“National Youth Day” at St. Assisi Church, Tallur ತಲ್ಲೂರು; 2025ರ ಆಗಸ್ಟ್ 24ರಂದು ತಲ್ಲೂರಿನ ಸಂತ ಅಸ್ಸಿಸಿ ಚರ್ಚಿನಲ್ಲಿ “ರಾಷ್ಟ್ರೀಯ ಯುವ ದಿನ”ವನ್ನು ಅತ್ಯಂತ ವಿಜ್ರಂಭಣೆಯಿಂದ ಆಚರಿಸಲಾಯಿತು. ಬೆಳಿಗ್ಗೆ 7:30ಕ್ಕೆ ದಿವ್ಯ ಬಲಿಪೂಜೆಯನ್ನು ಪ್ರಧಾನ ಯಾಜಕರಾಗಿ ಆಗಮಿಸಿದ ಡಾನ್ ಬಾಸ್ಕೊ ಯುವಕೇಂದ್ರ, ಶಿರ್ವಾದ ನಿರ್ದೇಶಕರಾದ ವಂದನೀಯ ಫಾ. ಕಿರಣ್ ನಜ್ರೇತ್ ನೆರವೇರಿಸಿದರು. ಇವರೊಂದಿಗೆ ಚರ್ಚಿನ ಧರ್ಮಗುರು ವಂದನೀಯ ಫಾ. ಎಡ್ವಿನ್ ಡಿಸೋಜರವರು ಸಹಕರಿಸಿದರು.ನಂತರ ಸಭಾಂಗಣದಲ್ಲಿ ಯುವಜನತೆ ಹಾಗೂ ಅವರ ಪೋಷಕರಿಗಾಗಿ ಸಹಮಿಲನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. […]
‘ನಮ್ಮ ಗುರಿಯಲ್ಲಿ ಸ್ಪಷ್ಟತೆ, ಅದನ್ನು ಕಾರ್ಯಪ್ರವೃತ್ತವಾಗಿಸುವ ಆತ್ಮವಿಶ್ವಾಸ ಮತ್ತು ಹಂತ ಹಂತದ ಪರೀಕ್ಷೆಗಳಲ್ಲಿ ಯಶಸ್ಸು ಸಿಕ್ಕಿದಾಗ ಮುಂದಿನ ತಯಾರಿ- ಇಂಥ ಸರಳ ಗುಣಗಳನ್ನು ಕಲಿತರೆ C.A/ C.S ಸಂಬಂಧಿತ ಕೋರ್ಸ್ಗಳನ್ನು ಮಾಡಲು ಸುಲಭವಾಗುತ್ತದೆ ” ಎಂದು ಉಡುಪಿಯ ತ್ರಿಷಾ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ನ ತರಬೇತುದಾರರಾದ ಪ್ರೊ. ಅಲ್ಬನ್ ರವರು ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಅಯೋಜಿಸಿದ C.A/ C.S ಓರಿಯಂಟೇಶನ್ ಕಾರ್ಯಕ್ರಮದಲ್ಲಿ ತಿಳಿಸಿದರು. ತ್ರಿಷಾ ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿಯಾದ ಜಯದೀಪ್ […]
ಬೆಳ್ತಂಗಡಿ: ಧರ್ಮ ಧರ್ಮಗಳ ನಡುವೆ, ಜಾತಿಗಳ ಮಧ್ಯೆ ದ್ವೇಷ ಹುಟ್ಟುವಂತೆ ಪ್ರಚೋದನಕಾರಿಯಾಗಿ ಮಾತನಾಡಿ ಅದನ್ನು ಯೂಟ್ಯೂಬ್ ನಲ್ಲಿ ಪ್ರಸಾರ ಮಾಡಿದ್ದ ಬಗ್ಗೆ ವಸಂತ ಗಿಳಿಯಾರ್ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಾಮಾಜಿಕ ಹೋರಾಟಗಾರ ಶೇಖರ ಲಾಯಿಲ ಅವರು ನೀಡಿದ ದೂರಿನಂತೆ ಸೆಕ್ಷನ್ 196(1)(a), 353(2) ಬಿ.ಎನ್.ಎಸ್ ನಂತೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಶೇಖರ ಲಾಯಿಲ ಅವರು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದು, ಬೆಂಗಳೂರಿನಲ್ಲಿ ನಡೆದ ಧರ್ಮ ಸಂರಕ್ಷಣಾ ಸಮಾವೇಶದಲ್ಲಿ ಮಾತನಾಡಿದ […]
ಮಂಗಳೂರು : ಮಂಗಳೂರಿನ ಬೆಂದೂರ್‌ವೆಲ್ ಇಲ್ಲಿ ಕೇಂದ್ರ ಕಛೇರಿ ಹೊಂದಿರುವ ಕಚ್ಚೂರು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ (ಲಿ.) ಇದರ ಬೆಳ್ತಂಗಡಿ ಶಾಖೆಯು ಶೀಘ್ರದಲ್ಲಿ ಅಂದರೆ ಮುಂದಿನ ನವರಾತ್ರಿ ದಸರಾ ದಲ್ಲಿ ಶುಭಾರಂಭಗೊಳ್ಳಲಿದೆ ಎಂದು ಸೊಸೈಟಿಯ ಪ್ರಕಟಣೆ ತಿಳಿಸಿದೆ.
ಬೈಂದೂರು ; “ಕೊಂಕಣಿ ಮಾನ್ಯತಾ ದಿವಸ್” ಅನ್ನು ಬೈಂದೂರಿನ ಹೋಲಿಕ್ರಾಸ್ ಚರ್ಚಿನಲ್ಲಿ ಸಾಂಸ್ಕೃತಿಕವಾಗಿ ಆಚರಿಸಲಾಯಿತು. ಧರ್ಮಗುರು ವಂದನೀಯ ವಿನ್ಸೆಂಟ್ ಕುವೆಲ್ಲೊ ರವರ ಅಧ್ಯಕ್ಷತೆಯಲ್ಲಿ ಜರುಗಿತು ಈ ಸಮಾರಂಭ ದಲ್ಲಿ ದಿಯಾಕೊನ್ ಪೃಥ್ವಿ ರೊಡ್ರಿಗಸ್, ಸಿಸ್ಟರ್ ಆನ್ಸಿ ಪಾವ್ಲ್, ಪಾಲನ ಮಂಡಳಿ ಉಪಾಧ್ಯಕ್ಷ ಸ್ತೇಫಾನ್ ಡಾಯಸ್, ಕಾರ್ಯದರ್ಶಿ ವೀಣಾ ಫೆರ್ನಾಂಡಿಸ್, ಸರ್ವ ಆಯೋಗಗಳ ಸಂಯೋಜಕಿ ಅನಿತಾ ನಜ್ರೆತ್, ಐ.ಸಿ.ವೈ.ಎಮ್. ಸಚೇತಕ ಪ್ರದೀಪ್ ಫೆರ್ನಾಂಡಿಸ್, ವೈ.ಸಿ.ಎಸ್. ಸಚೇತಕಿ ಆಶಾ ವೀಣಾ ಡಾಯಸ್, ಐ.ಸಿ.ವೈ.ಎಮ್. ಅಧ್ಯಕ್ಷ ಎಲ್ಸನ್ ಡಿ’ಸೋಜಾ, ಕಾರ್ಯದರ್ಶಿ ಡಿಯೋನ್ ಡಾಯಸ್, […]
ಕುಂದಾಪುರ, ಅ.26: ಮಿಲಾಗ್ರಿಸ್ ಕ್ರೆಡಿಟ್ ಸೌರ್ಹಾದ್ ಕೋ-ಆಪ್ ಸೊಸೈಟಿ ಲಿ. ಇವರಿಂದ ಎಲ್ಲಾ 43 ಮಕ್ಕಳಿಗೆ ಮಿಲಾಗ್ರಿಸ್ ಸೌರ್ಹಾದ ಸೊಸೈಟಿಯಿಂದ ಕುಂದಾಪುರ ಚೈತನ್ಯ ವಿಶೇಷ ಶಾಲೆಗೆ ಕಲಿಕಾ ವಸ್ತುಗಳ ಕೊಡುಗೆ ಹಸ್ತಾಂತರ ಕಾರ್ಯಕ್ರಮ ನಡೆಯಿತು. 43 ವಿಶೇಷ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ವಿತರಿಸಿದ ಈ ಕಾರ್ಯಕ್ರಮಕ್ಕೆ ಸ್ಥಳೀಯ ರೋಜರಿ ಚರ್ಚಿನ ಧರ್ಮಗುರು ಅ|ವಂ|ಪಾವ್ಲ್ ರೇಗೊ ಮುಖ್ಯ ಅಥಿತಿಗಳಾಗಿ ಆಗಮಿಸಿ ವಿಶೇಷ ಚೈತನ್ಯ ಮಕ್ಕಳಿಗೆ ಕೊಡುಗೆಯನ್ನು ವಿತರಿಸಿ ‘ವಿಶೇಷ ಮಕ್ಕಳಿಗೆ ನೋಡಿಕೊಳ್ಳುವಂತಹ ಶಿಕ್ಷಕರು, ಶಿಕ್ಷಕೇತರರ ಸೇವೆ ದೇವರು ಮೆಚ್ಚುವಂತಹ […]
Udupi Diocese organizes massive blood donation camp at Udupi Mother of Sorrows Church ಆಗಸ್ಟ್ 23, 2025 ರಂದು, ಉಡುಪಿ ಡಯಾಸಿಸ್‌ನ ಆರೋಗ್ಯ ಆಯೋಗವು ಉಡುಪಿ ಜಿಲ್ಲೆಯ ಪೊಲೀಸ್ ಇಲಾಖೆ, ಅಪೂರ್ವ ಮಹಾ ಸಂಘ, ಶೋಕಮಾತೆ ಚರ್ಚ್, ಭಾರತೀಯ ರೆಡ್‌ಕ್ರಾಸ್ ಸೊಸೈಟಿ, ಉಡುಪಿ ಜಿಲ್ಲೆ, ರಕ್ತ ಬ್ಯಾಂಕ್ ರೆಡ್‌ಕ್ರಾಸ್ ಸೊಸೈಟಿ, ಕುಂದಾಪುರ ಶಾಖೆ ಮತ್ತು ಮಣಿಪಾಲದ ವೃತ್ತ ಕಚೇರಿಯ ಕೆನರಾ ಬ್ಯಾಂಕ್ ಇವುಗಳ ಸಹಯೋಗದೊಂದಿಗೆ ಉಡುಪಿ ಶೋಕಮಾತೆ ಇಗರ್ಜಿಯಲ್ಲಿ ಬ್ರಹತ್ ರಕ್ತದಾನ ಶಿಬಿರರಕ್ತದಾನ […]
ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್, ಐಎಂಜೆ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜು, ಮೂಡ್ಲಕಟ್ಟೆ ಪ್ಯಾರಾಮೆಡಿಕಲ್ ಸೈನ್ಸಸ್ ಇನ್ಸ್ಟಿಟ್ಯೂಟ್ ಮತ್ತುಮೂಡ್ಲಕಟ್ಟೆ ಕಾಲೇಜ್ ಆಫ್ ಫಿಸಿಯೋತೆರೇಪಿ ಇವರ ಸಂಯುಕ್ತ ಆಶ್ರಯದಲ್ಲಿ ಮಾದಕ ದ್ರವ್ಯ ಜಾಗೃತಿ ಸಭೆ ಮತ್ತು ಪ್ರತಿಜ್ಞೆ ಸ್ವೀಕಾರ ಆಯೋಜಿಸಲಾಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾದ ಭೀಮಶಂಕರ್ ಸಿನ್ನೂರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಕುಂದಾಪುರ ರೂರಲ್ ಪೊಲೀಸ್ ಸ್ಟೇಷನ್ ಕಂಡ್ಲೂರು ಅವರು, ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಜೆನ್ನಿಫರ್ ಫ್ರೀಡಾ ಮೆನೆಜಸ್ ಹಾಗೂ ಉಪ ಪ್ರಾಂಶುಪಾಲರಾದ ಶ್ರೀಮತಿ […]
ಕುಂದಾಪುರ: ಪತ್ರಿಕೋದ್ಯಮದಲ್ಲಿ ನೀತಿಸಂಹಿತೆಗಳನ್ನು ಪಾಲಿಸುವುದು ಅತಿ ಮುಖ್ಯ ಎಂದು ಹಿರಿಯ ಪತ್ರಕರ್ತ ಭಂಡಾರ್ಕಾರ್ಸ್ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಯು.ಎಸ್ ಶೆಣೈ ಹೇಳಿದರು.ಅವರು ಆಗಸ್ಟ್ 25ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ, ಪತ್ರಿಕೋದ್ಯಮ ವಿಭಾಗ ಮತ್ತು ರೇಡಿಯೋ ಕುಂದಾಪ್ರ 89.6 ಎಫ್.ಎಮ್ ಇವರು ಜಂಟಿಯಾಗಿ ಆಯೋಜಿಸಿದ್ದ *ತಿಂಗಳ ಅತಿಥಿ ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಪತ್ರಿಕೋದ್ಯಮ ಇಂದು ತುಂಬಾ ಬೆಳೆದಿದೆ. ಮುದ್ರಣ ತಂತ್ರಜ್ಞಾನದಿಂದ ಆರಂಭಿಸಿ ಇಂದು ಕಂಪ್ಯೂಟರ್ ತಂತ್ರಜ್ಞಾನವನ್ನು ಬಳಸಿ ವಸ್ತು ವಿಷಯಗಳನ್ನು ಕ್ಷಣ […]

