

ಕುಂದಾಪುರ, ಅ.26: ಮಿಲಾಗ್ರಿಸ್ ಕ್ರೆಡಿಟ್ ಸೌರ್ಹಾದ್ ಕೋ-ಆಪ್ ಸೊಸೈಟಿ ಲಿ. ಇವರಿಂದ ಎಲ್ಲಾ 43 ಮಕ್ಕಳಿಗೆ ಮಿಲಾಗ್ರಿಸ್ ಸೌರ್ಹಾದ ಸೊಸೈಟಿಯಿಂದ ಕುಂದಾಪುರ ಚೈತನ್ಯ ವಿಶೇಷ ಶಾಲೆಗೆ ಕಲಿಕಾ ವಸ್ತುಗಳ ಕೊಡುಗೆ ಹಸ್ತಾಂತರ ಕಾರ್ಯಕ್ರಮ ನಡೆಯಿತು.
43 ವಿಶೇಷ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ವಿತರಿಸಿದ ಈ ಕಾರ್ಯಕ್ರಮಕ್ಕೆ ಸ್ಥಳೀಯ ರೋಜರಿ ಚರ್ಚಿನ ಧರ್ಮಗುರು ಅ|ವಂ|ಪಾವ್ಲ್ ರೇಗೊ ಮುಖ್ಯ ಅಥಿತಿಗಳಾಗಿ ಆಗಮಿಸಿ ವಿಶೇಷ ಚೈತನ್ಯ ಮಕ್ಕಳಿಗೆ ಕೊಡುಗೆಯನ್ನು ವಿತರಿಸಿ ‘ವಿಶೇಷ ಮಕ್ಕಳಿಗೆ ನೋಡಿಕೊಳ್ಳುವಂತಹ ಶಿಕ್ಷಕರು, ಶಿಕ್ಷಕೇತರರ ಸೇವೆ ದೇವರು ಮೆಚ್ಚುವಂತಹ ಕೆಲಸ, ಇದು ದೇವರ ಕೆಲಸ, ನಿಮ್ಮ ಪ್ರಯತ್ನಗಳಿಂದ ಈ ಮಕ್ಕಳು ಸಮಾಜದಲ್ಲಿ ಒಳ್ಳೆಯ ಕೆಲಸಮಾಡುವಂತಹ ಉತ್ತಮ ಕೆಲಸ ಮಾಡುತ್ತೀರಿ, ಹಾಗೇ ಮಿಲಾಗ್ರಿಸ್ ಕ್ರೆಡಿಟ್ ಸೊಸೈಟಿ ಬರೆ ಲಾಭವನ್ನು ನೋಡದೆ, ಅವರಿಗೆ ಸಿಕ್ಕ ಲಾಭದಲ್ಲಿ ಕೆಲ ಭಾಗವನ್ನು ಇಂತಹ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ನೀಡಿ ಉ ಸಮಾಜಮುಖಿ ಕೆಲಸವನ್ನು ಮಾಡುತ್ತಾರೆ, ದೇವರು ಅವರ ಆಡಳಿತ ಮಂಡಳಿಗೆ ಸಿಬಂದಿ ವರ್ಗಕ್ಕೆ ಶುಭವನ್ನು ಕೋರುತ್ತೇನೆ’ ಎಂದು ಸಂದೇಶ ನೀಡಿದರು
ಸ್ವಾತಂತ್ರ್ಯ ಸಂಭ್ರಮದಲ್ಲಿರುವ ಸಮಯದಲ್ಲಿ ಭಾರತೀಯ ನೌಕಾ ಇಲಾಖೆಯಲ್ಲಿ 15 ವರ್ಷ ಸೇವೆ ನೀಡಿದಂತಹ ಜಾರ್ಜ್ ಬಾರೆಟ್ಟೊ ಅವರನ್ನು ಅತಿಥಿಗಳನ್ನಾಗಿ ಅಹ್ವಾನಿಸಿದ್ದು ‘ಅವರು ಸಮಾಜದಲ್ಲಿ ಸಮಸ್ಯೆ, ಕಷ್ಟ, ವಂಚನೆ, ಮೋಸ ನಡೆಯುವ ಈ ಕಾಲದಲ್ಲಿ ವಿಶೇಷ ಮಕ್ಕಳನ್ನು ವಿಶೇಷವಾಗಿ ಕಾಳಜಿ ವಹಿಸಿ ಮುಖ್ಯವಾಹಿನಿಗೆ ತರುವಂತ ಈ ಕಾರ್ಯ ಮಾಡುತ್ತೀರುವ ಸಂಸ್ಥೆ ಮತ್ತು ಇಲ್ಲಿನ ಶಿಕ್ಷಕರ ಕೆಲಸ ನೀಜವಾಗಲೂ ಪುಣ್ಯದ ಕೆಲಸ’ ಎಂದು ಶ್ಲಾಘಿಸಿದರು.
ಸೊಸೈಟಿಯ ಕುಂದಾಪುರ – ಭಟ್ಕಳ ವಿಭಾಗದ ಅಭಿವ್ರದ್ದಿ ಅಧಿಕಾರಿ ರೋಹಿತ್ ಮೋಗೆರ್, ನಮ್ಮ ಸೊಸೈಟಿ ಬರೆ ಲಾಭವನ್ನು ನೋಡದೆ, ಸಾಮಜದ ಒಳಿತಿಗಾಗಿ ಇಂತಹ ಸಹಾಯವನ್ನು ವರ್ಷಪ್ರತಿ ಮಾಡಿಕೊಂಡು ಬರುತ್ತದೆ ಎಂದು ತಿಳಿಸುತ್ತಾ, ನಮ್ಮ ಸಂಸ್ಥೆ ಸುಮಾರು 1493 ಕೋಟಿ ದುಡಿಯುವ ಬಂಡವಾಳವನ್ನು ಹೊಂದಿದೆ, ಸರಿ ಸುಮಾರು 1400 ಕೋಟಿಗಳಷ್ಟು ಠೇವಣಿ ಸಂಗ್ರಹಣೆ ಹೊಂದಿದೆ ರೂ 1048 ಕೋಟಿ ಸಾಲ ನೀಡಿದೆ 111 ಶಾಖೆಗಳಿದ್ದು 1198 ಸಿಬ್ಬಂದಿಗಳು ಮತ್ತು 332 ಪಿಗ್ಮಿ ಏಜೆಂಟರುಗಳು ಸೇರಿದಂತೆ ಒಟ್ಟೂ 1530 ಜನರು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಅಗತ್ಯ ವಸ್ತುಗಳನ್ನು ಹಂಚುವ ಕಾರ್ಯಕ್ರಮ ಕಳೆದ 8 ವರ್ಷಗಳಿಂದ ನಡೆಸುತ್ತಾ ಬಂದಿರುತ್ತೇವೆ. ಕಳೆದ 2016 ರಿಂದ 9 ಜಿಲ್ಲೆಗಳಲ್ಲಿ ಪ್ರತಿ ವರ್ಷ ಸರಿಸುಮಾರು 3000 ಸಾವಿರ ಫಲಾನುಭವಿಗಳು ಇದರ ಲಾಭವನ್ನು ಪಡೆಯುತಿದ್ದಾರೆ. ಪ್ರಸ್ತುತ ವರ್ಷ 2025 ರಲ್ಲಿ 9 ಜಿಲ್ಲೆಯ 54 ಸಂಸ್ಥಗಳಿಂದ ಒಟ್ಟೂ 3797 ಫಲಾನುಭವಿಗಳಿಗೆ ಅಗತ್ಯ ವಸ್ತುಗಳನ್ನು ನೀಡುತ್ತಿದ್ದೇವೆ. ಎಂದು ತಿಳಿಸಿದರು. ಕುಂದಾಪುರ ಶಾಖೆಯ ಜೋನ್ಸನ್ ಮಿನೇಜಸ್ ಅತಿಥಿಗಳಿಗೆ ಗೌರವದ ಕಾಣಿಕೆ ನೀಡಿದರು. ಅತಿಥಿಗಳಾದ ಶಶಿಧರ್ ಎಚ್. ಭಟ್ಕಳ ವಿಭಾಗದ ತನೋಜ್ ನಾಯ್ಕ, ದೇವಂದ್ರ ನಾಯ್ಕ್, ಬೈಂದೂರು ಶಾಖೆಯ ವಿನಯ, ವೀಣಾ ರೊಡ್ರಿಗಸ್, ಗಂಗೋಳಿ ಶಾಖೆಯ ಶ್ರೀಧರ ಮತ್ತು ವೀಣಾ,ಕುಂದಾಪುರ ಶಾಖೆಯ ಕಾರ್ತೀಕ, ಶೀಕರ ಮತ್ತು ಪ್ರಜ್ಞಾ ಉಪಸ್ಥಿತರಿದ್ದರು. ಚೈತನ್ಯ ವಿಶೇಷ ಮಕ್ಕಳು ಸ್ವಾಗತ ಗೀತೆ ಹಾಡಿದರು ಮತ್ತು ದೇಶ ಭಕ್ತಿ ಗೀತೆಯ ನ್ರತ್ಯ ಪ್ರದರ್ಶನ ಮಾಡಿದರು.
ಶಾಲೆಯ ಪ್ರಾಂಶುಪಾಲರಾದ ಲೀಲಾವತಿ ಕರ್ಕಡ ವಿಶೇಷ ಶಾಲೆಯ ಬಗ್ಗೆ ತಿಳಿಸಿ ವಿಶೇಷ ಮಕ್ಕಳಿಗೆ ಮೊದಲು ಕುಳಿತುಕೊಳ್ಳಲು, ತಿನ್ನಲು ಮತ್ತಿತರ ವಿಷಯಗಳನ್ನು ಮನದಟ್ಟು ಮಾಡಿಸಿದ ನಂತರ ಅವರನ್ನು ಶಿಕ್ಷಣಕ್ಕೆ ಹೊಂದಿಸಬೇಕು ತಿಳಿಸಿ, ವಂದಿಸಿದರು. ಮಿಲಾಗ್ರಿಸ್ ಸೊಸೈಟಿಯ ಸಿಬಂದಿಗಳಾದ ಪ್ರಿಯಾಂಕ ಡಿ.ಕೆ. ಸ್ವಾಗತಿಸಿದರು, ವೀಣಾ ಖಾವಿ೯ ಕಾರ್ಯಕ್ರಮ ನಿರೂಪಿಸಿದರು.
























































