ಸ್ವಾತಂತ್ರೋತ್ಸವದ ಶುಭ ಸಂದರ್ಭದಲ್ಲಿ ಈ ಸಂಸ್ಥೆ ಸತತವಾಗಿ ಮಕ್ಕಳ ಭವಿಷ್ಯ ರೂಪಿಸುವುದಕ್ಕಾಗಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಅದನ್ನು ಕಾರ್ಯಗತಗೊಳಿಸುವ ಪರಿ ಇದೆಯಲ್ಲ ಇದು ನಿಜವಾಗಿಯೂ ದೇವರ ಕೆಲಸ . ಅರ್ಹ ವಿದ್ಯಾರ್ಥಿಗಳ ಕಲಿಕೆಗಾಗಿ ಹಾಕಿಕೊಳ್ಳುವ ಯಾವುದೇ ಕೆಲಸವಾಗಿರಲಿ ಅದು ದೇವರ ಸೇವೆ ಎಂದು ಪರಿಗಣಿತವಾಗಿದೆ .ಇಂತಹ ಸೇವೆಯನ್ನು ಸತತವಾಗಿ 50 ವರ್ಷಗಳಿಂದ ಈ ಸಂಸ್ಥೆ ಮಾಡುತ್ತದೆ ಎಂದರೆ ನಿಜವಾಗಿಯೂ ಆಶ್ಚರ್ಯವೆನಿಸುತ್ತದೆ. ಈ ಕೆಲಸ ಸಂಸ್ಥೆಯಿಂದ ನಿರಂತರವಾಗಲಿ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾಡಿದ ಸಂಮಾನ ಅದು ಬೇರೆ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಲಿ. […]
ಶಿರೂರು : ಇಲ್ಲಿನ ಜ್ಞಾನದಾ ಶೈಕ್ಷಣಿಕ ಸಂಸ್ಥೆ ಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಪ್ರೀ ಕೆ ಜಿ ಯಿಂದ ಮೂರನೇ ನೇ ತರಗತಿ ವಿದ್ಯಾರ್ಥಿಗಳಿಗೆ ಬಾಲರಾಧೆ ಮತ್ತು ಬಾಲಗೋಪಾಲ ಸ್ಪರ್ಧೆಯನ್ನು ಆಯೋಜಿಸಲಾಯಿತುಸ್ಪರ್ಧೆಯಲ್ಲಿ 40 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೃಷ್ಣ ರಾಧೆಯರ ವಿವಿಧ ವೇಷ ಭೂಷಣಗಳೊಂದಿಗೆ ಉಲ್ಲಾಸದಿಂದ ಪಾಲ್ಗೊಂಡರು ಬೆಣ್ಣೆ ಮಡಕೆಯೊಂದಿಗೆ ಶ್ರೀಕೃಷ್ಣನಬಾಲ್ಯಲಿಲೆಗಳನ್ನು ವರ್ಣಿಸುವ ದೃಶ್ಯಾವಳಿಗಳು ನೋಡುಗರ ಮನ ಸೂರೆಗೊಳಿಸಿತು ಸ್ಪರ್ಧೆಯ ನಿರ್ಣಾಯಕರಾಗಿ ಸಂಸ್ಥೆಯ ಶಿಕ್ಷಕಿಯರಾದ ಕುಮಾರಿ ಅಕ್ಷತಾ, ಕುಮಾರಿ ನವ್ಯಾ ಹಾಗೂ ಕುಮಾರಿ ಮೈನಾ ಸಹಕರಿಸಿದರು ವಿಜೇತರ […]
ಕುಂದಾಪುರ, ಅಗೋಸ್ತ್ 15ರಂದು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ,ಸ್ವಾತಂತ್ರ್ಯೋತ್ಸವದ ಆಚರಣೆಯನ್ನು , ಧ್ವಜಾರೋಹಣ ಮತ್ತು ಇಂಟೆಕ್ ಸದಸ್ಯರಿಂದ ವಾಹನಗಳ ಪುರ ಮೆರವಣಿಗೆ ಪುರಸಭೆಯ ಮುಖ್ಯ ರಸ್ತೆಯಲ್ಲಿ ನಡೆಸಿ ಆಚರಿಸಲಾಯಿತು.ಧ್ವಜಾರೋಹಣವನ್ನು , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ ಅವರು ನೆರವೇರಿಸಿ , ಸಂವಿಧಾನದ ಆಶಯಗಳನು, ದೇಶದ ಪ್ರತಿಯೊಬ್ಬ ಪ್ರಜೆಗಳಿಗೆ ದೊರೆತರೆ , ಮಹಾತ್ಮ ಗಾಂಧಿಯವರ ಭವ್ಯ ಭಾರತದ ಕನಸು ನನಸಾಗುತ್ತದೆ ಎಂದರು. ಅಂಬೇಡ್ಕರ್ ಸಂವಿಧಾನದ ಮೂಲಕ ನೀಡಿದ ಮತದಾನದ ಹಕ್ಕು ರಾಜಕೀಯ ಲಾಭಕ್ಕಾಗಿ ಮೊಟಕುಗೊಳಿಸುವುದು , ದೇಶದ […]
ಬೀಜಾಡಿ: ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ಬೀಜಾಡಿ ಗೋಪಾಡಿ ಮಿತ್ರ ಸಂಗಮದ ಆಶ್ರಯದಲ್ಲಿ ಬೀಜಾಡಿ ಮಿತ್ರಸೌಧದಲ್ಲಿ ನಡೆದ 79ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ವಕೀಲ ಹಂದಕುಂದ ಅಶೋಕ ಕುಮಾರ್ ಶೆಟ್ಟಿ ಧ್ವಜಾರೋಹಣ ಮಾಡಿ ಸಂದೇಶ ನೀಡಿದರು.ಸಮಾರಂಭಸ ಅಧ್ಯಕ್ಷತೆಯನ್ನು ಬೀಜಾಡಿ ಮಿತ್ರ ಸಂಗಮದ ಅಧ್ಯಕ್ಷ ಮಹೇಶ್ ಮೊಗವೀರ ವಹಿಸಿದ್ದರು.ಬೀಜಾಡಿ ಗೋಪಾಡಿ ರೋಟರಿ ಸಮುದಾಯ ದಳದ ಅಧ್ಯಕ್ಷ ರಾಜೇಶ್ ಆಚಾರ್ಯ, ಬೀಜಾಡಿಯ ಎಂ.ಕೃಷ್ಣಪ್ಪದ ಮಾಲಿಕ ದೇವರಾಜ್,ಬೀಜಾಡಿ ಮೂಡು ಸರಕಾರಿ ಹಿ.ಪ್ರಾ.ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ರಾಘವೇಂದ್ರ ಅಮೀನ್, ಮುಖ್ಯ ಶಿಕ್ಷಕ ಗಣೇಶ್ ಶೆಟ್ಟಿ […]
MCC Bank Celebrates 79th Independence Day with Pride and Patriotism ಮಂಗಳೂರು ; ಎಂಸಿಸಿ ಬ್ಯಾಂಕ್ ಮಂಗಳೂರು ಇದರ ಆಡಳಿತ ಕಚೇರಿಯಲ್ಲಿ 79 ನೇ ಸ್ವಾತಂತ್ರೋತ್ಸವನ್ನು ದಿನಾಂಕ 15.08.2025ರಂದು ಆಚರಿಸಲಾಯಿತು. ಬ್ಯಾಂಕಿನ ನಿರ್ದೇಶಕರು, ಸಿಬ್ಬಂದಿ, ಗಣ್ಯರು ಮತ್ತು ಹಿತೈಷಿಗಳು ಹಾಜರಿದ್ದರು.ಎಂ.ಸಿ.ಸಿ. ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನ್ಯಾಯಾವಾದಿ ಮತ್ತು ನೋಟರಿ ಪಬ್ಲಿಕ್, ಕುದ್ರೋಳಿ ದೇವಸ್ಥಾನ ಟ್ರಸ್ಟಿನ ಖಜಾಂಚಿ ಮತ್ತು ಸಮಾಜ ಸೇವಕ ಶ್ರೀ ಪದ್ಮರಾಜ್ ಆರ್. […]
ಪಡುಕೋಣೆ: ದಿನಾಂಕ 14/8/2025 ರಂದು (Prison Ministery India)ಸೆರೆಮನೆಯ ಲ್ಲಿದ್ದ ಕೈದಿಗಳ ಪಾಲಕರಾದ ಸಂತ ಮೆಕ್ಸಿ ಮಿಲಿಯನ್ ಕೊಲ್ಬೆ ಯವರ ಹಬ್ಬವನ್ನು 40 ವರ್ಷಗಳ ಹಿಂದೆ ಕೇರಳದಲ್ಲಿ ಒಂದು ಸಂಘಟನೆ ವಾರ್ಷಿಕ ದಿನಾಚರಣೆಯನ್ನು ಪ್ರಾರಂಭಿಸಲಾಯಿತು. ಈ ಸಂಸ್ಥೆಯ ಉದ್ದೇಶ ಕಾರಾಗೃಹದಲ್ಲಿದ್ದ ಕೈದಿಗಳನ್ನು ಭೇಟಿ ಮಾಡಿ ಅವರ ಅವಶ್ಯಕತೆಯನ್ನು ಕೇಳಿ ಸಹಾಯ ಹಸ್ತವನ್ನು ನೀಡುವುದು. ಈ ಸಂಘಟನೆಯು ನಮ್ಮ ಉಡುಪಿ ಜಿಲ್ಲೆಯಲ್ಲಿ 10 ವರ್ಷಗಳ ಹಿಂದೆ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಈ ಸಂಸ್ಥೆಯ ಸಂಘಟನೆಯಲ್ಲಿ 15 ಮಂದಿ ಸದಸ್ಯರು ತಿಂಗಳಿಗೊಮ್ಮೆ […]
ಸಂತ ಜೊಸೆಫರ ಇಗರ್ಜಿ ಕೋಟ ದಲ್ಲಿ ಸ್ವಾತಂತ್ರ್ಯೊತವ ದಿನಾಚರಣೆಯನ್ನು ಆಚರಿಸಲಾಯಿತು. ಪ್ರಾರಂಭದಲ್ಲಿ ಚರ್ಚಿನ ಧರ್ಮಗುರುಗಳಾದ ವಂದನೀಯ ಸ್ಟ್ಯಾನಿ ತಾವ್ರೊ ಅವರು ಪವಿತ್ರ ಬಲಿಪೂಜೆಯನ್ನು ನೆರವೇರಿಸಿದರು ಹಾಗು ದೇಶಕ್ಕಾಗಿ ವಿಶೇಶವಾಗಿ ಪ್ರಾರ್ಥಿಸಲಾಯಿತು. ನಂತರ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಐ.ಸಿ.ವೈ.ಎಮ್ ಅಧ್ಯಕ್ಶರಾದ ಶಾವ್ನ್ ಫೆರ್ನಾಂಡಿಸ್, ಧಜಾರೋಹಣ ಮಾಡಿದರು. ಕಥೊಲಿಕ್ ಸಭಾ ಆಧ್ಯಕ್ಶರಾದ ಹೆರಾಲ್ಡ್ ಫೆರ್ನಾಂಡಿಸ್ ಸ್ವಾಗತ ಭಾಶಣ್ ಮಾಡಿದರು. ಗಾಯನ ಮಂಡಳಿಯವರು ದೇಶ ಭಕ್ತಿ ಗೀತೆಗಳನ್ನು ಹಾಡಿದರು. ಈ ಸಂದರ್ಭದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಾಕ್ರಮದಲ್ಲಿ ವಿಶಿಷ್ಠ […]
ಮದರ್ ತೆರೆಸಾ ಶಿಕ್ಷಣ ಸಂಸ್ಥೆ, ಶಂಕರನಾರಾಯಣದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿ ಹಾಗೂ ದೇಶಭಕ್ತಿಯಿಂದ ಕೂಡಿದ ಭಾವಭರಿತ ವಾತಾವರಣದಲ್ಲಿ ಆಚರಿಸಲಾಯಿತು. ಈ ಆಚರಣೆಯ ಮುಖ್ಯ ಅತಿಥಿಯಾಗಿ ಶ್ರೀಯುತ ಜಯರಾಮ್. ಸಿ. ಗೌಡ ವೃತ್ತ ನಿರೀಕ್ಷಕರು, ಕುಂದಾಪುರವೃತ್ತ ಇವರು ಆಗಮಿಸಿ ಧ್ವಜಾರೋಹಣ ನೆರವೇರಿಸಿದರು. ಧ್ವಜಾರೋಹಣದ ಬಳಿಕ, ವಿದ್ಯಾರ್ಥಿಗಳಿಂದ ಶಿಸ್ತುಬದ್ಧವಾದ ಪಥಸಂಚಲನ ನಡೆಯಿತು. ಪಥಸಂಚಲನದ ಗೌರವರಕ್ಷೆ ಯನ್ನು ಧ್ವಜಾರೋಹಣಗೈದ ಶ್ರೀಯುತ ಜಯರಾಮ್.ಸಿ.ಗೌಡ ಸ್ವೀಕರಿಸಿದರು. ನಂತರ ಅವರು ವಿದ್ಯಾರ್ಥಿಗಳೊಂದಿಗೆ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸಿ, ವಿದ್ಯಾರ್ಥಿಗಳಿಗೆ ದೇಶಭಕ್ತಿಯ […]
ಶಿರೂರು : ಇಲ್ಲಿನ ಜ್ಞಾನದಾ ಶೈಕ್ಷಣಿಕ ಸಂಸ್ಥೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಪ್ಪುಂದದ ವಿಶ್ರಾಂತ ಶಿಕ್ಷಕರಾದ ಶ್ರೀ ಯು ಹೆಚ್ ರಾಜಾರಾಮ್ ಭಟ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಹುತಾತ್ಮರಾದ ವೀರ ದೇಶ ಭಕ್ತ ಸ್ವಾತಂತ್ರ್ಯ ಹೋರಾಟಗಾರರನ್ನು ಕೇವಲ ಈ ದಿನ ಸ್ಮರಿಸದೇ ಅವರ ಆದರ್ಶ ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ದೇಶದ ಪ್ರಗತಿಗೆ ಎಲ್ಲರೂ ಕೈ ಜೋಡಿಸಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಪರಿಸರ ಸಂರಕ್ಷಣೆ ಅರಿವು ಮತ್ತು ಅಗತ್ಯ […]

