


ಕೋಲಾರ:- ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಸೇರಿದಂತೆ ಇಲಾಖೆಯ ವಿವಿಧ ಅಧಿಕಾರಿಗಳು ನಡೆಸಿರುವ ಭ್ರಷ್ಟಾಚಾರ, ಸಂಬಂಧಿಕರು, ಆಪ್ತರ ಹೆಸರಿನಲ್ಲಿ ಮಾಡಿರುವ ಅಪಾರ ಆಸ್ತಿಯ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಮತ್ತು ಸರ್ವಜನಿಕರಿಗೆ ಅಗತ್ಯ ಗಿಡಗಳನ್ನು ಒದಗಿಸಬೇಕು, ಕೃಷಿ ಅರಣ್ಯ ಪ್ರೋತ್ಸಾಹಧನದ ಮೊತ್ತ ಹೆಚ್ಚಿಸಲು ಆಗ್ರಹಿಸಿ ಬಹುಜನ ಸಮೈಖ್ಯ ಸಮಿತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ಸಂಘಟನೆಯ ಮುಖಂಡರು, ಅರಣ್ಯ ಇಲಾಖೆ ವತಿಯಿಂದ ಸರ್ವಜನಿಕರಿಗೆ ಉತ್ತಮವಾದ ಎತ್ತರವಾದ ಹುಣಸೆ, ತೇಗ, ಸಿಲ್ವರ್ ಓಕ್, ಲಸು, ಜಂಬುನೇರಳೆ ಮತ್ತು ಶ್ರೀಗಂಧ,ರಕ್ತಚಂದನ ಮುಂತಾದ ಸಸಿಗಳನ್ನು ಒದಗಿಸಬೇಕು. ಮತ್ತು ಕೃಷಿ ಅರಣ್ಯ ಪೆÇ್ರೀತ್ಸಾಹ ಯೋಜನೆಯಡಿ ಪ್ರಸ್ತುತ ನೀಡುತ್ತಿರುವ ಪ್ರೋತ್ಸಾಹ ಧನದ ಮೊತ್ತವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತೆ ಬರುವ ಸರ್ವಜನಿಕರ ರ್ಜಿಗಳನ್ನು ಶ್ರೀಘ್ರವಾಗಿ ವಿಲೇವಾರಿ ಮಾಡಲು ಇಲಾಖೆಯವರು ಕ್ರಮ ವಹಿಸಬೇಕು. ಇಲಾಖೆಯ ಪರವಾನಿಗೆ ಇಲ್ಲದೆ ಅಕ್ರಮವಾಗಿ ಸಾಗಾಣಿಕೆ ಮಾಡುವ ಸೌದೆ ಮತು ಇತರೆ ಅರಣ್ಯ ಉತ್ಪನ್ನಗಳನ್ನು ತಡೆಯಲು ಇಲಾಖೆಯವರು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
1980 ರ ಪರ್ವದಲ್ಲಿ ರೈತರಿಗೆ ಕಂದಾಯ ಇಲಾಖೆಯಿಂದ ಮಂಜೂರಾಗಿರುವ ಅರಣ್ಯ ಜಮೀನುಗಳ ಪ್ರಕರಣಗಳಲ್ಲಿ ಜಂಟಿ ಮೋಜಣಿ ಮಾಡಿ ರ್ಕಾರದ ಆದೇಶದ ಅನುಸಾರ ಮಂಜೂರಾದ ರೈತರಿಗೆ ಸದರಿ ಜಮೀನುಗಳನ್ನು ನಿಯಮಾನುಸಾರ ಬಿಟ್ಟುಕೊಡಲು ಅರಣ್ಯ ಇಲಾಖೆ ತ್ವರಿತವಾಗಿ ಕ್ರಮವಹಿಸಬೇಕು ಎಂದು ಕೋರಿದರು.
ಅರಣ್ಯ ಭೂಮಿಗಳ ಕ್ರೋಢೀಕೃತ ದಾಖಲೆಯಂತೆ ರ್ಕಾರದ ಮಟ್ಟದಲ್ಲಿ ಈಗಾಗಲೆ ಎಸ್.ಐ.ಟಿ ವಿಶೇಷ ತನಿಖಾ ತಂಡವನ್ನು ರಚಿಸಿದ್ದುಇದರ ಸಂಬಂಧ ಅರಣ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ರ್ಕಾರದ ಮಟ್ಟದಲ್ಲಿ ಅಂತಿಮ ತರ್ಮಾನ ಆಗುವವರೆಗೆ ರೈತರನ್ನು ಒಕ್ಕಲೆಬ್ಬಿಸಬಾರದು ಎಂದು ಆಗ್ರಹಿಸಿದರು.
ಕೋಲಾರ ಜಿಲ್ಲೆ ರೈತರು ಅತಿ ಹೆಚ್ಚು ಶ್ರೀಗಂಧ ಮತ್ತು ರಕ್ತಚಂದನ ಸಸಿಗಳನ್ನು ತಮ್ಮ ಜಮೀನುಗಳಲ್ಲಿ ಬೆಳೆಸಿಕೊಂಡಿದ್ದು ಈಗಾಗಲೇ ಸುಮಾರು 8-10 ವರ್ಷದ ಮರಗಳಾಗಿದ್ದು ಕಳ್ಳಕಾಕರಿಂದ ನಿರಂತರವಾಗಿ ರೈತರು ತೊಂದರೆಗೆ ಒಳಗಾಗಿರುತ್ತಾರೆ.ಇದರ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ವಿಶೇಷ ಗಮನ ಹರಿಸಿ ರೈತರಿಗೆ ಸೂಕ್ತ ಬಂದೋಬಸ್ತು ಒದಗಿಸಲು ಮನವಿ ಮಾಡಿದರು.
ಶ್ರೀನಿವಾಸಪುರ ವಲಯ ಅರಣ್ಯಾಧಿಕಾರಿ ಮಹೇಶ್ ಅವರು, ಹೊರಗುತ್ತಿಗೆಯಲ್ಲಿ ಶ್ರೀನಿವಾಸಪುರ ವಲಯದಲ್ಲಿ ವಾಹನ ಚಾಲಕನಾಗಿ ನೇಮಕ ಮಾಡಿಕೊಂಡಿರುವ ಭರತ್ಕುಮಾರ್ ರೆಡ್ಡಿ ಇವರನ್ನು ತನ್ನ ಮನೆಯ ಸ್ವಂತ ಕೆಲಸಗಳಿಗೆ ಬಳಸಿಕೊಂಡು ರ್ಕಾರಿ ವೇತವನ್ನು ಪಾವತಿಸಿ ರ್ಕಾರಿ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದು ಇದರ ಸಮಗ್ರ ತನಿಖೆಯಾಗಬೇಕು ಮತ್ತು ಭರತ್ಕುಮಾರ್ ರೆಡ್ಡಿ ವಾಹನ ಚಾಲಕ ಇವರನ್ನು ಹೊರಗುತ್ತಿಗೆ ಸೇವೆಯಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.
ರಘುರಾಮರೆಡ್ಡಿ ಅರಣ್ಯಗುತ್ತಿಗೆದಾರ, ಕಲ್ಲೂರು ಗ್ರಾಮ, ಶ್ರೀನಿವಾಸಪುರ ತಾಲ್ಲೂಕು ಇವರಿಂದ ಶ್ರೀನಿವಾಸಪುರ ಕೋಲಾರ ಮತ್ತು ಮಾಲೂರು ವಲಯಗಳಲ್ಲಿ ಅರಣ್ಯ ಒತ್ತುವರಿ ತೆರವು ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸದರಿ ಗುತ್ತಿಗೆದಾರರನ್ನು ನಿಯಮಬಾಹಿರವಾಗಿ ಟೆಂಡರ್ಗಳಲ್ಲಿ ವಂಚನೆ ಮಾಡಿದ್ದರೂ, ಸುಮಾರು 30 ರಿಂದ 40 ಕೋಟಿ ರೂಗಳ ಹಣವನ್ನು ಸೆಳೆದು ದುರುಪಯೋಗ ಮಾಡಿಕೊಂಡು ರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುವ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಕೋರಿದರು.
ಉಪ ಅರಣ್ಯ ಸಂರಕ್ಷಣಾಧಿಖಾರಿ ಸರೀನಾ ಸಿಕ್ಕಲಿಗಾರ್ ಅವರು, ಎಸ್ಸಿಪಿ ಮತ್ತು ಟಿಎಸ್ಪಿ ಯೋಜನೆಯಡಿಯಲ್ಲಿ ಅರಣ್ಯದ ಅಂಚಿನಲ್ಲಿರುವ ಗ್ರಾಮಗಳ ಎಸ್.ಸಿ , ಎಸ್.ಟಿ ಫಲಾನುಭವಿಗಳ ಕುಟುಂಬಗಳಿಗೆ ಸಂದಾಯವಾಗಬೇಕಾದ ಹಣವನ್ನು ಗ್ಯಾಸ್ ಏಜನ್ಸಿಗಳ ಮೂಲಕ ರ್ಕಾರಕ್ಕೆ ವಂಚಿಸಿ ಹಣ ದುರುಪಯೋಗ ಮಾಡಿಕೊಂಡಿರುವ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಸರೀನಾ ಸಿಕ್ಕಲಿಗಾರ್ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹೇಶ್ ಅವರು ರ್ಕಾರದ ಯೋಜನೆಯಾದ ನಗರವನ ಕಾಮಗಾರಿಯನ್ನು ಕೋಲಾರ ಮತ್ತು ಬಂಗಾರಪೇಟೆ ವಲಯಗಳಲ್ಲಿ ಕೇಂದ್ರ ರ್ಕಾರದ ಮಾನದಂಡಗಳನ್ನು ಅಂದರೆ ನಗರ ವ್ಯಾಪ್ತಿಯಲ್ಲಿಯೇ ನರ್ಮಾಣ ಮಾಡಬೇಕಾದ ಕಾಮಗಾರಿಗಳನ್ನು ನಗರ ಹೊರವಲಯಗಳಲ್ಲಿ ನರ್ಮಾಣ ಮಾಡಿ ರ್ಕಾರದ ಹಣವನ್ನು ದುರುಪಯೋಗ ಪಡಿಸಿಕೊಂಡಿರುತ್ತಾರೆ.
ಉದಾಹರಣೆಗೆ ಕೋಲಾರ ವಲಯದಲ್ಲಿ ಕೋಲಾರ ನಗರ ವ್ಯಾಪ್ತಿಯಲ್ಲಿ ಮಾಡಬೇಕಾದ ಕಾಮಗಾರಿಯನ್ನು ಕೋಲಾರ ನಗರ ಹೊರ ವಲಯದ ಮಡೇರಹಳ್ಳಿ ಸಸ್ಯಕ್ಷೇತ್ರದಲ್ಲಿ ನಿಯಮ ಮತ್ತು ಮಾನದಂಡಗಳನ್ನು ಉಲ್ಲಂಘಿಸಿ ,ಕಾಮಗಾರಿಗಳನ್ನು ಅಪರ್ಣವಾಗಿ ನರ್ಮಾಣ ಮಾಡಿ ರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುವುದಲ್ಲದೆ,ರ್ಕಾರದ ಅನುದಾನವನ್ನು ಲಪಟಾಯಿಸಿ ರ್ಕಾರಕ್ಕೆ ರ್ಥಿಕ ನಷ್ಟ ಉಂಟು ಮಾಡಿರುವ ಬಗ್ಗೆ ಕೇಂದ್ರ ರ್ಕಾರದ ಸಿ.ಇ.ಸಿ ವತಿಯಿಂದ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆ ನೇತೃತ್ವವನ್ನು ಬಹುಜನ ಸಮೈಖ್ಯ ಸಮಿತಿ ರಾಜ್ಯಾಧ್ಯಕ್ಷ ಸಂಗೊಂಡಹಳ್ಳಿ ಪಿಳ್ಳಪ್ಪ, ಹರಟಿ ಸಂಪತ್, ಹರಟಿ ಪ್ರಕಾಶ್, ರಾಜ್ಯ ಕರ್ಯರ್ಶಿ ಬೈರಂಡಹಳ್ಳಿ ನಾಗೇಶ್, ಜಿಲ್ಲಾಧ್ಯಕ್ಷ ಆವಣಿ ಮಂಜುನಾಥ್, ಮಹಿಳಾ ಮುಖಂಡರಾದ ಶಾಲಿನಿ ಮತ್ತಿತರರು ವಹಿಸಿದ್ದು, ಜಿಲ್ಲಾಧಿಕಾರಿಗಳ ಪರವಾಗಿ ತಹಸೀಲ್ದಾರ್ ಹರಿಪ್ರಸಾದ್ ಅವರಿಗೆ ಮನವಿ ಸಲ್ಲಿಸಿದರು.


