

ಕುಂದಾಪುರಫೆಬ್ರವರಿ17,2026ಕುಂದಾಪುರ ತಾಲೂಕಿನ ಹೊಸಂಗಡಿ, ಕೆರೆಕಟ್ಟೆ ಸಂತ ಅಂತೋನಿಯವರ ಪ್ರಸಿದ್ದಪುಣ್ಯಕ್ಷೇತ್ರದಲ್ಲಿಸಂತ ಅಂತೋನಿ ಅವರ ನಾಲಿಗೆಯ ಅವಶೇಷದ ಹಬ್ಬವನ್ನುವಿಶೇಷ ಶ್ರದ್ಧಾಭಕ್ತಿ ಮತ್ತುಸಂಭ್ರಮದಿಂದ ಫೆ.17 ರಂದು ಆಚರಿಸಲಾಯಿತು.
ಉಡುಪಿಧರ್ಮಪ್ರಾಂತ್ಯದ ನಿವ್ರತ್ತಿ ಹೊಂದಲಿರುವ ಬಿಷಪ್ ಅತಿ ವಂ.ಡಾ.ಜೆರಾಲ್ಡ್ಐಸಾಕ್ಲೋಬೊಇವರುಹಬ್ಬದಪ್ರಯುಕ್ತದಿವ್ಯಬಲಿದಾನವನ್ನುಅರ್ಪಿಸಿ“ದೇವರು ಹೇಳುತ್ತಾರೆ, ನಾನು ನಿಮ್ಮನ್ನು ಪ್ರೀತಿಸುತ್ತೇನೆ, ನನ್ನನ್ನು ನೀವು ಪ್ರೀತಿಸಬೇಕು, ನನ್ನನ್ನು ಪ್ರೀತಿಸುವುದೆಂದರೆ, ಬಡವರನ್ನು, ಕಶ್ಟದಲ್ಲಿರುವರನ್ನು, ಅನಾಥರನ್ನು ಪ್ರೀತಿಸುವುದು, ಹಾಗೆ ಮಾಡಿದರೆ ನನ್ನನ್ನು ಪ್ರೀತಿಸಿದಂತೆ. ಕೇವಲ ಪ್ರೀತಿಸುವುದು ಮಾತ್ರವಲ್ಲ ನಮ್ಮ ಕ್ರತಿಯಲ್ಲಿ ಸಹಾಯ ಮಾಡಬೇಕು. ನಾಳೆಯಿಂದ ನಮಗೆ ಪಾಸ್ಕ ಹಬ್ಬದ ಪ್ರಯುಕ್ತ ಪ್ರಾಯಚಿತ್ತದ ದಿನ ಆರಂಭವಾಗುತ್ತೆ, ಆ ದಿನಗಳಲ್ಲಿ ಉಪವಾಸ ಮಾಡಿ, ತ್ಯಾಗ ಮಾಡಿದ ಉಳಿತಾಯವನ್ನು ಬಡವರಿಗೆ ಹಂಚಿ ಪುಣ್ಯ ಕಟ್ಟಿಕೊಳ್ಳೊಣ, ‘ಬಡವರಿಗೆ ನೀಡುವಾತ ಭಾಗ್ಯವಂತ’ ಎಂದು ನಾವು ನೆನಪಿನಲ್ಲಿ ಇಟ್ಟುಕೊಳ್ಳೋಣ’ ಎಂದು ಸಂದೇಶ ನೀಡಿದರು.
ಬಸ್ರೂರು ಆಂಗ್ಲ ಮಾದ್ಯಮ ಶಾಲೆಯ ಪ್ರಾಂಶುಪಾಲರಾದ ವಂ।ಡ್ಯಾನ್ಸಿ ಮಾರ್ಟಿ ದೇವರ ವಾಕ್ಯದ ಮೇಲೆ ಟಿಪ್ಪಣಿ ಮಾಡಿ. ಯೇಸು ಕ್ರಿಸ್ತರು ಬಡವರ, ಕಶ್ಟಕ್ಕೆ ಇಡಾದವರಿಗೆ, ರೋಗಿಗಳ ಮಿತ್ರರಾದರು, ಅವರು ಸ್ವರ್ಗಿಯ ಶ್ರೀಮಂತರಾದರು ಮನುಷ್ಯರಿಗಾಗಿ ಈ ಭೂಮಿಯಲ್ಲಿ ಬಡವರಾಗಿ ಹುಟ್ಟಿದರು, ಬಡವರೆಂದರೆ ಅದೊಂದು ಶಾಪ ಎನ್ನುತ್ತಾರೆ, ಆದರೆ ಬಡವರಿಗೆ ಆಸರೆಯಾಗಿ, ಅವರಿಗೆ ಸಹಾಯ ಮಾಡಿ ನಾವು ಪುಣ್ಯ ಕಟ್ಟಿಕೊಳ್ಳಬಹುದು. ನೀವು ಹೊಟ್ಟೆ ತುಂಬ ಊಟ ಮಾಡಿದ ಮೇಲೆ ಉಳಿದದ್ದು ನಿಮ್ಮದಲ್ಲ, ಅದು ಹಸಿದವರಿಗೆ ನೀಡಬೇಕು, ಯೇಸು ಕ್ರಿಸ್ತರು ಬಡವರನ್ನು ರೋಗಿಗಳನ್ನು ಹಸಿದವರನ್ನು ಅಪಾರವಾಗಿ ಪ್ರೀತಿಸಿದರು, ಅದೇ ರೀತಿ ಅದ್ಭುತ್ ಸಂತ ಹಸಿದವರನ್ನು ಬಡವರನ್ನು ಅಪಾರ ಪ್ರೀತಿಸಿದರು, ನಾವು ಅವರಂತೆ ನಡೆದುಕೊಂಡು, ಅವರ ಕ್ರಪಾಚಿತ್ತವನ್ನು ಪಡೆದುಕೊಳ್ಳೋಣ’ ಎಂದು ಉಪದೇಶ ನೀಡಿದರು.
ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್, ಕಲ್ಯಾಣಪುರದ ಮಿಲಾಗ್ರಿಸ್ ಕ್ಯಾಥೆಡ್ರಲ್ನ ರೆಕ್ಟರ್ ಮೊನ್ಸಿಂಝ್ಹೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಉಪಸ್ಥಿತರಿದ್ದರು
ಕುಂದಾಪುರ ವಲಯದ ಪ್ರಧಾನ ಧರ್ಮಗುರು ಅ|ವಂ|ಪೌಲ್ ರೇಗೊ ಹಬ್ಬಕ್ಕೆ ಶುಭ ಕೋರಿದರು.ಬಲಿದಾನ ಪ್ರಾರ್ಥನ ವಿಧಿಯನ್ನು ತ್ರಾಸಿ ಚರ್ಚಿನವರು, ಭಕ್ತಿ ಗಾಯನವನ್ನು ಬೈಂದೂರು ಚರ್ಚಿನವರು, ಕಾಣಿಕೆ ಸಂಗ್ರಹಣೆಯನ್ನು ಬಸ್ರೂರು ಚರ್ಚಿನವರು ನಡೆಸಿಕೊಟ್ಟರು. ಪುಣ್ಯಕ್ಷೇತ್ರಕ್ಕೆ ದಾನ ನೀಡಿದವರಿಗೆ ಮತ್ತುಪೋಷಕತ್ವವಹಿಸಿಕೊಂಡವರಿಗೆ, ಸಹಕರಿಸಿದವರಿಗೆಮೇಣದಬತ್ತಿಗಳನ್ನುನೀಡಿಗೌರವಿಸಲಾಯಿತು.
ಹಬ್ಬದ ಬಲಿಪೂಜೆಯಲ್ಲಿಕುಂದಾಪುರ ವಲಯದ ಹೆಚ್ಚಿನ ಧರ್ಮಗುರುಗಳು, ಇತರ ವಲಯದ ಧರ್ಮಗುರುಗಳು, ಅತಿಥಿ ಧರ್ಮಗುರುಗಳು, ಸಹಬಲಿದಾನವನ್ನುಅರ್ಪಿಸಿದರು. ಧರ್ಮಭಗಿನಿಯವರು ಭಕ್ತಾಧಿಗಳು ಅಪಾರಸಂಖ್ಯೆಯಲ್ಲಿದ್ದು ಇತರಜಿಲ್ಲೆಯವರು ಭಾಗವಹಿಸಿದ್ದ ಹಬ್ಬದಲ್ಲಿ, ಪುಣ್ಯಕ್ಷೇತ್ರದ ರೆಕ್ಟರ್ ಭಾಗವಹಿಸಿದ್ದ ಹಬ್ಬದಲ್ಲಿ, ಪುಣ್ಯ ಕ್ಷೇತ್ರದ ರೆಕ್ಟರ್ ವಂ|ಸುನೀಲ್ ವೇಗಸ್ ಧನ್ಯವಾದಗಳನ್ನು ಸಮರ್ಪಿಸಿದರು. ವಂ| ರೋಯ್ ಲೋಬೊ ಹಬ್ಬದ ಕಾರ್ಯಕ್ರಮಕ್ಕೆ ಸಹಕರಿಸಿದರು. ಸಂಜೆ ವಂ। ಪ್ರಥ್ವಿ ರೂಡ್ರಿಗಸ್ ಜೆ.ಸ. ಇವರ ನೇತ್ರತ್ವದಲ್ಲಿ ಕನ್ನಡದಲ್ಲಿ ಸಂಭ್ರಮದ ಬಲಿದಾನ ನಡೆಯಿತು. ವಂ|ಸುನೀಲ್ ವೇಗಸ್ ಧನ್ಯವಾದಗಳನ್ನುಸಮರ್ಪಿಸಿದರು. ವಂ| ರೋ ಲೋಬೊ ಹಬ್ಬದಕಾರ್ಯಕ್ರಮಕ್ಕೆ ಸಹಕರಿಸಿದರು. ಸಂಜೆ ವಂ। ಪ್ರಥ್ವಿ ರೂಡ್ರಿಗಸ್ ಜೆ.ಸ. ಇವರ ನೇತ್ರತ್ವದಲ್ಲಿ ಕನ್ನಡದಲ್ಲಿ ಸಂಭ್ರಮದ ಬಲಿದಾನ ನಡೆಯಿತು.







































































































Click the link below to join our Jananudi news group – Also please share this link to others ನಮ್ಮ ಜನನುಡಿ ವಾರ್ತೆಗಳ ಗುಂಪಿಗೆ ಸೇರಲು ಕೆಳಗಿನ ಲಿಂಕನ್ನು ಒತ್ತಿ – ಹಾಗೆಯೇ ದಯವಿಟ್ಟು ಈ ಲಿಂಕನ್ನು ಇತರರಿಗೆ ಹಂಚಿಕೊಳ್ಳಿ
https://chat.whatsapp.com/FQpehxgLnCYGl4TuQQIjL0 (jananudi news Udupi)

