

ಹಳ್ನಾಡಿನ ತುಳಸಿ ವಿದ್ಯಾಮಂದಿರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯವನ್ನು ಶ್ರದ್ಧಾ – ಭಕ್ತಿಯಿಂದ ಆಚರಿಸಲಾಯಿತು.ಶ್ರೀ ಕೃಷ್ಣನ ಮೂರ್ತಿಗೆ ಆರತಿ ಬೆಳಗಿ ಪುಷ್ಪಾರ್ಚನೆಯನ್ನು ಸಲ್ಲಿಸಿ, ದೇವರಿಗೆ ಪ್ರಿಯವಾದ ಭಜನೆಯ ಮೂಲಕ ಭಕ್ತಿಯಿಂದ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.
ಮುಖ್ಯ ಅತಿಥಿಯಾಗಿ ಜೋತಿಷಿ ವಿದ್ವಾನ್ ಹಾಗೂ ಸಂಸ್ಕೃತ ಪಂಡಿತರಾದ ಬಸ್ರೂರಿನ ಶ್ರೀಯುತ ಮಾಧವ ಅಡಿಗರು ಆಗಮಿಸಿದ್ದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಶ್ರೀ ಕೃಷ್ಣನು ಬಂಧನದಲ್ಲಿದ್ದ ತನ್ನ ತಂದೆ ತಾಯಿಗೆ ಮುಕ್ತಿ ಕೊಡಿಸಿದವನು.ನಾವು ಇದೇ ಭವಬಂಧನದಲ್ಲಿದ್ದೇವೆ.ಮಕ್ಕಳ ಆಲಾಪಗಳು ತಂದೆತಾಯಿಯ ಮನಸ್ಸಿಗೆ ಮುದ ನೀಡುತ್ತವೆ. ಇಂತಹ ಮಕ್ಕಳಿಗೆ ಶ್ರೀ ಕೃಷ್ಣನ ವೇಷಧರಿಸಿ ಅವರ ಹಾವಭಾವದಿಂದ ನಾವು ಸಂತುಷ್ಟರಾಗುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ರೇಷ್ಮ ಪ್ರದೀಪ್ ಮಾತನಾಡಿ ಮಕ್ಕಳಿಗೆ ಶ್ರೀ ಕೃಷ್ಣ ಜನ್ಮಾಚರಣೆಯ ಮಹತ್ವವನ್ನು ಹಾಗೂ ಅದರ ಆಚರಣೆಯನ್ನು ತಿಳಿಸಿದರು. ವೇದಿಕೆಯಲ್ಲಿ ತುಳಸಿ ಎಜ್ಯುಕೇಶನ್ ಹಾಗೂ ಕಲ್ಚರಲ್ ಟ್ರಸ್ಟ್ ನ ಮುಖ್ಯಸ್ಥರಾದ ಶ್ರೀಯುತ ಕೃಷ್ಣರಾಯ ಶಾನುಬಾಗ್ ರವರು ಉಪಸ್ಥಿತರಿದ್ದರು.ಪುಟಾಣಿ ಮಕ್ಕಳು ಕೃಷ್ಣ ರಾಧೆಯರ ವೇಷ ಧರಿಸಿ ಸಂಭ್ರಮಿಸಿದರು.
ಹಾಗೂ ಶ್ರೀ ಕೃಷ್ಣನ ಕುರಿತಾದ ಹಾಡು,ನೃತ್ಯ ಹಾಗೂ ಶ್ಲೋಕ ಪಠಣಗಳ ಮೂಲಕ ಕೃಷ್ಣನನ್ನು ಆರಾಧಿಸಿದರು.
ಶಾಲಾ ಶಿಕ್ಷಕಿ ದಿವ್ಯ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ದೀಪಿಕಾ ವಂದಿಸಿದರು.ಹಾಗೂ ಸಹ ಶಿಕ್ಷಕ ರೂಪ ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಪಾಲಕರಿಗೆ, ವಿದ್ಯಾರ್ಥಿಗಳಿಗೆ ಪ್ರಸಾದವನ್ನು ವಿತರಿಸಲಾಯಿತು.
































































































































