

ಕುಂದಾಪುರಃ ಝಾರ ಎಮ್ ಇಮ್ರಾನ್ ಇವಳು ಬೆಂಗಳೂರಿನಲ್ಲಿ ನಡೆದ ಅಖಿಲ ಕರ್ನಾಟಕ ಸ್ಫೊರ್ಟ್ಸ್ ಕ್ಲಬ್ ಅಸೋಸಿಯೆನ್ಸ್ ಆಶ್ರಯದಲ್ಲಿ ನಲ್ಲಿ 18-1-26 ರಂದು ನಡೆದ ನಡೆದ ಕರಾಟೆ ಛಾಂಪಿಯೆನ್ ಶಿಪ್ ನಲ್ಲಿ 14 – 15 ವರ್ಷದ ಹುಡುಗಿಯರ ವಯೋಮಿತಿಯ ಕುಮಿಟೊ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದು, ಹೈದರಬಾದನಲ್ಲಿ ನಡೆಯುವ ರಾಷ್ಟ್ರಮಟ್ಟದ ಛಾಂಪಿಯೆನ್ ಶಿಪ್ ಗೆ ಆಯ್ಕೆಯಾಗಿದ್ದಾಳೆ. ಇವಳು ಸಿ ಬಿ ಎಸ್ ಇ ಶಾಲಾ ಆಡೋಟದಲ್ಲಿ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಭಾಗವಹಿಸಿದ್ದಳು.
ಇವಳು ಅಂತರಾಷ್ಟ್ರೀಯ ಮಟ್ಟದಲ್ಲಿ 4 ಚಿನ್ನ, 1 ಬೆಳ್ಳಿ, 1 ಕಂಚು, ರಾಷ್ಟ್ರೀಯ ಮಟ್ಟದಲ್ಲಿ 11 ಚಿನ್ನ, 4 ಬೆಳ್ಳಿ, ರಾಜ್ಯಮಟ್ಟದಲ್ಲಿ 5 ಚಿನ್ನ, 2 ಕಂಚಿನ ಪದಕವನ್ನು ಪಡೆದಿರುತ್ತಾಳೆ. ಇವಳು ಬೀಜಾಡಿಯ ಇಮ್ರಾನ್ ಮತ್ತು ಆಸ್ಮಾ ದಂಪತಿಯ ಪುತ್ರಿಯಾಗಿದ್ದಾಳೆ. ಇವಳು ಗುರುಕುಲ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿಯಾಗಿದ್ದು, ಇವಳು ಕರಾಟೆ ಕೋಚ್ ಗಳಾದ ಕಿರಣ್ ಕುಂದಾಪುರ, ಸಂದೀಪ್ ವಿಕೆ, ಶಿಹಾನ್ ಶೇಖ್ ಇವರಿಂದ ತರಬೇತಿ ಪಡೆದಿರುತ್ತಾಳೆ.


