

ಶ್ರೀನಿವಾಸಪುರ : ಭಾತೃತ್ವ ಭಾವನೆ, ರಾಜನೀತಿ, ಮನೋಧರ್ಮ, ಮಾನವೀಯ ಮೌಲ್ಯ ಪ್ರಜಾಪ್ರಭುತ್ವ ರಾಮಾಯಣ ಮಹಾಕಾವ್ಯವು ಪರಿಚಯಿಸಿ ವಿಶ್ವಕ್ಕೆ ರಾಮಾಯಣ ಎಂಬ ಅತಿದೊಡ್ಡದಾದ ಕಾವ್ಯವನ್ನು ಕೊಡುಗೆ ನೀಡಿದ್ದಾರೆ ಎಂದು ದೊಡ್ಡಬಳ್ಳಾಪುರ ಮಠದ ಶ್ರೀ ಬ್ರಹ್ಮಾನಂದಸ್ವಾಮಿ ಆರ್ಶೀವಸಿದರು.
ತಾಲೂಕಿನ ಪುಲಗೋರಕೋಟೆ ಗ್ರಾಮದಲ್ಲಿ ಮಂಗಳವಾರ ವಾಲ್ಮೀಕಿ ಸಮುದಾಯಭವನನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
ಇಂದು ಪ್ರತಿ ಗ್ರಾಮಗಳಲ್ಲಿ ಶ್ರೀ ಕೋದಂಡರಾಮಸ್ವಾಮಿ, ಆಂಜನೇಯಸ್ವಾಮಿ, ಇರಬೇಕಾದರೆ ಪ್ರಮುಖ ಕಾರಣ ವಾಲ್ಮೀಕಿ ಮಹರ್ಷೀ ಋಷಿಗಳೇ ಕಾರಣ . ವಾಲ್ಮೀಕಿ ಮಹರ್ಷಿರವರು ರಾಮಾಯಣವನ್ನು ರಚನೆ ಮಾಡದಿದ್ದರೆ ಇಂದು ಶ್ರೀರಾಮ, ಸೀತಾಮಾತೆ, ಲಕ್ಷö್ಮಣ, ಆಂಜನೇಯ ಯಾರು ಅನ್ನುವುದು ಸಮಾಜಕ್ಕೆ ತಿಳಿಯುತ್ತಿರಲ್ಲಿಲ್ಲ. ವಾಲ್ಮೀಕಿ ಮಹರ್ಷಿರವರು ಆಗಿನ ಕಾಲದಲ್ಲಿಯೇ ಆಡಳಿತದ ಕಾರ್ಯವೈಖರಿ ಬಗ್ಗೆ ರಾಮಾಯಣದಲ್ಲಿ ಉಲ್ಲೇಖ ಮಾಡಿದ್ದರು. ಅವರು ಕೊಟ್ಟ ಆದರ್ಶಗಳು ಪ್ರತಿಯೊಬ್ಬರು ಅರಿತುಕೊಳ್ಳಬೇಕಾಗಿದೆ ಎಂದರು. ನಾವು ಮಾಡುವ ಸತ್ಕಾರ್ಯಗಳು ಶಾಶ್ವತ, ನಾವು ಇಲ್ಲದಿದ್ದರು ಸಹ ನಾವು ಮಾಡುವ ಕೆಲಸ ಕಾರ್ಯಗಳು ಶಾಶ್ವತವಾಗಿ ಉಳಿಯುತ್ತದೆ ಎಂದರು.
ಜಿ.ಪಂ.ಮಾಜಿ ಸದಸ್ಯ ಗೋವಿಂದಸ್ವಾಮಿ ಮಾತನಾಡಿ ವಾಲ್ಮೀಕಿ ಮಹರ್ಷಿರವರು ಯಾವುದೇ ಸ್ವಾರ್ಥವಿಲ್ಲದೆ ಎಲ್ಲಾ ಸಮುದಾಯದ ಏಳಿಗೆಗಾಗಿ ದುಡಿದು ಆದರ್ಶ ಪ್ರಾಯರಾಗಿದ್ದು, ಇಂದಿನ ಯುವ ಪೀಳಿಗೆ ಹಾಗು ಪ್ರತಿಯೊಬ್ಬರು ವಾಲ್ಮೀಕಿ ಮಹರ್ಷಿ ಆದರ್ಶಗಳನ್ನು ಜೀವನಕ್ಕೆ ಆಳವಡಿಸಿಕೊಳ್ಳುವಂತೆ ಸಲಹೆ ನೀಡಿದರು. ಪುಲಗೂರಕೋಟೆ ಗ್ರಾಮದಲ್ಲಿ ನೂತನವಾಗಿ ನಿರ್ಮಣವಾಗಿರುವ ಸಮುದಾಯಭವನವನ್ನ ಎಲ್ಲಾ ಸಮುದಾಯದವರು ಉಪಯೋಗಿಸಿಕೊಳ್ಳಬಹುದಾಗಿದೆ ಎಂದರು.
ಗಂಗನಗಾರಪಲ್ಲಿ ಏಕಲವ್ಯ ಮಾದರಿ ವಸತಿ ಶಾಲೆ ಹಾಗೂ ಪಿಯು ಕಾಲೇಜು ಆವರಣದಲ್ಲಿ ಹೆಚ್ಚುವರಿ ಕಟ್ಟಡ ಮತ್ತು ರಂಗಮಂದಿರ ,ವಸತಿ ನಿಲಯ ನಿರ್ಮಾಣಕ್ಕೆ ಸರ್ಕಾರದಿಂದ ೪೦ ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು.
ಗ್ರಾ.ಪಂ.ಅಧ್ಯಕ್ಷ ರಘುನಾಥರೆಡ್ಡಿ, ಉಪಾಧ್ಯಕ್ಷೆ ರೂಪಶ್ರೀನಿವಾಸ್, ವಾಲ್ಮೀಕಿ ಸಮುದಾಯದ ಜಿಲ್ಲಾಧ್ಯಕ್ಷ ನರಸಿಂಹಯ್ಯ, ಜಿಲ್ಲಾ ಸಂಚಾಲಕ ಆನಂದ್,ವಾಲ್ಮೀಕಿ ಸಮುದಾಯದ ಯುವಘಟಕದ ಅಧ್ಯಕ್ಷ ನವೀನ್ಕುಮಾರ್ ಗ್ರಾ.ಪಂ ಸದಸ್ಯ ಹನುಮಂತಪ್ಪ, ಮುಖಂಡರಾದ ರಾಮಲಿಂಗಾರೆಡ್ಡಿ, ನರೇಂದ್ರ, ಗೋಪಾಲ್, ಜಿ..ವೆಂಕಟರಮಣಪ್ಪ, ಗ್ರಾ.ಪಂ ಕರವಸೂಲಿಗಾರ ಜೆ.ವಿ.ಗಂಗುಲಪ್ಪ ಹಾಗೂ ಸುತ್ತು ಮುತ್ತುಲಿನ ಊರಿನ ಗ್ರಾಮಸ್ಥರು ಇದ್ದರು.


