
ಕೋಟೇಶ್ವರ; ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯು 2025 ಮೇ ತಿಂಗಳಲ್ಲಿ ನಡೆಸಿದ ಸಿ. ಎ. ಅಂತಿಮ ಪರೀಕ್ಷೆಯಲ್ಲಿ ಕುಂದಾಪುರದ ಕುಂದೇಶ್ವರ ರಸ್ತೆಯಲ್ಲಿರುವ CA ಎನ್. ಶಾಂತಾರಾಮ ನಾಯಕ್ & ಕೋ, ಲೆಕ್ಕ ಪರಿಶೋಧಕರ ಸಂಸ್ಥೆ ಇದರ ವಿದ್ಯಾರ್ಥಿನಿ ಅಮೃತ ಅವರು ಉತ್ತೀರ್ಣರಾಗಿರುತ್ತಾರೆ. ಇವರು ಕೋಟೇಶ್ವರದ ಹಳೆಅಳಿವೆ ಕುಂಬ್ರಿ ನಿವಾಸಿ ಬೇಬಿ ಮತ್ತು ಚಂದ್ರ ದೇವಾಡಿಗರ ಪುತ್ರಿಯಾಗಿರುತ್ತಾಳೆ.










































































