ಮಂಗಳೂರು, ಅಕ್ಟೋಬರ್ 16: ಪ್ರಿಸನ್ ಮಿನಿಸ್ಟ್ರಿ ಇಂಡಿಯಾ (PMI) ಸಂಸ್ಥೆಯು ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಮಂಗಳೂರು ಜಿಲ್ಲಾ ಕಾರಾಗೃಹದ ಕೈದಿಗಳಿಗಾಗಿ ಅಕ್ಟೋಬರ್ 14ರಿಂದ 16ರವರೆಗೆ ಮೂರು ದಿನಗಳ ಅಣಬೆ ಕೃಷಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿತು. ಕೈದಿಗಳ ಪುನರ್ವಸತಿ, ಸ್ವಾವಲಂಬನೆ ಹಾಗೂ ಬಿಡುಗಡೆಯ ನಂತರ ಸಮಾಜದ ಮುಖ್ಯವಾಹಿನಿಗೆ ಮರಳಲು ಅಗತ್ಯವಾದ ಪ್ರಾಯೋಗಿಕ ಕೌಶಲ್ಯಗಳನ್ನು ಬೆಳೆಸುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು. ಕಾಸರಗೋಡಿನ ಶ್ರೀ ಪಾಂಡುರಂಗ ಮತ್ತು ಅವರ ತಂಡವು ತರಬೇತಿಯ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ಅಣಬೆ ಕೃಷಿಯ […]
ಮಂಗಳೂರು, ಅ. 15; ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ನಗರದ ವೆಲೆನ್ಸಿಯಾದ ಚರ್ಚ್ ವೊಂದರ ಧರ್ಮಗುರು ಸಿಪ್ರಿಯನ್ ಪಿಂಟೋ ಎಂಬವರ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಪ್ರಕರಣ ದಾಖಲಾಗಿದೆ. ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ ಫಾ.ಸಿಪ್ರಿಯನ್ ಪಿಂಟೋ ವಿರುದ್ಧ ಸಂತ್ರಸ್ತರು ಮಕ್ಕಳ ರಕ್ಷಣಾ ನಿರ್ದೇಶನಾಲಯಕ್ಕೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ರಕ್ಷಣಾ ನಿರ್ದೇಶನಾಲಯವು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ದ.ಕ. ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಸೂಚನೆ ನೀಡಿತ್ತು. ಅಲ್ಲದೇ ಮೈಸೂರಿನ ಒಡನಾಡಿ […]
ಸೌಹಾರ್ದ ಸೇವಾ ಸಮಿತಿ ಉಳ್ಳಾಲ ವತಿಯಿಂದ ಉಚಿತ ಹಿಜಾಮಾ, ಕಣ್ಣಿನ ತಪಾಸಣೆ ಹಾಗೂ ಜನರಲ್ ಆರೋಗ್ಯ ಉಚಿತ ತಪಾಸಣೆ ಶಿಬಿರ ಉಳ್ಳಾಲದ ಹಜ್ರತ್ ಶಾಲೆಯಲ್ಲಿ ಅಕ್ಟೋಬರ್ 12ರಂದು ನಡೆದ ಆರೋಗ್ಯ ಶಿಬಿರದಲ್ಲಿ ಅತಿಥಿಯಾಗಿ ದುಬೈನಿಂದ ಆಗಮಿಸಿದ KCF UAE ರಾಷ್ಟ್ರೀಯ ಸನ್ನದ ಸಮಿತಿಯ ಅಧ್ಯಕ್ಷರಾದ ಜನಾಬ್ ಝೈನುದ್ದೀನ್ ಹಾಜಿ ಬೆಳ್ಳಾರೆ ರವರಿಗೆ ಸೌಹಾರ್ದ ಸೇವಾ ಸಮಿತಿಯ ಉಳ್ಳಾಲದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು ತದನಂತರ ಅವರು ಸಚಿವ ಡಾ. ಯು.ಟಿ ಖಾದರ್ ರವರ ಅಭಿವೃದ್ಧಿ ಬಗ್ಗೆ ಕೊಂಡಾಡಿದರು ಹಾಗೂ […]
ಕುಂದಾಪುರ: ಸ್ಥಳೀಯ ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MITK) ಕಾಲೇಜಿನಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾದ ISAP (Information Search, Analysis and Presentation) ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಕಾಲೇಜಿನ ಸಭಾಂಗಣದಲ್ಲಿ ಯಶಸ್ವಿಯಾಗಿ ನೆರವೇರಿತು.ಕಾರ್ಯಕ್ರಮದ ಆರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಮಕೃಷ್ಣ ಹೆಗ್ಡೆ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ, ಉಪಸ್ಥಿತರಿದ್ದ ಗಣ್ಯರನ್ನು, ಅಧ್ಯಾಪಕರನ್ನು ಹಾಗೂ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಅವರು ವಿದ್ಯಾರ್ಥಿಗಳಿಗೆ ISAP ಕಾರ್ಯಕ್ರಮದ ಮಹತ್ವವನ್ನು ವಿವರಿಸುತ್ತಾ, ತಂತ್ರಜ್ಞಾನ ಲೋಕದಲ್ಲಿ ಯಶಸ್ಸು ಗಳಿಸಲು ಸರಿಯಾದ ಮಾಹಿತಿಯನ್ನು […]
ಕುಂದಾಪುರದ ಆರ್. ಎನ್. ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ C.A, C.S, ಹಾಗೂ C.M.A ಕೋರ್ಸ್ ಗಳ ಬಗ್ಗೆ ಓರಿಯೇಂಟೇಶನ್ ಕಾರ್ಯಕ್ರಮ ನಡೆಯಿತು“ಹಿಂದೆಂದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಇಂದು C.A, C.S ಅಥವಾ CMA ವ್ಯಾಸಂಗ ಕೈಗೊಂಡು ಸಫಲರಾಗುತ್ತಿದ್ದಾರೆ. ದೇಶದ ಪ್ರಸಕ್ತ ಆರ್ಥಿಕ ಬೆಳವಣಿಗೆಯ ಪ್ರಮಾಣಕ್ಕೆ ಇನ್ನೂ ಹೆಚ್ಚೆಚ್ಚು ಸಿ.ಎ, ಸಿ.ಎಸ್ ಪದವೀಧರರ ಅಗತ್ಯವಿದ್ದು, ವ್ಯಾಪಾರೋದ್ಯಮಗಳನ್ನು ನಡೆಸಲು ಬೇಕಾದ ಕೌಶಲ್ಯವನ್ನೂ ಇಂಥ ತರಬೇತಿಗಳಿಂದ ಸಿದ್ಧಿಸುವುದನ್ನು ಈಗಿನ ವಾಣಿಜ್ಯ ಪ್ರಪಂಚದಲ್ಲಿ ಕಾಣುತ್ತಿದ್ದೇವೆ ” ಎಂದು ಉಡುಪಿಯ ವೀ […]
CATHOLIC SABHA, MANGALORE PRADESH, SUBMITS MEMORANDUM TO THE PRESIDENT OF INDIA SEEKING IMPARTIAL INQUIRY INTO ALLEGED IRREGULARITIES IN SIR ಮಂಗಳೂರು, ಅಕ್ಟೋಬರ್ 13, 2026: ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳು ಹಾಗೂ ಭಾರತದ ಚುನಾವಣಾ ಆಯೋಗದ ಕಾರ್ಯವೈಖರಿ ಮತ್ತು ಉತ್ತರದಾಯಿತ್ವಕ್ಕೆ ಸಂಬಂಧಿಸಿದಂತೆ, ವಿಶೇಷವಾಗಿ ಮುಖ್ಯ ಚುನಾವಣಾ ಆಯುಕ್ತರಾದ ಶ್ರೀ ಜ್ಞಾನೇಶ್ ಕುಮಾರ್ ಅವರ ಕಾರ್ಯನಿರ್ವಹಣೆಯ ಕುರಿತು […]
ಮಂಗಳೂರು — ಕರಾವಳಿ ಕರ್ನಾಟಕದ ಸಂಗೀತಾಸಕ್ತರಿಗೆ ಒಂದು ಅದ್ಭುತ ಸಾಂಸ್ಕೃತಿಕ ರಸದೌತಣ ಕಾದಿದೆ; ‘ಸುಮಧುರ್ ಸಂಗೀತ ಅಕಾಡೆಮಿ’ಯು ತನ್ನ ಪ್ರಮುಖ ಸಂಗೀತ ಕಾರ್ಯಕ್ರಮವಾದ ‘ಸುಮಧುರ್ 3’ ಅನ್ನು ಪ್ರಸ್ತುತಪಡಿಸುತ್ತಿದೆ. ಖ್ಯಾತ ಗಾಯಕಿ, ಸಂಯೋಜಕಿ ಮತ್ತು ಗಾಯನ ತರಬೇತುದಾರರಾದ ಜೋಷಲ್ ಸ್ವೀಡಾ ಡಿಸೋಜಾ ಅವರ ನೇತೃತ್ವದಲ್ಲಿ ನಡೆಯಲಿರುವ ಈ ಭವ್ಯ ಸಂಗೀತ ಸಂಜೆಯು ಮಂಗಳೂರಿನ ಕಂಕನಾಡಿಯಲ್ಲಿರುವ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್ನಲ್ಲಿ ಜರುಗಲಿದೆ. ಸಂಜೆ 5:00 ಗಂಟೆಗೆ ಕಾರ್ಯಕ್ರಮವು ಅಧಿಕೃತ ಸಮಾರಂಭದೊಂದಿಗೆ ಪ್ರಾರಂಭವಾಗಲಿದೆ. ಇದರಲ್ಲಿ ಸುಮಧುರ್ ಸಂಗೀತ ಅಕಾಡೆಮಿಯ […]
ಕುಂದಾಪುರ, ಅಕ್ಟೋಬರ್ 13 : ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ಕೈಗೊಂಡಿರುವ ಯುಜಿಡಿ ಕಾಮಗಾರಿಯ ಅಪೂರ್ಣತೆಯಿಂದಾಗಿ ಸಾರ್ವಜನಿಕರಿಗೆ ಅನವಶ್ಯಕ ತೊಂದರೆ ಉಂಟಾಗುತ್ತಿದೆ. ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಾಗ ಸರಕಾರದ ಅನುದಾನಗಳು ದುರುಪಯೋಗವಾಗದಂತೆ ನೋಡಿಕೊಳ್ಳಬೇಕು ಎಂದು ಪೌರಾಡಳಿತ ಸಚಿವರಾದ ಹೆಚ್.ಸಿ ಬಾಲಕೃಷ್ಣ ಹೇಳಿದರು. ಅವರು ಇಂದು ಕುಂದಾಪುರ ಪುರಸಭೆಯ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾಡಳಿತ, ನಗರಾಭಿವೃದ್ಧಿ ಕೋಶ ಉಡುಪಿ ಜಿಲ್ಲೆ ಹಾಗೂ ಪುರಸಭೆ ಕುಂದಾಪುರ ಇವರ ಸಹಭಾಗೀತ್ವದಲ್ಲಿ ಪೌರಾಡಳಿತ ಇಲಾಖೆ ಕುಂದಾಪುರ ಪುರಸಭೆಯ […]
ಗಂಗೊಳ್ಳಿಯ ಕೊಸೆಸಾಂವ್ ಅಮ್ಮನವರ ದೇವಾಲಯದ ಪರಿಸರ ಆಯೋಗದ ಮುಂದಾಳತ್ವದಲ್ಲಿ ಅಕ್ಟೋಬರ್ 11 ರಂದು ಪ್ಲಾಸ್ಟಿಕ್ ರಹಿತ ಜೀವನ ಕ್ರಮ ಆಡವಳಿಕೆಯ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮಕ್ಕೆ ಚರ್ಚಿನ ಧರ್ಮಗುರುಗಳಾದ ವಂ| ಫಾದರ್ ತೋಮಸ್ ರೋಶನ್ ಡಿಸೋಜರವರು ಶುಭ ಹಾರೈಸಿದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಉಡುಪಿ ಧರ್ಮಪ್ರಾಂತ್ಯದ ಕಾರ್ಮಿಕ ಆಯೋಗದ ನಿರ್ದೇಶಕರು ಹಾಗೂ ಕರ್ನಾಟಕ ಕಾರ್ಮಿಕ ಆಯೋಗದ ಅಧ್ಯಕ್ಷರಾದ ಕಿರಣ್ ಕ್ರಾಸ್ತಾ ಅವರು ಪರಿಸರ ಸಂರಕ್ಷಣೆಯ ಮಹತ್ವ, ಪ್ಲಾಸ್ಟಿಕ್ ಬಳಕೆಯಿಂದ ಉಂಟಾಗುವ ಹಾನಿಗಳು ಹಾಗೂ ಪ್ಲಾಸ್ಟಿಕ್ ಬಳಕೆಯನ್ನು ಹೇಗೆ ಕಡಿಮೆ […]

