ಪಡುಕೋಣೆ ; ದಿನಾಂಕ 1.3.2026 ರಿಂದ ದಿ.4.3.2026 ರ ತನಕ 4 ದಿನಗಳ “ಬನ್ನಿ ದೇವರ ಪ್ರೀತಿಯ ಅನುಭವಿಸೋಣಾ” ಎಂದು ವಾರ್ಷಿಕ ಅಧ್ಯಾತ್ಮಿಕ ಧ್ಯಾನ ಕೂಟವನ್ನು, ಪ್ರಸಿದ್ಧ ಪ್ರಸಂಗದವರಾದ ಶಿವಮೊಗ್ಗಧರ್ಮಪ್ರಾಂತ್ಯದ ಕಬಳೆ ಚರ್ಚಿನ ಧರ್ಮಗುರು ವಂ।ರೋಮನ್ ಪಿಂಟೋ,, ಇವರು ನಡೆಸಿಕೊಟ್ಟರು. ಚರ್ಚಿನ ಧರ್ಮ ಗುರುಗಳಾದ ವಂದನೀಯ ಫಾ। ಪ್ರಾನ್ಸಿಸ್ ಕರ್ನೆಲಿಯೊರವರು ಎಲ್ಲಾ ಯುವಕರನ್ನು ಒಗ್ಗೂಡಿಸಿ ಪ್ರಾರ್ಥನೆ ಕೂಟಕ್ಕೆ ಚಾಲನೆ ನೀಡಿದರು. ವಂದನೀಯ ಫಾ। ರೋಮನ್ ಪಿಂಟೋ ರವರು ಯುವಕರನ್ನು ಉದ್ದೇಶಿಸಿ, ಅನೇಕ ಚಟುವಟಿಕೆಗಳ ಮುಖಾಂತರ ಯುವಕರು ತಮ್ಮ […]
ಕುಂದಾಪುರ; ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರದ ಜನೌಷಧಿ ಕೇಂದ್ರವು ಮಾರ್ಚ್ ಒಂದರಿಂದ ಮಾರ್ಚ ಏಳರ ತನಕ 8ನೇ ಜನೌಷಧಿ ಸಪ್ತಾಹವನ್ನು ಕೇಂದ್ರದ ಸೂಚನೆಯಂತೆ ವಿಶಿಷ್ಟ ರೀತಿಯಲ್ಲಿ ಆಚರಿಸಿತು. ಉಡುಪಿ ಜಿಲ್ಲೆಯ ಪ್ರಪ್ರಥಮ ಜನೌಷಧಿ ಕೇಂದ್ರವಾದ ಈ ಸಂಸ್ಥೆ ರಾಜ್ಯದಲ್ಲಿ ನಾಲ್ಕನೆಯ ಅತೀ ದೊಡ್ಡ ಕೇಂದ್ರವಾಗಿ ಹೊರಹೊಮ್ಮಿದೆ. ಸಪ್ತಾಹದ ಸಂದರ್ಭದಲ್ಲಿ ಮಾರ್ಚ್ 2ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಂಡು ಇದರ ಉದ್ಘಾಟನೆಯ ಸಲುವಾಗಿ ಕುಂದಾಪುರ ಸರಕಾರಿ ಆಸ್ಪತ್ರೆಯ ಎಲಬು ಮತ್ತು ಮೂಳೆ ತಜ್ಞ ಡಾ. ಅರವಿಂದ್ […]
ಉಡುಪಿ; ಜನಸಂಖ್ಯಾ ಸ್ಫೋಟದಂತೆ ಅನೇಕ ಸಮಸ್ಯೆ ಎದುರಿಸುತ್ತಿರುವ ಭಾರತದಲ್ಲೂ ಮಾದಕ ವಸ್ತುಗಳ ಹಾವಳಿ ಕಳವಳ ಉಂಟುಮಾಡುತ್ತಿದೆ. ಡ್ರಗ್ಸ್ ಚಟಕ್ಕೆ ಅಂಟಿದವರನ್ನು ಸಾಮಾನ್ಯ ಮನುಷ್ಯರಂತೆ ಮಾಡುವುದು ಅಷ್ಟು ಸುಲಭವಲ್ಲ. ಈ ಅನಿಷ್ಟ ಅಭ್ಯಾಸ ಚೆನ್ನಾಗಿ ಬೇರೂರಿದ ಮೇಲೆ ಕ್ಯಾನ್ಸರನ್ನು ಸಂಪೂರ್ಣವಾಗಿ ವಾಸಿ ಮಾಡುವುದು ಎಷ್ಟು ಕಷ್ಟವೋ ಡ್ರಗ್ಸ್ ವ್ಯಸನವನ್ನು ಸರಿಪಡಿಸುವುದು ಅಷ್ಟೇ ಕಷ್ಟ ಎಂದು ರೊ| ಗುರುರಾಜ ಕೋತ್ವಾಲ್ ಅವರು ಅಭಿಪ್ರಾಯಪಟ್ಟರು.ಅವರು ಇತ್ತೀಚೆಗೆ ಅಭಿವೃದ್ಧಿ ಸಂಸ್ಥೆ (ರಿ.) ಬಾಳ್ಕುದ್ರು ಹಂಗಾರಕಟ್ಟೆ, ರೋಟರಿ ಕ್ಲಬ್ ಕುಂದಾಪುರ, ಸನ್ರೈಸ್ ಹಾಗೂ ಕರ್ನಾಟಕ […]
ಮಾರ್ಚ್ 8ರಿಂದ 14ರವರೆಗೆ ಜಪಸರ ಪ್ರಾರ್ಥನೆ, ಮಾ.13ರಂದು ಉಪವಾಸ-ಪ್ರಾರ್ಥನೆಗೆ ಕರೆ ಉಡುಪಿ: ಮಧ್ಯಪ್ರಾಚ್ಯ ಪ್ರದೇಶದಲ್ಲಿ, ವಿಶೇಷವಾಗಿ ಇರಾನ್ ಹಾಗೂ ನೆರೆಯ ರಾಷ್ಟ್ರಗಳನ್ನು ಒಳಗೊಂಡ ಇತ್ತೀಚಿನ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆ, ದೇಶದ ಕ್ರೈಸ್ತ ಸಮುದಾಯವು ಶಾಂತಿಗಾಗಿ ಪ್ರಾರ್ಥನೆ ಸಲ್ಲಿಸಲು ಬಿಷಪರ ಮಂಡಳಿ ಎಂದು ಕರೆ ನೀಡಲಾಗಿದ್ದು ಅದರಂತೆ ಉಡುಪಿ ಕಥೊಲಿಕ ಧರ್ಮಪ್ರಾಂತ್ಯದಲ್ಲಿ ಮಾರ್ಚ್ 8 ರಂದು ಶಾಂತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುವಂತೆ ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಕ್ರೈಸ್ತ ಸಮುದಾಯಕ್ಕೆ ಮನವಿ ಮಾಡಿದ್ದಾರೆ. ಯುದ್ಧ ಮತ್ತು […]
ಮಂಗಳೂರು ಧರ್ಮಕ್ಷೇತ್ರದ ಮಂಗಳೂರು ದಕ್ಷಿಣ ಸಂತ ಜೋಸೆಫ್ ವಾಜ್ ವಲಯಕ್ಕೆ ನೂತನ ಕಾರ್ಯದರ್ಶಿ ಹಾಗೂ ಇಬ್ಬರು ಪ್ರತಿನಿಧಿಗಳ ಆಯ್ಕೆ ಪ್ರಕ್ರಿಯೆ ತಾ. 03/03/2026 ರಂದು ಮಂಗಳವಾರ ಸಂಜೆ 5.30 ಗಂಟೆಗೆ ಪರ್ಮನ್ನೂರ್ ಚರ್ಚ್ ಸಭಾಂಗಣದಲ್ಲಿ ಅತ್ಯಂತ ವ್ಯವಸ್ಥಿತವಾಗಿ ನಡೆಯಿತು. ಚುನಾವಣೆಯಲ್ಲಿ ವಲಯದ ಕಾರ್ಯದರ್ಶಿ ಮತ್ತು ಇಬ್ಬರು ಪ್ರಮುಖ ಪ್ರತಿನಿಧಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ನೂತನ ಪದಾಧಿಕಾರಿಗಳ ವಿವರ: ಕಾರ್ಯದರ್ಶಿ: ರೋಷನ್ ಡಿ ಸೋಜ (ಮುಡಿಪು ಚರ್ಚ್ ಕಾರ್ಯದರ್ಶಿ) ಪ್ರತಿನಿಧಿ 1: ಅಲ್ವಿನ್ ಡಿ ಸೋಜ (ಆಯೋಗದ ಸಂಯೋಜಕರು, […]
ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನ 6 ನೇ ಬ್ಯಾಚ್ನ ಬಿ.ಎಸ್ಸಿ. ನರ್ಸಿಂಗ್ ವಿದ್ಯಾರ್ಥಿಗಳ ಲ್ಯಾಂಪ್ ಲೈಟಿಂಗ್ ಮತ್ತು ಪ್ರಮಾಣ ವಚನ ಸ್ವೀಕಾರ ಸಮಾರಂಭವು ಇತ್ತೀಚೆಗೆ ಕಾಲೇಜು ಸಭಾಂಗಣದಲ್ಲಿ ನಡೆಯಿತು.ಈ ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾದ ವಿದ್ಯಾರತ್ನ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲಾರಾದ ಡಾ. ಅನಿತಾ ಸಿ. ರಾವ್, ಐಎಂಜೆ ವಿದ್ಯಾ ಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕ ಡಾ. ಎಸ್. ಎನ್. ಭಟ್; ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಜೆನ್ನಿಫರ್ ಫ್ರೀಡಾ ಮೆನೆಜಸ್; ಮತ್ತು ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನ ಉಪ ಪ್ರಾಂಶುಪಾಲೆ ಶ್ರೀಮತಿ […]
ಕುಂದಾಪುರ: ಫೆಬ್ರವರಿ 28ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಮತ್ತು ಭರವಸೆ ಕೋಶ, ರಾಷ್ಟ್ರೀಯ ಸೇವಾ ಯೋಜನೆ ಘಟಕ, ಎನ್.ಸಿ.ಸಿ (ನೌಕಾದಳ ಮತ್ತು ಭೂದಳ), ರೆಡ್ ಕ್ರಾಸ್ ಘಟಕ, ರೇಂಜರ್ಸ್ ಮತ್ತು ರೋವರ್ಸ್ ಘಟಕ, ರೆಡ್ ರಿಬ್ಬನ್ ಕ್ಲಬ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ಲಯನ್ಸ್ ಕ್ಲಬ್ ಹಂಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ “ಸ್ವಯಂ ರಕ್ತದಾನ ಶಿಬಿರ ನಡೆಯಿತು.ಲಯನ್ಸ್ ಕ್ಲಬ್, ಹಂಗಳೂರು ಇದರ ಅಧ್ಯಕ್ಷರಾದ ಸಂದೀಪ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ […]
Catechism Day Celebrated at St. Francis Assisi Church, Tallur ತಲ್ಲೂರು; ದಿನಾಂಕ 1/3/2026 ರಂದು ತಲ್ಲೂರಿನ ಸಂತ ಫ್ರಾನ್ಸಿಸ್ ಆಸ್ಸಿಸಿ ಚರ್ಚಿನಲ್ಲಿ ಕ್ರೈಸ್ತ ಶಿಕ್ಷಣ ದಿನವನ್ನು ಕ್ರೈಸ್ತ ಶಿಕ್ಷಣ ಆಯೋಗದ ನೇತೃತ್ವದಲ್ಲಿ ದಿವ್ಯ ಬಲಿ ಪೂಜೆಯ ಮೂಲಕ ಭಕ್ತಿಪೂರ್ವಕವಾಗಿ ಆಚರಿಸಲಾಯಿತು.ಮಂಗಳೂರು ಧರ್ಮಪ್ರಾಂತ್ಯದ ವೈಸಿಎಸ್ ನಿರ್ದೇಶಕರಾದ ವಂದನೀಯ ಫಾ. ರೋಷನ್ ಡಿಸೋಜಾ ಅವರು ಪ್ರಧಾನ ಯಾಜಕರಾಗಿ ಆಗಮಿಸಿ ದಿವ್ಯ ಬಲಿ ಪೂಜೆಯನ್ನು ನೆರವೇರಿಸಿದರು. ತಮ್ಮ ಪ್ರವಚನದಲ್ಲಿ ಅವರು, “ಕ್ರೈಸ್ತ ಶಿಕ್ಷಣವು ಯೇಸುಕ್ರಿಸ್ತರ ರೂಪಾಂತರದ ಅರ್ಥವನ್ನು ನಮಗೆ […]
Reported and photography by Ganesh Nayak ಕಲ್ಯಾಣಪುರದ ಮಿಲಾಗ್ರೆಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಮತ್ತು ಪರಿಸರ ಕ್ಲಬ್, ಐಕ್ಯೂಎಸಿ ಸಹಯೋಗದೊಂದಿಗೆ, ಫೆಬ್ರವರಿ 28, 2026 ರಂದು ಕಾಲೇಜು ಆವರಣದ ಮಿಯಾವಾಕಿ ಅರಣ್ಯ ಪ್ರದೇಶದಲ್ಲಿ “ಸಾಲುಮರದ ತಿಮ್ಮಕ್ಕ ಗ್ರೀನ್ ಡ್ರೈವ್ – ಎ ಪ್ಲಾಂಟೇಶನ್ ಪ್ರೋಗ್ರಾಂ” ಅನ್ನು ಯಶಸ್ವಿಯಾಗಿ ಆಯೋಜಿಸಿದವು. ಪರಿಸರ ಜಾಗೃತಿಯನ್ನು ಉತ್ತೇಜಿಸುವ ಮತ್ತು ವಿದ್ಯಾರ್ಥಿಗಳು ಅರಣ್ಯೀಕರಣ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ನಡೆಸಲಾಯಿತು. ಮರಗಳನ್ನು ನೆಡುವುದು ಮತ್ತು […]

