

ಕುಂದಾಪುರ ; ಸಿಟಿ ವತಿಯಿಂದ ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಸನ್ಮಾನ ಕಾರ್ಯಕ್ರಮ (8-7-2025)
ಜ್ಯೂನಿಯರ್ ಜೆ.ಸಿ.ಕುಂದಾಪುರ ಸಿಟಿ ಇವರ ಆಶ್ರಯದಲ್ಲಿ ಕುಂದಾಪುರದ ಆರ್.ಎನ್.ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ ಸಮಾರಂಭದಲ್ಲಿ ‘ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ’ ದ ಅಂಗವಾಗಿ ಆರ್. ಎನ್. ಎಸ್. ಸಂಯುಕ್ತ ಪ.ಪೂ ಕಾಲೇಜಿನ ಪ್ರಾಂಶುಪಾಲರಾದಪ್ರೊ.ನವೀನ ಕುಮಾರ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಓರಿಯಂಟೇಶನ್ ಮತ್ತು ಯುತ್ ಎಫೇರ್ಸ್ನ ರಾಷ್ಟ್ರೀಯ ನಿರ್ದೇಶಕರಾದ SNR. PPF. ಹುಸೇನ್ ಹೈಕಾಡಿಯವರು ಸನ್ಮಾನಿತರಾದ ನವೀನ ಕುಮಾರ್ ಶೆಟ್ಟಿಯವರ ಸಾಮಾಜಿಕ ಕೊಡುಗೆಗಳ ಬಗ್ಗೆ ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ತಿಳಿಸಿದರು. ಸೀನಿಯರ್ ಛೇಂಬರ್ಸ್ ಇಂಟರ್ ನ್ಯಾಶನಲ್ ನ ರಾಷ್ಟ್ರೀಯ ಅಧ್ಯಕ್ಷ SNR PPF ಎಮ್. ಆರ್. ಜಯೇಶ್, SCI ನ ಏರಿಯಾ-G ಇದರ ರಾಷ್ಟ್ರೀಯ ಉಪಾಧ್ಯಕ್ಷ SNR,PPF ಸಿದ್ಧಗಂಗಯ್ಯ, ಕೋಟಾ ಲೀಜನ್ ನ ಅಧ್ಯಕ್ಷ SNR ಕೇಶವ ಆಚಾರ್, ಜೆಜೆಸಿ ಸುಮೇಧಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ‘ ಸೇವ್ ವಾಟರ್’ ಥೀಮ್ ನ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಕಾಲೇಜಿನ ವಿಜ್ಞಾನ ವಿಬಾಗದ ವಿದ್ಯಾರ್ಥಿನಿ ಶರಧಿ ಪ್ರಾರ್ಥಿಸಿದರು. JCI ಕುಂದಾಪುರ ಸಿಟಿ ಜೆ.ಸಿ ಯ ಅಧ್ಯಕ್ಷ JC ಸಲೀಮ್ ರವರು ಧನ್ಯವಾದ ಸಲ್ಲಿಸಿದರು. ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥೆ ಜಯಶೀಲಾ ಪೈಯವರು ಕಾರ್ಯಕ್ರಮ ನಿರೂಪಿಸಿದರು.













































































