

ಕೋಟ ಸಂತ ಜೊಸೆಫರ ಇಗರ್ಜಿಯಲ್ಲಿ ಯುವಕರ ದಿನಾಚರಣೆಯನ್ನು ಸೆಪ್ಟೆಂಬರ್ 7 ರಂದು ಆಚರಿಸಲಾಯಿತು. ಪವಿತ್ರ ಬಲಿಪೂಜೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಉಡುಪಿ ಧರ್ಮ ಪ್ರಾಂತ್ಯದ ಯುವ ಸಂಘಟನೆಗಳ ನಿರ್ದೇಶಕರಾದ ವಂದನೀಯ ಫಾದರ್ ಸ್ಟೀವನ್ ಫೆರ್ನಾಂಡಿಸ್ ಅವರು ಪವಿತ್ರ ಬಲಿಪೂಜೆಯನ್ನು ನೆರವೇರಿಸಿದರು. ಇಗರ್ಜಿಯ ಧರ್ಮ ಗುರುಗಳಾದ ವಂದನೀಯ ಸ್ಟ್ಯಾನಿ ತಾವ್ರೊ ಅವರು ಬಲಿಪೂಜೆಯಲ್ಲಿ ಸಹಕರಿಸಿದರು.
ನಂತರ ಯವಕರಿಗಾಗಿ ವಿಶೇಶ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಇಗರ್ಜಿಯ ಧರ್ಮಗುರುಗಳಾದ ವಂದನೀಯ ಸ್ಟಾನಿ ತಾವ್ರೊ ಅವರು ಪ್ರಾಸ್ತವಿಕ ಭಾಶಣ ಮಾಡಿದರು. ವಂದನೀಯ ಸ್ಟೀವನ್ ಫೆರ್ನಾಂಡಿಸ್ ಯುವಕರಿಗೆ ಉತ್ತಮ ಮಾರ್ಗದರ್ಶನ ಹಾಗು ಸ್ಪೂರ್ಥಿ ನೀಡುವ ಹಿತ ನುಡಿಗಳನ್ನು ನುಡಿದರು. ಪರಸ್ಪರ ಬೆರೆಯುವ ವಿವಿಧ ಚಟುವಟಿಕೆಗಳನ್ನು ಈ ಸಂದರ್ಭದಲ್ಲಿ ನಡೆಸಲಾಯಿತು. ಇಗರ್ಜಿಯ ಎಲ್ಲಾ ಯುವಕ ಯುವತಿಯರು ಸಕ್ರೀಯವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಉಡುಪಿ ಧರ್ಮ ಪ್ರಾಂತ್ಯದ ಐ.ಸಿ.ವೈ.ಎಮ್ ಅಧ್ಯಕ್ಶ ನಿತಿನ್ ಬಾರೆಟ್ಟೊ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕ್ಲಿಯೊನಾ ಎಲ್ಲರನ್ನು ಸ್ವಾಗತಿಸಿದರು. ಐ.ಸಿ.ವೈ.ಎಮ್ ಕೋಟ ಘಟಕದ ಆಧ್ಯಕ್ಶ ಶಾವ್ನ್ ಫೆರ್ನಾಂಡಿಸ್ ಧನ್ಯವಾದ ಸಮರ್ಪಣೆ ಮಾಡಿದರು. ರಿಕ್ಸನ್ ಡಿಸೋಜಾ ಕಾರ್ಯಕ್ರಮವನ್ನು ನಡೆಸಿ ಕೊಟ್ಟರು.





















