ಮಂಗಳೂರು; ಸಂತ ಅಲೋಶಿಯಸ್ ಶಾಲೆ, ಜುಲೈ 27 ರಂದು ಕಾರ್ಗಿಲ್ ವಿಜಯ ದಿವಸವನ್ನು ಅತ್ಯಂತ ಗೌರವ ಹಾಗೂ ದೇಶಭಕ್ತಿಯಿಂದ ಆಚರಿಸಲಾಯಿತು. ಹತ್ತನೇ ತರಗತಿಯ ವಿದ್ಯಾರ್ಥಿಗಳು ದೇಶಭಕ್ತಿಗೀತೆ ಹಾಗೂ ಘೋಷಣೆಗಳ ಮೂಲಕ ಯೋಧರ ತ್ಯಾಗ, ಶೌರ್ಯ ಹಾಗೂ ದೇಶಸೇವೆಯನ್ನು ಸ್ಮರಿಸಿದರು. ಮುಖ್ಯ ಶಿಕ್ಷಕರು ಯೋಧರಿಗೆ ಗೌರವವನ್ನು ಸಲ್ಲಿಸುತ್ತಾ.ಘೋಷವಾಕ್ಯಗಳೊಂದಿಗೆ ವಿದ್ಯಾರ್ಥಿಗಳು ದೇಶಭಕ್ತಿ, ದೇಶಸೇವೆಯ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಕರೆನೀಡಿ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಈ ಕಾರ್ಯಕ್ರಮದ ಸಂಯೋಜಕರಾದ ಶ್ರೀ ರವಿಶಂಕರ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಹನ್ನಾ ನಿರೂಪಿಸಿ ರಿಯಾ ಧನ್ಯವಾದ ಸಲ್ಲಿಸಿದರು.
ಬೆಂಗಳೂರು ಸೇಂಟ್ ಜೋಸೆಫ್ಸ್ ವಿಶ್ವವಿದ್ಯಾಲಯದ ಮಾಹಿತಿ ತಂತ್ರಜ್ಞಾನ ಶಾಲೆ (School of Information Technology) ವತಿಯಿಂದ ಕೃತಕ ಬುದ್ಧಿಮತ್ತೆ ಹಾಗೂ ಯಂತ್ರ ಕಲಿಕೆ (AI/ML) ಶ್ರೇಷ್ಠತಾ ಕೇಂದ್ರವನ್ನು ಜುಲೈ 24ರಂದು ಉದ್ಘಾಟಿಸಲಾಯಿತು. ಶೆರ್ಪಾವೆಕ್ಟರ್ ಪ್ರೈವೇಟ್ ಲಿಮಿಟೆಡ್ ಸಹಯೋಗದಲ್ಲಿ ಸ್ಥಾಪಿಸಲಾದ ಈ ಕೇಂದ್ರವು ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ಸಂಶೋಧನೆ, ಕೈಗಾರಿಕಾ ಯೋಜನೆಗಳು, ಇಂಟರ್ನ್ಶಿಪ್ ಹಾಗೂ ನೈಜ ತಂತ್ರಜ್ಞಾನ ಅನುಭವವನ್ನು ಒದಗಿಸುವ ಉದ್ದೇಶ ಹೊಂದಿದೆ. ಉದ್ಘಾಟನಾ ಸಮಾರಂಭದಲ್ಲಿ ಮಾಹಿತಿ ತಂತ್ರಜ್ಞಾನ ಶಾಲೆಯ ನಿರ್ದೇಶಕ ರೆವ. ಫಾ. ಡೆನ್ಜಿಲ್ ಲೋಬೋ ಎಸ್.ಜೆ., ಡೀನ್ […]
ಕುಂದಾಪುರ ; ರೋಟರಿ ಕ್ಲಬ್ ಕುಂದಾಪುರ ರಿವರ್ ಸೈಡ್ ಇವರ ಆಶ್ರಯದಲ್ಲಿ ಸಂತ ಜೋಸೆಫ್ ಪ್ರೌಢಶಾಲೆಯಲ್ಲಿ (23-07-2026) ರಂದು ಇಂಟರಾಕ್ಟ್ ಪದ ಪ್ರಧಾನ ಕಾರ್ಯಕ್ರಮ ನೆರವೇರಿತು. ನರಸಿಂಹ ಹೊಳ್ಳ ಇವರು ಪ್ರಸ್ತಾವಿಕ ನುಡಿಗಳನಾಡುತ್ತ ಇಂಟರ್ ಆಕ್ಟ್ ಮುಖಾಂತರ ಮಕ್ಕಳಲ್ಲಿ ನಾಯಕತ್ವ , ಉತ್ತಮ ವ್ಯಕ್ತಿತ್ವ, ಸಂಸ್ಕಾರ, ಸಮಾಜ ಸೇವೆ, ಉತ್ತಮ ಬಾಂಧವ್ಯ, ಸಹಕಾರ ಬೆಳೆಯಲು ಸಾಧ್ಯವಾಗುತ್ತದೆ ಎಂದರು. ರೋಟರಿ ಅಧ್ಯಕ್ಷರಾದ ಸದಾನಂದ ಬಳ್ಕೂರು ಇವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪದಪ್ರಧಾನ ನೆರವೇರಿಸಿ […]
ಮಂಗಳೂರು ; “ಅರಬ್ಬಿ ಸಮುದ್ರದ ಅಲೆಗಳಲ್ಲೇ ಕೊಂಕಣಿಯ ಘರ್ಜನೆ ಮೊಳಗುತ್ತಿದೆ” – ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾʼಕೊಂಕಣಿ ಭಾಷೆಗೆ ಒಂದು ದೀರ್ಘ ಉಸಿರಿದ್ದು, ಅರಬ್ಬಿ ಸಮುದ್ರದ ಅಲೆಗಳಲ್ಲೇ ಕೊಂಕಣಿಯ ಘರ್ಜನೆ ಮೊಳಗುತ್ತಿದೆ. ಪಶ್ಚಿಮ ಕರಾವಳಿಯುದ್ದಕ್ಕೂ ಕೊಂಕಣಿ ಭಾಷೆಯು ತನ್ನ ಪರಿಮಳವನ್ನು ಹರಡುತ್ತಿದೆ. ಇಂತಹ ಭಾಷೆಯಲ್ಲಿ ಕೊಂಕಣಿ “ಸಬ್ದಾಂ ಸಂಪತ್ತಿ” ಶಬ್ದಕೋಶವು ಒಂದು ಅದ್ಭುತ ಮೈಲಿಗಲ್ಲು ಆಗುವುದರಲ್ಲಿ ಯಾವುದೇ ಸಂಶಯವಿಲ್ಲʼ ಎಂದು ಮಂಗಳೂರು ಕಥೋಲಿಕ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ.ವಂ.ಸ್ವಾ. ಪೀಟರ್ ಪಾವ್ಲ್ ಸಲ್ಡಾನ್ಹಾರವರು ಜುಲೈ 21 ರಂದು ಕರ್ನಾಟಕ […]
ಕುಂದಾಪುರದ ;”ಗರಿಷ್ಠ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಮಾತ್ರವಲ್ಲ, ಕನಿಷ್ಠ ಅಂಕಗಳನ್ನು ಪಡೆಯುವ ಸಾಧಾರಣ ಬುದ್ಧಿಮತ್ತೆಯ ವಿದ್ಯಾರ್ಥಿಗಳಿಗೂ ಉತ್ಕ್ರಷ್ಟ ದರ್ಜೆಯಲ್ಲಿ ಪಾಸಾಗುವಂತೆ ಮಾಡುವ ಕಲಿಕಾ ವ್ಯವಸ್ಥೆ ಈ ವಿದ್ಯಾಸಂಸ್ಥೆಯಲ್ಲಿರುವುದು ಸಂತಸದ ವಿಚಾರ. ವಿದ್ಯಾರ್ಥಿಗಳು ಜನನಾಯಕರ ಕೆಲವು ಮೌಲ್ಯಯುತ ಗುಣಗಳಿಂದ ಪ್ರೇರಣೆ ಪಡೆದು, ಜೀವನದಲ್ಲಿ ಬೇರೆಯವರ ಅಳುವಿಗೆ ಕಾರಣವಾಗದೇ, ಎಲ್ಲರ ನಗುವಿಗೆ ಕಾರಣವಾಗಿ ಸಮಾಜದ ಮುಖ್ಯವಾಹಿನಿಯಲ್ಲಿ ತಮ್ಮ ಅಸ್ತಿತ್ವವನ್ನು ಗುರುತಿಸಿಕೊಳ್ಳಿ ” ಎಂದು ಕುಂದಾಪುರದ ಆರ್. ಎನ್.ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ 2025-26 ನೇ ಶೈಕ್ಷಣಿಕ ವರ್ಷದ […]
ಉಡುಪಿ , ಸಂತೆಕಟ್ಟೆ, ಜುಲೈ 26: ಮುಂಬೈನ ‘ಜಾನ್ ಡಿ’ಸಿಲ್ವಾ ಫೌಂಡೇಶನ್’ ನ ಉದಾರ ಪ್ರಾಯೋಜಕರೊಂದಿಗೆ ಕ್ಯಾಥೊಲಿಕ್ ಸಭಾ ಉಡುಪಿ ಪ್ರದೇಶ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಜುಲೈ 26, 2026 ರ ಭಾನುವಾರದಂದು ಸಂತೆಕಟ್ಟೆಯ ಕಕ್ಕುಂಜೆಯಲ್ಲಿರುವ ಅನುಗ್ರಹ ಪ್ಯಾಸ್ಟೋರಲ್ ಸೆಂಟರ್ನಲ್ಲಿ ಬಹಳ ಗೌರವ ಮತ್ತು ಉತ್ಸಾಹದಿಂದ ನಡೆಯಿತು. ಕಾರ್ಯಕ್ರಮವು ನೋಂದಣಿ ಮತ್ತು ಉಪಹಾರದೊಂದಿಗೆ ಪ್ರಾರಂಭವಾಯಿತು, ನಂತರ ಸಭೆಯ ಮೇಲೆ ದೇವರ ಆಶೀರ್ವಾದವನ್ನು ಕೋರುವ ಪ್ರಾರ್ಥನೆ ಸೇವೆ ನಡೆಯಿತು. ಅತಿಥಿಗಳು, ಪ್ರಶಸ್ತಿ ಪುರಸ್ಕೃತರು, ಪೋಷಕರು ಮತ್ತು ಕ್ಯಾಥೊಲಿಕ್ […]
Vidyalaxmi Group of Institutions Gives a Grand Welcome to Freshers Through Orientation Programme 2026 ಬ್ರಹ್ಮಾವರ, ಜುಲೈ 24, 2026: ಬ್ರಹ್ಮಾವರದ ವಿದ್ಯಾಲಕ್ಷ್ಮಿ ಸಮೂಹ ಸಂಸ್ಥೆಗಳಿಂದ ಹೊಸದಾಗಿ ಪ್ರವೇಶ ಪಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಜುಲೈ 24, 2026 ರಂದು ಬೆಳಿಗ್ಗೆ 10:30 ಕ್ಕೆ ಕಾಲೇಜು ಸಭಾಂಗಣದಲ್ಲಿ ಓರಿಯಂಟೇಶನ್ ಕಾರ್ಯಕ್ರಮ 2026 ಅನ್ನು ಆಯೋಜಿಸುವ ಮೂಲಕ ಆತ್ಮೀಯ ಮತ್ತು ಸ್ಮರಣೀಯ ಸ್ವಾಗತ ದೊರೆಯಿತು. ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ಸಂಸ್ಥೆಯ ಶೈಕ್ಷಣಿಕ ಪರಿಸರ, […]
ಕೋಟ: ಸರಕಾರಿ ಹುದ್ದೆ ಪಡೆಯಬೇಕಾದರೇ ಓದು ಅಗತ್ಯ. ನಿರಂತರವಾಗಿ ಜ್ಞಾನ ಸಂಪಾದನೆ ಮಾಡಿದಾಗ ಯಾವುದೇ ಪರೀಕ್ಷೆಯಲ್ಲಿ ಯಶಸ್ಸು ಸಾಧ್ಯವಾಗಲಿದೆ ಎಂದು ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಆಪ್ತ ಸಹಾಯಕ ಹರೀಶ್ ಕುಮಾರ್ ಶೆಟ್ಟಿ ಹೇಳಿದರು.ಅವರು ಭಾನುವಾರ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಮಿತ್ರ ಸಂಗಮ ಬೀಜಾಡಿ-ಗೋಪಾಡಿ, ಕೋಟ ವಿ-ಶೈನ್ ಕೋಚಿಂಗ್ ಸೆಂಟರ್ ಇವರ ಆಶ್ರಯದಲ್ಲಿ ರೋಟರಿ ಕ್ಲಬ್ ಕೋಟೇಶ್ವರ, ಲಯನ್ಸ್ ಕ್ಲಬ್ ಕುಂದಾಪುರ ಸಿಟಿ ಸೆಂಟರ್ ಸಹಯೋಗದೊಂದಿಗೆ ಬೀಜಾಡಿ ಮಿತ್ರ ಸೌಧದಲ್ಲಿ […]
ಪಡುಕೋಣೆ:- ಸಂತ ಅಂತೋನಿ ಚರ್ಚಿನಲ್ಲಿ ಹಿರಿಯ ನಾಗರಿಕರ ದಿನಾಚರಣೆ. ದಿನಾಂಕ 27. 7. 26 ರಂದು ಸಂತ ಜೊಕಿಮ್ ಮತ್ತು ಸಂತ ಅನ್ನಾ ಮಾತೆಯ ಹಬ್ಬದ ದಿನವಾದ ಜುಲೈ 26 ರಂದು ಧರ್ಮ ಗುರುಗಳಾದ ವಂ। ಫಾ। ಪ್ರಾನ್ಸಿಸ್ ಕರ್ನೆಲಿಯೊರವರು ದಿವ್ಯ ಬಲಿಪೂಜೆಯನ್ನು ಅರ್ಪಿಸಿದರು. ಬಲಿಪೂಜೆಯಲ್ಲಿ ಹಿರಿಯ ನಾಗರಿಕರು, ಕುಟುಂಬ ಅಯೋಗಾದ ಸದಸ್ಯರು ಐ.ಸಿ.ವೈ.ಎಮ್. ಸಂಘದ ಯುವಕ – ಯುವತಿಯರು, ಚರ್ಚಿನ ಭಕ್ತಾದಿಗಳೆಲ್ಲರೂ ಪಾಲ್ಗೊಂಡರು. ಬಲಿ ಪೂಜೆಯ ಪ್ರವಚನದಲ್ಲಿ ಧರ್ಮಗುರುಗಳು, ಜಗತ್ಗುರುಗಳಾದ ಪೋಪ್ ಲಿಯೋ ರವರು ಈ […]

