

ಕುಂದಾಪುರ : ಸಾಮಾಜಿಕ ಸೇವಾಸಂಸ್ಥೆಯಾದ ಉಮೀದ್ ಫೌಂಡೇಶನ್ ಕುಂದಾಪುರ (ರಿ.) ಇದರ ಉದ್ಘಾಟನೆಯು ದಿನಾಂಕ 15.02.2026ರಂದು ಕುಂದಾಪುರದ ಜಾಮಿಯಾ ಮಸ್ಜಿದ್ ಹಾಲ್ ನಲ್ಲಿ ಮೌಲಾನಾ ಶಾಹಿದ್ ಹುಸೇನ್ ಇವರ ಪ್ರಾರ್ಥನೆಯೊಂದಿಗೆ ನಡೆಯಿತು. ಜನಾಬ್ ಇಬ್ರಾಹಿಂ ಕೋಟ
ಇವರು ಲೋಗೋ ಅನಾವರಣಗೊಳಿಸುವ ಮೂಲಕ ಉದ್ಘಾಟಿಸಿ ಸಂಸ್ಥೆಗೆ ಶುಭ ಹಾರೈಸಿದರು.ಉಮೀದ್ ಫೌಂಡೇಶನ್ ನ ಅಧ್ಯಕ್ಷ ಇಕ್ಬಾಲ್ ಪಿ. ಮೊಹಮ್ಮದ್ ಪ್ರಾಸ್ತಾವಿಕ ಮಾತನಾಡಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಜನಾಬ್ ಅಬ್ದುಲ್ಲ ಬೆದ್ರೆ, ಜನಾಬ್ ಹಾರೂನ್ ಸಾಹೇಬ್, ಜನಾಬ್ ವಸಿಂ ಭಾಷಾ, ಜನಾಬ್ ಅಬುಮೊಹಮ್ಮದ್ ಮುಂಜಾವರ್, ಜನಾಬ್ ಸಯ್ಯದ್ ನಾಸಿರ್ ಸಭೆಯನ್ನು ಉದ್ದೇಶಿಸಿ ಮಾತನಾಡಿ ಶುಭ ಹಾರೈಸಿದರು. ಜನಾಬ್ ಮೊಹಮ್ಮದ್ ನಾಸಿರ್ ಹೊಲಿಗೆ ಯಂತ್ರ ನೀಡುವ ಬಗ್ಗೆ ವಿವರ ನೀಡಿದರು. ಸದಸ್ಯರಾದ ಮಹಮ್ಮದ್ ಸಮೀರ್ ಧನ್ಯವಾದ ಸಮರ್ಪಿಸಿದರು. ಹುಸೇನ್ ಹೈಕಾಡಿ ಇವರು ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಅರ್ಹ ಫಲಾನುಭವಿಗಳಿಗೆ 12ಕ್ಕೂ ಮಿಕ್ಕಿದ ಹೊಲಿಗೆ ಯಂತ್ರಗಳನ್ನು ಉಚಿತವಾಗಿ ವಿತರಿಸಲಾಯಿತು.



