ಜಿಮ್ ವಿನ್ಯಾಸ ಗೊಳಿಸಲಾಗಿದ್ದು ಅನುಭವೀ ತರಬೇತುದಾರರಿಂದ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದೆಂದು ಫಿಸಿಕಲ್ ಡೈರೆಕ್ಟರ್ ಗಳಾದ ಡಾ.ಆರ್ […]
ಕುಂದಾಪುರ: ಜುಲೈ 21ರಂದು ಇಲ್ಲಿನ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಗಣಕಯಂತ್ರ ವಿಭಾಗ ಮತ್ತು ಪ್ಲೇಸ್ಮೆಂಟ್ ಸೆಲ್ ಇವುಗಳ ಸಹಯೋಗದೊಂದಿಗೆ ಮ್ಯಾಜಿಕ್ ಬಸ್ ಫೌಂಡೇಶನ್ ಐದು ದಿನಗಳ ಸಾಫ್ಟ್ ಸ್ಕಿಲ್ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಪ್ರಾಂಶುಪಾಲರಾದ ಡಾ. ಶುಭಕರಾಚಾರಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಗಣಕಯಂತ್ರ ವಿಭಾಗ ಮುಖ್ಯಸ್ಥರು ಪ್ರೊ. ಗಣೇಶ್ ಕೆ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕಿಗಳಾಗಿ ಮ್ಯಾಜಿಕ್ ಬಸ್ ಫೌಂಡೇಶನ್ ನ ನವೀನ್ ಮತ್ತು ರಾಹುಲ್ ಉಪಸ್ಥಿತರಿದ್ದರು.ಕಂಪ್ಯೂಟರ್ ಸೈನ್ಸ್ ವಿಭಾಗದ ಉಪನ್ಯಾಸಕಿ ಶ್ರೀನಿಧಿ ಹೆಗ್ಡೆ […]
ಕೊಂಕಣಿಯ ವೀರ ಮಹಿಳೆ ನಾಮಾಂಕಿತ ಸಾಹಿತಿ, ಪ್ರಕಾಶಕಿ, ಸಿಂಪ್ರೊಜಾ ಫಿಲೊಮಿನಾ ಗ್ಲೇಡಿಸ್ ಸಿಕ್ವೇರಾ (ಗ್ಲೇಡಿಸ್ ರೇಗೊ) ಇವರು 21.07.2025ರಂದು ಉಲ್ಲಾಳದ ಸೊಮೇಶ್ವರದಲ್ಲಿರುವ ವೃದ್ದಾಶ್ರಮ ʼಪಶ್ಚಿಮ್ʼನಲ್ಲಿ ನಿಧನರಾದರು. ಇವರಿಗೆ 80 ವರ್ಷ ವಯಸ್ಸಾಗಿತ್ತು.ಕೊಂಕಣಿ ಸಾಹಿತ್ಯ ಕ್ಷೇತ್ರದಲ್ಲಿ ನಿರಂತರ ಕಾರ್ಯ ನಿರ್ವಹಿಸಿ, ಕಥೆ, ಕಾದಂಬರಿ, ಕವನ, ಲೇಖನ ಹೀಗೆ ಹಲವು ವಿಷಯಗಳ ಮೂಲಕ ಸಾಹಿತ್ಯ ಕೃಷಿಯಲ್ಲಿ ತಮ್ಮ ದೇಣಿಗೆಯನ್ನು ನೀಡಿದ್ದಾರೆ. ಇವರು ಪ್ರಕಾಶಕಿ ಆಗಿ ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ, ಇವರು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರೂ ಆಗಿದ್ದರು. […]
ಶಂಕರನಾರಾಯಣ ; ಮದರ್ ತೆರೆಸಾ ಮೆಮೋರಿಯಲ್ ಶಾಲೆ ಶಂಕರನಾರಾಯಣ ಶಾಲಾ ವಿಭಾಗದಲ್ಲಿ ದಿನಾಂಕ 19/07/2025 ರಂದು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳಿಗೆ ಆಸಕ್ತಿ ಮೂಡಿಸಲು ಹಾಗೂ ಮೌಲ್ಯಯುತವಾದ ವಿಚಾರಗಳನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವ ದೃಷ್ಟಿಯಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಮೂರನೆಯ ತರಗತಿಯ ವಿದ್ಯಾರ್ಥಿಗಳು ಗ್ರ್ಯಾಟಿಟ್ಯೂಡ್ ಜಾರ್ ( ಕೃತಜ್ಞತೆಯ ಜಾಡಿ) ಎಂಬ ವಿಷಯದ ಕುರಿತು ವಿವಿಧ ಕಾರ್ಯಕ್ರಮಗಳಾದ ಪ್ರಾರ್ಥನೆ, ಭಾಷಣ,ನೃತ್ಯ, ಕಿರು ನಾಟಕ ಹಾಗೂ ಸಂಗೀತ ಮುಂತಾದ ಸಾಂಸ್ಕೃತಿಕ ಮತ್ತು ಮನೋರಂಜನ ಕಾರ್ಯಕ್ರಮಗಳಲ್ಲಿ ತಮ್ಮನ್ನು […]
ಕುಂದಾಪುರ; ಕುಂದಾಪ್ರ ಕನ್ನಡ ಸಂಸ್ಕøತಿ, ಮುಖ್ಯವಾಗಿ ಭಾಷೆ, ಸಾಹಿತ್ಯ, ಕಲೆ, ಜಾನಪದ ಸೊಗಡು ಉಳಿಸಿ ಬೆಳೆಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಬಹಳ ಮುಖ್ಯವಾಗಿರುತ್ತದೆ. ವಿದ್ಯಾರ್ಥಿಗಳು ಶ್ರದ್ಧೆಯಿಂದ ಈ ವಿಷಯದಲ್ಲಿ ಅಧ್ಯಯನ ನಡೆಸಬೇಕು. ಗಾದೆ ಹೇಳಲು, ಕುಂದಾಪ್ರ ಕನ್ನಡ ಶಬ್ದಗಳನ್ನು ಬರೆಯಲು ಕುಂದಾಪುರ ತಾಲೂಕಿನಿಂದ ನೂರಾರು ಮಂದಿ ಆಗಮಿಸಿರುವುದು ಸಂತೋಷ ತಂದಿದೆ. ತಮ್ಮ ಊರು, ತಮ್ಮ ಭಾಷೆ, ತಮ್ಮ ಕುಟುಂಬದ ವೃತ್ತಿ, ಮನೆ ಕೆಲಸ, ಪರಿಸರ ರಕ್ಷಣೆ ಎಲ್ಲವನ್ನೂ ಕಲಿತ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಮುನ್ನಡೆಯುತ್ತಾರೆ. ಕುಂದ ಕನ್ನಡ ಭಾಷಾಭಿವೃದ್ಧಿ ವೇದಿಕೆ […]
ಮೂಡುಬಿದರೆ; ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು, ಐ.ಸಿ.ವೈ.ಎಮ್. ಹೊಸ್ಪೆಟ್ ಘಟಕ ಇವರ ಸಹಯೋಗದಲ್ಲಿ ಮೂಡುಬಿದರೆಯ ಹೊಸ್ಪೆಟ್ ಚರ್ಚ್ನ ಸಭಾಂಗಣದಲ್ಲಿ 20.07.2025ರಂದು ಕೊಂಕಣಿ ಸಾಹಿತ್ಯ ಕಾರ್ಯಗಾರವನ್ನು ಆಯೋಜಿಸಲಾಗಿತ್ತು. ಕಾರ್ಯಾಗಾರದ ಆರಂಭದಲ್ಲಿ ಹೊಸ್ಪೆಟ್ ಚರ್ಚ್ನ ಧರ್ಮಗುರುಗಳಾದ ಅ|ವಂ| ಗ್ರೆಗೊರಿ ಡಿಸೋಜರವರು ಅಕಾಡೆಮಿಯು ಇಂತಹ ಕಾರ್ಯಾಗಾರವನ್ನು ಹಮ್ಮಿಕೊಳ್ಳುವ ಮೂಲಕ ಹೊಸ ಸಾಹಿತಿಗಳನ್ನು ಪ್ರೋತ್ಸಾಹಿಸುತ್ತಿದೆ. ಭಾಗವಹಿಸಿದವರಲ್ಲಿ ಸಾಹಿತಿಗಳು ಹುಟ್ಟಿಕೊಳ್ಳಲಿ ಎಂದು ಹೇಳಿ ಶುಭ ಹಾರೈಸಿದರು.ಕಾರ್ಯಾಗಾರದಲ್ಲಿ ಶ್ರೀಮತಿ ಫೆಲ್ಸಿ ಲೋಬೊ, ದೆರೆಬೈಲ್ ಇವರು ಕವನ ಬರೆಯುವ ಬಗ್ಗೆ ತರಬೇತಿ ನೀಡಿದರು. ಕಾರ್ಯಾಗಾರದಲ್ಲಿ ಭಾಗವಹಿಸಿದವರಿಗೆ ತಂಡಗಳನ್ನು […]
ಕುಂದಾಪುರ; “ವಿದ್ಯಾರ್ಥಿಗಳು ಅತ್ಯುತ್ತಮ ಸಿ.ಇ.ಟಿ ಮತ್ತು ನೀಟ್ ಕೋಚಿಂಗ್ ಪಡೆಯುವಂತಾಗಿರುವುದು ಸಂತಸ ತಂದಿದೆ. ವಿದ್ಯಾರ್ಥಿಗಳು ತಮ್ಮ ಸಂಪೂರ್ಣ ಪ್ರಯತ್ನದಿಂದ ಅತ್ಯುತ್ತಮ ಫಲಿತಾಂಶ ಪಡೆದು ಒಳ್ಳೆಯ ಹೆಸರು ಮಾಡುವ ಆಶಯ ಹೊಂದಿದ್ದೇವೆ ” ಎಂದು ಕುಂದಾಪುರ ಎಜುಕೇಶನ್ ಸೊಸೈಟಿಯ ಅಧ್ಯಕ್ಷರೂ, ಕಾಲೇಜಿನ ಸಂಚಾಲಕರಾದ ಶ್ರೀ ಬಿ.ಎಮ್ ಸುಕುಮಾರ್ ಶೆಟ್ಟಿಯವರು ಕುಂದಾಪುರದ ಆರ್. ಎನ್. ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ACCE ಅಕಾಡೆಮಿಯವರು ಸಹಭಾಗಿತ್ವದಲ್ಲಿ ಆರಂಭವಾದ C.E.T- NEET- JEE ಪರೀಕ್ಷಾ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.ಕಾಲೇಜಿನ ಆಡಳಿತ ಮಂಡಳಿಯ […]
ಬೈಂದೂರು ವಿಧಾನಸಭಾ ಕ್ಷೇತ್ರದ ಹಕ್ಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಣಿಕೊಳಲು ಸಂಮೀಪದ ಕರಾವಳಿ ಭಾಗದ ಕಾಮಿಡಿ ರೀಲ್ಸ್ ಸ್ಟಾರ್, ಗಿಚ್ಚಿ ಗಿಲಿಗಿಲಿ ಖ್ಯಾತಿಯ ಪ್ರಸಾದ್ ಜೋಗಿಯವರ ಮನೆ ಭಾರಿ ಮಳೆಗೆ ಸಂಪೂರ್ಣ ಕುಸಿತವಾಗಿ ನೆಲಸಮವಾಗಿದೆ
ಕುಂದಾಪುರ : ವರದರಾಜ್ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶಿಕ್ಷಣಕ್ಕಾಗಿ ಮತ್ತು ಬಡ ರೋಗಿಗಳಿಗೆ ಸುಮಾರು 20ಲಕ್ಷಕ್ಕೂ ಹೆಚ್ಚಿನ ಧನಸಹಾಯ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಉದ್ಯಮಿ,ದಾನಿ ಕಟ್ಕೆರೆ ಜೆಪಿ ಶೆಟ್ಟಿಯವರನ್ನು ಇತ್ತೀಚೆಗೆ ಕೋಟೇಶ್ವರ ಲಯನ್ಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು. ಲಯನ್ಸ್ ಕ್ಲಬ್ ಗವರ್ನರ್ಲ. ಸುರೇಶ್ ಪ್ರಭು, ಅಧ್ಯಕ್ಷ ಲ.ನಿತ್ಯಾನಂದ ಎಸ್. ಮತ್ತು ಲಯನ್ಸ್ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

