

ಶ್ರೀನಿವಾಸಪುರ : ಪೋಷಕರು ತಮ್ಮ ಮಕ್ಕಳು ಯಾವ ವಿಷಯದಲ್ಲಿ ಆಸಕ್ತಿ ಇರುತದೋ ಆ ವಿಷಯಕ್ಕೆ ಸಂಬಂದಿಸಿದ ಶಿಕ್ಷಣವನ್ನು ಕೊಡಿಸುವಂತೆ ಬಿಇಒ ಬಿ.ಸಿ. ಮುನಿಲಕ್ಷ್ಮಯ್ಯ ಸಲಹೆ ನೀಡಿದರು.
ಪಟ್ಟಣದ ಎಸ್ಎಫ್ಎಸ್ ಶಾಲೆಯಲ್ಲಿ ಸೋಮವಾರ ನಡೆದ ಶಾಲಾವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಎಲ್ಲಾ ವಿದ್ಯಾರ್ಥಿಗಳು ವೈದ್ಯರು, ಇಂಜನೀಯರ್ ಆಗಲು ಸಾಧ್ಯವಿಲ್ಲ. ವಿದ್ಯಾರ್ಥಿಯ ಜೀವನ ತನ್ನ ಗುರಿ ಕಡೆಗೆ ಇರಬೇಕು . ಇಟ್ಟುಕೊಂಡ ಗುರಿ ತಲುಪಲು ನಿರಂತರ ಪ್ರಯತ್ನ ಮತ್ತು ಶ್ರದ್ದೆ , ಭಕ್ತಿಯಿಂದ ಅಧ್ಯಯನ ಮಾಡಬೇಕು . ಆಗ ಮಾತ್ರ ತಾನು ಅಂದುಕೊಕಡದ್ದನ್ನು ಸಾಧಿಸಬಹದು ಎಂದು ಹೇಳಿದರು.
ಪ್ರಾಂಶುಪಾಲ ಫ್ಯಾನ್ಸಿಸ್ ಎಕ್ಕಾ ಮಾತನಾಡಿ ವಿದ್ಯಾರ್ಥಿಗೆ ವಿನಯ ಇರಬೇಕು. ವಿನಯ ಇಲ್ಲದಿದ್ದರೆ ಎಷ್ಟೇ ವಿದ್ಯಾಂವತರಾದರು ಸಮಾಜ ಗೌರವಿಸುವುದಿಲ್ಲ. ವಿದ್ಯೆ ಇದ್ದರೆ ಸಮಾಜ ಒಳ್ಳೇಯ ಸ್ಥಾನ ಮಾನ ಕೊಡುತ್ತದೆ. ವಿದ್ಯೆ ನಮ್ಮ ಸೌಂದರ್ಯವನ್ನು ಕೇಳುವುದಿಲ್ಲ, ಒಳ್ಳೇಯ ಜ್ಞಾನವಿದ್ದರೆ ಮಾತ್ರ ಸಮಾಜ ಗೌರವಿಸುತ್ತದೆ.
ವ್ಯವಸ್ಥಾಪಕ ಜೇಮ್ಸ್ತಾಮಸ್ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗಾವಕಾಶಗಳಿಸುವುದು ಕಷ್ಟ . ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯು ನಿರ್ಧಿಷ್ಟ ಗುರಿಯೊಂದಿಗೆ ಶ್ರದ್ಧೆಯಿಂದ ಶಿಕ್ಷಕರು ಭೋದಿಸುಂತಹ ಪಾಠಪ್ರವಚನಗಳನ್ನು ಆಲಿಸಿ ಜೀವನದ ಗುರಿಯನ್ನರ್ ಸಾಧಿಸಿ ಎಂದು ಸಲಹೆ ನೀಡಿದರು.
ಪೊಲೀಸ್ ನಿರೀಕ್ಷಕ ಎಂ.ಬಿ.ಗೊರವನಕೊಳ್ಳ ಮಾತನಾಡಿ ವಿದ್ಯಾರ್ಥಿಗಳು ಆರೋಗ್ಯಕರ ಹವ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ಕನಸುಗಳನ್ನು ಕಟ್ಟಿಕೊಂಡು ಶಿಕ್ಷಣ ಕೊಡಿಸುವ ಪೋಷಕರಿಗೆ ಒಳ್ಳೆಯ ಹೆಸರು ತರಬೇಕು . ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆದಾಗ ಮಾತ್ರ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ಹೇಳಿದರು.
ಆಡಳಿತಾಧಿಕಾರಿ ಜಿಲು ಪಿ.ಜಾನ್ ಹಾಗು ಸಿಬ್ಬಂದಿ ವರ್ಗದವರು ಇದ್ದರು.


