

ಕುಂದಾಪುರ,ಅ. 30 ; 2025 ವರ್ಷವನ್ನು ಏಸು ಕ್ರಿಸ್ತರು ಹುಟ್ಟಿ 2025 ವರ್ಷಗಳಾಗಿದ್ದು ಅದನ್ನು ಸಾಮಾನ್ಯ ಜುಬಿಲಿ ವರ್ಷವನ್ನಾಗಿ ಆಚರಿಸಲಾಗುತ್ತಿದ್ದು ಇದರ ಅಂಗವಾಗಿ ಹಲವಾರು ಕಾರ್ಯಕ್ರಮಗಳನ್ನು ಪವಿತ್ರ ಸಭೆ ಆಯೋಜಿಸಿತ್ತು, ಈ ಕಾರ್ಯಕ್ರಮಗಳಲ್ಲಿ ಒಂದಾದ ಪ್ರಪಂಚದಾದ್ಯಂತ ಕ್ರೈಸ್ತರ ಮನೆಗಳಲ್ಲಿ ಶಿಲುಬೆ ಯಾತ್ರೆಯ ಕಾರ್ಯಕ್ರವಾವ್ಗಿದ್ದು, ಈ ಕಾರ್ಯಕ್ರಮದಡಿ ಕುಂದಾಪುರ ಭಾಗ್ಯವಂತೆ ರೋಜರಿ ಮಾತಾ ಚರ್ಚಿನಲ್ಲಿ ಡಿಸೆಂಬರ್ 29, 2024 ರಂದು ಆರಂಭವಾಗಿ ಸಂತ ಜೋಸೆಫ್ ಕಾನ್ವೆಂಟ್ ಮುಖ್ಯಸ್ಥೆ ಸಿಸ್ಟರ್ ಸುಪ್ರಿಯರವರಿಗೆ ಧರ್ಮಗುರುಗಳು ಹಸ್ತಾಂತರಿಸಿದ್ದರು. ಅಲ್ಲಿಂದ ಚರ್ಚಿನ 13 ವಾಳೆಗಳ ಪ್ರತಿ ಮನೆಗೆ ಶಿಲುಭೆ ಯಾತ್ರೆ ಜರುಗಿತು. ಈ ಶಿಲುಬೆ ಯಾತ್ರೆಯ ಸಂದರ್ಭದಲ್ಲಿ ಕ್ರೈಸ್ತ ಜನರು ಅತ್ಯಂತ ಭಕ್ತಿ ಪೂರ್ವಕ ಪ್ರಾರ್ಥನ ವಿಧಿಯನ್ನು ಜರುಗಿಸಿ, ಆಯಾಯ ವಾಳೆಗಳ ಜನರು ಬಹಳ ಉತ್ಸಾಹ ಭಕ್ತಿಯಿಂದ ಎಲ್ಲರು ಭಾಗವಹಿಸಿದ್ದು ವಿಶೇಷವಾಗಿವಾಗಿದ್ದು, ಇದೀಗ ಅಕ್ಟೋಬರ್ 30 ರಂದು ಚರ್ಚಿನ ಪ್ರತಿ ಮನೆಗೆ ಶಿಲುಭೆ ಯಾತ್ರೆ ಮುಗಿದು ರೋಜರಿ ಎ ವಾಳೆಯದವರು ಈ ಶಿಲುಭೆಯನ್ನು ಭಕ್ತಿ ಪೂರ್ವಕವಾಗಿ ಚರ್ಚಿಗೆ ಮೆರವಣಿಗೆಯಲ್ಲಿ ತಂದು, ಚರ್ಚಿನ ಧರ್ಮಗುರು ಅ।ವಂ।ಪೌಲ್ ರೇಗೊರವರಿಗೆ ಹಿಂತಿರುಗಿಸಿದರು. ಈ ಸಂದರ್ಭದಲ್ಲಿ ಭಕ್ತಿ ಪೂರ್ವಕ ಪ್ರಾರ್ಥನ ವಿಧಿಯನ್ನು ನಡೆಸಲಾಯಿತು. ಅ।ವಂ।ಪೌಲ್ ರೇಗೊ “ಏಸು ಕ್ರಿಸ್ತರು ಅವರು ಹುಟ್ಟಿದ್ದ ಗೋದಲಿಯಿಂದ ಹಿಡಿದು ಶಿಲುಬೆಯವರೆಗೆ ವಿಧೇಯರಾಗಿ ದೇವರ ಯೋಜನೆಯನ್ನು ಸಾಕಾರ ಗೊಳಿಸಿದರು. ಅದರಂತೆ ನಾವೆಲ್ಲರು ಜೀವಿಸಿ ನಮ್ಮ ಜೀವನವನ್ನು ಪಾವನಗೊಳಿಸೋಣ” ಎಂದು ಸಂದೇಶ ನೀಡಿ ಆಶಿರ್ವದಿಸಿದರು.
ಈ ಸಂದರ್ಭದಲ್ಲಿ ಸಂತ ಜೋಸೆಫ್ ಕಾನ್ವೆಂಟಿನ ಧರ್ಮಭಗಿನಿಯರು, ಪಾಲನ ಮಂಡಳಿ ಉಪಾಧ್ಯಕ್ಷ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಪ್ರತಿ ವಾಳೆಯ ಗುರಿಕಾರರು, ಸದಸ್ಯರು ಹಾಗೂ ಬಹು ಸಂಖ್ಯೆಯಲ್ಲಿ ಭಕ್ತಾಧಿಗಳು ಹಾಜರಿದ್ದರು.










































