

ಕೋಟ ಸಮುದಾಯ ಭವನದಲ್ಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೋಟರಿ ಕ್ಲಬ್ ಕುಂದಾಪುರ ರಿವರ್ ಸೈಡ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಕೋಟ ಇವರ ಸಹಭಾಗಿತ್ವದಲ್ಲಿ ವಿಶ್ವ ಸ್ತನ ಪಾನ ಸಪ್ತಾಹ ಕಾರ್ಯಕ್ರಮ ನಡೆಯಿತು. ವೈದ್ಯರಾದ ಡಾ.ಮಾಧವ ಪೈಇವರು ಸನ್ಯ ಪಾನದ ಮಹತ್ವದ ಬಗ್ಗೆ ಪೋಷಕರಿಗೆ ಮಾಹಿತಿಯನ್ನು ನೀಡಿದರು.ರೋಟರಿ ಅಧ್ಯಕ್ಷ ಸದಾನಂದ ಉಡುಪ ಇವರು ಮತನಾಡುತ್ತಾ ಜಗತ್ತಿನಲ್ಲಿಯೇ ತಾಯಿಯ ಎದೆ ಹಾಲು ಅತೀ ಸರ್ವ ಶ್ರೇಷ್ಠ ಇದು ಅಮೃತಕ್ಕೆ ಸಮಾನ ,ಮಗುವಿನ ಬೆಳವಣಿಗೆಗೆ ತಾಯಿ ಹಾಲು ಅತಿ ಪ್ರಮುಖ ಆದ್ದರಿಂದ ಪ್ರತಿಯೊಬ್ಬ ತಾಯಂದಿರು ವಿಶೇಷ ಕಾಳಜಿಯನ್ನ ವಹಿಸಬೇಕು, ಸ್ವಚ್ಛತೆಯನ್ನ ಕಾಪಾಡಿಕೊಂಡು ಮಕ್ಕಳಿಗೆ ಕಡ್ಡಾಯವಾಗಿ ಎದೆ ಹಾಲನ್ನೆ ನೀಡಬೇಕು ಎಂದು ಕರೆ ನೀಡಿದರು. ಈ ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷಾಧಿಕಾರಿ ಜಯಂತಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ವಾಸು ಪೂಜಾರಿ ಉಪಸ್ಥಿತರಿದ್ದರು .ರೋಟರಿಯ ಸದಸ್ಯರಾದ ರಾಜು ಪೂಜಾರಿ,ರೊನಾಲ್ಡ್ ಡಿಮೆಲ್ಲೊ , ಕಾರ್ಯದರ್ಶಿ ಭಾಸ್ಕರ್ ಬಿ ಇವರು ಉಪಸ್ಥಿತರಿದ್ದರು ಪ್ರಾರಂಭದಲ್ಲಿ ರೋಟರಿ ಅಧ್ಯಕ್ಷ ಸದಾನಂದ ಉಡುಪ ಸ್ವಾಗತಿಸಿದರು .ಆಶಾ ಕಾರ್ಯಕರ್ತೆ ಪೂರ್ಣಿಮಾ ಧನ್ಯವಾದ ಅರ್ಪಿಸಿದರು. ಕಾರ್ಯಕ್ರಮವನ್ನು ಆರೋಗ್ಯ ನಿರ್ವಹಣಾಧಿಕಾರಿ ಹರಿಶ್ಚಂದ್ರ ನಿರೂಪಿಸಿದರು.

